Site icon Vistara News

COVID-19 | ಕೊರೋನಾ ನಾಲ್ಕನೇ ಅಲೆಯಲ್ಲ, ಇದು ʼಬ್ಲಿಪ್‌ʼ!

ನವದೆಹಲಿ: ದೇಶದಲ್ಲಿ ಕೋವಿಡ್‌ ಸಂಖ್ಯೆ ಇನ್ನಷ್ಟು ಹೆಚ್ಚುತ್ತಿದ್ದು, ನಾಲ್ಕನೇ ಅಲೆಯ ಸೂಚನೆ ಇರಬಹುದೇ? ಎಂಬ ಆತಂಕ ಹುಟ್ಟಿಸಿದೆ. ಭಾರತದಲ್ಲಿ 3,324 ಹೊಸ ಕೋವಿಡ್‌ ಪ್ರಕರಣ ದಾಖಲಾಗಿವೆ ಹಾಗೂ ಕಳೆದ 24 ಗಂಟೆಗಳಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 40ಕ್ಕೂ ಅಧಿಕವಾಗಿದೆ. ಹಾಗೂ 19,092 ಆಕ್ಟಿವ್‌ ಪ್ರಕರಣಗಳಿವೆ. ಆದರೆ, ಕೋವಿಡ್-‌19 ನಾಲ್ಕನೇ ಅಲೆಯ ಬಗ್ಗೆ ಯಾವುದೆ ಆತಂಕ ಬೇಡ ಎಂದು ದೇಶದ ಅತ್ಯುನ್ನತ ವೈದ್ಯಕೀಯ ಸಂಶೋಧನಾ ಸಂಸ್ಥೆಯಾದ ಇಂಡಿಯನ್‌ ಕೌನ್ಸಿಲ್‌ ಫಾರ್‌ ಮೆಡಿಕಲ್‌ ರಿಸರ್ಚ್‌(ICMR) ತಿಳಿಸಿದೆ.
ಕೊರೋನಾ ನಾಲ್ಕನೇ ಅಲೆಯ ಹಿನ್ನೆಲೆಯಲ್ಲಿ ICMRನ ಹೆಚ್ಚುವರಿ ನಿರ್ದೇಶಕ ಸಮಿರನ್‌ ಪಂಡ ಮಾತನಾಡಿ ʼಈಗ ಹೆಚ್ಚುತ್ತಿರುವ ಕೊರೋನಾ ಸಂಖ್ಯೆಯನ್ನು ಗಮನಿಸಿ ದೇಶದಲ್ಲಿ ನಾಲ್ಕನೇ ಅಲೆ ಆರಂಭವಾಗುತ್ತದೆ ಎಂದು ಹೇಳಲಾಗುವುದಿಲ್ಲ. ಇದನ್ನು ಬ್ಲಿಪ್‌ ಎನ್ನಬಹುದುʼ ಎಂದು ತಿಳಿಸಿದರು.‌

ಯಾಕೆ ಆತಂಕ ಬೇಡ?

ಕೊರೋನಾ ಪ್ರಕರಣ ಹೆಚ್ಚುತ್ತಿದ್ದರೂ ಆ ಕುರಿತು ಆತಂಕ ಬೇಡ ಎಂದು ICMRನ ನಿರ್ದೇಶಕ ಸಮಿರನ್‌ ಪಂಡ ತಿಳಿಸಿದ್ದಾರೆ. ಅದಕ್ಕೆ ಪ್ರಮುಖ ನಾಲ್ಕು ಕಾರಣಗಳು ಇಲ್ಲಿವೆ:

  1. ಕೊರೋನಾ ಪ್ರಕರಣ ಸದ್ಯ ಹೆಚ್ಚುತ್ತಿದ್ದರೂ ಇನ್ನೂ ಸ್ಥಳೀಯ ಹಂತದಲ್ಲಿರುವುದು ಕಂಡುಬಂದಿದೆ. ಅದು ತಪಾಸಣೆಯ ಪ್ರಮಾಣ ಹೆಚ್ಚಿಸಿದ ಕಾರಣಕ್ಕೂ ಇರಬಹುದು.
  2. ಕೆಲವು ಪ್ರಕರಣಗಳು ಜಿಲ್ಲೆಯ ಮಟ್ಟದಲ್ಲಿ ಹರಡುತ್ತಿದ್ದು ಅದನ್ನು ʼಬ್ಲಿಪ್‌ʼ ಎಂದು ಕರೆಯಲಾಗುತ್ತದೆ. ಬ್ಲಿಪ್‌ ಎಂದರೆ ದೇಶದ ಕೆಲವು ಪ್ರದೇಶಗಳಿಗೆ ಸೀಮಿತವಾದದ್ದು ಎಂದರ್ಥ. ಹಾಗಾಗಿ ಈಗ ಹರಡುತ್ತಿರುವುದು ಬ್ಲಿಪ್‌ ಅಗಿರುವುದರಿಂದ ಪೂರ್ಣ ರಾಜ್ಯ ಸೋಂಕಿಗೆ ಒಳಗಾಗಿದೆ ಎಂದು ಪರಿಗಣಿಸಲಾಗುವುದಿಲ್ಲ.
  3. ಅಲ್ಲದೆ, ದೇಶದಲ್ಲಿ ಕೊರೋನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದ ಪ್ರಕರಣ ಅತಿ ಕಡಿಮೆ.
  4. ಮುಖ್ಯವಾಗಿ ಈವರೆಗೆ ಕೊರೋನಾ ವೈರಸ್‌ನ ಯಾವುದೇ ಹೊಸ ರೂಪಾಂತರಿ ಕಂಡುಬಂದಿಲ್ಲ. ಹಾಗಾಗಿ ಇದು ನಾಲ್ಕನೇ ಅಲೆಯ ಮುನ್ಸೂಚನೆಯಲ್ಲ.

ಕೊರೋನಾ ಸೋಂಕು ಈಗ ಸ್ಥಳೀಯ ಹಂತದಲ್ಲಿದ್ದು, ಈ ಹಂತದಲ್ಲೇ ಸಾರ್ವಜನಿಕರು ಎಚ್ಚರಿಕೆ ವಹಿಸುವುದು ಸೂಕ್ತ. ಭಾರತಕ್ಕೆ ನಾಕನೇ ಅಲೆಯ ಬಾಧೆ ಉಂಟಾಗದಂತೆ ನೋಡಿಕೊಳ್ಳುವುದು ಉತ್ತಮ. ಈ ಹಿಂದೆ ಎಚ್ಚರಿಕಾ ಕ್ರಮಗಳನ್ನು ಕೈಗೊಂಡತೆ ಈಗಲೂ ಮಾಸ್ಕ್‌ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದರಿಂದ ನೀವು ಸುರಕ್ಷಿತರಾಗಿರಬಹುದು.

ಕೊರೋನಾ ಲಕ್ಷಣಗಳು:

ಈವರೆಗೆ ಯಾವುದೇ ಹೊಸ ರೂಪಾಂತರಿ ವೈರಸ್‌ ಕಂಡುಬಂದಿಲ್ಲ. ಹಾಗಾಗಿ ಹೊಸ ಲಕ್ಷಣಗಳು ಇನ್ನೂ ಕಂಡುಬಂದಿಲ್ಲ.
ಕೊರೋನಾದ ಸಾಮನ್ಯ ಲಕ್ಷಣಗಳು: ಜ್ವರ, ಶೀತ, ಕೆಮ್ಮು, ಉಸಿರಾಟದಲ್ಲಿ ತೊಂದರೆ, ಆಯಾಸ, ತಲೆನೋವು, ಮೈ-ಕೈ ನೋವು, ರುಚಿ ಹಾಗೂ ವಾಸನೆ ಬಾರದಿರುವುದು, ಬೇದಿ, ವಾಂತಿ, ಎದೆ ನೋವು.

ಇದನ್ನೂ ಓದಿ: Covid-19 | ಸೋಂಕಿತ ಗರ್ಭಿಣಿಯರಿಗೆ ಚಿಕಿತ್ಸೆ: ವಲಯಕ್ಕೊಂದು ಆಸ್ಪತ್ರೆ ಮೀಸಲು

Exit mobile version