ವಾಷಿಂಗ್ಟನ್: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಮಹತ್ವಾಕಾಂಕ್ಷಿ ಚಂದ್ರಯಾನ 3 ಮಿಷನ್ (Chandrayaan 3) ಯಶಸ್ವಿಯಾಗಿದೆ. ಆಗಸ್ಟ್ 23ರಂದು ಮಿಷನ್ನ ನೌಕೆಯು ಸಾಫ್ಟ್ ಲ್ಯಾಂಡ್ ಆಗಿದೆ. ಆ ಮೂಲಕ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡ್ ಮಾಡಿದ ಮೊದಲ ದೇಶ ಎಂಬ ಖ್ಯಾತಿಗೂ ಭಾಜನವಾಗಿದೆ. ಇನ್ನು, ಚಂದ್ರನ ಅಂಗಳದಲ್ಲಿ 14 ದಿನ ಸಂಶೋಧನೆ ನಡೆಸಿದ ವಿಕ್ರಮ್ ಲ್ಯಾಂಡರ್ ಹಾಗೂ ಪ್ರಜ್ಞಾನ್ ರೋವರ್ ನಿದ್ದೆಗೆ ಜಾರಿವೆ. ಇದರ ಬೆನ್ನಲ್ಲೇ ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ವಿಕ್ರಮ್ ಲ್ಯಾಂಡರ್ನ ಫೋಟೊಗಳನ್ನು ರಿಲೀಸ್ ಮಾಡಿದೆ.
ನಾಸಾದ ಲೂನಾರ್ ರೆಕನೈಸನ್ಸ್ ಆರ್ಬಿಟರ್ (Lunar Reconnaissance Orbiter-LRO) ಫೋಟೊಗಳನ್ನು ರಿಲೀಸ್ ಮಾಡಿದೆ. ಚಂದ್ರನ ಅಂಗಳದಲ್ಲಿ ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡ್ ಆಗಿರುವ, ದಕ್ಷಿಣ ಧ್ರುವದಲ್ಲಿ ನೌಕೆ ಇಳಿದಿರುವ ಫೋಟೊಗಳನ್ನು ನಾಸಾ ಬಿಡುಗಡೆ ಮಾಡಿದೆ.
ನಾಸಾ ರಿಲೀಸ್ ಮಾಡಿದ ಫೋಟೊಗಳು
ಇದನ್ನೂ ಓದಿ: Chandrayaan 3: ಚಂದ್ರಯಾನ 3 ಕೌಂಟ್ಡೌನ್ಗೆ ಧ್ವನಿಯಾಗಿದ್ದ ವಲರ್ಮತಿ ಇನ್ನಿಲ್ಲ; ದೇಶವೇ ಕೇಳಿದ್ದ ಧ್ವನಿ ಅದು
ಜುಲೈ 14ರಂದು ಇಸ್ರೋ ಚಂದ್ರಯಾನ 3 ಮಿಷನ್ ಉಡಾವಣೆ ಮಾಡಿದೆ. ಮಿಷನ್ನ ನೌಕೆಯು ಆಗಸ್ಟ್ 23ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ಲ್ಯಾಂಡ್ ಆಗಿದೆ. ಇದರೊಂದಿಗೆ ಜಗತ್ತಿನಲ್ಲೇ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡ್ ಮಾಡಿದ ಮೊದಲ ದೇಶ ಭಾರತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಾಗಾಗಿ, ಇಸ್ರೋ ವಿಜ್ಞಾನಿಗಳಿಗೆ ಭಾರತ ಸೇರಿ ಜಗತ್ತಿನಾದ್ಯಂತ ಅಭಿನಂದನೆ, ಮೆಚ್ಚುಗೆಗಳ ಮಹಾಪೂರವೇ ಹರಿದುಬಂದಿದೆ.
ಚಂದ್ರನ ಅಂಗಳದಲ್ಲಿ ಲ್ಯಾಂಡರ್ ಹಾಗೂ ರೋವರ್ ನಿದ್ದೆಗೆ ಜಾರಿವೆ. ಲ್ಯಾಂಡರ್ನ ಪೇಲೋಡ್ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಆದರೆ ಅದರ ರಿಸೀವರ್ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ. ಒಮ್ಮೆ ಸೌರಶಕ್ತಿ ಖಾಲಿಯಾದಾಗ ಮತ್ತು ಬ್ಯಾಟರಿ ಖಾಲಿಯಾದ ನಂತರ ವಿಕ್ರಮ್ ಪ್ರಜ್ಞಾನ್ ರೋವರ್ ಪಕ್ಕದಲ್ಲಿ ನಿಸ್ತೇವಜಾಗಿರಲಿದೆ. ಸೆಪ್ಟೆಂಬರ್ 22, 2023 ರ ಸುಮಾರಿಗೆ ಮತ್ತೆ ಅದು ಎಂದಿನಂತೆ ಕಾರ್ಯನಿರ್ವಹಿಸಲಿ ಎಂಬ ಆಶಾ ಭಾವನೆ ಇದೆ ಎಂದು ಇಸ್ರೋ ಹೇಳಿದೆ.