Site icon Vistara News

Rahul Gandhi T Shirt | ಚಳಿ ನಿಗ್ರಹಕ್ಕೆ ರಾಹುಲ್‌ ಟಿ ಶರ್ಟ್‌ ಒಳಗೆ ಥರ್ಮಲ್‌ ಉಡುಪು, ಕೈ-ಕಮಲ ಕೆಸರೆರಚಾಟ

Rahul Gandhi T Shirt Row

ನವದೆಹಲಿ: ಬಿಜೆಪಿ ಹಾಗೂ ಕಾಂಗ್ರೆಸ್‌ ಇರುವುದೇ ಹಾಗೆ. ದೇಶ, ಧರ್ಮ, ಸೇನೆ, ಜಾತಿ, ಉಡುಪು, ಮಾಂಸಾಹಾರ ಸೇರಿ ಪ್ರತಿಯೊಂದು ವಿಷಯದಲ್ಲೂ ಕೆಸರೆರಚಾಟ ಮಾಡಿದ್ದರೆ ಎರಡೂ ಪಕ್ಷಗಳಿಗೆ ಆಗುವುದಿಲ್ಲ. ಇದಕ್ಕೆ ನಿದರ್ಶನ ಎಂಬಂತೆ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಚಳಿ ನಿಗ್ರಹಕ್ಕೆ ಟಿ-ಶರ್ಟ್‌ ಒಳಗೆ ಥರ್ಮಲ್‌ ಉಡುಪು (ಶಾಖಧಾರಕ ಒಳಉಡುಪು) ಧರಿಸಿದ್ದು (Rahul Gandhi T Shirt) ಕೂಡ ಎರಡೂ ಪಕ್ಷಗಳ ಮಧ್ಯೆ ವಾಕ್ಸಮರ ಶುರುವಾಗಲು ಕಾರಣವಾಗಿದೆ.

ದೇಶಾದ್ಯಂತ ಚಳಿ ಇದ್ದರೂ ರಾಹುಲ್‌ ಗಾಂಧಿ ಅವರು ಕೇವಲ ಟಿ-ಶರ್ಟ್‌ ಧರಿಸಿ ಭಾರತ್‌ ಜೋಡೋ ಯಾತ್ರೆ ಕೈಗೊಳ್ಳುತ್ತಿರುವ ಕುರಿತು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದರ ಮಧ್ಯೆಯೇ, ಅವರು ಟಿ-ಶರ್ಟ್‌ ಒಳಗೆ ಥರ್ಮಲ್‌ ಉಡುಪು ಧರಿಸಿರುವ ಫೋಟೊಗಳು ಲಭ್ಯವಾಗಿದ್ದು, ಇದು ವಾಗ್ವಾದಕ್ಕೆ ಕಾರಣವಾಗಿದೆ.

ರಾಹುಲ್‌ ಗಾಂಧಿ ನಿಜಬಣ್ಣ ಬಯಲು ಎಂದ ಬಿಜೆಪಿ
ರಾಹುಲ್‌ ಗಾಂಧಿ ಟಿ-ಶರ್ಟ್‌ ಒಳಗೆ ಥರ್ಮಲ್‌ ಉಡುಪು ಧರಿಸಿರುವ ಚಿತ್ರಗಳು ಲಭ್ಯವಾಗುತ್ತಲೇ ಬಿಜೆಪಿ ದಾಳಿ ಆರಂಭಿಸಿದೆ. “ಇಲಿಯು ಬಿಲದಿಂದ ಹೊರಬಂದಿದೆ. ರಾಹುಲ್‌ ಗಾಂಧಿ ಅವರು ಥರ್ಮಲ್‌ ಉಡುಪು ಧರಿಸಿ, ಮೇಲೆ ಟಿ-ಶರ್ಟ್‌ ಹಾಕಿ, ಕುತ್ತಿಗೆವರೆಗೆ ಬಟನ್‌ ಹಾಕಿಕೊಂಡಿದ್ದಾರೆ. ಚಳಿಗಾಲದಲ್ಲಿ ಚಳಿ ಆಗುವುದು ಸಾಮಾನ್ಯ. ಆದರೆ, ರಾಹುಲ್‌ ಗಾಂಧಿ ಅವರು ನಕಲಿ ತಂತ್ರದ ಮೂಲಕ ಜನರ ಗಮನ ಸೆಳೆಯಲು ಯತ್ನಿಸಿದ್ದಾರೆ” ಎಂದು ಬಿಜೆಪಿ ಮುಖಂಡ ಮಂಜಿಂದರ್‌ ಸಿಂಗ್‌ ಸಿರ್ಸ ಟ್ವೀಟ್‌ ಮಾಡಿದ್ದಾರೆ.

ಹತಾಶ ಬಿಜೆಪಿ ಎಂದು ಕಾಂಗ್ರೆಸ್‌ ತಿರುಗೇಟು
ಬಿಜೆಪಿ ಟೀಕೆಗಳಿಗೆ ಕಾಂಗ್ರೆಸ್‌ ತಿರುಗೇಟು ನೀಡಿದ್ದು, ಭಾರತ್‌ ಜೋಡೋ ಯಾತ್ರೆಯ ಯಶಸ್ಸಿನಿಂದ ಹತಾಶಗೊಂಡಿರುವ ಬಿಜೆಪಿ ಇಂತಹ ಕುತಂತ್ರ ಮಾಡುತ್ತಿದೆ ಎಂದಿದೆ. “ಭಕ್ತರು ಹತಾಶಗೊಂಡಿದ್ದಾರೆ. ರಾಹುಲ್‌ ಗಾಂಧಿ ಕುತ್ತಿಗೆ, ಎದೆಗೆ ಜೂಮ್‌ ಹಾಕಿ ನೋಡುವ ಮೂಲಕ ನಕಾರಾತ್ಮಕ ಅಂಶಗಳನ್ನು ಹುಡುಕುತ್ತಿದ್ದಾರೆ” ಎಂದು ಕಾಂಗ್ರೆಸ್‌ ನಾಯಕಿ ಸುಪ್ರಿಯಾ ಶ್ರಿನಾತೆ ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ | Bharat Jodo Yatra | ಇಷ್ಟು ಚಳಿಯಿದ್ದರೂ ರಾಹುಲ್​ ಗಾಂಧಿ ಟಿ ಶರ್ಟ್​​​ ಧರಿಸಿ ಪಾದಯಾತ್ರೆ ಮಾಡುತ್ತಿರಲು ಏನು ಕಾರಣ?

Exit mobile version