ಹೊಸಿದಿಲ್ಲಿ: ರೈಲ್ವೇ ಟೆಂಡರ್‌ನಲ್ಲಿ ಅಕ್ರಮ ನಡೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಐವರು ಸರ್ಕಾರಿ ಅಧಿಕಾರಿಗಳು ಸೇರಿದಂತೆ ಬರೋಬ್ಬರಿ ಏಳು ಮಂದಿಯನ್ನು ಕೇಂದ್ರೀಯ ತನಿಖಾ ಸಂಸ್ಥೆ(CBI Arrest) ಅರೆಸ್ಟ್ ಮಾಡಿದೆ. ವಿಭಾಗೀಯ ರೈಲ್ವೆ ಮ್ಯಾನೇಜರ್ (DRM), ವಿಭಾಗೀಯ ಹಣಕಾಸು ವ್ಯವಸ್ಥಾಪಕ (Sr. DFM), ನಿವೃತ ಹಿರಿಯ. ವಿಭಾಗೀಯ ಎಂಜಿನಿಯರ್ (Sr. DEN) ಸಮನ್ವಯ, ಕಛೇರಿ ಸೂಪರಿಂಟೆಂಡೆಂಟ್, ದಕ್ಷಿಣ ಮಧ್ಯ ರೈಲ್ವೆಯ ಖಾತೆ ಸಹಾಯಕ, ಗುಂತಕಲ್ ವಿಭಾಗ (ಆಂಧ್ರ ಪ್ರದೇಶ) ಮತ್ತು ಇಬ್ಬರು ಖಾಸಗಿ ವ್ಯಕ್ತಿಗಳು ಅವುಗಳೆಂದರೆ ಬೆಂಗಳೂರು ಮೂಲದ ಸಂಸ್ಥೆಯ ನಿರ್ದೇಶಕ (ಖಾಸಗಿ ವ್ಯಕ್ತಿ) ಮತ್ತು ಇನ್ನೊಬ್ಬ ಖಾಸಗಿ ವ್ಯಕ್ತಿಯನ್ನು ಸಿಬಿಐ ಅರೆಸ್ಟ್ ಮಾಡಿದೆ.
ರೈಲ್ವೇ ಟೆಂಡರ್‌ಗೆ ಸಂಬಂಧಿಸಿದಂತೆ ಬರೋಬ್ಬರಿ 11ಲಕ್ಷ ರೂ. ಹಣ ಮತ್ತು ಚಿನ್ನವನ್ನು ಲಂಚವಾಗಿ ಪಡೆದ ಆರೋಪದಲ್ಲಿ ಏಳು ಮಂದಿ ವಿರುದ್ಧ ಕೇಸ್ ದಾಖಲಾಗಿತ್ತು. ಇದೀಗ ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಸಿಬಿಐ ಏಳು ಮಂದಿಯನ್ನು ಅರೆಸ್ಟ್ ಮಾಡಿದೆ.
ಮತ್ತೊಂದು ಪ್ರಕರಣದಲ್ಲಿ, ಕೇಂದ್ರೀಯ ಸರಕು ಮತ್ತು ಸೇವಾ ತೆರಿಗೆ (ಸಿಜಿಎಸ್‌ಟಿ) ಇನ್ಸ್‌ಪೆಕ್ಟರ್ ಒಬ್ಬರನ್ನು ಗುರುವಾರ ಗುಜರಾತ್‌ನ ರಾಜ್‌ಕೋಟ್‌ನಲ್ಲಿ 2.5 ಲಕ್ಷ ರೂಪಾಯಿ ಲಂಚ ಕೇಳಿ ಸ್ವೀಕರಿಸಿದ ಆರೋಪದ ಮೇಲೆ ಸಿಬಿಐ ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನವೀನ್ ಧಂಕರ್ ಅವರು ಕಾನೂನು ಪ್ರಕಾರ ವ್ಯವಹಾರ ನಡೆಸುತ್ತಿಲ್ಲ ಎಂದು ಆರೋಪಿಸಿ ಸ್ಥಳೀಯ ಸಂಸ್ಥೆಯಿಂದ ಲಂಚ ಕೇಳಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
“ದಾಖಲೆಗಳಲ್ಲಿ ನಮೂದಿಸಿರುವಂತೆ ಯಾವುದೇ ಸರಕುಗಳನ್ನು ಸಂಸ್ಥೆಯಿಂದ ಹೊರಕ್ಕೆ ಸಾಗಿಸಲಾಗುತ್ತಿಲ್ಲ ಎಂದು ಅವರು ಹೇಳಿದರು. ನಂತರ ಅವರು 2.5 ಲಕ್ಷ ರೂಪಾಯಿ ಲಂಚವನ್ನು ಕೇಳಿದರು ಮತ್ತು ಸಂಸ್ಥೆಯ ಜಿಎಸ್ಟಿ ಸಂಖ್ಯೆಯನ್ನು ರದ್ದುಗೊಳಿಸುವಂತೆ ಬೆದರಿಕೆ ಹಾಕಿದರು” ಎಂದು ಕೇಂದ್ರ ತನಿಖಾ ದಳದ ಪ್ರಕಟಣೆ ತಿಳಿಸಿದೆ.
