Rahul Gandhi T Shirt | ಚಳಿ ನಿಗ್ರಹಕ್ಕೆ ರಾಹುಲ್‌ ಟಿ ಶರ್ಟ್‌ ಒಳಗೆ ಥರ್ಮಲ್‌ ಉಡುಪು, ಕೈ-ಕಮಲ ಕೆಸರೆರಚಾಟ - Vistara News

ದೇಶ

Rahul Gandhi T Shirt | ಚಳಿ ನಿಗ್ರಹಕ್ಕೆ ರಾಹುಲ್‌ ಟಿ ಶರ್ಟ್‌ ಒಳಗೆ ಥರ್ಮಲ್‌ ಉಡುಪು, ಕೈ-ಕಮಲ ಕೆಸರೆರಚಾಟ

ಪ್ರತಿಯೊಂದು ವಿಷಯದಲ್ಲೂ ರಾಜಕೀಯ, ಕೆಸರೆರಚಾಟ ಮಾಡುವ ಬಿಜೆಪಿ ಹಾಗೂ ಕಾಂಗ್ರೆಸ್‌, ಈಗ ರಾಹುಲ್‌ ಗಾಂಧಿ ಅವರು ಟಿ-ಶರ್ಟ್‌ ಒಳಗೆ ಥರ್ಮಲ್‌ ಉಡುಪು ಧರಿಸಿದ್ದು ಕೂಡ ಎರಡೂ ಪಕ್ಷಗಳ (Rahul Gandhi T Shirt) ನಡುವೆ ವಾಕ್ಸಮರ ಆರಂಭವಾಗುವಂತೆ ಮಾಡಿದೆ.

VISTARANEWS.COM


on

Rahul Gandhi T Shirt Row
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಬಿಜೆಪಿ ಹಾಗೂ ಕಾಂಗ್ರೆಸ್‌ ಇರುವುದೇ ಹಾಗೆ. ದೇಶ, ಧರ್ಮ, ಸೇನೆ, ಜಾತಿ, ಉಡುಪು, ಮಾಂಸಾಹಾರ ಸೇರಿ ಪ್ರತಿಯೊಂದು ವಿಷಯದಲ್ಲೂ ಕೆಸರೆರಚಾಟ ಮಾಡಿದ್ದರೆ ಎರಡೂ ಪಕ್ಷಗಳಿಗೆ ಆಗುವುದಿಲ್ಲ. ಇದಕ್ಕೆ ನಿದರ್ಶನ ಎಂಬಂತೆ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಚಳಿ ನಿಗ್ರಹಕ್ಕೆ ಟಿ-ಶರ್ಟ್‌ ಒಳಗೆ ಥರ್ಮಲ್‌ ಉಡುಪು (ಶಾಖಧಾರಕ ಒಳಉಡುಪು) ಧರಿಸಿದ್ದು (Rahul Gandhi T Shirt) ಕೂಡ ಎರಡೂ ಪಕ್ಷಗಳ ಮಧ್ಯೆ ವಾಕ್ಸಮರ ಶುರುವಾಗಲು ಕಾರಣವಾಗಿದೆ.

ದೇಶಾದ್ಯಂತ ಚಳಿ ಇದ್ದರೂ ರಾಹುಲ್‌ ಗಾಂಧಿ ಅವರು ಕೇವಲ ಟಿ-ಶರ್ಟ್‌ ಧರಿಸಿ ಭಾರತ್‌ ಜೋಡೋ ಯಾತ್ರೆ ಕೈಗೊಳ್ಳುತ್ತಿರುವ ಕುರಿತು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದರ ಮಧ್ಯೆಯೇ, ಅವರು ಟಿ-ಶರ್ಟ್‌ ಒಳಗೆ ಥರ್ಮಲ್‌ ಉಡುಪು ಧರಿಸಿರುವ ಫೋಟೊಗಳು ಲಭ್ಯವಾಗಿದ್ದು, ಇದು ವಾಗ್ವಾದಕ್ಕೆ ಕಾರಣವಾಗಿದೆ.

ರಾಹುಲ್‌ ಗಾಂಧಿ ನಿಜಬಣ್ಣ ಬಯಲು ಎಂದ ಬಿಜೆಪಿ
ರಾಹುಲ್‌ ಗಾಂಧಿ ಟಿ-ಶರ್ಟ್‌ ಒಳಗೆ ಥರ್ಮಲ್‌ ಉಡುಪು ಧರಿಸಿರುವ ಚಿತ್ರಗಳು ಲಭ್ಯವಾಗುತ್ತಲೇ ಬಿಜೆಪಿ ದಾಳಿ ಆರಂಭಿಸಿದೆ. “ಇಲಿಯು ಬಿಲದಿಂದ ಹೊರಬಂದಿದೆ. ರಾಹುಲ್‌ ಗಾಂಧಿ ಅವರು ಥರ್ಮಲ್‌ ಉಡುಪು ಧರಿಸಿ, ಮೇಲೆ ಟಿ-ಶರ್ಟ್‌ ಹಾಕಿ, ಕುತ್ತಿಗೆವರೆಗೆ ಬಟನ್‌ ಹಾಕಿಕೊಂಡಿದ್ದಾರೆ. ಚಳಿಗಾಲದಲ್ಲಿ ಚಳಿ ಆಗುವುದು ಸಾಮಾನ್ಯ. ಆದರೆ, ರಾಹುಲ್‌ ಗಾಂಧಿ ಅವರು ನಕಲಿ ತಂತ್ರದ ಮೂಲಕ ಜನರ ಗಮನ ಸೆಳೆಯಲು ಯತ್ನಿಸಿದ್ದಾರೆ” ಎಂದು ಬಿಜೆಪಿ ಮುಖಂಡ ಮಂಜಿಂದರ್‌ ಸಿಂಗ್‌ ಸಿರ್ಸ ಟ್ವೀಟ್‌ ಮಾಡಿದ್ದಾರೆ.

