ಬೀಜಿಂಗ್: ಚೀನಾದಲ್ಲಿ ಮುಂದಿನ ಎರಡು ಅಥವಾ ಮೂರು ತಿಂಗಳು ಕೋವಿಡ್-19 ಸೋಂಕಿನ ಹಾವಳಿ ಏರುಗತಿಯಲ್ಲಿ ಮುಂದುವರಿಯುವ ಸಾಧ್ಯತೆ ಇದೆ. ದೇಶದ 80% ಜನತೆಗೆ ಸೋಂಕು ತಗುಲಿದೆ (China Covid Crisis) ಎಂದು ಚೀನಾ ತಿಳಿಸಿದೆ.
ಚೀನಾದಲ್ಲಿ ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಕೋವಿಡ್ ಸೋಂಕು ವ್ಯಾಪಕವಾಗಿ ಹರಡುವ ಸಾಧ್ಯತೆಯೂ ಇದೆ. ಆದರೆ ಎರಡನೇ ಅಲೆ ಹರಡುವ ನಿರೀಕ್ಷೆ ಇಲ್ಲ ಎಂದು ಚೀನಾ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆಂಡ ಪ್ರಿವೆನ್ಷನ್‌ನ ಮುಖ್ಯ ವಿಜ್ಞಾನಿ ವೂ ಜುನಾವೊ ತಿಳಿಸಿದ್ದಾರೆ.
ಜನವರಿ 12-13ರ ಅವಧಿಯಲ್ಲಿ ಚೀನಾದಲ್ಲಿ 12,658 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಹರಸಾಹಸಪಡುತ್ತಿದೆ.