Tipu Sultan: ಲಂಡನ್‌ನಲ್ಲಿ ಟಿಪ್ಪು ಸುಲ್ತಾನ್‌ ಖಡ್ಗ 140 ಕೋಟಿ ರೂ.ಗೆ ಹರಾಜು - Vistara News

ದೇಶ

Tipu Sultan: ಲಂಡನ್‌ನಲ್ಲಿ ಟಿಪ್ಪು ಸುಲ್ತಾನ್‌ ಖಡ್ಗ 140 ಕೋಟಿ ರೂ.ಗೆ ಹರಾಜು

Tipu Sultan: ಮೈಸೂರನ್ನು ಆಳ್ವಿಕೆ ಮಾಡಿದ ಟಿಪ್ಪು ಸುಲ್ತಾನ್‌ ಖಡ್ಗವನ್ನು ಲಂಡನ್‌ನಲ್ಲಿ ಹರಾಜು ಹಾಕಲಾಗಿದೆ. ನಿಗದಿ ಮಾಡಿದ್ದಕ್ಕಿಂತ ಏಳು ಪಟ್ಟು ಹೆಚ್ಚು ಬೆಲೆಗೆ ಹರಾಜಾಗಿದೆ ಎಂದು ತಿಳಿದುಬಂದಿದೆ.

VISTARANEWS.COM


on

Tipu Sultan's Sword Sold For Rs 140 Crore At London Auction
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಲಂಡನ್‌: ಮೈಸೂರು ಅರಸ ಟಿಪ್ಪು ಸುಲ್ತಾನನ (Tipu Sultan) ಖಡ್ಗವನ್ನು ಲಂಡನ್‌ನಲ್ಲಿ ಹರಾಜು ಹಾಕಲಾಗಿದ್ದು, 140 ಕೋಟಿ ರೂಪಾಯಿಗೆ (14 ದಶಲಕ್ಷ ಪೌಂಡ್‌) ಹರಾಜಾಗಿದೆ. ಲಂಡನ್‌ನಲ್ಲಿರುವ ಆಕ್ಷನ್‌ ಹೌಸ್‌ ‘ಬೊನ್ಹಾಮ್ಸ್‌ ಇಸ್ಲಾಮಿಕ್‌ ಆ್ಯಂಡ್‌ ಇಂಡಿಯನ್‌ ಆರ್ಟ್‌’ನಲ್ಲಿ ಹರಾಜಿಗೆ ಇಡಲಾಗಿದೆ. ಆದರೆ, ಖಡ್ಗವನ್ನು ಯಾರು ಖರೀದಿಸಿದ್ದಾರೆ, ಅವರ ಹಿನ್ನೆಲೆ ಎಂಬುದರ ಕುರಿತು ಬೊನ್ಹಾಮ್ಸ್‌ ಮಾಹಿತಿ ನೀಡಿಲ್ಲ.

“ಟಿಪ್ಪು ಸುಲ್ತಾನ್‌ ಬಳಸಿದ ಎಲ್ಲ ಶಸ್ತ್ರಾಸ್ತ್ರಗಳಲ್ಲಿ ಈ ಖಡ್ಗವು ಅದ್ಭುತವಾಗಿದೆ. ವಿಶೇಷವಾಗಿ ಖಡ್ಗವನ್ನು ತಯಾರಿಸಲಾಗಿದ್ದು, ಅದ್ಭುತ ಕಲೆಗೆ, ಕರಕುಶಲತೆಗೆ ಸಾಕ್ಷಿಯಾಗಿದೆ. ಹಾಗಾಗಿ, ನಿಗದಿಪಡಿಸಿದ ಮೊತ್ತಕ್ಕಿಂತ ಏಳು ಪಟ್ಟು ಹೆಚ್ಚು ಬೆಲೆಗೆ ಹರಾಜಾಗಿದೆ. ಇದು ಟಿಪ್ಪುವಿನ ವಿಶೇಷ ಖಡ್ಗಳಲ್ಲಿ ಒಂದು” ಎಂದು ಬೊನ್ಹಾಮ್ಸ್‌ ಬೊನ್ಹಾಮ್ಸ್‌ ಇಸ್ಲಾಮಿಕ್‌ ಆ್ಯಂಡ್‌ ಇಂಡಿಯನ್‌ ಆರ್ಟ್‌ ಮುಖ್ಯಸ್ಥ ಆಲಿವರ್‌ ವೈಟ್‌ ಮಾಹಿತಿ ನೀಡಿದ್ದಾರೆ.

ಮೈಸೂರಿನ ಹುಲಿ ಎಂದೇ ಬಿರುದಾಂಕಿತನಾಗಿದ್ದ ಟಿಪ್ಪು ಸುಲ್ತಾನನು ಹತ್ಯೆಗೀಡಾದ ಬಳಿಕ ಆತನ ಶೌರ್ಯದ ಪ್ರತೀಕವಾಗಿ ಖಡ್ಗವನ್ನು ಬ್ರಿಟಿಷ್‌ ಮೇಜರ್‌ ಜನರಲ್‌ ಡೇವಿಡ್‌ ಬೇರ್ಡ್‌ ಅವರಿಗೆ ನೀಡಲಾಗಿತ್ತು. ಇದೇ ಖಡ್ಗವನ್ನು ಈಗ ಹರಾಜು ಹಾಕಲಾಗಿದೆ. ಇದು ಟಿಪ್ಪು ಸುಲ್ತಾನನ ಅರಮನೆಯಲ್ಲಿ ಸಿಕ್ಕಿತ್ತು.

