1. ಕೇರಳ ಸ್ಫೋಟದ ಆರೋಪಿ ಶರಣಾಗತಿ; ಸಾವಿನ ಸಂಖ್ಯೆ 2ಕ್ಕೆ ಏರಿಕೆ
ಕೊಚ್ಚಿ: ಕೇರಳದ ಎರ್ನಾಕುಲಂನಲ್ಲಿ (Kochi Blast) ಭಾನುವಾರ ನಡೆದ ಜೆಹೊವಾಹ್ ವಿಟ್ನೆಸಸ್ ಸಮಾವೇಶದಲ್ಲಿ ನಡೆದ ಸರಣಿ ಸ್ಫೋಟದ ಜವಾಬ್ದಾರಿಯನ್ನು ಹೊತ್ತುಕೊಂಡು ಡೊಮಿನಿಕ್ ಮಾರ್ಟಿನ್ ಎಂಬ ವ್ಯಕ್ತಿ ಪೊಲೀಸರಿಗೆ ಶರಣಾಗಿದ್ದಾನೆ. ಪೊಲೀಸರಿಗೆ ಶರಣಾಗುವ ಮೊದಲು, ಮಾರ್ಟಿನ್ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಬಿಡುಗಡೆ ಮಾಡಿದ್ದಾನೆ. ಕ್ರಿಶ್ಚಿಯನ್ ಪಂಥವನ್ನು ಗುರಿಯಾಗಿಸಲು ಏಕೆ ನಿರ್ಧರಿಸಿದೆ ಎಂಬುದನ್ನು ವಿವರಿಸಿದ್ದಾನೆ. ಇದೇ ವೇಳೆ ಘಟನೆಯಲ್ಲಿ ಮೃತಪಟ್ಟವರು ಸಂಖ್ಯೆ 2ಕ್ಕೆ ಏರಿಕೆಯಾಗಿದೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : ಕೇರಳದಲ್ಲಿ ಕ್ರೈಸ್ತರ ಪ್ರಾರ್ಥನೆ ವೇಳೆ ಸ್ಫೋಟ; ಗುಜರಾತ್ ಮೂಲದ ಆರೋಪಿ ಬಂಧನ
Kochi Blast : ಕೇರಳ ಸ್ಫೋಟ ಬೆನ್ನಲ್ಲೇ ರಾಜ್ಯದಲ್ಲಿ ಹೈ ಅಲರ್ಟ್; ಕರಾವಳಿ, ಗಡಿಭಾಗದಲ್ಲಿ ತೀವ್ರ ನಿಗಾ
2. ಸಂಪುಟ ಪುನಾರಚನೆ ಬಗ್ಗೆ ಸಿದ್ದರಾಮಯ್ಯ ಮಾತು; ಕೈ ಪಾಳೆಯಕ್ಕೆ ತಲೆ ನೋವಾದ ಡಿನ್ನರ್ ಪಾಲಿಟಿಕ್ಸ್!
ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ (Congress Karnataka) ಎಲ್ಲವೂ ಸರಿ ಇಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಲೇ ಬರುತ್ತಿದೆ. 135 ಸ್ಥಾನ ಪಡೆದು ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೂ ತೃಪ್ತಿಯಾಗಿ ಆಡಳಿತ ನಡೆಸಲು ಸಾಧ್ಯವಾಗುತ್ತಿಲ್ಲ. 50:50 ಅನುಪಾತದಲ್ಲಿ ಸಿಎಂ ಗಾದಿಯನ್ನು ಸಿದ್ದರಾಮಯ್ಯ (CM Siddaramaiah) ಹಾಗೂ ಡಿ.ಕೆ. ಶಿವಕುಮಾರ್‌ಗೆ (DCM DK Shivakumar) ಹಂಚಿಕೆಯಾಗಿದೆ ಎಂಬ ವಿಚಾರ ಮೊದಲ ದಿನದಿಂದ ಇಲ್ಲಿಯವರೆಗೂ ಸದ್ದು ಮಾಡುತ್ತಲೇ ಬಂದಿದೆ. ಈ ನಡುವೆ ಸಿದ್ದರಾಮಯ್ಯ ಅವರೇ ಸಿಎಂ ಎಂದು ಅವರ ಬೆಂಬಲಿಗರು ಆಗಾಗ ನೀಡುತ್ತಿರುವ ಹೇಳಿಕೆಗೆ ಟಕ್ಕರ್ ಕೊಡುವ ನಿಟ್ಟಿನಲ್ಲಿ ಇನ್ನೊಂದು ಬಣದಿಂದ ಡಿನ್ನರ್ ಪಾಲಿಟಿಕ್ಸ್ (Dinner Politics) ಬೇರೆ ಶುರುವಾಗಿದೆ. ಆದರೆ, ಇದು ಬರೀ ಊಟವಷ್ಟೇ ಮತ್ತೇನೂ ಇಲ್ಲ ಎಂದು ಕಾಂಗ್ರೆಸ್ ಸಚಿವರೂ ಸೇರಿದಂತೆ ಹಲವು ನಾಯಕರು ತೇಪೆ ಹಚ್ಚುವ ಕೆಲಸಕ್ಕೆ ಮುಂದಾಗಿದ್ದಾರೆ. ಮತ್ತೆ ಕೆಲವು ಸಚಿವರು ಸಿಎಂ ಬದಲಾವಣೆ ಆಗುವುದೇ ಇಲ್ಲ ಎಂದು ಹೇಳಿದ್ದಾರೆ. ಇನ್ನು 30 ತಿಂಗಳ ಬಳಿಕ ಸಚಿವ ಸಂಪುಟ ಪುನಾರಚನೆ (Cabinet reshuffle) ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ, ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದಷ್ಟೇ ಸಿಎಂ ಸಿದ್ದರಾಮಯ್ಯ ಉತ್ತರಿಸಿದ್ದಾರೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ.