ಹತಾಶ ಬಿಜೆಪಿ ಎಂದು ಕಾಂಗ್ರೆಸ್‌ ತಿರುಗೇಟು
ಬಿಜೆಪಿ ಟೀಕೆಗಳಿಗೆ ಕಾಂಗ್ರೆಸ್‌ ತಿರುಗೇಟು ನೀಡಿದ್ದು, ಭಾರತ್‌ ಜೋಡೋ ಯಾತ್ರೆಯ ಯಶಸ್ಸಿನಿಂದ ಹತಾಶಗೊಂಡಿರುವ ಬಿಜೆಪಿ ಇಂತಹ ಕುತಂತ್ರ ಮಾಡುತ್ತಿದೆ ಎಂದಿದೆ. “ಭಕ್ತರು ಹತಾಶಗೊಂಡಿದ್ದಾರೆ. ರಾಹುಲ್‌ ಗಾಂಧಿ ಕುತ್ತಿಗೆ, ಎದೆಗೆ ಜೂಮ್‌ ಹಾಕಿ ನೋಡುವ ಮೂಲಕ ನಕಾರಾತ್ಮಕ ಅಂಶಗಳನ್ನು ಹುಡುಕುತ್ತಿದ್ದಾರೆ” ಎಂದು ಕಾಂಗ್ರೆಸ್‌ ನಾಯಕಿ ಸುಪ್ರಿಯಾ ಶ್ರಿನಾತೆ ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ | Bharat Jodo Yatra | ಇಷ್ಟು ಚಳಿಯಿದ್ದರೂ ರಾಹುಲ್​ ಗಾಂಧಿ ಟಿ ಶರ್ಟ್​​​ ಧರಿಸಿ ಪಾದಯಾತ್ರೆ ಮಾಡುತ್ತಿರಲು ಏನು ಕಾರಣ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Parliament Session 2024: ಸಂಸತ್‌ನಲ್ಲಿ ಈ ಬಾರಿ ಮೋದಿಗೆ ಪ್ರತಿಪಕ್ಷಗಳ ಪ್ರಬಲ ಸವಾಲು! Live ನೋಡಿ

Parliament Session 2024: ಬಿಜೆಪಿ ನೇತೃತ್ವದ ಎನ್‌ಡಿಎ ಸತತ ಮೂರನೇ ಬಾರಿಗೆ ಸರ್ಕಾರ ರಚಿಸಿದ್ದು, ಮೊದಲ ಅಧಿವೇಶನ ಆರಂಭವಾಗಿದೆ. 18ನೇ ಲೋಕಸಭೆ ರಚನೆಯಾದ ಬಳಿಕ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದ್ದು, ಜು. 3ರವರೆಗೆ ಮುಂದುವರಿಯಲಿದೆ. ಈ ಬಾರಿ ಪ್ರತಿಪಕ್ಷಗಳು ಹೆಚ್ಚು ಶಕ್ತವಾಗಿರುವ ಹಿನ್ನಲೆಯಲ್ಲಿ ಅಧಿವೇಶನ ಯಾವ ರೀತಿ ನಡೆಯಲಿದೆ ಎನ್ನುವ ಬಗ್ಗೆ ಕುತೂಹಲ ಮೂಡಿದೆ. ಅಧಿವೇಶನದ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ.

VISTARANEWS.COM


on

Parliament Session 2024
Koo

ನವದೆಹಲಿ: ಬಿಜೆಪಿ ನೇತೃತ್ವದ ಎನ್‌ಡಿಎ (NDA) ಸತತ ಮೂರನೇ ಬಾರಿಗೆ ಸರ್ಕಾರ ರಚಿಸಿದ್ದು, ಮೊದಲ ಅಧಿವೇಶನ (Parliament Session 2024) ಆರಂಭವಾಗಿದೆ. 18ನೇ ಲೋಕಸಭೆ (Lok Sabha) ರಚನೆಯಾದ ಬಳಿಕ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದ್ದು, ಜು. 3ರವರೆಗೆ ಮುಂದುವರಿಯಲಿದೆ. ರಾಜ್ಯಸಭೆಯ ಅಧಿವೇಶನ ಜೂ. 27ರಿಂದ ಜು. 3ರವರೆಗೆ ನಡೆಯಲಿದೆ. ಈ ಬಾರಿ ಪ್ರತಿಪಕ್ಷಗಳು ಹೆಚ್ಚು ಶಕ್ತವಾಗಿರುವ ಹಿನ್ನಲೆಯಲ್ಲಿ ಅಧಿವೇಶನ ಯಾವ ರೀತಿ ನಡೆಯಲಿದೆ ಎನ್ನುವ ಬಗ್ಗೆ ಕುತೂಹಲ ಮೂಡಿದೆ.

ಅಧಿವೇಶನದ ಮೊದಲ ದಿನವಾದ ಸೋಮವಾರ (ಜೂ. 24) ಹಂಗಾಮಿ ಸ್ಪೀಕರ್‌ ನೇಮಕ ನಡೆಯಿತು. ಏಳು ಬಾರಿ ಸಂಸದರಾಗಿರುವ ಬಿಜೆಪಿಯ ಭರ್ತೃಹರಿ ಮಹ್ತಾಬ್‌ ಅವರನ್ನು ಹಂಗಾಮಿ ಸ್ಪೀಕರ್‌ ಆಗಿ ನೇಮಕ ಮಾಡಲಾಯಿತು. ಆದರೆ ಇದಕ್ಕೆ ಪ್ರತಿಪಕ್ಷಗಳ ಇಂಡಿ ಬಣ ಆಕ್ಷೇಪ ವ್ಯಕ್ತಪಡಿಸಿತ್ತು. ಕೇಂದ್ರ ಸರ್ಕಾರ ಹಿರಿತನ ಕಡೆಗಣಿಸಿ ಹಂಗಾಮಿ ಸ್ಪೀಕರ್‌ ನೇಮಕ ಮಾಡಿದೆ ಎಂದು ಕಾಂಗ್ರೆಸ್‌ ಆಕ್ಷೇಪಿಸಿದ್ದು, ಮೊದಲ ದಿನವೇ ಶಕ್ತವಾಗಿ ಪ್ರತಿಕ್ರಿಯಿಸಿತ್ತು. ಎಂಟು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಕಾಂಗ್ರೆಸ್‌ನ ಕೊಂಡಿಕುನಾಲ್ ಸುರೇಶ್ ಬದಲಿಗೆ ಏಳು ಬಾರಿ ಸಂಸದರಾಗಿರುವ ಭರ್ತೃಹರಿ ಮಹ್ತಾಬ್‌ ಅವರನ್ನು ಹಂಗಾಮಿ ಸ್ಪೀಕರ್‌ ಆಗಿ ನೇಮಿಸಿರುವುದು ಸರಿಯಲ್ಲ ಎಂದು ಕಾಂಗ್ರೆಸ್‌ ವಾದ ಮಂಡಿಸಿತ್ತು.

