Site icon Vistara News

FDC Medicine Ban: ಕೆಮ್ಮು, ನೆಗಡಿ, ಜ್ವರಕ್ಕೆ ನೀಡುವ 14 ಎಫ್‌ಡಿಸಿ ಔಷಧಿಗಳು ಬ್ಯಾನ್, ಈ ಟ್ಯಾಬ್ಲೆಟ್ ನೀವು ಬಳಸಿರಬಹುದು!

Ban on FDC medicine

#image_title

ನವದೆಹಲಿ: 14 ಫಿಕ್ಸೆಡ್ ಡೋಸ್ ಕಾಂಬಿನೇಷನ್(FDC – Fixed Dose Combination) ಔಷಧಗಳನ್ನು ಭಾರತ ಸರ್ಕಾರವು (Central Government) ಜೂನ್ 3 ರಿಂದ ನಿಷೇಧಿಸಿದೆ (Ban). ಈ ಕೆಟಗರಿಯ ಔಷಧಗಳನ್ನು ದೇಶದಲ್ಲಿ ಮಾರಾಟ ಮಾಡುವಂತಿಲ್ಲ. ಈ ನಿಷೇಧಿತ ಔಷಧಗಳನ್ನು ಕೆಮ್ಮು, ನೆಗಡಿ, ಉಸಿರಾಟ ಸೋಂಕಿಗೆ ಸಂಬಂಧಿಸಿದಂತೆ ರೋಗಿಗಳಿಗೆ ರೆಫರ್ ಮಾಡಲಾಗುತ್ತಿತ್ತು(FDC Medicine Ban).

ಎರಡು ಅಥವಾ ಅದಕ್ಕಿಂತ ಹೆಚ್ಚು ಔಷಧಗಳನ್ನು ಮಿಶ್ರಣ ಮಾಡಿ ತಯಾರಿಸಿದ ಔಷಧಗಳನ್ನು ಫಿಕ್ಸೆಂಡ್ ಡೋಸ್ ಕಾಂಬಿನೇಷನ್ ಎಂದು ಕರೆಯಲಾಗುತ್ತದೆ. ಈ ರೀತಿಯ ಔಷಧಗಳನ್ನು ವಿವಿಧ ದೇಶಗಳಲ್ಲಿ ಈಗಾಗಲೇ ಬ್ಯಾನ್ ಮಾಡಲಾಗಿದೆ. ಭಾರತದಲ್ಲಿ ಈ ಔಷಧಗಳ ಮಾರಾಟಕ್ಕೆ ತಜ್ಞರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಈ ಫಿಕ್ಸೆಡ್ ಡೋಸ್ ಕಾಂಬಿನೇಷನ್ ಔಷಧಗಳನ್ನು ಮಾರಾಟವನ್ನು ನಿಷೇಧಿಸಲಾಗಿದೆ.

ಜ್ವರ, ಅತಿಸಾರ, ಕೆಮ್ಮು, ಶೀತ, ಉಸಿರಾಟದ ಸೋಂಕುಗಳ ಚಿಕಿತ್ಸೆಗೆ ಲಭ್ಯವಿರುವ ಸಂಯೋಜನೆಯನ್ನು ಸರ್ಕಾರ ನಿಷೇಧಿಸಿದೆ. ಕೇಂದ್ರ ಸರ್ಕಾರ ಹೊರಡಿಸಿರುವ ನೋಟಿಫಿಕೇಷನ್ ಪ್ರಕಾರ, ಈ ಎಫ್‌ಡಿಸಿ ಬಳಕೆಗೆ ಯಾವುದೇ ವೈದ್ಯಕೀಯ ಸಮರ್ಥನೆಗಳಿಲ್ಲ. ಇವು ಮನುಷ್ಯರಿಗೆ ಅಪಾಯವನ್ನುಂಟುಮಾಡಬಹುದು ಎಂದು ತಜ್ಞರು ಶಿಫಾರಸು ಮಾಡಿದ್ದಾರೆ.

ಹಾಗಾಗಿ, ಸಾರ್ವಜನಿಕರ ಆರೋಗ್ಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಎಫ್‌ಡಿಸಿ ಔಷಧಗಳ ಉತ್ಪಾದನೆ, ಮಾರಾಟ ಮತ್ತು ವಿತರಣೆ ಮೇಲೆ ನಿಷೇಧ ಹೇರಲಾಗಿದೆ ಎಂದು ನೋಟಿಫಿಕೇಷನ್‌ನಲ್ಲಿ ತಿಳಿಸಲಾಗಿದೆ. ಈ ಔಷಧಗಳ ನಿಷೇಧ ಮಾಡಬೇಕು ಎಂಬ ಬೇಡಿಕೆ ಬಹಳ ದಿನಗಳಿಂದಲೂ ಇತ್ತು. ಡ್ರಗ್ ಟೆಕ್ನಿಕಲ್ ಅಡ್ವೈಸರಿ ಬೋರ್ಡ್ ಹಾಗೂ ತಜ್ಞರ ಸಮಿತಿ ನಿಷೇಧ ಕ್ರಮಕ್ಕೆ ಆಗ್ರಹಿಸಿದ್ದರು.

ಇದನ್ನೂ ಓದಿ: Baba Ramdev | ಉತ್ತರಾಖಂಡದಲ್ಲಿ ಪತಂಜಲಿಯ 5 ಔಷಧಗಳ ಮೇಲಿನ ನಿಷೇಧ ಹಿಂಪಡೆದ ಸರ್ಕಾರ

2016 ರಲ್ಲಿ ಸರ್ಕಾರವು ಸುಮಾರು 350 ಎಫ್‌ಡಿಸಿಗಳನ್ನು ನಿಷೇಧಿಸುವ ಮೂಲಕ 2,700 ಕ್ಕೂ ಹೆಚ್ಚು ಬ್ರಾಂಡ್ ಔಷಧಗಳ ಮೇಲೆ ಪರಿಣಾಮ ಬೀರುವ ಮೂಲಕ ಭಾರತೀಯ ಔಷಧೀಯ ಉದ್ಯಮದಿಂದ ಫಿಕ್ಸೆಡ್ ಮೆಡಿಸಿನ್‌ಗಳನ್ನು ಹೊರಗಟ್ಟುವ ಕೆಲಸವನ್ನು ಮಾಡಲಾಗಿತ್ತು.

ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version