ಗುವಾಹಟಿ: ಸ್ವಾತಂತ್ರ್ಯ ದಿನಾಚರಣೆ(Independence Day)ಗೆ ಅಡ್ಡಿಪಡಿಸುವ ನಿಟ್ಟಿನಲ್ಲಿ ನಿಷೇಧಿತ ದಂಗೆಕೋರರ ಗುಂಪು ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸೋಮ್-ಇಂಡಿಪೆಂಡೆಂಟ್ (ULFA-I) ಅಸ್ಸಾಂನ 19 ಕಡೆಗಳಲ್ಲಿ ಬಾಂಬ್ ಇಟ್ಟಿರುವ ಘಟನೆ ವರದಿಯಾಗಿದೆ. ವಿವಿಧೆಡೆಯಲ್ಲಿ ಬಾಂಬ್(Bomb Threat) ಇರಿಸಿ ರಾಜ್ಯಾದ್ಯಂತ ಆತಂಕ ಸೃಷ್ಟಿಯಾಗಿತ್ತು.
ಗುರುವಾರ ಸ್ವಾತಂತ್ರ್ಯ ದಿನಾಚರಣೆಯನ್ನು ಅಡ್ಡಿಪಡಿಸಲು ಅಸ್ಸಾಂನಾದ್ಯಂತ 19 ಬಾಂಬ್‌ಗಳನ್ನು ಇರಿಸಿದ್ದೇವೆ ULFA-I ಎಂದು ಹೇಳಿಕೊಂಡಿದೆ. ಪತ್ರಿಕಾ ಪ್ರಕಟಣೆಯಲ್ಲಿ, ಮೇಲ್ಭಾಗದ ಅಸ್ಸಾಂನ ಶಿವಸಾಗರ್, ದಿಬ್ರುಗಢ ಮತ್ತು ಗುವಾಹಟಿ ಮತ್ತು ಲೋವರ್ ಅಸ್ಸಾಂನ ಹಲವಾರು ಪ್ರದೇಶಗಳಲ್ಲಿ ಬಾಂಬ್‌ಗಳನ್ನು ಇಡಲಾಗಿದೆ ಎಂದು ಸಂಘಟನೆಯು ಹೇಳಿದೆ. ಇದರ ಬೆನ್ನಲ್ಲೇ ಕಾರ್ಯಪ್ರವೃತರಾ ಪೊಲೀಸರು ಮತ್ತು ಸೇನೆ ಬಾಂಬ್ ಪತ್ತೆಗೆ ಮುಂದಾಯಿತು. ಏತನ್ಮಧ್ಯೆ, ಶಿವಸಾಗರ್ ಮತ್ತು ನಾಗಾನ್ ಸೇರಿದಂತೆ ಅನೇಕ ಸ್ಥಳಗಳಿಂದ “ಅನುಮಾನಾಸ್ಪದ ವಸ್ತುಗಳನ್ನು” ಪತ್ತೆಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂದು ರಾಜ್ಯಾದ್ಯಂತ ಬೆಳಗ್ಗೆ 6 ರಿಂದ ಮಧ್ಯಾಹ್ನ 12ರವರೆಗೆ ವಿವಿಧೆಡೆ ಬಾಂಬ್ ಸ್ಫೋಟ ನಡೆಸುವ ಮೂಲಕ ತಮ್ಮ ಶಕ್ತಿ ಪ್ರದರ್ಶಿಸಲು ಬಯಸಿದ್ದೇವೆ ಎಂದು ಉಗ್ರಗಾಮಿ ಸಂಘಟನೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಆದರೆ, ತಾಂತ್ರಿಕ ಕಾರಣಗಳಿಂದ ಉಲ್ಫಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಸಾರ್ವಜನಿಕರಿಗೆ ಅಪಾಯವಾಗದಂತೆ ಸ್ಫೋಟಕಗಳನ್ನು ಪತ್ತೆಹಚ್ಚಿ ಮತ್ತು ನಿಷ್ಕ್ರಿಯಗೊಳಿಸುವಂತೆ ಪತ್ರಿಕಾ ಪ್ರಕಟಣೆಯ ಮೂಲಕ ಸಂಘಟನೆಯು ವಿನಂತಿಸಿದೆ.
DTO ಆಫೀಸ್, ONGC ನಂಬರ್ 5 ಗೇಟ್, ದಿಬ್ರುಗಢ್ ಲಕುವಾ ತಿನಾಲಿ, ASTC, ಲಖಿಂಪುರ ASTC, SP ಆಫೀಸ್, ಲಾಲುಕ್ ಡೈಲಿ ಮಾರ್ಕೆಟ್, ಬರ್ಘಾಟ್ ಪೊಲೀಸ್ ಔಟ್‌ಪೋಸ್ಟ್, ನಂಗಾವ್ ವೈದ್ಯಕೀಯ ಕಾಲೇಜು, ಗುವಾಹಟಿ ದಿಸ್‌ಪುರ್ ಲಾಸ್ಟ್ ಗೇಟ್, ಗಾಂಧಿ ಮಂಟಪ, ನರೇಂಗಿ ಸೇನಾ ಶಿಬಿರ , ಪಾನ್ ಬಜಾರ್, ಜೋರಾಬತ್ ಮೇಲ್ಸೇತುವೆ, ಭೇಟಪಾರಾ, ಮಾಲಿಗಾಂವ್, ರಾಜ್‌ಗಢ್, ನಲ್ಬರಿ, ಮತ್ತು ಅಸ್ಸಾಂನ ಶಿವಸಾಗರ್ ಜಿಲ್ಲೆಯ ರಂಗಿಯಾ ಪ್ರದೇಶದಲ್ಲಿ ಬಾಂಬ್ ಇರಿಸಲಾಗಿದೆ ಎಂದು ಉಲ್ಫಾ ಹೇಳಿದೆ.
ಪಾನಿಟೋಲಾ ಸೇರಿದಂತೆ ಟಿನ್ಸುಕಿಯಾ ಜಿಲ್ಲೆಯ ಮೂರು ಸ್ಥಳಗಳಲ್ಲಿ, ದಿಬ್ರುಗಢ್ ಜಿಲ್ಲೆಯ ಒಂದು ಸ್ಥಳ ಮತ್ತು ಗೋಲಾಘಾಟ್ ಮತ್ತು ಸೊರುಪಥರ್‌ನಲ್ಲಿ ತಲಾ ಒಂದು ಸ್ಥಳದಲ್ಲಿ ಬಾಂಬ್‌ಗಳನ್ನು ಇರಿಸಲಾಗಿದೆ ಉಲ್ಫಾ ಮಾಹಿತಿ ನೀಡಿದೆ.
ಇದನ್ನೂ ಓದಿ: Independence Day 2024: ನಾಡಿನೆಲ್ಲೆಡೆ 78ನೇ ಸ್ವಾತಂತ್ರ್ಯ ದಿನಾಚರಣೆ; ಸಂಭ್ರಮದ ಕ್ಷಣಗಳು ಇಲ್ಲಿವೆ