ಇದಕ್ಕೆ ಸ್ಪಷ್ಟನೆ ನೀಡಿದ ಕೇಂದ್ರ ಸರ್ಕಾರ, ಭರ್ತೃಹರಿ ಮಹತಾಬ್‌ 1998ರಿಂದ ಕಟಕ್‌ನಿಂದ ನಿರಂತರವಾಗಿ ಗೆಲ್ಲುತ್ತಿದ್ದಾರೆ. ಆದರೆ ಕಾಂಗ್ರೆಸ್‌ನ ಕೆ. ಸುರೇಶ್‌ 1998 ಮತ್ತು 2004ರ ಚುನಾವಣೆಯಲ್ಲಿ ಸೋತಿದ್ದರು ಎಂದು ಹೇಳಿತ್ತು. ಬಳಿಕ ಪ್ರಧಾನಿ ನರೇಂದ್ರ ಮೋದಿ ಸಹಿತ ಸಂಸದರೆಲ್ಲ ಪ್ರಮಾಣ ವಚನ ಸ್ವೀಕರಿಸಿದರು. ಇನ್ನು ಧಾನಿ ಮೋದಿ ಪ್ರಮಾಣ ವಚನ ಸ್ವೀಕರಿಸಲೆಂದು ತಮ್ಮ ಸೀಟಿನಿಂದ ಮೇಲೇಳುತ್ತಿದ್ದಂತೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಸಂವಿಧಾನ ಪುಸ್ತಕ ಕೈಯಲ್ಲಿ ಹಿಡಿದು ಸಂವಿಧಾನ ಸುದೀರ್ಘವಾಗಿ ಬಾಳಲಿ ಎಂದು ಘೋಷಣೆ ಕೂಗಿರುವ ಘಟನೆಯೂ ನಡೆಯಿತು.

ನಾಳೆ ಏನೇನು?

ಜೂನ್‌ 24 ಮತ್ತು 25ರಂದು ಎಲ್ಲ 543 ಸಂಸದರು ಪ್ರಮಾಣ ವಚನ ಸ್ವೀಕರಿಸಿದ್ದು, ಬುಧವಾರ ಲೋಕಸಭಾ ಸ್ಪೀಕರ್‌ ಆಯ್ಕೆ ನಡೆಯಲಿದೆ. ಸ್ಪೀಕರ್‌ ಆಯ್ಕೆ ಬಗ್ಗೆ ಈಗಾಗಲೇ ಕುತೂಹಲ ಕೆರಳಿದೆ. ಲೋಕಸಭಾ ಇತಿಹಸದಲ್ಲೇ ಮೊದಲ ಬಾರಿಗೆ ಸ್ಪೀಕರ್‌ ಹುದ್ದೆಗೆ ಚುನಾವಣೆ ನಡೆಯಲಿರುವುದೇ ಇದಕ್ಕೆ ಕಾರಣ. ಇದುವರೆಗೆ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಒಮ್ಮತದ ಅಭ್ಯರ್ಥಿ ಸ್ಪೀಕರ್‌ ಆಗಿ ಆಯ್ಕೆಯಾಗುತ್ತಿದ್ದರು. ಆದರೆ ಈ ವಾರಿ ಒಮ್ಮತ ಮೂಡದ ಹಿನ್ನಲೆಯಲ್ಲಿ ಪ್ರತಿಪಕ್ಷಗಳೂ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.

ಓಂ ಬಿರ್ಲಾ V/S ಕೆ.ಸುರೇಶ್

ಎನ್‌ಡಿಎಯಿಂದ ಬಿಜೆಪಿಯ ಓಂ ಬಿರ್ಲಾ ನಾಮಪತ್ರ ಸಲ್ಲಿಸಿದರೆ ಇಂಡಿ ಬಣದಿಂದ ಕಾಂಗ್ರೆಸ್‌ನ ಕೊಂಡಿಕುನಾಲ್ ಸುರೇಶ್ ಸ್ಪರ್ಧಿಸುತ್ತಿದ್ದಾರೆ. ಹಿಂದಿನ ಲೋಕಸಭೆಯಲ್ಲಿ ಸ್ಪೀಕರ್ ಆಗಿದ್ದ ಓಂ ಬಿರ್ಲಾ ಅವರನ್ನು ಬೆಂಬಲಿಸಲು ಇಂಡಿ ಒಕ್ಕೂಟ ಷರತ್ತು ವಿಧಿಸಿತ್ತು. ಉಪ ಸಭಾಪತಿ (Deputy Speaker) ಹುದ್ದೆ ಇಂಡಿ ಬಣಕ್ಕೆ ನೀಡಿದರೆ ಓಂ ಬಿರ್ಲಾ ಅವರನ್ನು ಬೆಂಬಲಿಸಲು ಪ್ರತಿಪಕ್ಷಗಳು ಒಪ್ಪಿಕೊಂಡಿದ್ದವು. ಆದರೆ ಸರ್ಕಾರ ಇದಕ್ಕೆ ಒಪ್ಪಿಗೆ ಸೂಚಿಸದ ಹಿನ್ನೆಲೆಯಲ್ಲಿ ಅಂತಿಮ ಕ್ಷಣದಲ್ಲಿ ಕೆ.ಸುರೇಶ್‌ ನಾಮಪತ್ರ ಸಲ್ಲಿಸಿದರು. ಹೀಗಾಗಿ ನಾಳೆ ಸಂಸತ್ತಿನಲ್ಲಿ ನಡೆಯಲಿರುವ ಲೋಕಸಭಾ ಸ್ಪೀಕರ್‌ ಆಯ್ಕೆಯ ಚುನಾವಣೆ ಕುತೂಹಲ ಕೆರಳಿಸಿದೆ.

ಇದನ್ನೂ ಓದಿ: Lok Sabha Speaker Election: ಲೋಕಸಭೆ ಇತಿಹಾಸದಲ್ಲೇ ಮೊದಲ ಬಾರಿ ಸ್ಪೀಕರ್‌ ಹುದ್ದೆಗೆ ನಡೆಯಲಿದೆ ಚುನಾವಣೆ

Continue Reading

ದೇಶ

Lok Sabha Speaker Election: ಲೋಕಸಭೆ ಇತಿಹಾಸದಲ್ಲೇ ಮೊದಲ ಬಾರಿ ಸ್ಪೀಕರ್‌ ಹುದ್ದೆಗೆ ನಡೆಯಲಿದೆ ಚುನಾವಣೆ

Lok Sabha Speaker Election: ಆಡಳಿತಾರೂಢ ಎನ್‌ಡಿಎ ಮತ್ತು ಪ್ರತಿಪಕ್ಷಗಳ ನಡುವೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಲೋಕಸಭೆ ಇತಿಹಾಸದಲ್ಲೇ ಮೊದಲ ಬಾರಿ ಸ್ಪೀಕರ್‌ ಹುದ್ದೆಗೆ ಚುನಾವಣೆ ನಡೆಯಲಿದೆ. ಎನ್‌ಡಿಎಯಿಂದ ಬಿಜೆಪಿ ಸಂಸದ ಓಂ ಬಿರ್ಲಾ ಮತ್ತು ಪ್ರತಿಪಕ್ಷಗಳ ಇಂಡಿ ಒಕ್ಕೂಟದಿಂದ ಕಾಂಗ್ರೆಸ್ ಸಂಸದ ಕೊಂಡಿಕುನಾಲ್ ಸುರೇಶ್ ಮಂಗಳವಾರ ಲೋಕಸಭಾ ಸ್ಪೀಕರ್ ಹುದ್ದೆಗೆ ನಾಮಪತ್ರ ಸಲ್ಲಿಸಿದರು. ನಾಳೆ (ಜೂನ್‌ 26) ಸ್ಪೀಕರ್ ಆಯ್ಕೆ ನಡೆಯಲಿದೆ.

