ಒಟ್ಟಾವ: ಅಧಿಕಾರ ಉಳಿಸಿಕೊಳ್ಳಲು ಖಲಿಸ್ತಾನಿಗಳ ಪರವಾಗಿ ನಿಂತಿರುವ ಜಸ್ಟಿನ್ ಟ್ರುಡೋ ವಿರುದ್ಧವೇ ಕೆನಡಾದಲ್ಲಿ ಆಕ್ರೋಶ (India Canada Row) ವ್ಯಕ್ತವಾಗುತ್ತಿದೆ. ಹರ್ದೀಪ್ ಸಿಂಗ್ ನಿಜ್ಜರ್‌ನನ್ನು ಮಹಾನ್ ವ್ಯಕ್ತಿ ಎಂಬಂತೆ ಬಿಂಬಿಸಿದ ಕುರಿತು ಕೆನಡಾ ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ, ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಯನ್ನು ಸಂಭ್ರಮಿಸಿ ಹರ್ದೀಪ್ ಸಿಂಗ್ ನಿಜ್ಜರ್ (Hardeep Singh Nijjar) ಮಾಡಿದ ಹಳೆಯ ವಿಡಿಯೊ ಈಗ ವೈರಲ್ ಆಗಿದ್ದು, ಇಂಥ ವ್ಯಕ್ತಿಯನ್ನು ಬೆಂಬಲಿಸಿದ ಕಾರಣಕ್ಕಾಗಿ ಟ್ರುಡೋ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
“ಇಂದಿರಾ ಗಾಂಧಿಯನ್ನು ನಾವು ಹತ್ಯೆ ಮಾಡಿದೆವು. ಭಾರತೀಯ ಸೇನಾ ಮುಖ್ಯಸ್ಥ ಜನರಲ್ ವೈದ್ಯ ದೊಡ್ಡ ಕಮಾಂಡರ್ ರೀತಿ ವರ್ತಿಸುತ್ತಿದ್ದರು. ನಮ್ಮ ತಂಟೆಗೆ ಬಂದವರನ್ನೆಲ್ಲ ನಾವು ಆತ್ಮಾಹುತಿ ಬಾಂಬ್ ದಾಳಿ ಮೂಲಕವೇ ಕೊನೆಗಾಣಿಸಿದ್ದೇವೆ” ಎಂದು ಹರ್ದೀಪ್ ಸಿಂಗ್ ನಿಜ್ಜರ್ ಹೇಳಿದ ಹಳೇ ವಿಡಿಯೊ ಈಗ ವೈರಲ್ ಆಗಿದೆ. ಈ ವಿಡಿಯೊವನ್ನು ಕೆನಡಾದ ಕೀಯನ್ ಬೆಕ್ಸ್‌ಟೆ ಎಂಬ ಪತ್ರಕರ್ತರೊಬ್ಬರು ಮೊದಲು ಪೋಸ್ಟ್ ಮಾಡಿದ್ದು, ಟ್ರುಡೋ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೈರಲ್ ಆದ ವಿಡಿಯೊ
This is what
— Dr Jordan B Peterson (@jordanbpeterson) September 22, 2023
Canada is now tangled up in
Thanks to@theJagmeetSingh @NDP @JustinTrudeau https://t.co/74Gav4Kw4L
“ಹತ್ಯೆಗೀಡಾದ ಉಗ್ರನು ದೊಡ್ಡ ಮೋಟಿವೇಶನಲ್ ಸ್ಪೀಕರ್ (ಪ್ರಖರ ಭಾಷಣಕಾರ) ಆಗಿದ್ದ. ಆತನು ಆತ್ಮಾಹುತಿ ದಾಳಿ ಮಾಡಿರುವುದನ್ನು ಒಪ್ಪಿದ್ದಾನೆ. ಇವನನ್ನು ಭಾರತ ಹತ್ಯೆ ಮಾಡಿದೆಯೋ, ಇಲ್ಲವೋ ಎಂಬುದು ನನಗೆ ಗೊತ್ತಿಲ್ಲ. ಆದರೆ, ಈತನಂತೂ ಸಂಭಾವಿತ ಅಥವಾ ಮುಗ್ಧ ಅಲ್ಲ ಎಂಬುದು ಇದರಿಂದ ಗೊತ್ತಾಗುತ್ತದೆ” ಎಂದು ಕೀಯನ್ ಬ್ರೆಕ್ಸ್‌ಟೆ ಹೇಳಿದ್ದಾರೆ. ಇನ್ನು ಕೆನಡಾ ಲೇಖಕರೊಬ್ಬರನ್ನು ಈ ಪೋಸ್ಟ್‌ಅನ್ನು ರಿಪೋಸ್ಟ್ ಮಾಡಿದ್ದು, “ಇಂತಹ ವ್ಯಕ್ತಿಗಳಿಂದಲೇ ಕೆನಡಾದಲ್ಲಿ ಇಂದು ಗೋಜಲು ವಾತಾವರಣ ನಿರ್ಮಾಣವಾಗಿದೆ” ಎಂದಿದ್ದಾರೆ. ಹಾಗೆಯೇ ಟ್ರುಡೋ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: India Canada Row: ಆನೆ ಜತೆ ಇರುವೆ ಜಗಳವಾಡುತ್ತಿದೆ! ಕೆನಡಾಗೆ ಅಮೆರಿಕದ ಮಾಜಿ ರಕ್ಷಣಾ ಅಧಿಕಾರಿ ಗೇಲಿ!
ಕೆನಡಾದಲ್ಲಿ ಜೂನ್ 18ರಂದು ಹತ್ಯೆಗೀಡಾದ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್‌ನನ್ನು ಕೆನಡಾದ ನಾಗರಿಕ ಎಂದು ಪರಿಗಣಿಸಿ ಜಸ್ಟಿನ್ ಟ್ರುಡೋ ಭಾರತದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಆತನ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂದು ಆರೋಪಿಸಿದ್ದಾರೆ. “ಕೆನಡಾ ನಾಗರಿಕರ ಹಕ್ಕುಗಳನ್ನು ಹಾಗೂ ದೇಶದ ಮೌಲ್ಯಗಳನ್ನು ರಕ್ಷಿಸುವುದು ನನ್ನ ಕರ್ತವ್ಯವಾಗಿದೆ” ಎಂದು ಅವರು ಹೇಳಿದ್ದಾರೆ. ಆದರೆ, ಅವರು ಭಾರತಕ್ಕೆ ಪ್ರಚೋದನೆ ನೀಡುವುದಿಲ್ಲ ಎಂದು ಹೇಳುತ್ತಲೇ ಇಂತಹ ಆರೋಪ ಮಾಡಿದ್ದಾರೆ. ಮತ್ತೊಂದೆಡೆ, ಜಸ್ಟಿನ್ ಟ್ರುಡೋ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಅಮೆರಿಕ, ತನಿಖೆಗೆ ಭಾರತ ಸಹಕಾರ ನೀಡಬೇಕು ಎಂದಿದೆ. ಆದರೆ, ಸರಿಯಾದ ಸಾಕ್ಷ್ಯಾಧಾರ ಬೇಕು ಎಂದು ಭಾರತ ಸ್ಪಷ್ಟಪಡಿಸಿದೆ.