ಇದನ್ನೂ ಓದಿ: Tipu Movie: 800 ದೇಗುಲ ನಾಶ, 40 ಲಕ್ಷ ಹಿಂದುಗಳ ಮತಾಂತರ; ಬರಲಿದೆ ಟಿಪ್ಪು ಸುಲ್ತಾನ್‌ ಕುರಿತ ಸಿನಿಮಾ

“ಜರ್ಮನಿ ಬ್ಲೇಡ್‌ ವಿನ್ಯಾಸದ ರೀತಿ ಮೊಘಲ್‌ ಖಡ್ಗ ತಯಾರಿಕರು ಇದನ್ನು ತಯಾರಿಸಿದ್ದಾರೆ. ಹರಾಜು ಹಾಕಲಾದ ಖಡ್ಗವನ್ನು 16ನೇ ಶತಮಾನದಲ್ಲಿ ಭಾರತಕ್ಕೆ ತರಲಾಗಿತ್ತು. ವಜ್ರದ ತುದಿಯಲ್ಲಿ ಚಿನ್ನದ ಅಕ್ಷರಗಳಿವೆ. ಇದು ಈಗಲೂ ಉತ್ಕೃಷ್ಟ ಗುಣಮಟ್ಟದಿಂದ ಕೂಡಿದೆ. ಇದನ್ನು ಖರೀದಿಸಲು ಇಬ್ಬರ ಮಧ್ಯೆ ಭಾರಿ ಪೈಪೋಟಿ ಶುರುವಾಗಿತ್ತು. ಕೊನೆಗೂ ಒಬ್ಬರು ಉತ್ಕೃಷ್ಟ ಗುಣಮಟ್ಟದ ಖಡ್ಗವನ್ನು ಖರೀದಿಸಿದ್ದಾರೆ” ಎಂದು ಆಲಿವರ್‌ ವೈಟ್‌ ತಿಳಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

ಪಾಕಿಸ್ತಾನದ ಯುವತಿಯ ಪ್ರಾಣ ಉಳಿಸಿತು ಭಾರತದ ಹೃದಯ; ‘ಹಾರ್ಟ್‌’ ಟಚಿಂಗ್ ಸ್ಟೋರಿ ಇದು!

ಪಾಕಿಸ್ತಾನದ ಆಯೇಷಾ ರೆಶಾನ್‌ ಅವರು ಕಳೆದ ಒಂದು ದಶಕದಿಂದ ಹೃದಯದ ಕಾಯಿಲೆಯಿಂದ ಬಳಲುತ್ತಿದ್ದರು. ಹಾರ್ಟ್‌ ಪಂಪ್‌ ಡಿವೈಸ್‌ ಅಳವಡಿಕೆಯ ಸರ್ಜರಿ ಕೂಡ ವಿಫಲವಾಯಿತು. ಆದರೆ, ಚೆನ್ನೈನಲ್ಲಿರುವ ಎಂಜಿಎಂ ಹೆಲ್ತ್‌ಕೇರ್‌ ಆಸ್ಪತ್ರೆ ನುರಿತ ವೈದ್ಯರು ಆಯೇಷಾಗೆ ಹೃದಯದ ಕಸಿ ಮಾಡುವ ಮೂಲಕ, ಬೇರೊಬ್ಬರ ಹೃದಯವನ್ನು ಇವರಿಗೆ ಅಳವಡಿಸುವ ಮೂಲಕ ಆಕೆಯ ಬಾಳಿಗೆ ಬೆಳಕಾಗಿದ್ದಾರೆ.

VISTARANEWS.COM


on

Pakistan Teen
Koo

ನವದೆಹಲಿ: ಭಾರತ ಹಾಗೂ ಪಾಕಿಸ್ತಾನದ (India Pakistan) ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಇದೆ. ಭಾರತದ ಮೇಲೆ ಪಾಕ್‌ ಕೃಪಾಪೋಷಿತ ಉಗ್ರರು ದಾಳಿ ಮಾಡಿದಾಗ, ಭಾರತ-ಪಾಕಿಸ್ತಾನ ಮಧ್ಯೆ ಕ್ರಿಕೆಟ್‌ ಪಂದ್ಯ ನಡೆದಾಗ ಭಾರತೀಯರು ಪಾಕಿಸ್ತಾನವನ್ನು ಬಗ್ಗುಬಡಿಯಲಿ ಎಂದು ಪ್ರಾರ್ಥಿಸುತ್ತೇವೆ. ಆದರೆ, ಇಷ್ಟೆಲ್ಲ ಬಿಕ್ಕಟ್ಟಿನ ಮಧ್ಯೆಯೂ ಭಾರತ ಹಾಗೂ ಪಾಕಿಸ್ತಾನ ನಾಗರಿಕರ ಮಧ್ಯೆ ಸಹೋದರತ್ವದ ಭಾವನೆ ಇದೆ. ಭಾರತದಲ್ಲಿ (India) ಜನಿಸಿ, ದೇಶ ಇಬ್ಭಾಗವಾದಾಗ ಪಾಕ್‌ಗೆ ತೆರಳಿದವರು ಈಗಲೂ ಭಾರತದ ನಂಟನ್ನು ನೆನಪಿಸಿಕೊಳ್ಳುತ್ತಾರೆ. ಈ ನಂಟಿಗೆ ನಿದರ್ಶನ ಎಂಬಂತೆ, ಭಾರತದ ʼಹೃದಯʼವೊಂದು (Indian Heart) ಪಾಕಿಸ್ತಾನದ ಯುವತಿಯ (Pakistan Teen) ಪ್ರಾಣವನ್ನು ಉಳಿಸಿದೆ.