VISTARANEWS.COM


on

Lok Sabha Speaker Election
Koo

ನವದೆಹಲಿ: ಇದೀಗ ಲೋಕಸಭಾ ಸ್ಪೀಕರ್‌ ಹುದ್ದೆಯ ನೇಮಕಕ್ಕೆ ಕಸರತ್ತು ಆರಂಭವಾಗಿದೆ. ಆಡಳಿತಾರೂಢ ಎನ್‌ಡಿಎ ಮತ್ತು ಪ್ರತಿಪಕ್ಷಗಳ ನಡುವೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಲೋಕಸಭೆ ಇತಿಹಾಸದಲ್ಲೇ ಮೊದಲ ಬಾರಿ ಸ್ಪೀಕರ್‌ ಹುದ್ದೆಗೆ ಚುನಾವಣೆ ನಡೆಯಲಿದೆ (Lok Sabha Speaker Election). ಎನ್‌ಡಿಎಯಿಂದ ಬಿಜೆಪಿ ಸಂಸದ ಓಂ ಬಿರ್ಲಾ (Om Birla) ಮತ್ತು ಪ್ರತಿಪಕ್ಷಗಳ ಇಂಡಿ ಒಕ್ಕೂಟದಿಂದ ಕಾಂಗ್ರೆಸ್ ಸಂಸದ ಕೊಂಡಿಕುನಾಲ್ ಸುರೇಶ್ (Kondikunal Suresh) ಮಂಗಳವಾರ ಲೋಕಸಭಾ ಸ್ಪೀಕರ್ ಹುದ್ದೆಗೆ ನಾಮಪತ್ರ ಸಲ್ಲಿಸಿದರು. ಈ ಪೈಕಿ ಓಂ ಬಿರ್ಲಾ ಏಳು ಬಾರಿ ಮತ್ತು ಕೊಂಡಿಕುನಾಲ್ ಸುರೇಶ್ ಎಂಟು ಬಾರಿ ಸಂಸದರಾಗಿದ್ದಾರೆ. ನಾಳೆ (ಜೂನ್‌ 26) ಸ್ಪೀಕರ್ ಆಯ್ಕೆ ನಡೆಯಲಿದೆ.

ಸ್ಪೀಕರ್ ಹುದ್ದೆಗೆ ಎನ್‌ಡಿಎ ಅಭ್ಯರ್ಥಿಯಾಗಿ ಓಂ ಬಿರ್ಲಾ ಅವರ ಹೆಸರನ್ನು ಬಿಜೆಪಿ ಅಂತಿಮಗೊಳಿಸುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಹಾಗೂ ಓಂ ಬಿರ್ಲಾ ನಡುವೆ ಮಹತ್ವದ ಸಭೆ ನಡೆಯಿತು. ಈ ಸಭೆಯಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಗೃಹ ಸಚಿವ ಅಮಿತ್ ಶಾ, ರಾಜನಾಥ್‌ ಸಿಂಗ್‌ ಮತ್ತು ಬಿಜೆಪಿ ಮುಖ್ಯಸ್ಥ ಜೆ.ಪಿ. ನಡ್ಡಾ ಕೂಡ ಉಪಸ್ಥಿತರಿದ್ದರು.

ಇಂಡಿ ಒಕ್ಕೂಟ ಹೇಳಿದ್ದೇನು?

ಇದಕ್ಕೂ ಮೊದಲು ಸ್ಪೀಕರ್‌ ಹುದ್ದೆಗೆ ಓಂ ಬಿರ್ಲಾ ಅವರನ್ನು ಬೆಂಬಲಿಸುವುದಕ್ಕೆ ಇಂಡಿ ಒಕ್ಕೂಟ ಷರತ್ತು ವಿಧಿಸಿತ್ತು. ಉಪ ಸಭಾಪತಿ (Deputy Speaker) ಹುದ್ದೆ ಇಂಡಿ ಬಣಕ್ಕೆ ನೀಡಿದರೆ ಓಂ ಬಿರ್ಲಾ ಅವರನ್ನು ಬೆಂಬಲಿಸಲು ಪ್ರತಿಪಕ್ಷಗಳು ಒಪ್ಪಿಕೊಂಡಿದ್ದವು. ಆದರೆ ಇದಕ್ಕೆ ಎನ್‌ಡಿಎ ಒಪ್ಪಿಗೆ ಸೂಚಿಸಿರಲಿಲ್ಲ. ಹೀಗಾಗಿ ಚುನಾವಣೆ ಅನಿವಾರ್ಯವಾದಂತಾಗಿದೆ.

ಆರಂಭದಲ್ಲಿ ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ರಾಜನಾಥ್ ಸಿಂಗ್ ಅವರು ಸ್ಪೀಕರ್‌ ಸ್ಥಾನಕ್ಕೆ ಒಮ್ಮತದ ಅಭ್ಯರ್ಥಿಯನ್ನು ನೇಮಕ ಮಾಡುವ ಕುರಿತು ಪ್ರತಿಪಕ್ಷಗಳನ್ನು ಸಂಪರ್ಕಿಸಿದ್ದರು. ಆದರೆ ನಾಮಪತ್ರ ಸಲ್ಲಿಕೆಗೆ ಕೆಲವೇ ನಿಮಿಷಗಳು ಬಾಕಿ ಇರುವಾಗ ಕಾಂಗ್ರೆಸ್‌ನ ಕೆ.ಸಿ.ವೇಣುಗೋಪಾಲ್, ಡಿಎಂಕೆಯ ಟಿ.ಆರ್.ಬಾಲು ಅವರು ರಾಜನಾಥ್ ಸಿಂಗ್ ಅವರ ಕಚೇರಿಯಿಂದ ಹೊರನಡೆದು ಎನ್‌ಡಿಎ ಅಭ್ಯರ್ಥಿಗೆ ಬೆಂಬಲ ಸೂಚಿಸಲು ನಿರಾಕರಿಸಿದರು. ಬಳಿಕ ಮಾತನಾಡಿದ ಕೆ.ಸಿ.ವೇಣುಗೋಪಾಲ್, ಉಪ ಸಭಾಪತಿ ಸ್ಥಾನವನ್ನು ಪ್ರತಿಪಕ್ಷಗಳಿಗೆ ನೀಡಲು ಸರ್ಕಾರ ಮುಂದಾಗಿಲ್ಲ. ಹೀಗಾಗಿ ಕೊಂಡಿಕುನಾಲ್ ಸುರೇಶ್ ಅವರನ್ನು ಕಣಕ್ಕಿಳಿಸುವುದಾಗಿ ತಿಳಿಸಿದರು.

