ಹೊಸದಿಲ್ಲಿ: ಸರ್ಕಾರಿ ನೌಕರನ ವಿರುದ್ಧ ಭ್ರಷ್ಟಾಚಾರ (Corruption) ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಲು ಆಯಾ ಇಲಾಖೆಯ ಅನುಮತಿ ಪಡೆಯುವುದು ಕಡ್ಡಾಯ ಎಂದು ಸುಪ್ರೀಂ ಕೋರ್ಟ್ (supreme court) ಹೇಳಿದೆ. ಇದು ಕ್ರಿಮಿನಲ್ (criminal procedure) ಪ್ರಕರಣಕ್ಕೆ ಅನ್ವಯವಾಗುವುದಿಲ್ಲ.
ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಜೆ.ಬಿ.ಪರ್ದಿವಾಲಾ ಅವರ ಪೀಠ ಈ ಮಹತ್ವದ ತೀರ್ಪು ನೀಡಿದೆ. ಭ್ರಷ್ಟಾಚಾರ ನಿಯಂತ್ರಣ ಕಾಯಿದೆ 1988ರ ಕಲಂ 19ರ ಅಡಿಯಲ್ಲಿ ನೌಕರನ ವಿರುದ್ಧ ಇಲಾಖೆಯ ಅನುಮತಿ ಪಡೆಯಬೇಕು. ಆದರೆ ಭಾರತೀಯ ದಂಡ ಸಂಹಿತೆ (indian penal code – ಐಪಿಸಿ) ಸೆಕ್ಷನ್‌ಗಳ ಅಡಿಯಲ್ಲಿ ನೌಕರನ ವಿರುದ್ಧ ದಾಖಲಾದ ಪ್ರಕರಣಗಳಲ್ಲಿ ಈ ಮಾನದಂಡವನ್ನು ಅನುಸರಿಸಬೇಕಾಗಿಲ್ಲ ಎಂದು ಅದು ಹೇಳಿದೆ.
ಸಾರ್ವಜನಿಕ ಸೇವಕರ ವಿರುದ್ಧದ ಸಾಮಾನ್ಯ ದಂಡದ ಕಾನೂನಿನ ಅಡಿಯಲ್ಲಿ ಬರುವ ಪ್ರಕರಣಗಳಲ್ಲಿ, CrPCಯ ಸೆಕ್ಷನ್ 197ರ ಅಡಿಯಲ್ಲಿ ಅನುಮತಿಯ ಅವಶ್ಯಕತೆಯು ಪ್ರಕರಣದಲ್ಲಿ ಇರುವ ವಾಸ್ತವಿಕ ಅಂಶಗಳ ಮೇಲೆ ಅವಲಂಬಿತವಾಗಿದೆ.
1988ರ ಪಿಸಿ ಕಾಯಿದೆಯ ಸೆಕ್ಷನ್ 19ರ ಅಡಿಯಲ್ಲಿ ತನ್ನನ್ನು ಐಪಿಸಿ ಅಡಿಯಲ್ಲಿ ಮಾತ್ರ ವಿಚಾರಣೆಗೆ ಒಳಪಡಿಸಬಾರದು ಮತ್ತು ಕ್ರಿಮಿನಲ್ ಪ್ರಕ್ರಿಯೆಗಳಿಂದ ಮುಕ್ತಗೊಳಿಸಬೇಕು ಎಂಬ ಮೇಲ್ಮನವಿದಾರ ಎ.ಶ್ರೀನಿವಾಸ ರೆಡ್ಡಿ ಅವರ ವಾದವನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತು. ಮೇಲ್ಮನವಿದಾರರು, ಹೈದರಾಬಾದ್‌ನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಹಾಯಕ ಜನರಲ್ ಮ್ಯಾನೇಜರ್ ಆಗಿದ್ದು, ಸಿಕಂದರಾಬಾದ್‌ನ ಮೆಸರ್ಸ್ ಸ್ವೆನ್ ಜೆನೆಟೆಕ್ ಲಿಮಿಟೆಡ್ ಹೆಸರಿನಲ್ಲಿ ರೂ.22.50 ಕೋಟಿಗಳ ಕಾರ್ಪೊರೇಟ್ ಸಾಲವನ್ನು ಮಂಜೂರು ಮಾಡುವ ಮೂಲಕ ಬ್ಯಾಂಕ್‌ಗೆ ವಂಚಿಸಲು ಇತರ ಸಹ-ಆರೋಪಿಗಳೊಂದಿಗೆ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಮತ್ತೊಂದು ಸರ್ಕಾರಿ ಸಂಸ್ಥೆಯಿಂದ ‘ನೆಹರು’ ಹೆಸರು ಕೈ ಬಿಟ್ಟ ‘ಮೋದಿ’ ಸರ್ಕಾರ!