ಹೌದು, ಹೃದಯದ ಸಮಸ್ಯೆಯಿಂದಾಗಿ ಭಾರತಕ್ಕೆ ಬಂದಿದ್ದ ಪಾಕಿಸ್ತಾನದ ಆಯೇಷಾ ರೆಶಾನ್‌ (19) ಎಂಬ ಯುವತಿಗೆ ಚೆನ್ನೈನಲ್ಲಿರುವ ಎಂಜಿಎಂ ಹೆಲ್ತ್‌ಕೇರ್‌ ಆಸ್ಪತ್ರೆ ವೈದ್ಯರು ಉಚಿತವಾಗಿ ಹೃದಯದ ಕಸಿ ಮಾಡುವ ಮೂಲಕ ನೆರೆ ರಾಷ್ಟ್ರದ ಯುವತಿಯ ಬಾಳಿಗೆ ಬೆಳಕಾಗಿದ್ದಾರೆ. ಭಾರತೀಯರೊಬ್ಬರ ಹೃದಯವನ್ನು ಪಾಕಿಸ್ತಾನದ ಯುವತಿಗೆ ಕಸಿ ಮಾಡುವ ಮೂಲಕ, ಆಕೆ ಮತ್ತೆ ಬದುಕು ಕಟ್ಟಿಕೊಳ್ಳಲು ಅಪೂರ್ವ ಅವಕಾಶ ನೀಡುವ ಮೂಲಕ ಔದಾರ್ಯ ಮೆರೆದಿದ್ದಾರೆ. ಇದಕ್ಕಾಗಿ ಆಯೇಷಾ ರೆಶಾನ್‌ ಭಾರತಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ಆಯೇಷಾ ರೆಶಾನ್‌ಗೆ ಏನಾಗಿತ್ತು?

ಕಾಲೇಜು ವಿದ್ಯಾರ್ಥಿನಿಯಾಗಿರುವ ಆಯೇಷಾ ರೆಶಾನ್‌ ಅವರು ಕಳೆದ 10 ವರ್ಷಗಳಿಂದ ಹೃದ್ರೋಗದಿಂದ ಬಳಲುತ್ತಿದ್ದರು. ಅವರಿಗೆ ಹಾರ್ಟ್‌ ಪಂಪ್‌ ಡಿವೈಸ್‌ ಅಳವಡಿಸಬೇಕಾಗಿತ್ತು. ಇದಕ್ಕಾಗಿ ಅವರು ತಮಿಳುನಾಡಿಗೆ ಆಗಮಿಸಿದ್ದರು. ಆದರೆ, ಹಾರ್ಟ್‌ ಪಂಪ್‌ ಅಳವಡಿಸಿದ ಬಳಿಕ ಶಸ್ತ್ರಚಿಕಿತ್ಸೆಯು ವಿಫಲವಾಗಿತ್ತು. ಇದರಿಂದಾಗಿ ಆಯೇಷಾ ರೆಶಾನ್‌ ಅವರ ಪ್ರಾಣಕ್ಕೆ ಕುತ್ತು ಬಂದಿತ್ತು. ಆಗ, ಆಸ್ಪತ್ರೆಯ ಸರ್ಜನ್‌ಗಳು ದಾನಿಯೊಬ್ಬರ ಹೃದಯವನ್ನು ಆಯೇಷಾ ರೆಷಾನ್‌ ಅವರಿಗೆ ಅಳವಡಿಸುವ ಮೂಲಕ ಆಕೆಯ ಪ್ರಾಣ ಉಳಿಸಿದ್ದಾರೆ.

ಹೃದಯದ ಕಸಿ ಮಾಡಲು ಸುಮಾರು 35 ಲಕ್ಷ ರೂ. ಖರ್ಚಾಗುತ್ತದೆ. ಆದರೆ, ಚೆನ್ನೈನ ಐಶ್ವರ್ಯನ್‌ ಟ್ರಸ್ಟ್‌ ಹಾಗೂ ಆಸ್ಪತ್ರೆ ವೈದ್ಯರೇ ಖರ್ಚು ಭರಿಸಿ, ಉಚಿತವಾಗಿ ಕಸಿ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ದೆಹಲಿ ಮೂಲದ ದಾನಿಯಿಂದ ಹೃದಯ ಪಡೆದ ವೈದ್ಯರು, ಆಯೇಷಾಗೆ ಅಳವಡಿಸಿದ್ದಾರೆ. “ಹೃದಯ ಕಸಿ ಬಳಿಕ ನಾನೀಗ ಆರೋಗ್ಯದಿಂದ ಇದ್ದೇನೆ. ಚೆನ್ನೈ ವೈದ್ಯರಿಂದಾಗಿ ನಾನು ಉಸಿರಾಡುತ್ತಿದ್ದೇನೆ. ನನ್ನ ಜೀವ ಉಳಿಸಿದ ವೈದ್ಯರಿಗೆ ಕೃತಜ್ಞತೆಗಳು. ಪಾಕಿಸ್ತಾನಕ್ಕೆ ತೆರಳಿ ನಾನು ಪದವಿ ಪಡೆಯುತ್ತೇನೆ” ಎಂಬುದಾಗಿ ಆಯೇಷಾ ಹೇಳಿದ್ದಾರೆ.

ಇದನ್ನೂ ಓದಿ: Humanity : ಗಡಿ ಮೀರಿದ ಮಾನವೀಯತೆ; ನಿರಾಶ್ರಿತರಿಗೆ ಹಣ ಹಂಚಿದ ಆಫ್ಘನ್ ಆಟಗಾರ ಗುರ್ಬಜ್​

Continue Reading

ದೇಶ

Rahul Gandhi: ಶೀಘ್ರವೇ ಅಯೋಧ್ಯೆಗೆ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಭೇಟಿ; ರಾಮಲಲ್ಲಾನ ದರ್ಶನ!

Rahul Gandhi: ಲೋಕಸಭೆ ಚುನಾವಣೆಯ ಹೊತ್ತಿನಲ್ಲಿಯೇ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರು ರಾಮಮಂದಿರಕ್ಕೆ ಭೇಟಿ ನೀಡಿ, ರಾಮಲಲ್ಲಾನ ದರ್ಶನ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ. ಅಮೇಥಿ ಹಾಗೂ ರಾಯ್‌ಬರೇಲಿಗೆ ಭೇಟಿ ನೀಡುವ ಮುನ್ನ ಇಬ್ಬರೂ ರಾಮಲಲ್ಲಾನ ಆಶೀರ್ವಾದ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.

