ಭಾರತದ ಉತ್ತರ ಮತ್ತು ಪಶ್ಚಿಮ ಗಡಿ ಭಾಗದಲ್ಲಿ ಚೀನಾ ಮತ್ತು ಪಾಕಿಸ್ತಾನದಿಂದ ಭದ್ರತೆಗೆ ಬೆದರಿಕೆಯ ನಡುವೆಯೇ, ವಿರೋಧಿಗಳಿಗೆ ಭಾರಿ ನಡುಕ ಹುಟ್ಟಿಸುವಂತೆ ಹಲವಾರು ಪ್ರಳಯಾಂತಕ ಕ್ಷಿಪಣಿಗಳನ್ನು ಭಾರತ 2022ರಲ್ಲಿ ಯಶಸ್ವಿಯಾಗಿ ಪರೀಕ್ಷಿಸಿತ್ತು. ಅಗ್ನಿ V ಕ್ಷಿಪಣಿಯು 5,500 ಕಿ.ಮೀ ದೂರದ (Year- end special) ಗುರಿಯನ್ನೂ ಭೇದಿಸಬಲ್ಲುದು.
2022ರಲ್ಲಿ ಭಾರತ ಹಡಗು ಮತ್ತು ಬೃಹತ್ ದೋಣಿಗಳನ್ನು ನಾಶಪಡಿಸಬಲ್ಲ ಕ್ಷಿಪಣಿಗಳನ್ನು ಪರೀಕ್ಷಿಸಿತ್ತು (Anti -ship). ಏರ್-ಡಿಫೆನ್ಸ್‌ಗೆ ಬಳಕೆಯಾಗುವ ಕ್ಷಿಪಣಿಗಳನ್ನು ಉಡಾಯಿಸಿತ್ತು. ಅಣ್ವಸ್ತ್ರ ಸಿಡಿ ತಲೆಗಳನ್ನು ಗುರಿಯ ಕಡೆಗೆ ಸಿಡಿಸಬಲ್ಲ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪರೀಕ್ಷಿಸಿತ್ತು. ಕ್ರೂಸ್, ಏರ್ ಟು ಏರ್ ಕ್ಷಿಪಣಿಗಳನ್ನು ಪರೀಕ್ಷಾರ್ಥ ಉಡಾವಣೆಗೊಳಿಸಿತ್ತು.
ಆ್ಯಂಟಿ-ಬ್ಯಾಲಿಸ್ಟಿಕ್ ಮಿಸೈಲ್ (Anti-Ballistic Missile) ಸಿಸ್ಟಮ್ ಹೊಂದಿರುವ ಏಳು ದೇಶಗಳಲ್ಲಿ ಭಾರತ ಕೂಡ ಸೇರಿದೆ. ಯಾವುದೇ ರೀತಿಯ ಕ್ಷಿಪಣಿ ದಾಳಿಯನ್ನು ಎದುರಿಸಲು ಇದು ಸಹಕಾರಿ.
ಭಾರತದ ಮಿಲಿಟರಿಗೆ ಆತ್ಮನಿರ್ಭರದ ಬಲವನ್ನು ಈ ವರ್ಷ ತುಂಬಲಾಯಿತು. ಸ್ವದೇಶಿ ತಂತ್ರಜ್ಞಾನದ ಶಸ್ತ್ರಾಸ್ತ್ರಗಳು ಸೇನೆಯ ಬತ್ತಳಿಕೆಗೆ ಸೇರ್ಪಡೆಯಾಯಿತು. ಇಲ್ಲೇ ಉತ್ಪಾದನೆಗೂ ಆದ್ಯತೆ ನೀಡಲಾಯಿತು. ಚೀನಾ ಮತ್ತು ಪಾಕಿಸ್ತಾನ ಗಡಿಯಲ್ಲಿ ಸ್ವದೇಶಿ ನಿರ್ಮಿತ ಕ್ಷಿಪಣಿಗಳನ್ನು ನಿಯೋಜಿಸಲಾಯಿತು. ಭಾರತ 2022ರಲ್ಲಿ ಯಶಸ್ವಿಯಾಗಿ ಪರೀಕ್ಷಿಸಿದ ಕ್ಷಿಪಣಿಗಳ ವಿವರ ಇಲ್ಲಿದೆ.
ಅಗ್ನಿ ಸರಣಿಯ ಕ್ಷಿಪಣಿಗಳು
ಅಗ್ನಿ ಸರಣಿಯ ಹಲವು ಕ್ಷಿಪಣಿಗಳನ್ನು ಈ ವರ್ಷ ಪರೀಕ್ಷಿಸಲಾಯಿತು.
