Site icon Vistara News

CoWin Data leak : ಕೋವಿಡ್‌ ಲಸಿಕೆ ಪಡೆದವರ ವಿವರ ಟೆಲಿಗ್ರಾಂ ಆ್ಯಪ್‌ನಲ್ಲಿ ಸೋರಿಕೆ, ಈ ಬಗ್ಗೆ ಇಲಾಖೆ ಹೇಳಿದ್ದೇನು?

covid test

#image_title

ನವ ದೆಹಲಿ: ಕೋವಿಡ್-‌19 ಲಸಿಕೆ ಪಡೆದ ವಿಐಪಿಗಳೂ ಸೇರಿದಂತೆ ಅನೇಕ ಜನರ ವಿವರಗಳು ಟೆಲಿಗ್ರಾಂ ಆ್ಯಪ್‌ನಲ್ಲಿ (Telegram app) ಬಹಿರಂಗವಾಗಿರುವ ಘಟನೆ ನಡೆದಿದೆ. (CoWin Data leak) ಖ್ಯಾತ ರಾಜಕಾರಣಿಗಳು, ಪತ್ರಕರ್ತರು, ಗಣ್ಯ ವ್ಯಕ್ತಿಗಳ ವಿವರಗಳನ್ನು ಟೆಲಿಗ್ರಾಂ ಆ್ಯಪ್‌ನಲ್ಲಿ ಲೋಕ್‌ ಆಗಿದೆ ಎಂದು ತೃಣಮೂಲ ಕಾಂಗ್ರೆಸ್‌ನ ವಕ್ತಾರ ಸಾಕೇತ್‌ ಗೋಖಲೆ ತಿಳಿಸಿದ್ದಾರೆ.

ರಾಜ್ಯಸಭೆ ಸದಸ್ಯ ಮತ್ತು ಟಿಎಂಸಿ ನಾಯಕ ಒ ಬಿರಿಯನ್‌, ಮಾಜಿ ವಿತ್ತ ಸಚಿವ ಪಿ. ಚಿದಂಬರಂ, ಕಾಂಗ್ರೆಸ್‌ ನಾಯಕ ಜೈ ರಾಮ್‌ ರಮೇಶ್‌, ಕೆ.ಸಿ ವೇಣುಗೋಪಾಲ್‌, ಪತ್ರಕರ್ತ ರಾಜ್‌ದೀಪ್‌ ಸರ್ದೇಸಾಯಿ, ಬರ್ಖಾದತ್‌ ಮೊದಲಾದವರ ವಿವರಗಳು ಲೀಕ್‌ ಆಗಿದೆ ಎಂದು ಸಾಕೇತ್‌ ಗೋಖಲೆ ಆರೋಪಿಸಿದ್ದಾರೆ.

ಆದರೆ ಕೋವಿನ್‌ ಡೇಟಾ ಸೋರಿಕೆಯ ಆರೋಪವನ್ನು ಕೇಂದ್ರ ಆರೋಗ್ಯ ಇಲಾಖೆ ನಿರಾಕರಿಸಿದೆ. ಅಂಥ ಯಾವುದೇ ಪ್ರಕರಣ ನಡೆದಿಲ್ಲ. ಕೋವಿನ್‌ ಡೇಟಾ ಸುರಕ್ಷಿತವಾಗಿದ್ದು ಯಾರೂ ಆತಂಕಪಡಬೇಕಾದ ಅಗತ್ಯ ಇಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಕೋವಿಡ್‌ ಡೇಟಾ ಸೋರಿಕೆ ಕುರಿತ ವರದಿಗಳು ನಿರಾಧಾರವಾಗಿದ್ದು, ದಿಕ್ಕು ತಪ್ಪಿಸುವಂಥದ್ದಾಗಿದೆ. ಈ ಪ್ರಕರಣದ ಬಗ್ಗೆ ಸಿಇಆರ್‌ಟಿ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಕೋವಿಡ್‌ ಲಸಿಕೆ ಅಭಿಯಾನದ ವೇಳೆ ಬಹುತೇಕ ಭಾರತೀಯರು ಕೋವಿನ್‌ ಆ್ಯಪ್‌ನಲ್ಲಿ ತಮ್ಮ ಮೊಬೈಲ್‌ ಬಳಸಿ ವಿವರಗಳನ್ನು ನಮೂದಿಸಿದ್ದರು. ಇದೀಗ ಈ ವೈಯಕ್ತಿಕ ವಿವರಗಳು ಸೋರಿಕೆಯಾಗಿವೆ. ಟೆಲಿಗ್ರಾಮ್‌ ಆ್ಯಪ್‌ನಲ್ಲಿ ಉಚಿತವಾಗಿ ಲಭ್ಯವಿದೆ. ಇದು ಕಳವಳಕಾರಿ ಸಂಗತಿ ಎಂದು ಟಿಎಂಸಿ ನಾಯಕರು ಆರೋಪಿಸಿದ್ದಾರೆ.