ಸರ್ಕಾರ ಮತ್ತು ದೇಶವನ್ನು ನಡೆಸಲು ಒಗ್ಗಟ್ಟಿನ ಅಗತ್ಯವನ್ನು ಪ್ರಧಾನಿ ನರೇಂದ್ರ ಮೋದಿ ಒತ್ತಿ ಹೇಳಿದ ಒಂದು ದಿನದ ಒಳಗೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವಿನ ಬಿಕ್ಕಟ್ಟು ಕಂಡು ಬಂದಿದೆ. ಸೋಮವಾರ 18ನೇ ಲೋಕಸಭಾ ಅಧಿವೇಶನ ಆರಂಭಕ್ಕೂ ಮುನ್ನ ಸಂಸತ್​ನಲ್ಲಿ ಮೋದಿ ಮಾತನಾಡಿ, ʼʼಭಾರತದ ಪ್ರಜಾಪ್ರಭುತ್ವದ ಘನತೆಯನ್ನು ಕಾಪಾಡಲು ಪ್ರತಿಪಕ್ಷಗಳು ಕೂಡ ನಮ್ಮೊಂದಿಗೆ ನಿಲ್ಲುವ ವಿಶ್ವಾಸವಿದೆʼʼ ಎಂದು ಹೇಳಿದ್ದರು. ಸದ್ಯ ಬಿಜೆಪಿಯ ಸಂಸದ ಭರ್ತೃಹರಿ ಮಹತಾಬ್ ಹಂಗಾಮಿ ಸ್ಪೀಕರ್ ಆಗಿದ್ದಾರೆ. ಇದಕ್ಕೂ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿತ್ತು. ಕಾಂಗ್ರೆಸ್​ 8 ಬಾರಿ ಸಂಸದರಾಗಿರುವ ಕೆ.ಸುರೇಶ್​ ಅವರನ್ನು ಹಂಗಾಮಿ ಸ್ಪೀಕರ್ ಮಾಡಬೇಕೆಂಬ ಬೇಡಿಕೆ ಇಟ್ಟಿತ್ತು.

ಇದನ್ನೂ ಓದಿ: Parliament Session 2024: ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿ

Continue Reading

ದೇಶ

Amarnath Yatra: ಆಗಸ್ಟ್‌ನಲ್ಲಿ ಪಾಕ್‌ ನಡೆಸುತ್ತಾ ಡೆಡ್ಲಿ ಅಟ್ಯಾಕ್‌? ಎರಡೆರಡು ಉಗ್ರ ಸಂಘಟನೆಗಳಿಂದ ದೊಡ್ಡ ಪ್ಲ್ಯಾನ್‌!

Amarnath Yatra:ಬಹವಾಲ್‌ಪುರದಲ್ಲಿ ಎರಡನೇ ಸಭೆ ನಡೆದಿತ್ತು. ಈ ಸಭೆಯನ್ನು ಜೈಷೇ ಮೊಹಮ್ಮದ್‌ ಉಗ್ರ ಸಂಘಟನೆ ಮುಖ್ಯಸ್ಥ ಮುಫ್ತಿ ಅಬ್ದುಲ್‌ ರೌಫ್‌ ಪಾಕಿಸ್ತಾನದ ಐಎಸ್‌ಐ ಮತ್ತು ಉಗ್ರ ಸಂಘಟನೆಗಳ ಜೊತೆಗೂ ನಡೆಸಿದ್ದ. ಕಣಿವೆ ರಾಜ್ಯದಲ್ಲಿ ಆತ್ಮಾಹುತಿ ದಾಳಿ ನಡೆಸಲು ಸಂಚು ರೂಪಿಸಲಾಗಿತ್ತು. ಇದೀಗ ಈ ದಾಳಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿರುವ ಭಾರತ ಪಾಕಿಸ್ತಾನದ ವಿರುದ್ಧ ಪ್ರತಿದಾಳಿ ನಡೆಸುವ ಭೀತಿಯಲ್ಲಿ ಪಾಕಿಸ್ತಾನ ಇದೆ. ಹೀಗಾಗಿಯೇ ಪಾಕಿಸ್ತಾನ ಗಡಿಯಲ್ಲಿ ತನ್ನ ಸೈನಿಕರ ನಿಯೋಜನೆಯನ್ನು ಹೆಚ್ಚಿಸಿದೆ.

VISTARANEWS.COM


on

Amarnath Yatra
Koo

ಹೊಸದಿಲ್ಲಿ: ಪವಿತ್ರ ಅಮರನಾಥ ಯಾತ್ರೆ(Amarnath Yatra)ಗೆ ಭಯೋತ್ಪಾದಕಾ ದಾಳಿಯ ಕಂಟಕ ಎದುರಾಗಿದೆ. ಈ ಬಾರಿ ಯಾತ್ರೆಯನ್ನು ಗುರಿಯಾಗಿಸಿ ವಿಧ್ವಂಸಕ ಕೃತ್ಯ ಎಸಗಲು ಪಾಕಿಸ್ತಾನ ಭಾರೀ ಸಂಚು ರೂಪಿಸಿರುವುದು ಬಯಲಾಗಿದೆ. ಲಷ್ಕರ್‌ ಉಗ್ರ ಸಂಘಟನೆ(Lashkar Terrorists) ಮುಖ್ಯಸ್ಥ ಅಬ್ದುಲ್‌ ರೆಹಮಾನ್‌ ಮಕ್ಕಿ ಲಾಹೋರ್‌ ಮತ್ತು ಬಹವಾಲ್‌ಪುರದಲ್ಲಿ ಅತಿ ದೊಡ್ಡ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಹಂಚುವ ಬಗ್ಗೆ ಮಹತ್ವ ಸಭೆ ನಡೆಸಿದ್ದಾನೆ. ಅಮರನಾಥ್‌ ಯಾತ್ರೆ ಸಂದರ್ಭದಲ್ಲಿ ವಿವಿಧ ಪ್ರದೇಶಗಳಲ್ಲಿ ದಾಳಿ ನಡೆಸಲು ಜಮ್ಮು ಮತ್ತು ಕಾಶ್ಮೀರಕ್ಕೆ ಅಮೆರಿಕ ನಿರ್ಮಿತ ಶಸ್ತ್ರಾಸ್ತಗಳನ್ನು ಪೂರೈಕೆ ಮಾಡುವುದೇ ಈ ಸಭೆಯ ಪ್ರಮುಖ ಉದ್ದೇಶವಾಗಿತ್ತು.