ಅಗ್ನಿ-5 ಕ್ಷಿಪಣಿಯನ್ನು ಡಿಸೆಂಬರ್‌ನಲ್ಲಿ ಉಡಾವಣೆಗೊಳಿಸಲಾಯಿತು. ಇದು 5,000 ಕಿ.ಮೀ ದೂರದ ಗುರಿಯನ್ನೂ ಭೇದಿಸಬಲ್ಲುದು. ಈ ಕ್ಷಿಪಣಿ ಬೀಜಿಂಗ್ ಸೇರಿದಂತೆ ಚೀನಾದ ಪ್ರಮುಖ ನಗರಗಳ ಮೇಲೆ ದಾಳಿ ನಡೆಸಬಲ್ಲ ಸಾಮರ್ಥ್ಯವನ್ನು ಹೊಂದಿದೆ. ನವೆಂಬರ್‌ನಲ್ಲಿ ಅಗ್ನಿ 3, ಜೂನ್‌ನಲ್ಲಿ ಅಗ್ನಿ 4 ಪರೀಕ್ಷಿಸಲಾಯಿತು. ಅಗ್ನಿ 4 ಕ್ಷಿಪಣಿಯು 3,500 ಕಿ.ಮೀ ದೂರದ ಗುರಿಯನ್ನು ಭೇದಿಸಬಲ್ಲುದು.
ಬ್ರಹ್ಮೋಸ್ : 2022ರ ಮೇನಲ್ಲಿ ಭಾರತ ಸುಧಾರಿತ ಬ್ರಹ್ಮೋಸ್ ಅನ್ನು ಪರೀಕ್ಷಿಸಿತು. Su-30 MKI ಯುದ್ಧ ವಿಮಾನದಿಂದ (ಸುಖೋಯ್) ಬ್ರಹ್ಮೋಸ್ ಕ್ಷಿಪಣಿಯನ್ನು ಭಾರತ ಯಶಸ್ವಿಯಾಗಿ ಪರೀಕ್ಷಿಸಿತ್ತು. ಬಂಗಾಳ ಕೊಲ್ಲಿಯಲ್ಲಿ ನಿಗದಿತ ಟಾರ್ಗೆಟ್ ಅನ್ನು ಕ್ಷಿಪಣಿ ಭೇದಿಸಿತ್ತು.
ಪೃಥ್ವಿ-II : ಒಡಿಶಾದಲ್ಲಿ ಸೀಮಿತ ಶ್ರೇಣಿಯ ಪೃಥ್ವಿ II ಕ್ಷಿಪಣಿಯನ್ನು ಪರೀಕ್ಷಿಸಲಾಯಿತು.
ಕ್ಷಿಪಣಿ ಉಡಾಯಿಸಿದ ಸಬ್ ಮೆರೀನ್
ಐಎನ್‌ಎಸ್ ಅರಿಹಂತ್ ಸಬ್ ಮೆರೀನ್, ಕಳೆದ ಅಕ್ಟೋಬರ್‌ನಲ್ಲಿ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಣೆಗೊಳಿಸಿತು.
ಲೇಸರ್ ಗೈಡೆಡ್ ಆ್ಯಂಟಿ ಟ್ಯಾಂಕ್ ಗೈಡೆಡ್ ಮಿಸೈಲ್: ಸ್ವದೇಶಿ ನಿರ್ಮಿತ ಲೇಸರ್ ಗೈಡೆಡ್ ಆ್ಯಂಟಿ ಟ್ಯಾಂಕ್ ಗೈಡೆಡ್ ಮಿಸೈಲನ್ನು ಭಾರತ ಪರೀಕ್ಷಿಸಿತು.
ಕ್ವಿಕ್ ರಿಯಾಕ್ಷನ್ ಸರ್ಫೇಸ್ ಟು ಏರ್ ಕ್ಷಿಪಣಿ: ಭಾರತೀಯ ಸೇನಾಪಡೆ ಆರು ಕ್ವಿಕ್ ರಿಯಾಕ್ಷನ್ ಸರ್ಫೇಸ್ ಟು ಏರ್ ಮಿಸೈಲ್‌ಗಳ ಪರೀಕ್ಷೆಯನ್ನು 2022ರಲ್ಲಿ ನಿರ್ವಹಿಸಿತು.
ಮಧ್ಯಮ ಶ್ರೇಣಿಯ ಸರ್ಫೇಸ್ ಟು ಏರ್ ಮಿಸೈಲ್: ಮಾರ್ಚ್‌ನಲ್ಲಿ ಮಧ್ಯಮ ಶ್ರೇಣಿಯ ಎರಡು ಕ್ಷಿಪಣಿಗಳ ಪರೀಕ್ಷೆಯನ್ನು ಮಾರ್ಚ್‌ನಲ್ಲಿ ನಡೆಸಲಾಯಿತು.
ರೇಂಜ್ ಸರ್ಫೇಸ್ ಟೊ ಏರ್ ಮಿಸೈಲ್: ಡಿಆರ್‌ಡಿಒ ಮತ್ತು ಭಾರತೀಯ ನೌಕಲಾಪಡೆ ಜಂಟಿಯಾಗಿ ಚಂಡೀಪುರದಲ್ಲಿ ಯುದ್ಧ ನೌಕೆಯೊಂದರಿಂದ ಈ ಕ್ಷಿಪಣಿಯ ಪರೀಕ್ಷೆ ನಡೆಸಿತು.