ನವ ದೆಹಲಿ: ಕೋವಿಡ್ ವೈರಸ್‌ನ ಹೊಸ ರೂಪಾಂತರಿಯಿಂದಾಗಿ ಭಾರತದಲ್ಲಿ ಯಾವುದೇ ಕೋವಿಡ್ ಅಲೆಯ ಆತಂಕ ಕಂಡುಬರುತ್ತಿಲ್ಲ ಎಂದು ದೇಶದ ಖ್ಯಾತ ವೈರಾಣುತಜ್ಞೆ ಡಾ.ಗಗನ್‌ದೀಪ್ ಕಾಂಗ್ ಹೇಳಿದ್ದಾರೆ.
ಚೀನಾ ಹಾಗೂ ಇನ್ನಿತರ ಕೆಲವು ದೇಶಗಳಲ್ಲಿ ಹೊಸ ರೂಪಾಂತರಿಯಿಂದಾಗಿ ಹೊಸ ಅಲೆ ಉಂಟಾಗಿರುವುದು ನಿಜ. ಆದರೆ ಭಾರತದಲ್ಲಿ ಒಮಿಕ್ರಾನ್ XBB ಹಾಗೂ BF.7 ರೂಪಾಂತರಿಗಳು ಹಲವು ತಿಂಗಳುಗಳಿಂದ ಇವೆ. ಭಾರತದಲ್ಲಿ ಇವುಗಳ ಹಲವು ಪ್ರಕರಣಗಳಿದ್ದು, ಯಾವುದೇ ದಿಡೀರ್ ಅಲೆಗೆ ಎಡೆಮಾಡಿಕೊಟ್ಟಿಲ್ಲ. ಅತೀ ಸಾಂಕ್ರಾಮಿಕವಾದ ಯಾವುದೇ ರೂಪಾಂತರಿ ಇಲ್ಲಿ ಇಲ್ಲವಾದ್ದರಿಂದ, ಯಾವುದೇ ಅಲೆಯೇರಿಕೆಯ ಆತಂಕವಿಲ್ಲ ಎಂದು ಕಾಂಗ್ ಹೇಳಿದ್ದಾರೆ.
ಗಗನ್‌ದೀಪ್ ಕಾಂಗ್ ಅವರು ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನ ಗ್ಯಾಸ್ಟ್ರೋಎಂಟಸ್ಟೈನಲ್ ವಿಜ್ಞಾನ ವಿಭಾಗದ ಪ್ರಾಧ್ಯಾಪಕಿ. ಇತರ ದೇಶಗಳಲ್ಲಿ ಹೊಸ ಅಲೆಗೆ ಕಾರಣವಾಗಿರುವ ಒಮಿಕ್ರಾನ್ XBB ಹಾಗೂ BF.7 ರೂಪಾಂತರಿಗಳು ಈಗಾಗಲೇ ಚಿತ್ರಿಸಲ್ಪಟ್ಟಂತೆ ʼರಾಕ್ಷಸʼ ರೂಪಾಂತರಿಗಳೇನಲ್ಲ. ಒಮಿಕ್ರಾನ್‌ನ ಇತರ ರೂಪಾಂತರಿಗಳಂತೆ ಅವು ಕೂಡ ಹರಡುವಂಥವು, ಆದರೆ ಡೆಲ್ಟಾದಂತೆ ಮಾರಕ ಅಸ್ವಸ್ಥತೆಗೆ ಕಾರಣವಾಗುವಂಥದಲ್ಲ ಎಂದವರು ಭರವಸೆ ನೀಡಿದ್ದಾರೆ.
ಇದನ್ನೂ ಓದಿ | coronavirus | ಒಮಿಕ್ರಾನ್ ಬಿಎಫ್.7ನಿಂದ ಭಾರತೀಯರಿಗೆ ಗಂಭೀರ ಅಪಾಯ ಇಲ್ಲ ಎಂದ ತಜ್ಞರು
ಈ ಬಗ್ಗೆ ಅವರು ಸರಣಿ ಸ್ವೀಟ್‌ಗಳ ಮೂಲಕ ಮಾಹಿತಿ ನೀಡಿದ್ದಾರೆ.
ಭಾರತಕ್ಕೆ ಆತಂಕವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಭಾರತದಲ್ಲಿ ಹೆಚ್ಚಿನ ಜನತೆ ಲಸಿಕೆ ಹಾಕಿಸಿಕೊಂಡಿದ್ದಾರೆ. ಮತ್ತು ಹೆಚ್ಚಿನ ಮಂದಿ 90%) ಈಗಾಗಲೇ ಕೋವಿಡ್ ಸೋಂಕಿಗೊಳಗಾಗಿ ಪ್ರತಿಕಾಯಗಳನ್ನು ಹೊಂದಿದ್ದಾರೆ. ಹೆಚ್ಚಿನವರು ಒಮಿಕ್ರಾನ್ ಅಲೆಯಲ್ಲಿ ಸೋಂಕಿತರಾಗಿದ್ದರಿಂದ ನಮ್ಮಲ್ಲಿ ಹೈಬ್ರಿಡ್ ಇಮ್ಯುನಿಟಿ ಸಾಧ್ಯವಾಗಿದೆ ಎಂದಿರುವ ಅವರು, ಏರ್‌ಪೋರ್ಟ್‌ಗಳಲ್ಲಿ ತಪಾಸನೆ ಹಾಗೂ ಪರೀಕ್ಷೆ ಹೆಚ್ಚಿಸಿರುವ ಸರ್ಕಾರದ ಕ್ರಮವನ್ನು ಸ್ವಾಗತಿಸಿದ್ದಾರೆ.
ಇದನ್ನೂ ಓದಿ | Fact Check | ಕೋವಿಡ್ ಒಮಿಕ್ರಾನ್ ಎಕ್ಸ್‌ಬಿಬಿ ವೇರಿಯಂಟ್ ಇದೆಯೇ? ಆರೋಗ್ಯ ಇಲಾಖೆ ಹೇಳಿದ್ದೇನು?