ಇನ್ನು ಬಹವಾಲ್‌ಪುರದಲ್ಲಿ ಎರಡನೇ ಸಭೆ ನಡೆದಿತ್ತು. ಈ ಸಭೆಯನ್ನು ಜೈಷೇ ಮೊಹಮ್ಮದ್‌ ಉಗ್ರ ಸಂಘಟನೆ ಮುಖ್ಯಸ್ಥ ಮುಫ್ತಿ ಅಬ್ದುಲ್‌ ರೌಫ್‌ ಪಾಕಿಸ್ತಾನದ ಐಎಸ್‌ಐ ಮತ್ತು ಉಗ್ರ ಸಂಘಟನೆಗಳ ಜೊತೆಗೂ ನಡೆಸಿದ್ದ. ಕಣಿವೆ ರಾಜ್ಯದಲ್ಲಿ ಆತ್ಮಾಹುತಿ ದಾಳಿ ನಡೆಸಲು ಸಂಚು ರೂಪಿಸಲಾಗಿತ್ತು. ಇದೀಗ ಈ ದಾಳಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿರುವ ಭಾರತ ಪಾಕಿಸ್ತಾನದ ವಿರುದ್ಧ ಪ್ರತಿದಾಳಿ ನಡೆಸುವ ಭೀತಿಯಲ್ಲಿ ಪಾಕಿಸ್ತಾನ ಇದೆ. ಹೀಗಾಗಿಯೇ ಪಾಕಿಸ್ತಾನ ಗಡಿಯಲ್ಲಿ ತನ್ನ ಸೈನಿಕರ ನಿಯೋಜನೆಯನ್ನು ಹೆಚ್ಚಿಸಿದೆ. 649 ಮುಜಾಹಿದ್ ಬೆಟಾಲಿಯನ್ (ಬರೋಹ್), 65 ಫ್ರಾಂಟಿಯರ್ ಫೋರ್ಸ್ (ತಂಡರ್) ಅನ್ನು ಪಾಕಿಸ್ತಾನ ನಿಯೋಜಿಸಿದೆ.

ಭೌತಿಕ ದಾಳಿಗಳನ್ನು (ಮನೆಗಳಿಗೆ ಪ್ರವೇಶಿಸುವ ಮೂಲಕ ಅಥವಾ ಪಾಕಿಸ್ತಾನದ ಮುಂದಿನ ಸ್ಥಳಗಳ ಮೇಲೆ ದಾಳಿ ಮಾಡುವ ಮೂಲಕ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲು) ಮತ್ತು ಕದನ ವಿರಾಮ ಉಲ್ಲಂಘನೆಗಳನ್ನು (ಪ್ರಸ್ತುತ ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮವಿದೆ) ತಡೆಯಲು ಭಾರತದ ಸರ್ಕಾರವು ಭಾರತೀಯ ಸೇನೆಯನ್ನು ಬಲ ಪಡಿಸುತ್ತಿದೆ ಎಂಬುದು ಸ್ಪಷ್ಟವಾಗಿದೆ.

ಹಿಮಾಲಯದ ಅಮರನಾಥ ಯಾತ್ರೆ ಬಹಳ ಹಳೆಯದು ಮತ್ತು ಪವಿತ್ರವಾದದ್ದು. ಇಲ್ಲಿ ಸುಮಾರು 5000 ವರ್ಷಗಳಷ್ಟು ಹಳೆಯದಾದ ಶಿವಲಿಂಗವಿದ್ದು ಈ ಪರ್ವತ ಶಿಖರದ ಸಮೀಪದಲ್ಲಿರುವ ಅಮರನಾಥ ಗುಹೆಯು ಹಿಂದೂ ಧರ್ಮದ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಲಕ್ಷಾಂತರ ಭಕ್ತರು ಅಮರನಾಥ ಯಾತ್ರೆ ಕೈಗೊಳ್ಳುತ್ತಾರೆ. ಇದನ್ನು ತೀರ್ಥಯಾತ್ರೆ ಎಂದು ಪರಿಗಣಿಸಲಾಗಿದೆ.

ಅಮರನಾಥ ಯಾತ್ರೆ ಯಾವಾಗ ಆರಂಭ?

ಈ ವರ್ಷದ ಶ್ರೀ ಬಾಬಾ ಅಮರನಾಥ ಯಾತ್ರೆಯು ಜೂನ್ 29 ರಿಂದ ಪ್ರಾರಂಭವಾಗುತ್ತಿದೆ. ಇದು ರಕ್ಷಾಬಂಧನ ದಿನದವರೆಗೆ ಇರಲಿದೆ. ಅಂದರೆ ಆಗಸ್ಟ್ 19 ರಂದು ಯಾತ್ರೆ ಕೊನೆಗೊಳ್ಳುತ್ತದೆ. ಹೀಗಾಗಿ ಜುಲೈ ಸಂಪೂರ್ಣ ತಿಂಗಳು ಹಾಗೂ ಆಗಸ್ಟ್ 19ರವರೆಗೆ ಭಕ್ತರು ಅಮರನಾಥನ ಯಾತ್ರೆ ಮಾಡಬಹುದು. ಇದಕ್ಕಾಗಿ ಮುಂಚಿತವಾಗಿ ಬುಕ್ ಮಾಡಿಕೊಳ್ಳಬೇಕಾಗುತ್ತದೆ.

ಅಮರನಾಥ ಯಾತ್ರೆ 2024 ಜೂನ್ 29, 2024 ರಿಂದ ಪ್ರಾರಂಭವಾಗಲಿದೆ. 19 ಆಗಸ್ಟ್ 2024 ರಂದು ಮುಕ್ತಾಯಗೊಳ್ಳುತ್ತದೆ. ಇಲ್ಲಿಗೆ ಭೇಟಿ ನೀಡುವ ಭಕ್ತರಿಗಾಗಿ ಮುಂಗಡ ನೋಂದಣಿಯು 15 ಏಪ್ರಿಲ್ 2024 ರಿಂದ ಪ್ರಾರಂಭವಾಗುತ್ತದೆ. ಹೀಗಾಗಿ ಆಸಕ್ತರು ಏಪ್ರಿಲ್ 15 ಅಂದರೆ ನಾಳೆಯಿಂದ ನೊಂದಣಿ ಮಾಡಿಕೊಳ್ಳಬಹುದಾಗಿದೆ.

