Site icon Vistara News

Tipu Sultan: ಬುಲ್ಡೋಜರ್ ಮೂಲಕ ಟಿಪ್ಪು ಸುಲ್ತಾನ್ ಸ್ಮಾರಕ ನೆಲಸಮ, ವ್ಯಾಪಕ ಬಂದೋಬಸ್ತ್

Bulldozer razes illegal memorial of Tipu Sultan In dhule, Maharashtra

ಧುಳೆ, ಮಹಾರಾಷ್ಟ್ರ: ಧುಳೆ (Dhule) ನಗರದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಟಿಪ್ಪು ಸುಲ್ತಾನ್ ಸ್ಮಾರಕವನ್ನು (Tipu Sultan Memorial) ಧುಳೆ ನಗರ ಆಢಳಿತವು ನೆಲಸಮ ಮಾಡಿದೆ. ಸ್ಥಳೀಯ ಎಐಎಂಐಎಂ ಶಾಸಕ ಫಾರೂಖ್ ಅನ್ವರ್ ಶಾ (AIMIM MLA Farooq Anwar Shah) ಅವರು ಧುಳೆ ಚೌಕ್‌ನ ರಸ್ತೆ ನಡುವೆ ಅಕ್ರಮವಾಗಿ ಟಿಪ್ಪು ಸುಲ್ತಾನ್ ಸ್ಮಾರಕ ನಿರ್ಮಾಣ ಮಾಡಿದ್ದಾರೆಂದು ಹಿಂದೂ ಸಂಘಟನೆಗಳು ಕಾರ್ಯಕರ್ತರು, ಯುವ ಬಿಜೆಪಿ (BJP) ನಾಯಕರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ನಗರ ಆಡಳಿತವು, ದುಳೆ ಚೌಕ್‌ನ 100 ಫೀಟ್ ವಡ್ಜೈ ರಸ್ತೆ ನಿರ್ಮಾಣ ಮಾಡಲಾಗಿದ್ದ ಸ್ಮಾರಕವನ್ನು ಬುಲ್ಡೋಜರ್ ಬಳಸಿಕೊಂಡು ನೆಲ ಸಮ ಮಾಡಿದ್ದಾರೆ. ಅಲ್ಲದೇ, ಮುಂಜಾಗೃತೆಯಾಗಿ ಹೆಚ್ಚಿನ ಭದ್ರತೆಯನ್ನು ನಿಯೋಜಿಸಲಾಗಿದೆ. ಟಿಪ್ಪು ಸುಲ್ತಾನ್ ಸ್ಮಾರಕ ನಿರ್ಮಾಣ ಮಾಡಿದ್ದ ಗುತ್ತಿಗೆದಾರನೇ ಶುಕ್ರವಾರ ಸ್ಮಾರಕವನ್ನು ಸ್ವಯಂ ಆಗಿ ತೆಗೆದು ಹಾಕಿದ್ದಾನೆಂದು ಅಧಿಕಾರಿಗಳು ಹೇಳಿದ್ದಾರೆ.

ಅಕ್ರಮ ಟಿಪ್ಪು ಸುಲ್ತಾನ ನಿರ್ಮಾಣ ಬಗ್ಗೆ ಮಹಾರಾಷ್ಟ್ರದ ಭಾರತೀಯ ಜನತಾ ಪಾರ್ಟಿಯ ಯುವ ಮೋರ್ಚಾ ಘಟಕವು, ರಾಜ್ಯದ ಗೃಹ ಸಚಿವರೂ ಆಗಿರುವ ಡಿಸಿಎಂ ದೇವೇಂದ್ರ ಫಡ್ನವಿಸ್ ಅವರಿಗೆ ಪತ್ರ ಬರೆದಿತ್ತು. ಇದೇ ಪತ್ರವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಧುಳೆ ಮುನ್ಸಿಪಲ್ ಕಾರ್ಪೊರೇಷನ್ ಆಯುಕ್ತರಿಗೂ ಪತ್ರ ಬರೆಯಲಾಗಿತ್ತು. ಈ ದೂರಿನ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಟಿಪ್ಪು ಸ್ಮಾರಕ ನೆಲಸಮ ಹಿನ್ನೆಲೆಯಲ್ಲಿ ನಗರದಲ್ಲಿ ವ್ಯಾಪಕ ಬಂದೋಬಸ್ತ್ ಕೂಡ ಕೈಗೊಳ್ಳಲಾಗಿದೆ.

