Site icon Vistara News

Bomb Blast: ಚೆಂಡೆಂದು ಭಾವಿಸಿ ಬಾಂಬ್‌ ಎತ್ತಿಕೊಂಡ ಮದರಸಾ ವಿದ್ಯಾರ್ಥಿ; ಸ್ಫೋಟಕ್ಕೆ ಮೌಲಾನಾ ಸಾವು

Bomb Blast

ಪಾಟ್ನಾ:ಲೋಕಸಭೆ ಚುನಾವಣೆ(Lok Sabha Election 2024)ಗೆ ಇನ್ನೇನು ಕೆಲವೇ ದಿನಗಳ ಬಾಕಿ ಉಳಿದಿರುವಗಲೇ ಬಿಹಾರ(Bihar)ದಲ್ಲಿ ಬಾಂಬ್‌ ಸ್ಫೋಟ(Bomb blast)ಗೊಂಡಿದ್ದು, ಮೌಲಾನ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಅಪ್ರಾಪ್ತ ಬಾಲಕನೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಸರನ್‌ ಜಿಲ್ಲೆಯ ಮದರಸಾವೊಂದರಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಮೌಲಾನ ಮೌಲಾನಾ ಇಮಾಮುದ್ದೀನ್ ಮತ್ತು ವಿದ್ಯಾರ್ಥಿ ನೂರ್ ಆಲಂ (15) ಗಾಯಗೊಂಡಿದ್ದರು. ಇವರಿಬ್ಬರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೇ ಇಮಾಮುದ್ದೀನ್‌ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.

ಘಟನೆ ವಿವರ:

ಬುಧವಾರ ತಡರಾತ್ರಿ ಸರನ್‌ನ ಓಲ್ಹಾನ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮದರಸಾದ ಎದುರು ಬಿದ್ದಿದ್ದ ಚೆಂಡಿನಂತಹ ವಸ್ತುವನ್ನು ಚೆಂಡೆಂದು ಭಾವಿಸಿ ಆಲಂ ಮದರಸಾದೊಳಗೆ ಕೊಂಡೊಯ್ದಿದ್ದಾನೆ. ಮೌಲಾನಾ ಆ ವಸ್ತುವನ್ನು ನೋಡಿದ್ದರು. ಅವರು ಆಲಂನಿಂದ ಅದನ್ನು ತೆಗೆದುಕೊಂಡು ಅದನ್ನು ಬಾಂಬ್ ಎಂದು ಶಂಕಿಸಿ ಎಸೆದರು. ವಸ್ತು ಸ್ಫೋಟಗೊಂಡು ಇಬ್ಬರಿಗೂ ಗಾಯಗಳಾಗಿವೆ.  ಘಟನೆಯಲ್ಲಿ ಇಮಾಮುದ್ದೀನ್‌ ಮತ್ತು ಆಲಂ ಗಂಭೀರವಾಗಿ ಗಾಯಗೊಂಡಿದ್ದ ಇವರಿಬ್ಬರನ್ನೂ ಪಾಟ್ನಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿತ್ತು.

ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾದರಿಗಳನ್ನು ಸಂಗ್ರಹಿಸಿದೆ. ನಾವು ಅವರ ವರದಿಯನ್ನು ಪಡೆದ ನಂತರ, ವಸ್ತುವು ಬಾಂಬ್ ಅಥವಾ ಪಟಾಕಿಯೇ ಎನ್ನುವುದನ್ನು ಖಚಿತವಾಗಿ ಹೇಳಬಹುದು ಎಂದು ಸರನ್ ಎಸ್ಪಿ ಗೌರವ್ ಮಂಗಳಾ ತಿಳಿಸಿದ್ದಾರೆ. ಇನ್ನು ಪ್ರಕರಣದ ವಿಚಾರ ರಾಜ್ಯದಲ್ಲಿ ಸುದ್ದಿಯಾಗುತ್ತಿದ್ದಂತೆ ಪೊಲೀಸರು ಪ್ರಕರಣವನ್ನು ಕೂಲಂಕಷ ತನಿಖೆ ಮಾಡಲು ನಿರ್ಧಾರ ಮಾಡಿದ್ದಾರೆ. ಶುಕ್ರವಾರದ ವೇಳೆ ಬ್ಲಾಸ್ಟ್‌ನಲ್ಲಿ ಗಾಯಗೊಂಡವರು ಇಬ್ಬರು ವ್ಯಕ್ತಿಗಳು ಎಂದು ತಿಳಿಸಲಾಗಿದೆ.  ಎಸ್ಪಿ ಗೌರವ್ ಮಂಗಳಾ ನೀಡಿರುವ ಮಾಹಿತಿಯ ಪ್ರಕಾರ, ಪ್ರಕರಣದ ನಡೆದ ಬಳಿಕ ಸ್ಥಳೀಯ ಜನರು ಸಾಕ್ಷ್ಯವನ್ನು ನಾಶ ಮಾಡಿದ್ದರಿಂದ ಇಲ್ಲಿ ಬ್ಲಾಸ್ಟ್‌ ಆದ ವಸ್ತು ಯಾವುದು ಅನ್ನೋದರ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:Lok Sabha Election 2024: 272 ಸೀಟು ಗೆಲ್ಲದೇ ಹೋದರೆ ಬಿಜೆಪಿಯ ಪ್ಲ್ಯಾನ್ ಬಿ ಏನು? ಅಮಿತ್ ಶಾ ಉತ್ತರ ಹೀಗಿದೆ

ಮದರಸಾದಲ್ಲಿ ಸ್ಫೋಟದ ನಂತರ, ಎಫ್‌ಎಸ್‌ಎಲ್ ತಂಡ ತನಿಖೆ ಆರಂಭಿಸಿದೆ. ಸ್ಫೋಟದ ಹಿಂದಿನ ನಿಜವಾದ ಕಾರಣ ಇನ್ನೂ ಬಹಿರಂಗವಾಗಿಲ್ಲ. ಸ್ಫೋಟದ ಹಿಂದೆ ಬಾಂಬ್ ಇದೆಯೇ ಅಥವಾ ಪಟಾಕಿಯಿಂದ ಸ್ಫೋಟ ಸಂಭವಿಸಿದೆಯೇ ಎಂಬುದು ಇಲ್ಲಿಯವರೆಗೆ ಸ್ಪಷ್ಟವಾಗಿಲ್ಲ. ಆದರೆ ಈ ಘಟನೆಯ ನಂತರ ಮದರಸಾದಲ್ಲಿ ಯಾರೂ ಪತ್ತೆಯಾಗಿಲ್ಲ. ಘಟನೆಗೂ ಮುನ್ನ ಮದರಸಾದಲ್ಲಿ 12 ಮಕ್ಕಳು ಓದುತ್ತಿದ್ದರು. ಘಟನೆಯ ನಂತರ ಸ್ಥಳವನ್ನು ತೊಳೆಯಲಾಗಿದೆ. ಪ್ರಕರಣದಲ್ಲಿ ಸಾಕ್ಷ್ಯ ನಾಶಪಡಿಸುವ ಯತ್ನ ನಡೆದಿದೆ ಎಂಬ ಆರೋಪಗಳಿವೆ ಎನ್ನಲಾಗಿದೆ. ಸ್ಫೋಟದ ನಂತರ ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಬಿಹಾರದ ಮದರಸಾಗಳು ಭಯೋತ್ಪಾದನೆಯ ಗೂಡು ಎಂಬುದನ್ನು ಚಾಪ್ರಾ ಘಟನೆ ಸಾಬೀತುಪಡಿಸಿದೆ ಎಂದು ಹೇಳಿದ್ದಾರೆ. ಬಿಹಾರದ ಮದರಸಾಗಳು ಭಯೋತ್ಪಾದಕರ ತಾಣಗಳಾಗಿವೆ ಎಂದು ನಾವು ಮೊದಲೇ ಹೇಳಿದ್ದೆವು ಎಂದಿದ್ದಾರೆ.

Exit mobile version