ಇದನ್ನೂ ಓದಿ:Mamata Banerjee: ಬಾಂಗ್ಲಾದೇಶದೊಂದಿಗೆ ಜಲ ಹಂಚಿಕೆಯ ಮಾತುಕತೆ: ಮಮತಾ ಬ್ಯಾನರ್ಜಿ ವಿರೋಧ; ಪ್ರಧಾನಿಗೆ ಪತ್ರ

Continue Reading

ಕ್ರೈಂ

ಜಮೀನಿನಲ್ಲಿ ಕೆಲಸ ಮಾಡಲು ನಿರಾಕರಿಸಿದ ಮಹಿಳೆಯ ಮೇಲೆ ಹಲ್ಲೆ; ಖಾಸಗಿ ಅಂಗಕ್ಕೆ ಖಾರದ ಪುಡಿ ಎರಚಿ ವಿಕೃತಿ ಮೆರೆದ ಸಂಬಂಧಿಕರು

Viral News: 27 ವರ್ಷದ ಚೆಂಚು ಬುಡಕಟ್ಟು ಮಹಿಳೆ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ಅವರ ಖಾಸಗಿ ಅಂಗಗಳಿಗೆ ಮೆಣಸಿನ ಹುಡಿ ಎರಚಿ ವಿಕೃತಿ ಮೆರೆದ ಘಟನೆ ತೆಲಂಗಾಣದಲ್ಲಿ ನಡೆದಿದೆ. ಈ ಅಮಾನುಷ ಘಟನೆ ಜೂನ್ 8ರಂದು ನಡೆದಿದ್ದು, ತಡವಾಗಿ ಅಂದರೆ ಜೂನ್ 19ರಂದು ಪೊಲೀಸರ ಗಮನಕ್ಕೆ ಬಂದಿದೆ. ಜೂನ್ 20ರಂದು ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ.

VISTARANEWS.COM


on

Viral News
Koo

ಹೈದರಾಬಾದ್‌: ತೆಲಂಗಾಣದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, 27 ವರ್ಷದ ಚೆಂಚು ಬುಡಕಟ್ಟು ಮಹಿಳೆ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ಅವರ ಖಾಸಗಿ ಅಂಗಗಳಿಗೆ ಮೆಣಸಿನ ಹುಡಿ ಎರಚಿ ವಿಕೃತಿ ಮೆರೆಯಲಾಗಿದೆ. ಹೈದರಾಬಾದ್‌ನಿಂದ ಸುಮಾರು 130 ಕಿ.ಮೀ. ದೂರದಲ್ಲಿರುವ ನಾಗರ್‌ಕರ್ನೂಲ್‌ (Nagarkurnool)ನಲ್ಲಿ ಈ ಅಮಾನುಷ ಘಟನೆ ನಡೆದಿದ್ದು, ಸದ್ಯ ಮಹಿಳೆ ನಿಜಾಮ್‌ನ ಆಸ್ಪತ್ರೆ (NIMS)ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರನ್ನು ತೆಲಂಗಾಣ ಉಪಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕಾ (Mallu Bhatti Vikramarka) ಸೋಮವಾರ ಭೇಟಿಯಾಗಿ ಆರೋಗ್ಯ ವಿಚಾರಿಸಿದರು (Viral News).

ಜೂನ್‌ 8ರಂದು ನಡೆದಿದ್ದ ಘಟನೆ

ಈ ಅಮಾನುಷ ಘಟನೆ ಜೂನ್ 8ರಂದು ನಡೆದಿದ್ದು, ತಡವಾಗಿ ಅಂದರೆ ಜೂನ್ 19ರಂದು ಪೊಲೀಸರ ಗಮನಕ್ಕೆ ಬಂದಿದೆ. ಜೂನ್ 20ರಂದು ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ. ಸಂತ್ರಸ್ತೆ ಕೂಲಿ ಕೆಲಸ ಮಾಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಲಿಂಗಸ್ವಾಮಿ, ಲಕ್ಷ್ಮೀ, ಬಂಡಿ ವೆಂಕಟೇಶ್ ಮತ್ತು ಬಂಡಿ ಶಿವಮ್ಮ ಬಂಧಿತರು. ಅಚ್ಚರಿ ಎಂದರೆ ಲಕ್ಷ್ಮೀ ಮತ್ತು ಲಿಂಗಸ್ವಾಮಿ ಸಂತ್ರಸ್ತೆಯ ಸಹೋದರಿ ಮತ್ತು ಬಾವ (ಸಹೋದರಿಯ ಪತಿ). ಸಂತ್ರಸ್ತೆ ಕೆಲಸ ಮಾಡುತ್ತಿದ್ದ ಜಾಗದ ಮಾಲೀಕ ಬಂಡಿ ವೆಂಕಟೇಶ್ ಸೂಚನೆ ಮೇರೆಗೆ ಅವರು ಹಲ್ಲೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಾನವೀಯತೆ ಮರೆತು ಹಲ್ಲೆ

ಜೂನ್‌ 8ರಂದು ಆರೋಪಿಗಳು ಮಹಿಳೆ ಮೇಲೆ ದಾಳಿ ನಡೆಸಿದರು. ದೊಣ್ಣೆಯಿಂದ ಮನಸೋಇಚ್ಛೆ ಧಳಿಸಿದ ಆರೋಪಿಗಳು ಬಳಿಕ ಮಹಿಳೆ ಕಣ್ಣು, ಮುಖ, ಖಾಸಗಿ ಅಂಗಗಳಿಗೆ ಖಾರದ ಪುಡಿ ಎರಚಿ ವಿಕೃತಿ ಮೆರೆದಿದ್ದಾರೆ. ಅಲ್ಲದೆ ಡೀಸೆಲ್‌ ಎರಚಿ ಅವರ ಮೇಲೆ ಬೆಂಕಿ ಹಚ್ಚಿದ್ದಾರೆ. ಬಳಿಕ ಕೂಡಿಟ್ಟಿದ್ದಾರೆ. ಸುಮಾರು 11 ದಿನ ಮಹಿಳೆ ನರಕಯಾತನೆ ಅನುಭವಿಸಿದ್ದಾರೆ.

ಕೊನೆಗೆ ಜೂನ್‌ 19ರಂದು ಊರವರ ಸಹಾಯದಿಂದ ಮಹಿಳೆಯನ್ನು ರಕ್ಷಿಸಲಾಗಿದೆ. ಪೊಲೀಸರು ಕೂಡಲೇ ಮಹಿಳೆಯನನು ಆಸ್ಪತ್ರೆಗೆ ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಕಾರಣವೇನು?