ಧುಳೆ ನಗರಸಭೆಯು ಡಿ ಮಾರ್ಟ್‌ನಿಂದ ಬೈಪಾಸ್ ಹೆದ್ದಾರಿವರೆಗೆ 100 ಅಡಿ ರಸ್ತೆ ನಿರ್ಮಿಸಿದ್ದು, ಅದೇ ರಸ್ತೆಯ ಮಧ್ಯದಲ್ಲಿ ಟಿಪ್ಪು ಸುಲ್ತಾನ್ ಸ್ಮಾರಕ ನಿರ್ಮಿಸಲಾಗಿದೆ. ಶಾಸಕ ಫಾರೂಕ್ ಶಾ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಬಿಜೆಪಿ ಯುವ ಘಟಕವು ಪತ್ರದಲ್ಲಿ ಒತ್ತಾಯಿಸಿತ್ತು. ಕೆಲವು ವರದಿಗಳ ಪ್ರಕಾರ, ಕೆಲವು ದಿನಗಳ ಹಿಂದೆ ದೇವಸ್ಥಾನವನ್ನು ಇದೇ ರೀತಿಯಾಗಿ ಧ್ವಂಸ ಮಾಡಲಾಗಿತ್ತು. ಆಗಿನಿಂದಲೂ ಜನರು ಆಕ್ರೋಶಗೊಂಡಿದ್ದಾರೆ ಎನ್ನಲಾಗಿದೆ.

ಧುಳೆ ನಗರದ ಅಡ್ಡರಸ್ತೆಯಲ್ಲಿ ನಿರ್ಮಿಸಿರುವ ಸ್ಮಾರಕ ನಿರ್ಮಾಣವನ್ನು ಗುತ್ತಿಗೆದಾರರೇ ಶುಕ್ರವಾರ ಬೆಳಗ್ಗೆ ತೆಗೆದಿದ್ದಾರೆ. ಈ ವಿವಾದವನ್ನು ಬಗೆಹರಿಸುವಲ್ಲಿ ಶಾಸಕ ಫಾರೂಕ್ ಶಾ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಧುಳೆ ಜಿಲ್ಲಾಧಿಕಾರಿ ಜಲಜ್ ಶರ್ಮಾ ಅವರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Tipu Sultan: ಲಂಡನ್‌ನಲ್ಲಿ ಟಿಪ್ಪು ಸುಲ್ತಾನ್‌ ಖಡ್ಗ 140 ಕೋಟಿ ರೂ.ಗೆ ಹರಾಜು

ಟಿಪ್ಪು ಸುಲ್ತಾನ್ ಸ್ಮಾರಕ ನಿರ್ಮಾಣ ಮಾಡಿದ್ದ ಗುತ್ತಿಗೆದಾರನೇ ಸ್ವತಃ ಸ್ಮಾರಕವನ್ನು ತೆಗೆದು ಹಾಕಿದ್ದಾರೆ. ಟಿಪ್ಪು ಸುಲ್ತಾನ್ ಸ್ಮಾರಕ ನಿರ್ಮಾಣಕ್ಕೆ ನಿಯಮಾನುಸಾರ ಅನುಮತಿ ನೀಡದ ಕಾರಣ ಪ್ರತಿಭಟನೆ ನಡೆಸಲಾಗಿತ್ತು. ವದಂತಿಗಳನ್ನು ನಂಬಬೇಡಿ ಮತ್ತು ಶಾಂತಿ ಕಾಪಾಡುವಂತೆ ಧುಳೆ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಬಾರಾಕುಂಡ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version