Site icon Vistara News

Chandrayaan 1: ಚಂದ್ರನ ಮೇಲೆ ನೀರಿನ ರಚನೆಗೆ ಚಂದ್ರಯಾನ 1 ಹೊಸ ಕೊಡುಗೆ!

Chandrayaan 1 data shows Earth's electrons forming water on moon

ನವದೆಹಲಿ: ಚಂದ್ರನ ಮೇಲೆ ನೀರು ಸೃಷ್ಟಿಯಾಗುತ್ತಿದೆಯಾ? (Water on Moon) ಈ ಕ್ರಿಯೆಗೆ ನಮ್ಮ ಭೂಮಿಯೇ ಕಾರಣವಾಗುತ್ತಿದೆಯೇ? (Earth) ಈ ಎಲ್ಲ ಪ್ರಶ್ನೆಗಳಿಗೆ ವಿಜ್ಞಾನಿಗಳ ತಂಡವೊಂದು ಹೌದು ಎನ್ನುತ್ತಿದೆ. ಚಂದ್ರಯಾನ-1 ಮಿಷನ್ (Chandrayaan 1) ಕಳುಹಿಸಿರುವ ದತ್ತಾಂಶಗಳನ್ನು (Chandrayaan-1 Data)ವಿಶ್ಲೇಷಿಸಿ ವರದಿಯನ್ನು ಸಿದ್ಧಪಡಿಸಿರುವ ಈ ತಂಡವು, ಭೂಮಿಯ ಮೇಲಿನ ಹೆಚ್ಚಿನ ಶಕ್ತಿಯ ಎಲೆಕ್ಟ್ರಾನ್‌ಗಳು(Earth’s Electrons), ಚಂದ್ರನ ಮೇಲೆ ನೀರನ್ನು ರೂಪಿಸುತ್ತಿರಬಹುದು ಎಂದು ಅಭಿಪ್ರಾಯಪಟ್ಟಿದೆ.

ಭೂಮಿಯ ಪ್ಲಾಸ್ಮಾ ಶೀಟ್‌ನಲ್ಲಿರುವ ಈ ಎಲೆಕ್ಟ್ರಾನ್‌ಗಳು ಚಂದ್ರನ ಮೇಲ್ಮೈಯಲ್ಲಿ ಬಂಡೆಗಳು ಮತ್ತು ಖನಿಜಗಳನ್ನು ವಿಘಟಿಸುವ ಅಥವಾ ಕರಗಿಸುವ ಹವಾಮಾನ ಪ್ರಕ್ರಿಯೆಗಳಿಗೆ ಕೊಡುಗೆ ನೀಡುತ್ತಿವೆ ಎಂದು ಅಮೆರಿಕದ ಮನೋವಾದ ಹವಾಯಿ ವಿಶ್ವವಿದ್ಯಾಲಯದ (ಯುಹೆಚ್) ಸಂಶೋಧಕರ ನೇತೃತ್ವದ ತಂಡವು ಕಂಡುಹಿಡಿದಿದೆ. ‘ನೇಚರ್ ಆಸ್ಟ್ರಾನಮಿ’ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನೆಯು, ಚಂದ್ರನಲ್ಲಿ ನೀರಿನ ರಚನೆಗೆ ಎಲೆಕ್ಟ್ರಾನ್‌ಗಳು ಸಹಾಯ ಮಾಡಿರಬಹುದು ಎಂದು ವಿವರಿಸಿದೆ.

ಚಂದ್ರನಲ್ಲಿ ನೀರು ಯಾಕೆ ಮುಖ್ಯ?