ದೂರು ಪಡೆದ ನಂತರ ಸಿಬಿಐ ಬಲೆ ಬೀಸಿತ್ತು. ಆ ವೇಳೆ ಧಂಕರ್ ಸಿಬಿಐ ಬಲೆಗೆ ಬಿದ್ದಿದರು. ತನಿಖೆಯ ಭಾಗವಾಗಿ ಆರೋಪಿಗಳಿಗೆ ಸಂಪರ್ಕವಿರುವ ರಾಜ್‌ಕೋಟ್‌ನಲ್ಲಿರುವ ಆವರಣವನ್ನು ಶೋಧಿಸಲಾಗುತ್ತಿದೆ ಎಂದು ಸಿಬಿಐ ಪ್ರಕಟಣೆ ತಿಳಿಸಿದೆ.
ಕೆಲವು ವಾರಗಳ ಹಿಂದೆ ಸಿಬಿಐ, ಕಸ್ಟಮ್ಸ್, ಮಾದಕ ದ್ರವ್ಯ ಮತ್ತು ಆದಾಯ ತೆರಿಗೆ ಅಧಿಕಾರಿಗಳಂತೆ ನಟಿಸುತ್ತಿದ್ದ ಗ್ಯಾಂಗ್‌ವೊಂದು ಬಹುರಾಷ್ಟ್ರೀಯ ಕಂಪನಿಯ ನಿವೃತ್ತ ಹಿರಿಯ ಅಧಿಕಾರಿಯೊಬ್ಬರಿಗೆ 85 ಲಕ್ಷ ರೂ. ವಂಚಿಸಿರುವ ಕುರಿತು ಆಂಧ್ರಪ್ರದೇಶದ ವಿಶಾಖಪಟ್ಟಣಂ ಮತ್ತು ದೆಹಲಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಹಣವನ್ನು ಚೆಕ್ ಮೂಲಕ ಪಡೆದ ಗ್ಯಾಂಗ್ ದೆಹಲಿಯ ಉತ್ತಮ್ ನಗರದಲ್ಲಿ ಹೆಚ್‌ಡಿಎಫ್‌ಸಿ ಖಾತೆಯನ್ನು ನಿರ್ವಹಿಸುತ್ತಿದ್ದ ‘ರಾಣಾ ಗಾರ್ಮೆಂಟ್ಸ್’ ಎಂಬ ಕಂಪನಿಗೆ ವರ್ಗಾಯಿಸಿದೆ. ವಿಶಾಖಪಟ್ಟಣಂನಲ್ಲಿ ಪೊಲೀಸರು ದಾಖಲಿಸಿರುವ ಎಫ್‌ಐಆರ್ ಪ್ರಕಾರ, ಗ್ಯಾಂಗ್ ‘ರಾಣಾ ಗಾರ್ಮೆಂಟ್ಸ್’ ನಡೆಸುತ್ತಿದ್ದ ಎಚ್‌ಡಿಎಫ್‌ಸಿ ಖಾತೆಯಿಂದ ಭಾರತದಾದ್ಯಂತ 105 ಖಾತೆಗಳಿಗೆ ಈ ಹಣವನ್ನು ವರ್ಗಾಯಿಸಿದೆ. ಈ ಕುರಿತು ಹೆಚ್‌ಡಿಎಫ್‌ಸಿ ಬ್ಯಾಂಕ್‌ನ ಉತ್ತಮ್ ನಗರ ಶಾಖೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ:Project Zorawar: ಚೀನಾಗೆ ಪೆಟ್ಟು ಕೊಡಲು ದೇಶೀಯವಾಗಿ ಯುದ್ಧ ಟ್ಯಾಂಕ್ ಉತ್ಪಾದನೆ; ಏನಿವುಗಳ ವಿಶೇಷ?