3. 80 ಸಾವಿರ ಸಂಬಳ ಬಿಟ್ಟು ಸರ್ಕಾರಿ ನೌಕರಿ ಆಸೆಗೆ ಬಿದ್ದು ಜೈಲು ಸೇರಿದ
ಕಲಬುರಗಿ: ಕೆಇಎ ನೇಮಕಾತಿ ಪರೀಕ್ಷೆಯಲ್ಲಿ (KEA Exam Scam) ಬ್ಲೂಟೂತ್ ಬಳಸಿ ಸಿಕ್ಕಿಬಿದ್ದಿರುವ ಅಭ್ಯರ್ಥಿಯೊಬ್ಬ, ಖಾಸಗಿ ಕಂಪನಿಯಲ್ಲಿ 80 ಸಾವಿರ ರೂ. ಸಂಬಳ ಬಿಟ್ಟು, ಸರ್ಕಾರಿ ನೌಕರಿಗೆ ಆಸೆಗೆ ಬಿದ್ದು ಜೈಲು ಪಾಲಾಗಿದ್ದಾನೆ. ಮೆಕಾನಿಕಲ್ ಎಂಜಿನಿಯರಿಂಗ್ ಓದಿದ್ದ ಯುವಕ, ಉತ್ತಮ ಸಂಬಳ ಸಿಗುತ್ತಿದ್ದರೂ ಸರ್ಕಾರಿ ನೌಕರಿ ಪಡೆಯಬೇಕೆಂದು ಅಡ್ಡ ದಾರಿ ಹಿಡಿದಿದ್ದರಿಂದ ಜೈಲು ವಾಸ ಅನುಭವಿಸುವಂತಾಗಿದೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ.
4. ನವೆಂಬರ್‌ನಲ್ಲಿ ಜಾತಿ ಗಣತಿ ವರದಿ ಸ್ವೀಕರಿಸುವೆನೆಂದ ಸಿದ್ದರಾಮಯ್ಯ; ಎಚ್‌ಡಿಕೆ ವಿರುದ್ಧ ವಾಗ್ದಾಳಿ
ಬೆಂಗಳೂರು: ಈ ದೇಶದಲ್ಲಿ ಮೊದಲು ಜಾತಿಗಣತಿ ಮಾಡಲು ಆದೇಶ ಮಾಡಿದ್ದು ನಮ್ಮ ಸರ್ಕಾರ. ನಾನೇ ಮೊದಲು ಆದೇಶವನ್ನು ಮಾಡಿ ವರದಿಯನ್ನು ನೀಡಲು ಹೇಳಿದ್ದೆ. ವರದಿ ಸಿದ್ಧವಾಗುವ ಹೊತ್ತಿಗೆ ರಾಜ್ಯದಲ್ಲಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಸಿಎಂ ಆಗಿದ್ದರು. ಆದರೆ, ಅವರು ವರದಿಯನ್ನು ಬಿಡುಗಡೆ ಮಾಡಲಿಲ್ಲ. ವರದಿಯನ್ನು ಬಿಡುಗಡೆ ಮಾಡಲು ತಯಾರಿ ನಡೆಸಿದ್ದ ಆಗಿನ ಸಚಿವ ಪುಟ್ಟರಂಗ ಶೆಟ್ಟಿ ಅವರನ್ನು ಸಂಪುಟದಿಂದ ಕೈಬಿಡುವುದಾಗಿ ಎಚ್‌ಡಿಕೆ ಹೆದರಿಸಿದ್ದರು. ಆದರೆ, ನಾನು ಈಗ ನವೆಂಬರ್‌ನಲ್ಲಿ ಜಾತಿ ಗಣತಿ ವರದಿಯನ್ನು (Caste Census Report) ಸ್ವೀಕಾರ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದರು ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ.