VISTARANEWS.COM


on

Rahul Gandhi
Koo

ನವದೆಹಲಿ: ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರ (Ram Mandir) ಲೋಕಾರ್ಪಣೆ ಕಾರ್ಯಕ್ರಮವನ್ನು ಕಾಂಗ್ರೆಸ್‌ ಬಹಿಷ್ಕರಿಸಿತ್ತು. ಆದರೆ, ಲೋಕಸಭೆ ಚುನಾವಣೆ (Lok Sabha Election 2024) ಹೊತ್ತಿನಲ್ಲಿಯೇ ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ (Rahul Gandhi) ಹಾಗೂ ಪ್ರಿಯಾಂಕಾ ಗಾಂಧಿ (Priyanka Gandhi) ಅವರು ಶೀಘ್ರದಲ್ಲೇ ಅಯೋಧ್ಯೆಯ ರಾಮಮಂದಿರಕ್ಕೆ ತೆರಳಿ ರಾಮಲಲ್ಲಾನ ಆಶೀರ್ವಾದ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಉತ್ತರ ಪ್ರದೇಶದ ಅಮೇಥಿಯಿಂದ ರಾಹುಲ್‌ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರ ಕ್ಷೇತ್ರವಾಗಿದ್ದ ರಾಯ್‌ಬರೇಲಿ ಕ್ಷೇತ್ರದಲ್ಲಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ, ಎರಡೂ ಕ್ಷೇತ್ರಗಳಿಗೆ ಸಹೋದರ-ಸಹೋದರಿ ಭೇಟಿ ನೀಡಲಿದ್ದಾರೆ. ಇದಕ್ಕೂ ಮೊದಲು ಅವರು ಅಯೋಧ್ಯೆಗೆ ತೆರಳಿ ರಾಮಲಲ್ಲಾನ ದರ್ಶನ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.

Ayodhya Ram mandir

ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ತೆರಳದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಶ್ರೀರಾಮನ ವಿರೋಧಿ ಎಂದು ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ. ಇದು ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ, ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರು ರಾಮಮಂದಿರಕ್ಕೆ ಭೇಟಿ ನೀಡುವ ಮೂಲಕ ಕಾಂಗ್ರೆಸ್‌ ರಾಮಮಂದಿರ ವಿರೋಧಿ ಅಲ್ಲ ಎಂಬ ಸಂದೇಶ ರವಾನಿಸುವ ಉದ್ದೇಶವಿದೆ ಎಂದು ತಿಳಿದುಬಂದಿದೆ.

ರಾಹುಲ್‌ ಗಾಂಧಿ ಅವರು ಕೇರಳದ ವಯನಾಡು ಲೋಕಸಭೆ ಕ್ಷೇತ್ರದಿಂದ ಎರಡನೇ ಬಾರಿ ಸ್ಪರ್ಧಿಸುತ್ತಿದ್ದು, ಏಪ್ರಿಲ್‌ 26ರಂದು ಮತದಾನ ನಡೆಯಲಿದೆ. ಇನ್ನು ರಾಯ್‌ಬರೇಲಿಯಿಂದ ಸ್ಪರ್ಧಿಸುತ್ತಿದ್ದ ಸೋನಿಯಾ ಗಾಂಧಿ ಅವರು ರಾಜ್ಯಸಭೆಗೆ ಆಯ್ಕೆಯಾಗುವ ಮೂಲಕ ಚುನಾವಣೆಯಿಂದ ಹಿಂದೆ ಸರಿದಿದ್ದಾರೆ. ಈ ಕ್ಷೇತ್ರದಲ್ಲಿ ಪ್ರಿಯಾಂಕಾ ಗಾಂಧಿ ಅಥವಾ ಅವರ ಪತಿ ರಾಬರ್ಟ್‌ ವಾದ್ರಾ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಹುಲ್‌ ಗಾಂಧಿ ಅವರು ಅಮೇಥಿಯಿಂದ 2004ರಿಂದಲೂ ಸ್ಪರ್ಧಿಸಿ, ಗೆಲುವು ಸಾಧಿಸುತ್ತಿದ್ದರು. ಆದರೆ, 2019ರಲ್ಲಿ ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ಅವರು ಸೋಲನುಭವಿಸಿದ ಕಾರಣ ವಯನಾಡು ಅವರ ಲೋಕಸಭೆ ಕ್ಷೇತ್ರವಾಗಿದೆ. ಈ ಬಾರಿಯೂ ರಾಹುಲ್‌ ಗಾಂಧಿ ಅವರು ಅಮೇಥಿಯಿಂದ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಯ್‌ಬರೇಲಿಯಲ್ಲಿ ಸೋನಿಯಾ ಗಾಂಧಿ ಅವರು ಕೂಡ 2004ರಿಂದ ಸ್ಪರ್ಧಿಸುತ್ತಿದ್ದರು.

ಇದನ್ನೂ ಓದಿ: Lok Sabha Election 2024: ರಾಹುಲ್‌ ಗಾಂಧಿಯ ಡಿಎನ್‌ಎ ಪರೀಕ್ಷಿಸಬೇಕು; ವಿವಾದ ಹುಟ್ಟುಹಾಕಿದ ಶಾಸಕ ಅನ್ವರ್ ಹೇಳಿಕೆ

Continue Reading

ಕರ್ನಾಟಕ

Lok Sabha Election: ಕರ್ನಾಟಕ ಸೇರಿ 13 ರಾಜ್ಯದಲ್ಲಿ ನಾಳೆ 2ನೇ ಹಂತದ ಮತದಾನ; ಪಿನ್‌ ಟು ಪಿನ್‌ ಮಾಹಿತಿ ಇಲ್ಲಿದೆ

Lok Sabha Election: ಕರ್ನಾಟಕವೂ ಒಳಗೊಂಡಂತೆ ದೇಶದ 13 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಎರಡನೇ ಹಂತದ ಮತದಾನ ನಡೆಯಲಿದೆ. ಶಾಂತಿಯುತ ಹಾಗೂ ಪಾರದರ್ಶಕ ಮತದಾನಕ್ಕಾಗಿ ಚುನಾವಣೆ ಆಯೋಗವು ಸಕಲ ಸಿದ್ಧತೆ ಮಾಡಿಕೊಂಡಿದೆ. ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲು ಚುನಾವಣೆ ಆಯೋಗ ತೀರ್ಮಾನಿಸಿದೆ.

