Site icon Vistara News

Pakistan Temple Attack: ಹಿಂದು ಯುವಕನ ಜತೆ ಸೀಮಾ ಹೈದರ್‌ ಮದುವೆ; ಪಾಕ್‌ನಲ್ಲಿ ದೇಗುಲ ಮೇಲೆ ದಾಳಿ

Hindu Temple Attack In Pakistan Over Seema Haider Love

Dacoits Attack Temple In Pakistan With Rocket Launchers Over Seema's PUBG Love Story

ಇಸ್ಲಾಮಾಬಾದ್/ನವದೆಹಲಿ: ಧರ್ಮದ ಅಮಲು, ಉಗ್ರವಾದದ ಪೋಷಣೆ, ಅಸಮರ್ಥ ನಾಯಕತ್ವದಿಂದ ಆರ್ಥಿಕವಾಗಿ ದಿವಾಳಿಯಾಗಿ, ಜಗತ್ತಿನ ಎದುರು ಭಿಕ್ಷಾಪಾತ್ರೆ ಹಿಡಿದು ನಿಂತಿದ್ದರೂ ಪಾಕಿಸ್ತಾನದ ಇಸ್ಲಾಮಿಕ್‌ ಮೂಲಭೂತವಾದ ಎಂಬ ಅನಿಷ್ಟ ಮಾತ್ರ ತೊಲಗಿಲ್ಲ. ಇದಕ್ಕೆ ನಿದರ್ಶನ ಎಂಬಂತೆ, ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದ ಸೀಮಾ ಹೈದರ್‌ (Seema Haider) ಎಂಬ ಮಹಿಳೆಯು ಭಾರತದ ಹಿಂದು ಯುವಕನನ್ನು ಮದುವೆಯಾದಳು ಎಂಬ ಕಾರಣಕ್ಕಾಗಿ ಪಾಕಿಸ್ತಾನದಲ್ಲಿರುವ ಹಿಂದು ದೇವಾಲಯದ (Pakistan Temple Attack) ಮೇಲೆ ಇಸ್ಲಾಮಿಕ್‌ ಮೂಲಭೂತವಾದಿಗಳು ರಾಕೆಟ್‌ ದಾಳಿ ನಡೆಸಿದ್ದಾರೆ.

ಹೌದು, ದಕ್ಷಿಣ ಸಿಂಧ್‌ ಪ್ರಾಂತ್ಯದಲ್ಲಿರುವ ಸಣ್ಣ ದೇವಾಲಯದ ಮೇಲೆ ಡಕಾಯಿತರು ರಾಕೆಟ್‌ ದಾಳಿ ಮೂಲಕ ಅದನ್ನು ಧ್ವಂಸಗೊಳಿಸಿದ್ದಾರೆ. ಕಳೆದ 24 ಗಂಟೆಯಲ್ಲಿ ಪಾಕಿಸ್ತಾನದಲ್ಲಿ ಹಿಂದು ದೇವಾಲಯದ ಮೇಲೆ ನಡೆಯುತ್ತಿರುವ ಎರಡನೇ ದಾಳಿ ಇದಾಗಿದೆ. ಸೀಮಾ ಹೈದರ್‌ ಅವರು ಹಿಂದು ಯುವಕನನ್ನು ಪ್ರೀತಿಸಿ, ಭಾರತಕ್ಕೆ ಬಂದು ನೆಲೆಸಿರುವುದೇ ದಾಳಿಗೆ ಕಾರಣ ಎಂದು ತಿಳಿದುಬಂದಿದೆ. ಆದಾಗ್ಯೂ, ಪೊಲೀಸರು ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ. ಜುಲೈ 16ರಂದು ಘಟನೆ ನಡೆದಿದ್ದು, ಅಲ್ಪಸಂಖ್ಯಾತರಾಗಿರುವ ಹಿಂದುಗಳು ಕೃತ್ಯವನ್ನು ಖಂಡಿಸಿದ್ದಾರೆ.