5. ಸಿಎಂ ಕಚೇರಿ – ಕಾರ್ಮಿಕ ಸಚಿವರ ವಾರ್; ಅಧಿಕಾರಿಗಳ ವರ್ತನೆಗೆ ಅʼಸಂತೋಷʼ!
ಬೆಂಗಳೂರು: ಸಚಿವರಿಗೆ ಈಗ ವರ್ಗಾವಣೆ ಕೋಟಾ ಮುಗಿದು ಹೋಗಿರುವ ಹಿನ್ನೆಲೆಯಲ್ಲಿ ಯಾವುದೇ ಇಲಾಖೆಯ ಅಧಿಕಾರಿಗಳು ಅಥವಾ ಸಿಬ್ಬಂದಿಯನ್ನು ವರ್ಗಾವಣೆ ಮಾಡುವುದೇನಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾಗಿದ್ದಾರೆ. ಆದರೆ, ಇದೇ ಈಗ ಸಚಿವರ ಹಾಗೂ ಸಿಎಂ ಕಚೇರಿ ಅಧಿಕಾರಿಗಳ (Officials in the CM office) ನಡುವಿನ ಸಂಘರ್ಷಕ್ಕೆ ಹಾದಿಯಾಗಿದೆ. ಕಾರ್ಮಿಕ ಇಲಾಖೆ (Labour Department ) ಸಚಿವ ಸಂತೋಷ್ ಲಾಡ್ (Minister Santosh Lad) ಅವರು ಸಿಎಂ ಕಚೇರಿಯ ಅಧಿಕಾರಿಗಳ ವರ್ತನೆಗೆ ಬೇಸರಗೊಂಡಿದ್ದಾರೆ. ಅವರು ನೀಡಿದ ವರ್ಗಾವಣೆ ಶಿಫಾರಸನ್ನು ಪರಿಗಣನೆಗೇ ತೆಗೆದುಕೊಂಡಿಲ್ಲ ಎಂದು ಹೇಳಲಾಗುತ್ತಿದ್ದು, ಸಿಎಂ ಸಿದ್ದರಾಮಯ್ಯ (CM Siddaramaiah) ಅವರನ್ನೂ ಕತ್ತಲಲ್ಲಿ ಇಟ್ಟು ಆಟ ಆಡಲಾಗಿದೆ ಎಂದು ಹೇಳಲಾಗುತ್ತಿದೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ.
6.ಉಗ್ರರ ನಿರ್ನಾಮದ ಹೊರತು ಕದನ ವಿರಾಮ ಇಲ್ಲ ಎಂದ ಇಸ್ರೇಲ್; 2ನೇ ಹಂತದ ದಾಳಿ ಶುರು
ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವಿನ ಸಂಘರ್ಷವು (Israel Palestine War) ಯುದ್ಧವಾಗಿ ಮಾರ್ಪಾಡಾಗಿದೆ. ಇಸ್ರೇಲ್ ಅಂತೂ ಹಮಾಸ್ ಉಗ್ರರ (Hamas Terrorists) ಮೇಲೆ ಸಮರವನ್ನೇ ಸಾರಿದೆ. ಗಾಜಾ ನಗರದೊಳಗೆ ಯುದ್ಧ ಟ್ಯಾಂಕರ್‌ಗಳನ್ನು ನುಗ್ಗಿಸಿರುವ ಇಸ್ರೇಲ್ (Israel) ಸೇನೆಯು, ಉಗ್ರರನ್ನು ಸದೆಬಡಿಯುವ ಪಣ ತೊಟ್ಟಿದೆ. ಇದರ ಬೆನ್ನಲ್ಲೇ, ಕದನ ವಿರಾಮ ಘೋಷಣೆ ಕುರಿತು ನಿರ್ಣಯ ತೆಗೆದುಕೊಳ್ಳಲಾಗಿದೆ. ಆದರೆ, ಇದಾವುದಕ್ಕೂ ಲಕ್ಷ್ಯ ಕೊಡದ ಇಸ್ರೇಲ್, ಹಮಾಸ್ ಉಗ್ರರ ವಿರುದ್ಧ ಎರಡನೇ ಹಂತದ ಸಮರ ಸಾರಿದೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ.
