Site icon Vistara News

LPG Price: ವಾಣಿಜ್ಯ ಗ್ಯಾಸ್‌ ಸಿಲಿಂಡರ್‌ ಬೆಲೆ 39.50 ರೂ. ಇಳಿಕೆ

gas cylinder

ಹೊಸದಿಲ್ಲಿ: ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್ (LPG cylinder) ಬೆಲೆಯನ್ನು (LPG Price) ಕಡಿತಗೊಳಿಸಲಾಗಿದೆ. 19 ಕೆಜಿ ವಾಣಿಜ್ಯ ಸಿಲಿಂಡರ್‌ಗಳ ಬೆಲೆ ಡಿಸೆಂಬರ್ 22ರಿಂದ 39.50 ರೂ.ಗಳಷ್ಟು ಅಗ್ಗವಾಗಿದೆ.

ಈ ಕಡಿತವನ್ನು 19 ಕಿಲೋ ವಾಣಿಜ್ಯ ಸಿಲಿಂಡರ್‌ಗಳಲ್ಲಿ (Commercial Cylinder) ಮಾತ್ರ ಮಾಡಲಾಗಿದೆ. ಮನೆ ಬಳಕೆ ಗ್ಯಾಸ್‌ ಸಿಲಿಂಡರ್‌ (Domestic LPG) ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಬೆಂಗಳೂರಿನಲ್ಲಿ ಇದೀಗ 19 ಕಿಲೋ ವಾಣಿಜ್ಯ ಬಳಕೆಯ ಗ್ಯಾಸ್‌ ಸಿಲಿಂಡರ್‌ ಬೆಲೆ 1,883 ರೂ. ಇದೆ. 14.2 ಕಿಲೋ ಮನೆ ಬಳಕೆ ಗ್ಯಾಸ್‌ ಸಿಲಿಂಡರ್‌ ಬೆಲೆ 905 ರೂ. ಇದೆ.

ಇಂಡೇನ್ ಕಮರ್ಷಿಯಲ್ ಸಿಲಿಂಡರ್ ದೆಹಲಿಯಲ್ಲಿ 1757 ರೂ.ಗೆ ಲಭ್ಯವಿದೆ. ಈ ಮೊದಲು ಇದು 1796.50 ರೂ.ಗೆ ಲಭ್ಯವಿತ್ತು. ಕೋಲ್ಕತ್ತಾದಲ್ಲಿ ಅದೇ 19 ಕೆಜಿ ಸಿಲಿಂಡರ್ ಈಗ 1868.50 ರೂ. ಡಿಸೆಂಬರ್ 1ರಿಂದ ನಿನ್ನೆಯವರೆಗೆ ಇದನ್ನು 1908 ರೂ.ಗೆ ಮಾರಾಟ ಮಾಡಲಾಯಿತು. ಮುಂಬೈನಲ್ಲಿ, ಅದೇ ಸಿಲಿಂಡರ್ ಈಗ 1749 ರೂ.ಗಳ ಬದಲು 1710 ರೂ.ಗೆ ಲಭ್ಯ ವಿದೆ. ಚೆನ್ನೈನಲ್ಲಿ ಎಲ್‌ಪಿಜಿ ಸಿಲಿಂಡರ್ ಅನ್ನು ಇಂದಿನಿಂದ 39.50 ರೂ. ಇಳಿಸಿ 1929 ರೂ.ಗೆ ಮಾರಾಟ ಮಾಡಲಾಗುವುದು.

14.2 ಕೆಜಿ ಮನೆ ಬಳಕೆ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆಗಸ್ಟ್ 30, 2023ರಂದು ಮನೆ ಬಳಕೆ ಸಿಲಿಂಡರ್‌ಗಳ ಬೆಲೆಯನ್ನು 200 ರೂ. ಇಳಿಸಲಾಗಿತ್ತು. ಇಂಡಿಯನ್ ಆಯಿಲ್ ವೆಬ್‌ಸೈಟ್‌ ಪ್ರಕಾರ 14.2 ಕೆಜಿ ದೇಶೀಯ ಎಲ್‌ಪಿಸಿ ಸಿಲಿಂಡರ್‌ಗಳು ಆಗಸ್ಟ್ 30ರ ದರದಲ್ಲಿ ಲಭ್ಯವಿದೆ.

ವಾಣಿಜ್ಯ ಸಿಲಿಂಡರ್‌ ಇಂದಿನ ದರ- ಹಿಂದಿನ ದರ
ಬೆಂಗಳೂರು 1,857 1,883
ದೆಹಲಿ 1757 1796.50
ಕೋಲ್ಕತ್ತಾ 1868.50 1908
ಮುಂಬೈ 1710 1749
ಚೆನ್ನೈ 1929 1968.5

Exit mobile version