ದಾಳಿಗೆ ಬಳಸಿದ ಶಸ್ತ್ರಾಸ್ತ್ರ

ಮುಂಬೈ ಮಾದರಿ ದಾಳಿಯ ಬೆದರಿಕೆ ಕರೆ

ಸೀಮಾ ಹೈದರ್‌ ಅವರನ್ನು ಪಾಕಿಸ್ತಾನಕ್ಕೆ ವಾಪಸ್‌ ಕಳುಹಿಸದಿದ್ದರೆ ಭಾರತದ ಮೇಲೆ ಮುಂಬೈ ಮಾದರಿ ದಾಳಿ ನಡೆಸಲಾಗುವುದು ಎಂದು ಕೆಲ ದಿನಗಳ ಹಿಂದಷ್ಟೇ ಮುಂಬೈ ಟ್ರಾಫಿಕ್‌ ಪೊಲೀಸರ ವಾಟ್ಸ್‌ಆ್ಯಪ್ ಸಂಖ್ಯೆಗೆ ಬೆದರಿಕೆ ಸಂದೇಶಗಳನ್ನು ರವಾನಿಸಲಾಗಿತ್ತು. “ಸೀಮಾ ಹೈದರ್‌ ಅವರನ್ನು ಸರ್ಕಾರ ಪಾಕಿಸ್ತಾನಕ್ಕೆ ಹಿಂತಿರುಗಿಸದಿದ್ದರೆ ಭಾರತವನ್ನು ನಾಶಪಡಿಸುತ್ತೇವೆ. ಮುಂಬೈ ಮಾದರಿ ದಾಳಿಗೆ ಸಿದ್ಧರಾಗಿ. ಹಾಗೇನಾದರೂ ದಾಳಿಯಾದರೆ ಉತ್ತರ ಪ್ರದೇಶ ಸರ್ಕಾರವೇ ಇದರ ಹೊಣೆ” ಎಂದು ಬೆದರಿಕೆ ಹಾಕಲಾಗಿದೆ. ಆದಾಗ್ಯೂ, ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ. “ಎಲ್ಲಿಂದ ಮೆಸೇಜ್‌ ಕಳುಹಿಸಿದ್ದಾರೆ ಎಂಬ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ” ಎಂದು ಪೊಲೀಸರು ಮಾಹಿತಿ ನೀಡಿದ್ದರು.

ಇದನ್ನೂ ಓದಿ: PUBG Love Story: ಭಾರತ ನನ್ನದು, ನಾನೀಗ ಹಿಂದು; ಇದು ಪ್ರೀತಿ ಅರಸಿ ಪಾಕ್‌ನಿಂದ ಬಂದ ಮಹಿಳೆ ಮನದಾಳ

ಪಾಕಿಸ್ತಾನದ ಸೀಮಾ ಹೈದರ್‌ ಹಾಗೂ ಗ್ರೇಟರ್‌ ನೊಯ್ಡಾದ ಸಚಿನ್‌ ಸಿಂಗ್‌ ಅವರು ಪಬ್ಜಿ ಮೂಲಕ ಪರಿಚಯವಾಗಿದ್ದು, ಇಬ್ಬರ ಮಧ್ಯೆ ಪ್ರೀತಿ ಚಿಗುರಿದೆ. ಹಾಗಾಗಿ, ಸಿಂಧ್‌ ಪ್ರಾಂತ್ಯದಲ್ಲಿದ್ದ ಮನೆ ಮಾರಿ, ಅಕ್ರಮವಾಗಿ ಸೀಮಾ ಹೈದರ್‌ ಭಾರತವನ್ನು ಪ್ರವೇಶಿಸಿದ್ದಾರೆ. ಇವರನ್ನು ಬಂಧಿಸಿದ್ದ ಪೊಲೀಸರು ಬಳಿಕ ಬಿಡುಗಡೆ ಮಾಡಿದ್ದಾರೆ. ಆದಾಗ್ಯೂ, “ಭಾರತ ಈಗ ನನ್ನ ದೇಶ. ನಾನು ಹಿಂದು ಧರ್ಮವನ್ನು ಪಾಲಿಸುತ್ತೇನೆ. ಇಲ್ಲಿಯೇ ಇರುತ್ತೇನೆ” ಎಂದು ಸೀಮಾ ಹೈದರ್‌ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

Exit mobile version