VISTARANEWS.COM


on

Lok Sabha Election
Koo

ಬೆಂಗಳೂರು/ನವದೆಹಲಿ: ಲೋಕಸಭೆ ಚುನಾವಣೆಯ (Lok Sabha Election 2024) ಎರಡನೇ ಹಂತದ ಮತದಾನಕ್ಕೆ ಕರ್ನಾಟಕ, ಕೇರಳ ಸೇರಿ ದೇಶದ 13 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಸಜ್ಜಾಗಿವೆ. ಕರ್ನಾಟಕದ (Karnataka) 14 ಲೋಕಸಭೆ ಕ್ಷೇತ್ರಗಳು ಸೇರಿ ಎರಡನೇ ಹಂತದಲ್ಲಿ ಶುಕ್ರವಾರ (ಏಪ್ರಿಲ್‌ 26) ಒಟ್ಟು 88 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಇದಕ್ಕಾಗಿ ಚುನಾವಣೆ ಆಯೋಗವು (Election Commission) ಸಕಲ ಸಿದ್ಧತೆ ಮಾಡಿಕೊಂಡಿದೆ. ಮತಗಟ್ಟೆಗಳಲ್ಲಿ ಸಕಲ ಸೌಕರ್ಯ, ಸಿಬ್ಬಂದಿಗೆ ವಾಹನದ ವ್ಯವಸ್ಥೆ, ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ಭದ್ರತಾ ಸಿಬ್ಬಂದಿ ನಿಯೋಜನೆ ಸೇರಿ ಎರಡನೇ ಹಂತದ ಮತದಾನಕ್ಕೆ (2nd Phase Voting) ಸಕಲ ರೀತಿಯ ವ್ಯವಸ್ಥೆ ಮಾಡಿಕೊಂಡಿದೆ.

ಕರ್ನಾಟಕದ 14 ಕ್ಷೇತ್ರಗಳಲ್ಲಿ ವೋಟಿಂಗ್‌

ಕೋಲಾರ, ಮಂಡ್ಯ, ಉಡುಪಿ-ಚಿಕ್ಕಮಗಳೂರು, ಹಾಸನ, ಮೈಸೂರು, ತುಮಕೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಬೆಂಗಳೂರ ಕೇಂದ್ರ, ಬೆಂಗಳೂರು ಉತ್ತರ, ದಕ್ಷಿಣ ಕನ್ನಡ, ಚಾಮರಾಜನಗರ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. ಮತಗಟ್ಟೆಗಳಲ್ಲಿ ಹೆಚ್ಚಿನ ಜನರ ಸರತಿ ಸಾಲು ಇದ್ದರೆ ಮತದಾನದ ಸಮಯವನ್ನು ಒಂದು ಗಂಟೆವರೆಗೆ ವಿಸ್ತರಣೆ ಮಾಡಲಾಗುತ್ತದೆ.

ಯಾವ ರಾಜ್ಯದ ಎಷ್ಟು ಕ್ಷೇತ್ರಗಳಲ್ಲಿ ಮತದಾನ?

ಕೇರಳದ ಎಲ್ಲ 20, ಕರ್ನಾಟಕ 14, ರಾಜಸ್ಥಾನ 13, ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರದ ತಲಾ 8, ಮಧ್ಯಪ್ರದೇಶ 6, ಬಿಹಾರ ಹಾಗೂ ಅಸ್ಸಾಂನ ತಲಾ 5, ಛತ್ತೀಸ್‌ಗಢ ಹಾಗೂ ಪಶ್ಚಿಮ ಬಂಗಾಳದ ತಲಾ 3, ತ್ರಿಪುರ, ಜಮ್ಮು-ಕಾಶ್ಮೀರ ಹಾಗೂ ಮಣಿಪುರದ ತಲಾ 1 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಒಟ್ಟು 7 ಹಂತಗಳಲ್ಲಿ ನಡೆಯುವ ಚುನಾವಣೆಯು ಜೂನ್‌ 1ರಂದು ಮುಕ್ತಾಯವಾಗಲಿದೆ. ಜೂನ್‌ 4ರಂದು ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ.

ಕಣದಲ್ಲಿರುವ ಪ್ರಮುಖರು

ಕೇರಳದಲ್ಲಿ ರಾಹುಲ್‌ ಗಾಂಧಿ, ಕೆ.ಸಿ. ವೇಣುಗೋಪಾಲ್‌, ಶಶಿ ತರೂರ್‌, ರಾಜೀವ್‌ ಚಂದ್ರಶೇಖರ್‌, ರಾಜಸ್ಥಾನದಲ್ಲಿ ಓಂ ಬಿರ್ಲಾ, ಗಜೇಂದ್ರ ಸಿಂಗ್‌ ಶೇಖಾವತ್‌, ಉತ್ತರ ಪ್ರದೇಶದಲ್ಲಿ ಹೇಮಾ ಮಾಲಿನಿ, ಡ್ಯಾನಿಶ್‌ ಅಲಿ, ಮಧ್ಯಪ್ರದೇಶದಲ್ಲಿ ವಿಜೇಂದ್ರ ಕುಮಾರ್‌ ಖಾತಿಕ್‌, ಸಿದ್ಧಾರ್ಥ್‌ ಸುಖಲಾಲ್‌ ಕುಶ್ವಾಹ ಕಣದಲ್ಲಿರುವ ಪ್ರಮುಖರಾಗಿದ್ದಾರೆ. ಹಾಗೆಯೇ, ಪ್ರಕಾಶ್‌ ಅಂಬೇಡ್ಕರ್‌ (ವಿಬಿಎ ಪಕ್ಷ), ನವನೀತ್‌ ಕೌರ್‌ ರಾಣಾ, ಪಪ್ಪು ಯಾದವ್‌ ಸೇರಿ ಇತರ ಗಣ್ಯರು ಚುನಾವಣೆಯಲ್ಲಿ ಸ್ಪರ್ಧೆಗೆ ಇಳಿದಿದ್ದಾರೆ.