ಯಾವೆಲ್ಲ ಮಾಹಿತಿ ಲಭ್ಯ? : ಟೆಲಿಗ್ರಾಂ ಆ್ಯಪ್‌ನಲ್ಲಿ ಕೋವಿಡ್‌ ಲಸಿಕೆ ಪಡೆದವರ ಜನ್ಮ ದಿನಾಂಕ, ಫೋನ್‌ ಸಂಖ್ಯೆ, ಆಧಾರ್‌ ವಿವರ, ಪ್ಯಾನ್‌ ವಿವರ, ಪಾಸ್‌ ಪೋರ್ಟ್‌ ಮಾಹಿತಿ ದೊರೆಯುತ್ತದೆ. ಮೋದಿ ಸರ್ಕಾರದಲ್ಲಿ ಭಾರಿ ಡೇಟಾ ಸೋರಿಕೆಯಾಗಿದೆ. ಆಧಾರ್‌ ಸಂಖ್ಯೆ, ಪಾಸ್‌ಪೋರ್ಟ್‌ ಸಂಖ್ಯೆ, ವೋಟರ್‌ ಐಡಿ, ಕುಟುಂಬದ ಸದಸ್ಯರ ವಿವರ ಎಲ್ಲೆಡೆ ಸಿಗುವಂತಾಗಿದೆ ಎಂದು ಆರೋಪಿಸಲಾಗಿದೆ.

ಡೇಟಾ ಸೋರಿಕೆ ತಡೆಯಲು ನೀವೇನು ಮಾಡಬಹುದು?

ಕೋವಿನ್‌ ಡೇಟಾ ಲೀಕ್‌ ರೀತಿಯಲ್ಲಿ ಡೇಟಾ ಸೋರಿಕೆ ಆಗದಂತೆ ತಡೆಯಲು ಕೆಲವು ಸಲಹೆಗಳು ಇಂತಿವೆ.

ಪ್ರಬಲ ಪಾಸ್‌ವರ್ಡ್‌ ಬಳಸಬೇಕು ಮತ್ತು ಅವುಗಳನ್ನು ಆಗಿಂದಾಗ್ಗೆ ಬದಲಿಸಬೇಕು. ಎನ್‌ಕ್ರಿಪ್ಷನ್‌ ಮತ್ತು ವಿಪಿಎನ್‌ ಬಳಸಿ. ಫಿಶಿಂಗ್‌, ಮಾಲ್‌ವೇರ್‌ ದೂರವಿಡಿ. ಸಾರ್ವಜನಿಕ ವೈ-ಫೈ ಬಳಸುವಾಗ ಎಚ್ಚರ ಇರಲಿ. ಸಾಮಾಜಿಕ ಜಾಲತಾಣ ಬಳಕೆ ವೇಳೆ ಹುಷಾರಾಗಿರಿ.

ಇದನ್ನೂ ಓದಿ: Oral antiviral for Covid-19 : ಕೋವಿಡ್‌ ಚಿಕಿತ್ಸೆಗೆ ಬಂತು ಮೊದಲ ಮಾತ್ರೆ, ಯಾರು ಬಳಸಬಹುದು?

Exit mobile version