7. ಭಾರತ ತಂಡಕ್ಕೆ ಇಂಗ್ಲೆಂಡ್ ವಿರುದ್ಧ ಜಯ
ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ.
8. ಬೆಂಗಳೂರಿನ ಹಲವೆಡೆ ತಂಪೆರೆದ ವರುಣ; ಇನ್ನೆರಡು ದಿನ ಭಾರಿ ಮಳೆ!
ಬೆಂಗಳೂರು: ಕಳೆದೊಂದು ವಾರದಿಂದ ಗರಿಷ್ಠ ತಾಪಮಾನ ಏರಿಕೆಯಿಂದಾಗಿ ಜನರು ಕಂಗಲಾಗಿದ್ದರು. ಹವಾಮಾನ ಇಲಾಖೆ ಮುನ್ಸೂಚನೆಯಂತೆ ಭಾನುವಾರದಂದು ಹಲವೆಡೆ ಮಳೆಯ (Rain News) ಸಿಂಚನವಾಗಿದೆ. ಬೆಂಗಳೂರಿನ ಸದಾಶಿವನಗರ, ಯಶವಂತಪುರ, ಗೊರಗುಂಟೆ ಪಾಳ್ಯ, ಮಲ್ಲೇಶ್ವರಂ, ಮಹಾಲಕ್ಷ್ಮೀ ಲೇಔಟ್ ತುಮಕೂರು ರಸ್ತೆ ಸುತ್ತಮುತ್ತ (Karnataka Weather Forecast) ಮಳೆಯಾಗಿದೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ.
9. ಅ.31ರಂದು ‘ಮೈ ಭಾರತ್’ಗೆ ಚಾಲನೆ ಎಂದ ಪ್ರಧಾನಿ ಮೋದಿ; ಏನಿದು?
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕೀ ಬಾತ್ (Mann Ki Baat) ರೇಡಿಯೊ ಸರಣಿಯ 106ನೇ ಕಾರ್ಯಕ್ರಮದಲ್ಲಿ ದೇಶದ ಜನರನ್ನುದ್ದೇಶಿಸಿ ಮಾತನಾಡಿದರು. ಇದೇ ವೇಳೆ ಅವರು ದೀಪಾವಳಿ ಹಬ್ಬದ ಶುಭಾಶಯ ತಿಳಿಸಿದರು. ಹಾಗೆಯೇ, ಸ್ವಚ್ಛತೆ, ಮಹಿಳಾ ಸಬಲೀಕರಣ ಸೇರಿ ಹಲವು ವಿಷಯಗಳ ಕುರಿತು ಮಾತನಾಡಿದರು. ಹಾಗೆಯೇ, “ಅಕ್ಟೋಬರ್ 31ರಂದು ದೇಶಾದ್ಯಂತ ಮೇರಾ ಯುವ ಭಾರತ್ (Mera Yuva Bharat Or My Bharat) ಸಂಸ್ಥೆಗೆ ಚಾಲನೆ ನೀಡಲಾಗುತ್ತದೆ” ಎಂದು ನರೇಂದ್ರ ಮೋದಿ (Narendra Modi) ಘೋಷಿಸಿದರು. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ.
10. ಪೊಲೀಸ್ ಮನೆಯಲ್ಲಿ ಕದಿಯುವಾಗಲೇ ಸಿಕ್ಕಿಬಿದ್ದ ಕಳ್ಳರು!
ತುಮಕೂರು : ಮನೆಯೊಂದರಲ್ಲಿ ಯಾರೂ ಇಲ್ಲದನ್ನು ತಿಳಿದ ಕಳ್ಳರು (Theft case) ಬಾಗಿಲಿನ ಬೀಗ ಮುರಿದು ಕೈ ಚಳಕ ತೋರಲು ಹೋಗಿ ಸಿಕ್ಕಿ ಬಿದ್ದಿದ್ದಾರೆ. ಹಾಡಹಗಲೇ ಪೊಲೀಸರ ಮನೆಗೆ ನುಗ್ಗಿ ಚಿನ್ನಾಭರಣವನ್ನೆಲ್ಲ ದೋಚುವಾಗಲೇ ಖತರ್ನಾಕ್ ಖದೀಮರು ಪೊಲೀಸರಿಗೆ ಲಾಕ್ ಹಾಕಿದ್ದಾರೆ. ತುಮಕೂರು ಜಿಲ್ಲೆ (Tumkur News) ಶಿರಾ ನಗರದ ವಿದ್ಯಾನಗರದಲ್ಲಿ ಘಟನೆ ನಡೆದಿದೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