ಘಟನೆ ಬಗ್ಗೆ ಮಾಹಿತಿ ನೀಡಿದ ಪೊಲೀಸರು ದಾಳಿ ಹಿಂದಿನ ಕಾರಣವನ್ನು ವಿವರಿಸಿದ್ದಾರೆ. ಮಹಿಳೆ ಮತ್ತು ಆಕೆಯ ಸಹೋದರಿ ಕುಟುಂಬದ ನಡುವೆ ಹಳೆ ವೈಶಮ್ಯವಿತ್ತು. ಈ ಮಧ್ಯೆ ಮಹಿಳೆ ಸ್ಥಳದ ಮಾಲೀಕ ಬಂಡಿ ವೆಂಕಟೇಶ್‌ ಬಳಿಯಿಂದ ಸಾಲ ಪಡೆದುಕೊಂಡಿದ್ದರು. ಸಾಲ ತೀರಿಸಲು ಆತನ ಜಮೀನಿನಲ್ಲಿ ಕೂಲಿ ಕೆಲಸ ಮಾಡಬೇಕು ಎನ್ನುವ ಒಪ್ಪಂದ ನಡೆದಿತ್ತು. ಆದರೆ ಸಂತ್ರಸ್ತೆ ಸಹೋದರಿಯೊಂದಿಗಿನ ಮನಸ್ತಾಪದಿಂದ ಕೆಲಸಕ್ಕೆ ಹೋಗಿರಲಿಲ್ಲ. ಹೀಗಾಗಿ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Viral Video: ಒಂಟಿ ಮಹಿಳೆ ಮೇಲೆ ಪುರುಷರ ಗುಂಪಿನಿಂದ ಅಮಾನುಷ ಹಲ್ಲೆ; ಸಹಾಯಕ್ಕೆ ಬದಲು ಮೊಬೈಲ್‌ ಚಿತ್ರೀಕರಣ!

ಸದ್ಯ ಆಸ್ಪತ್ರೆಗೆ ಭೇಟಿ ನೀಡಿದ ಮಲ್ಲು ಭಟ್ಟಿ ವಿಕ್ರಮಾರ್ಕಾ ಅವರು, ಸಂತ್ರಸ್ತೆ ಚೇತರಿಸಿಕೊಳ್ಳುವವರೆಗೆ ಎಲ್ಲ ಚಿಕಿತ್ಸೆಯ ವೆಚ್ಚಗಳನ್ನು ರಾಜ್ಯ ಸರ್ಕಾರ ಭರಿಸುತ್ತದೆ ಎಂದು ಭರವಸೆ ನೀಡಿದ್ದಾರೆ. ಅಲ್ಲದೆ ಮಹಿಳೆ ಸ್ವಂತ ಮನೆ ಹೊಂದಿಲ್ಲದಿದ್ದರೆ ಸರ್ಕಾರವು ಇಂದಿರಮ್ಮ ವಸತಿ ಯೋಜನೆಯಡಿ ಮನೆಯನ್ನು ಒದಗಿಸಲಿದೆ ಎಂದು ಹೇಳಿದ್ದಾರೆ. ಜತೆಗೆ ಮಕ್ಕಳಿಗೆ ಸರ್ಕಾರಿ ಸಮಾಜ ಕಲ್ಯಾಣ ಶಾಲೆಯಲ್ಲಿ ಶಿಕ್ಷಣ ಮತ್ತು ಕೃಷಿಗಾಗಿ ಭೂಮಿಯನ್ನು ನೀಡುವುದಾಗಿ ತಿಳಿಸಿದ್ದಾರೆ.

Continue Reading
Advertisement
Viral video
ವೈರಲ್ ನ್ಯೂಸ್24 mins ago

Viral Video: ಏಳನೇ ಮಹಡಿಯಿಂದ ಬೀದಿ ನಾಯಿಯನ್ನು ಎಸೆದು ಕ್ರೌರ್ಯ-ವಿಡಿಯೋ ಇದೆ

Anantkumar Hegde home fire
ಉತ್ತರ ಕನ್ನಡ38 mins ago

Anantkumar Hegde: ಮಾಜಿ ಸಂಸದ ಅನಂತ್‌ ಕುಮಾರ್‌ ಹೆಗ್ಡೆ ಮನೆಯಲ್ಲಿ ಬೆಂಕಿ ಆಕಸ್ಮಿಕ

Parliament Session 2024
ದೇಶ42 mins ago

Parliament Session 2024: ಸಂಸತ್‌ನಲ್ಲಿ ಈ ಬಾರಿ ಮೋದಿಗೆ ಪ್ರತಿಪಕ್ಷಗಳ ಪ್ರಬಲ ಸವಾಲು! Live ನೋಡಿ

Milk Price
ಪ್ರಮುಖ ಸುದ್ದಿ55 mins ago

Milk Price: ಹಾಲಿನ ದರ ಏರಿಕೆ ಬಗ್ಗೆ ಗೊತ್ತಿಲ್ಲ ಎಂದ ಸಿಎಂ; 50ml ಹೆಚ್ಚಿಗೆ ಕೊಟ್ಟು 2 ರೂ. ಜಾಸ್ತಿ ಮಾಡಿದ್ದೇವೆ ಎಂದ ಕೆಎಂಎಫ್‌ ಅಧ್ಯಕ್ಷ!

mandya kannada sahitya sammelana
ಪ್ರಮುಖ ಸುದ್ದಿ56 mins ago

Kannada Sahitya Sammelana: ಡಿಸೆಂಬರ್‌ 20, 21, 22ರಂದು ಮಂಡ್ಯದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

IND vs AUS
ಕ್ರಿಕೆಟ್1 hour ago

IND vs AUS: ಟೀಮ್​ ಇಂಡಿಯಾ ಆಟಗಾರರ ಮೇಲೆ ಹಿಟ್ ಅಂಡ್ ರನ್ ಗಂಭೀರ ಆರೋಪ ಮಾಡಿದ ದೆಹಲಿ ಪೊಲೀಸರು!

prajwal revanna case preetham gowda
ಪ್ರಮುಖ ಸುದ್ದಿ1 hour ago

Prajwal Revanna Case: ಪ್ರಜ್ವಲ್‌ ರೇವಣ್ಣ ಮೇಲೆ ಮತ್ತೊಂದು ಎಫ್‌ಐಆರ್‌; ಪ್ರೀತಂ ಗೌಡ ಮೇಲೂ ದೂರು

Lok Sabha Speaker Election
ದೇಶ2 hours ago

Lok Sabha Speaker Election: ಲೋಕಸಭೆ ಇತಿಹಾಸದಲ್ಲೇ ಮೊದಲ ಬಾರಿ ಸ್ಪೀಕರ್‌ ಹುದ್ದೆಗೆ ನಡೆಯಲಿದೆ ಚುನಾವಣೆ

The Present kannada film muhurtha at Kanteerava Studio
ಸಿನಿಮಾ2 hours ago

Kannada New Movie: ಅದ್ಧೂರಿಯಾಗಿ ನಡೆದ ’ದ ಪ್ರಸೆಂಟ್’ ಚಿತ್ರದ ಮುಹೂರ್ತ

Milk Price
ಕರ್ನಾಟಕ2 hours ago

Milk Price: ಜನರ ಬದುಕಿನೊಂದಿಗೆ ಕಾಂಗ್ರೆಸ್‌ ಸರ್ಕಾರ ಚೆಲ್ಲಾಟ; ಹಾಲಿನ ದರ ಏರಿಕೆಗೆ ವಿಜಯೇಂದ್ರ ಆಕ್ರೋಶ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ20 hours ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ4 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ4 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ5 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ1 week ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

ಟ್ರೆಂಡಿಂಗ್‌