2019ರ ಲೋಕಸಭೆ ಚುನಾವಣೆಯ ಎರಡನೇ ಹಂತದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು 88 ಕ್ಷೇತ್ರಗಳ ಪೈಕಿ 61 (ಬಿಜೆಪಿ 52, ಶಿವಸೇನೆ 4, ಜೆಡಿಯು 4, ಸ್ವತಂತ್ರ 1) ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಇನ್ನು ಕಾಂಗ್ರೆಸ್‌ ನೇತೃತ್ವದ ಯುಪಿಎ 24 (ಕಾಂಗ್ರೆಸ್‌ 18, ಐಯುಎಂಎಲ್‌ 2, ಜೆಡಿಎಸ್‌ 1, ಕೇರಳ ಕಾಂಗ್ರೆಸ್‌ ಮಣಿ 1, ಆರ್‌ಎಸ್‌ಪಿ 1, ಸ್ವತಂತ್ರ 1) ಸ್ಥಾನಗಳನ್ನು ತನ್ನದಾಗಿಸಿಕೊಂಡಿತ್ತು.

ಇದನ್ನೂ ಓದಿ: PM Narendra Modi: ಪ್ರಧಾನಿ ಮೋದಿಗೆ ‘ಪ್ರಾಮಿಸ್ಡ್ ನೇಷನ್’ ಪುಸ್ತಕ ಅರ್ಪಣೆ

Continue Reading

ಪ್ರಮುಖ ಸುದ್ದಿ

JEE Main 2024 Result: ಜೆಇಇ ಮೇನ್‌ ಫಲಿತಾಂಶ ಪ್ರಕಟ, 56 ಅಭ್ಯರ್ಥಿಗಳಿಗೆ ಶೇ.100 ಅಂಕ, ಕಟ್‌ಆಫ್‌ 2.45% ಹೆಚ್ಚಳ

JEE Main 2024 Result: ಸಂಸ್ಥೆಯು ಇಂದು ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಮುಖ್ಯ 2024 ಫಲಿತಾಂಶವನ್ನು ಬಿಡುಗಡೆ ಮಾಡಿದೆ. 2024ರ ಪರೀಕ್ಷೆಗಳಲ್ಲಿ ಒಟ್ಟು 9.24 ಲಕ್ಷ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ಅದರಲ್ಲಿ 8.2 ಲಕ್ಷ ಜನರು ಜನವರಿ ಮತ್ತು ಏಪ್ರಿಲ್‌ನಲ್ಲಿ ನಡೆದ JEE ಮುಖ್ಯ 2023 ಪರೀಕ್ಷೆಗಳಿಗೆ ಹಾಜರಾಗಿದ್ದರು.

VISTARANEWS.COM


on

karnataka CET Exam 2024
Koo

ಹೊಸದಿಲ್ಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸಿದ ಜೆಇಇ ಮುಖ್ಯ 2024 ಸೆಷನ್ 2 ಪರೀಕ್ಷಾ ಫಲಿತಾಂಶ (JEE Main 2024 Result session 2) ಪ್ರಕಟವಾಗಿದೆ. ಒಟ್ಟು 56 ಅಭ್ಯರ್ಥಿಗಳು (Students) ಶೇ.100 ಅಂಕಗಳನ್ನು ಗಳಿಸಿದ್ದು, ಕಳೆದ ಬಾರಿಗಿಂತ 13 ಹೆಚ್ಚು ವಿದ್ಯಾರ್ಥಿಗಳು ಇದನ್ನು ಪಡೆದಿದ್ದಾರೆ. ಕರ್ನಾಟಕದ ಇಬ್ಬರು ವಿದ್ಯಾರ್ಥಿಗಳು ಶೇ.100 ಅಂಕ ಪಡೆದಿದ್ದಾರೆ. ಕಟ್‌ಆಫ್‌ (Cut off marks) ಅಂಕಗಳನ್ನು ಕೂಡ 2.45%ರಷ್ಟು ಹೆಚ್ಚಿಸಲಾಗಿದೆ.

ಸಂಸ್ಥೆಯು ಇಂದು ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಮುಖ್ಯ 2024 ಫಲಿತಾಂಶವನ್ನು ಬಿಡುಗಡೆ ಮಾಡಿದೆ. 2024ರ ಪರೀಕ್ಷೆಗಳಲ್ಲಿ ಒಟ್ಟು 9.24 ಲಕ್ಷ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ಅದರಲ್ಲಿ 8.2 ಲಕ್ಷ ಜನರು ಜನವರಿ ಮತ್ತು ಏಪ್ರಿಲ್‌ನಲ್ಲಿ ನಡೆದ JEE ಮುಖ್ಯ 2023 ಪರೀಕ್ಷೆಗಳಿಗೆ ಹಾಜರಾಗಿದ್ದರು. ಜೆಇಇ ಮುಖ್ಯ ಏಪ್ರಿಲ್ ಸೆಷನ್‌ಗೆ ಹಾಜರಾದವರು ತಮ್ಮ ಅಂಕಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು: jeemain.nta.ac.in.