ಚಂದ್ರನ ಮೇಲೆ ನೀರಿನ ಸಾಂದ್ರತೆಗಳು ಮತ್ತು ಹಂಚಿಕೆಗಳನ್ನು ತಿಳಿದುಕೊಳ್ಳುವುದು ಅದರ ರಚನೆ ಮತ್ತು ವಿಕಾಸವನ್ನು ಅರ್ಥಮಾಡಿಕೊಳ್ಳಲು ಮತ್ತು ಭವಿಷ್ಯದ ಮಾನವ ಪರಿಶೋಧನೆಗೆ ನೀರಿನ ಸಂಪನ್ಮೂಲಗಳನ್ನು ಒದಗಿಸಲು ನಿರ್ಣಾಯಕವಾಗಿದೆ ಪ್ರಕಟವಾಗಿರುವ ಸಂಶೋಧನಾ ವರದಿಯಲ್ಲಿ ತಿಳಿಸಲಾಗಿದೆ. ಅಲ್ಲದೇ, ಚಂದ್ರನ ಶಾಶ್ವತ ಕತ್ತಲು ಪ್ರದೇಶದಲ್ಲಿ ಈ ಹಿಂದೆ ಪತ್ತೆಯಾದ ಮಂಜುಗಡ್ಡೆಯ ಮೂಲವನ್ನು ವಿವರಿಸಲು ಸಹಾಯ ಮಾಡುತ್ತದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಚಂದ್ರಯಾನ-1 ಸಂಶೋಧಿಸಿದ್ದು ಹೇಗೆ?

ಚಂದ್ರನ ಮೇಲೆ ನೀರಿನ ಅಣುಗಳನ್ನು ಪತ್ತೆ ಹಚ್ಚುವಲ್ಲಿ ಭಾರತೀಯ ಸಂಸೋಧನಾ ಸಂಸ್ಥೆ ಇಸ್ರೋ ಕೈಗೊಂಡ ಚಂದ್ರಯಾನ-1 ಮಿಷನ್ ಪ್ರಮುಖ ಪಾತ್ರ ನಿರ್ವಹಿಸಿದೆ. 2008ರ ಅಕ್ಟೋಬರ್ ತಿಂಗಳಲ್ಲಿ ಇಸ್ರೋ ಚಂದ್ರಯಾನ-1 ಮಿಷನ್ ಕೈಗೊಂಡಿತ್ತು ಮತ್ತು 2009ರವರೆಗೂ ಅದು ಸಕ್ರಿಯವಾಗಿತ್ತು. ಈ ಚಂದ್ರಯಾನ-1 ಮಿಷನ್ ಆರ್ಬಿಟರ್ ಮತ್ತು ಇಂಪ್ಯಾಕ್ಟರ್ ಒಳಗೊಂಡಿತ್ತು. ಆರ್ಬಿಟರ್ ಈಗಲೂ ಕಾರ್ಯನಿರ್ವಹಿಸುತ್ತಿದೆ.

ಈ ಸುದ್ದಿಯನ್ನೂ ಓದಿ: Chandrayaan 3: ಏಕಕಾಲಕ್ಕೆ 80 ಲಕ್ಷ ವೀಕ್ಷಣೆ ಕಂಡ ಚಂದ್ರಯಾನ-3 ಲ್ಯಾಂಡಿಂಗ್‌, ಇಸ್ರೋಗೆ ಯುಟ್ಯೂಬ್ ಇಂಡಿಯಾ ಸೆಲ್ಯೂಟ್!

ವಿಜ್ಞಾನಿಗಳು 2008 ಮತ್ತು 2009 ರ ನಡುವೆ ಭಾರತದ ಚಂದ್ರಯಾನ-1 ಮಿಷನ್‌ನಲ್ಲಿರುವ ಮೂನ್ ಮಿನರಾಲಜಿ ಮ್ಯಾಪರ್ ಉಪಕರಣ, ಇಮೇಜಿಂಗ್ ಸ್ಪೆಕ್ಟ್ರೋಮೀಟರ್‌ನಿಂದ ಸಂಗ್ರಹಿಸಲಾದ ರಿಮೋಟ್ ಸೆನ್ಸಿಂಗ್ ಡೇಟಾವನ್ನು ವಿಶ್ಲೇಷಿಸಿದ್ದಾರೆ. ಆ ಮೂಲಕ ಚಂದ್ರನ ಅಣುಗಳಲ್ಲಿ ನೀರಿನಂಶ ಇರುವುದನ್ನು ಪತ್ತೆ ಹಚ್ಚಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version