Site icon Vistara News

Central Vista Avenue | ಬಣ್ಣ ಬಣ್ಣದ ಬೆಳಕಿನಿಂದ ಕಣ್ಣು ಕೋರೈಸುವಂತೆ ಬೆಳಗಿದ ಕರ್ತವ್ಯ ಪಥ

Central vista look

ನವ ದೆಹಲಿ: ಸೆಂಟ್ರಲ್‌ ವಿಸ್ತಾ ಯೋಜನೆಯ ಭಾಗವಾಗಿರುವ ಕರ್ತವ್ಯ ಪಥದ ಉದ್ಘಾಟನಾ ಸಮಾರಂಭದ ವೇಳೆ ಇಂಡಿಯಾ ಗೇಟ್‌ ಪರಿಸರ ಬಣ್ಣ ಬಣ್ಣದ ಬೆಳಕಿನಿಂದ ಬೆಳಗಿತು. ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ವರೆಗಿನ ಪಥದ ಚೆಲುವು ಒಂದಾದರೆ ತ್ರಿವರ್ಣ ಧ್ವಜದ ಬಣ್ಣದ ಮೆರುಗು ಪಡೆದ ಇಂಡಿಯಾ ಗೇಟ್‌ನ ಸೊಬಗಿನ ಎತ್ತರ ಇನ್ನೊಂದು. ಇಡೀ ವಾತಾವರಣವೇ ಬಣ್ಣದ ಬೆಳಕಲ್ಲಿ ಮಿಂದು ನಿಂತಿತ್ತು.

ತ್ರಿವರ್ಣದ ಬೆಳಕಲ್ಲಿ ಮಿಂದೇಳುತ್ತಿರುವ ಇಂಡಿಯಾ ಗೇಟ್‌ನ ಚೆಲುವು
ಸೆಂಟ್ರಲ್‌ ವಿಸ್ಟಾ ಅವೆನ್ಯೂ-ಕರ್ತವ್ಯ ಪಥದಲ್ಲಿ ಬಣ್ಣದ ಬೆಡಗು.. ಪ್ರಧಾನಿ ಮೋದಿ ಅವರು ಗುರುವಾರ ರಾತ್ರಿ ಇದನ್ನು ಲೋಕಾರ್ಪಣೆ ಮಾಡಿದರು.
ಭವ್ಯವಾಗಿ ಎದ್ದು ನಿಂತ ಇಂಡಿಯಾ ಗೇಟ್‌ ಸುತ್ತಲಿನ ಪರಿಸರ ಹೀಗಿದೆ ನೋಡಿ..
ಹೊಳೆಯುವ ಬೆಳಕಲ್ಲಿ ಮಿಂದೇಳುತ್ತಿರುವ ಇಂಡಿಯಾ ಗೇಟ್‌ ಪರಿಸರ

Exit mobile version