100 ಅಂಕ ಪಡೆದವರ ಹೆಚ್ಚಳ

ಈ ಬಾರಿ, 100 ಪರ್ಸೆಂಟೈಲರ್‌ಗಳ ಸಂಖ್ಯೆ 2023ಕ್ಕೆ ಹೋಲಿಸಿದರೆ 13 ಅಭ್ಯರ್ಥಿಗಳಷ್ಟು ಹೆಚ್ಚಾಗಿದೆ. ಒಟ್ಟು 56 ಅಭ್ಯರ್ಥಿಗಳು ಪೇಪರ್ 1 (ಬಿಇ/ಬಿಟೆಕ್) ನಲ್ಲಿ 100 ಎನ್‌ಟಿಎ ಅಂಕಗಳನ್ನು ಪಡೆದಿದ್ದಾರೆ. ಅದರಲ್ಲಿ ಇಬ್ಬರು ಹುಡುಗಿಯರು (ಕರ್ನಾಟಕದ ಸಾನ್ವಿ ಜೈನ್ ಮತ್ತು ದೆಹಲಿಯ ಶೈನಾ ಸಿನ್ಹಾ) ಮತ್ತು ಉಳಿದವರು ಪುರುಷ ಅಭ್ಯರ್ಥಿಗಳು. ಈ ಸಂಖ್ಯೆ 2023ರಲ್ಲಿ 43 ಇತ್ತು. ಅವರಲ್ಲಿ ಕರ್ನಾಟಕದ ರಿಧಿ ಕಮಲೇಶ್ ಕುಮಾರ್ ಮಹೇಶ್ವರಿ ಎಂಬ ಒಬ್ಬ ಹುಡುಗಿ ಮಾತ್ರ 100 ಪರ್ಸೆಂಟೈಲ್ ಗಳಿಸಿದ್ದಳು.

ಜನವರಿ ಪರೀಕ್ಷೆಯಲ್ಲಿ ಒಟ್ಟು 23 ಮಂದಿ 100 ಪರ್ಸೆಂಟ್ ಮಾರ್ಕ್ ತಲುಪಿದ್ದರು. ತೆಲಂಗಾಣದ ಏಳು ವಿದ್ಯಾರ್ಥಿಗಳು ಈ ಮೈಲಿಗಲ್ಲನ್ನು ಸಾಧಿಸುವುದರೊಂದಿಗೆ ಆ ರಾಜ್ಯ ಮುಂಚೂಣಿಯಲ್ಲಿದೆ. ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ರಾಜಸ್ಥಾನಗಳು ನಂತರದ ಸ್ಥಾನದಲ್ಲಿವೆ. ಪ್ರತಿಯೊಂದೂ ಮೂರು 100 ಪರ್ಸೆಂಟೈಲ್ ಹೋಲ್ಡರ್‌ಗಳನ್ನು ಹೊಂದಿದೆ. ದೆಹಲಿ ಮತ್ತು ಹರಿಯಾಣದಲ್ಲಿ ತಲಾ ಇಬ್ಬರು ವಿದ್ಯಾರ್ಥಿಗಳು 100 ಪರ್ಸೆಂಟೈಲ್ ಮಾರ್ಕ್‌ನಲ್ಲಿದ್ದರೆ, ತಮಿಳುನಾಡು, ಗುಜರಾತ್ ಮತ್ತು ಕರ್ನಾಟಕದಲ್ಲಿ ತಲಾ ಒಬ್ಬರು ಪರಿಪೂರ್ಣ ಅಂಕಗಳನ್ನು ಗಳಿಸಿದ್ದಾರೆ.

ಕಳೆದ ವರ್ಷದಂತೆ, ತೆಲಂಗಾಣವು ಈ ವರ್ಷವೂ ಜೆಇಇ ಮೇನ್‌ನಲ್ಲಿ ಅತಿ ಹೆಚ್ಚು 100 ಪರ್ಸೆಂಟೈಲರ್‌ಗಳನ್ನು ವರದಿ ಮಾಡಿದೆ. 2023ರಲ್ಲಿ ತೆಲಂಗಾಣದ 11 ವಿದ್ಯಾರ್ಥಿಗಳು 100 ಪರ್ಸೆಂಟ್‌ ಗಳಿಸಿದ್ದರು. ಈ ವರ್ಷ ಈ ಪ್ರಮಾಣ 15ಕ್ಕೆ ಏರಿಕೆಯಾಗಿದೆ. 2023ರಲ್ಲಿ ಕ್ರಮವಾಗಿ 2 ಮತ್ತು 5ಕ್ಕೆ ಹೋಲಿಸಿದರೆ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶವು 100 ಅಂಕ ಗಳಿಸಿದ 7 ವಿದ್ಯಾರ್ಥಿಗಳನ್ನು ಹೊಂದಿದೆ. ದೆಹಲಿ NCRನ 100 ಪರ್ಸೆಂಟೈಲರ್‌ಗಳ ಸಂಖ್ಯೆ 2023ರಲ್ಲಿ 2 ಇದ್ದುದು 6ಕ್ಕೆ ಏರಿದೆ. 7 ಟಾಪರ್‌ಗಳೊಂದಿಗೆ ರಾಜಸ್ಥಾನ ನಂತರ ಬಂದಿದೆ.

ಪಶ್ಚಿಮ ಬಂಗಾಳ, ಕೇರಳ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಂತಹ ಕೆಲವು ರಾಜ್ಯಗಳು ಕಳೆದ ವರ್ಷ ತಲಾ ಟಾಪರ್‌ಗಳನ್ನು ಹೊಂದಿದ್ದವು ಆದರೆ ಈ ಬಾರಿ ಯಾವುದೇ 100 ಪರ್ಸೆಂಟೈಲರ್ ಅನ್ನು ಪಡೆದಿಲ್ಲ.

JEE ಮುಖ್ಯ 2024 ಪರೀಕ್ಷೆಯ ಎರಡೂ ಅವಧಿಗಳಲ್ಲಿ (ಜನವರಿ/ಏಪ್ರಿಲ್) ನೋಂದಾಯಿಸಿದ ಸಾಮಾನ್ಯ ಅಭ್ಯರ್ಥಿಗಳ ಸಂಖ್ಯೆ 924636, ಮತ್ತು ಎರಡೂ ಅವಧಿಗಳಲ್ಲಿ (ಜನವರಿ/ಏಪ್ರಿಲ್) ಹಾಜರಾದ ಸಾಮಾನ್ಯ ಅಭ್ಯರ್ಥಿಗಳ ಸಂಖ್ಯೆ 822899. ಜನವರಿ 2024 (ಸೆಷನ್ 1) ಪರೀಕ್ಷೆಯಲ್ಲಿ ನೋಂದಾಯಿಸಿದ ಒಟ್ಟು ಅಭ್ಯರ್ಥಿಗಳ ಸಂಖ್ಯೆ 1221624, ಅದರಲ್ಲಿ 1170048 ಅಭ್ಯರ್ಥಿಗಳು ಹಾಜರಾಗಿದ್ದರು.

