ನವದೆಹಲಿ : ದೇಶದಲ್ಲಿ ದಿನೇ ದಿನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಕಳೆದ 24 ಗಂಟೆಯಲ್ಲೇ ಹೊಸದಾಗಿ 13,216 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕಳೆದ ಎರಡು ಮೂರು ದಿನಗಳಿಂದ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿದ್ದು, ನಾಲ್ಕನೇ ಅಲೆಯ ಭೀತಿ ಶುರುವಾಗಿದೆ.
ನಿನ್ನೆ (ಶುಕ್ರವಾರ) 12,847 ಹೊಸದಾದ ಕೊರೊನಾ ಪ್ರಕರಣಗಳು ಪತ್ತೆಯಾಗಿತ್ತು. ಗುರುವಾರ ಸಹ 12 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಕಂಡು ಬಂದಿದ್ದವು, ಇದರಲ್ಲಿ 8,147 ಸೋಂಕಿತರು ಚೇತರಿಕೆ ಹೊಂದಿದ್ದು, ಕಳೆದ 24 ಗಂಟೆಗಳಲ್ಲಿ 23 ಸಾವುಗಳು ಸಂಭವಿಸಿವೆ. ದೇಶದಲ್ಲಿ ಪ್ರಸ್ತುತ 68,108 ಸಕ್ರಿಯ ಪ್ರಕರಣಗಳಿವೆ.
ದೇಶದಲ್ಲಿ ಅತೀ ಹೆಚ್ಚು ಕೊರೊನಾ ದಾಖಲಾಗುತ್ತಿರುವ ಟಾಪ್ 4 ರಾಜ್ಯಗಳು
ಮಹಾರಾಷ್ಟ್ರ: 21,749 ಸಕ್ರಿಯ ಪ್ರಕರಣಗಳು.
ಕೇರಳ: 20,338 ಸಕ್ರಿಯ ಪ್ರಕರಣಗಳು.
ಕರ್ನಾಟಕ: 4,500 ಸಕ್ರಿಯ ಪ್ರಕರಣಗಳು.
ತಮಿಳನಾಡು: 2,694 ಸಕ್ರಿಯ ಪ್ರಕರಣಗಳು.
ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಆದರೆ ಇದರಿಂದ ನಾಲ್ಕನೇ ಅಲೆ ಬಂದಿದೆ ಎಂದು ಹೇಳಲಾಗದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ ಮುಂತಾದ ರಾಜ್ಯಗಳು ಈಗಾಗಲೇ ಇರುವ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧಾರಣೆ ಮುಂತಾದ ಕೋವಿಡ್ ನಿಯಮಾವಳಿಗಳನ್ನು ಮರಳಿ ಬಿಗಿ ಮಾಡಿವೆ.
ಇದನ್ನೂ ಓದಿ: ದೇಶದಲ್ಲಿ ಹೆಚ್ಚಿದ ಕೊರೊನಾ ಅಬ್ಬರ: 24 ಗಂಟೆಯಲ್ಲೇ 12,847 ಹೊಸ ಕೇಸು