ಜೆಇಇ ಕಟ್-ಆಫ್

ಈ ಬಾರಿ, ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ, ಜೆಇಇ (ಅಡ್ವಾನ್ಸ್ಡ್) ಕಟ್ ಆಫ್ 93.23 ಆಗಿದೆ. ಇದು 2023ರಲ್ಲಿ 90.77 ಇತ್ತು. 2022ರಲ್ಲಿ 88.4 ಇತ್ತು. SC ಅಭ್ಯರ್ಥಿಗಳಿಗೆ, ಕಟ್-ಆಫ್ 60.09 ಆಗಿದೆ. ಇದು 2023ರಲ್ಲಿ ಇದ್ದ 51.97ರಿಂದ ದೊಡ್ಡ ಜಿಗಿತ. ST ವಿದ್ಯಾರ್ಥಿಗಳಿಗೆ ಕಟ್-ಆಫ್ 46.69%, ಕಳೆದ ಬಾರಿ 37.23% ಇತ್ತು. 2023ರಲ್ಲಿ 73.61%ರಷ್ಟಿದ್ದ OBC (ನಾನ್-ಕ್ರೀಮಿ ಲೇಯರ್) ಕಟ್ ಆಫ್ ಈ ಬಾರಿ 79.67ಕ್ಕೆ ಏರಿದೆ. EWS ವರ್ಗದ ಅಭ್ಯರ್ಥಿಗಳಿಗೆ, ಈ ಬಾರಿ ಕಟ್ ಆಫ್ 75.62 ಆಗಿದೆ. ಕಳೆದ ವರ್ಷ 63.11 ಇತ್ತು.

ಇದನ್ನೂ ಓದಿ: JEE Main 2024 Result: JEE ಮೇನ್‌ 2024 ಸೆಷನ್‌ 1 ಫಲಿತಾಂಶ ಪ್ರಕಟ; ಇಲ್ಲಿ ನೋಡಿ

Continue Reading
Advertisement
IPL 2024
ಕ್ರೀಡೆ14 mins ago

IPL 2024: ಐಪಿಎಲ್​ನಲ್ಲಿ ವಿಶೇಷ ದಾಖಲೆ ಬರೆಯಲು ಸಜ್ಜಾದ ಆರ್​ಸಿಬಿ

Pakistan Teen
ದೇಶ15 mins ago

ಪಾಕಿಸ್ತಾನದ ಯುವತಿಯ ಪ್ರಾಣ ಉಳಿಸಿತು ಭಾರತದ ಹೃದಯ; ‘ಹಾರ್ಟ್‌’ ಟಚಿಂಗ್ ಸ್ಟೋರಿ ಇದು!

Comedy Khiladigalu Premier League From 27th April On Zee Kannada
ಕಿರುತೆರೆ15 mins ago

Comedy Khiladigalu Premier League: ಹೇಗಿರಲಿದೆ ಹೊಸ ಶೋ ʻಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ʼ?

Pushpa The Rule first single on May 1
ಟಾಲಿವುಡ್33 mins ago

Pushpa The Rule: ಬಿಗ್‌ ಅಪ್‌ಡೇಟ್‌ ಹಂಚಿಕೊಂಡ ʻಪುಷ್ಪ 2ʼ: ಮೇ 1ಕ್ಕೆ ತಂಡದಿಂದ ಗುಡ್‌ ನ್ಯೂಸ್‌!

actress amulya father in law election officers ride
ಕ್ರೈಂ38 mins ago

Election Officer Raid: ನಟಿ ಅಮೂಲ್ಯ ಮಾವ, ಬಿಜೆಪಿ ಮುಖಂಡನ ಮನೆ ಮೇಲೆ ಚುನಾವಣಾ ಅಧಿಕಾರಿಗಳ ದಾಳಿ

Rahul Gandhi
ದೇಶ41 mins ago

Rahul Gandhi: ಶೀಘ್ರವೇ ಅಯೋಧ್ಯೆಗೆ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಭೇಟಿ; ರಾಮಲಲ್ಲಾನ ದರ್ಶನ!

IPL 2024
ಕ್ರೀಡೆ51 mins ago

IPL 2024: ದುಬಾರಿ ರನ್​ ನೀಡಿ ಐಪಿಎಲ್​ನಲ್ಲಿ ಅನಗತ್ಯ ದಾಖಲೆ ಬರೆದ ಮೋಹಿತ್​ ಶರ್ಮ

Amitabh Bachchan, AR Rahman honoured with Deenanath Mangeshkar award
ಸಿನಿಮಾ1 hour ago

Amitabh Bachchan: ಅಮಿತಾಭ್‌ ಬಚ್ಚನ್, ಎ ಆರ್ ರೆಹಮಾನ್‌ ಸೇರಿ ಹಲವರಿಗೆ ʻದೀನನಾಥ್ ಮಂಗೇಶ್ಕರ್ ಪ್ರಶಸ್ತಿʼ ಗೌರವ

Lok Sabha Election
ಕರ್ನಾಟಕ1 hour ago

Lok Sabha Election: ಕರ್ನಾಟಕ ಸೇರಿ 13 ರಾಜ್ಯದಲ್ಲಿ ನಾಳೆ 2ನೇ ಹಂತದ ಮತದಾನ; ಪಿನ್‌ ಟು ಪಿನ್‌ ಮಾಹಿತಿ ಇಲ್ಲಿದೆ

Subramanya Dhareshwar
ಶ್ರದ್ಧಾಂಜಲಿ1 hour ago

Subramanya Dhareshwar: ಜೇನುದನಿಯ ಗಾನಕೋಗಿಲೆ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ1 day ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು3 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ3 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು3 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು3 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ3 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ4 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ5 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20245 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

ಟ್ರೆಂಡಿಂಗ್‌