Site icon Vistara News

Dawood Ibrahim | ದಾವೂದ್ ಇಬ್ರಾಹಿಂ ಪಾಕ್‌ನ ಕರಾಚಿಯಲ್ಲೇ ಇದ್ದಾನೆ, 2ನೇ ಮದ್ವೆಯಾಗಿದ್ದಾನೆ!

Dawood Ibrahim @ Pakistan Karachi

ನವದೆಹಲಿ: ಮುಂಬೈ ಸರಣಿ ಸ್ಫೋಟದ ಆರೋಪಿ ಹಾಗೂ ಭೂಗತ ದೊರೆ ದಾವೂದ್ ಇಬ್ರಾಹಿಂ (Dawood Ibrahim) ಈಗಲೂ ಪಾಕಿಸ್ತಾನದ ಕರಾಚಿಯಲ್ಲೇ ಇದ್ದು, ಪಾಕಿಸ್ತಾನದ ಮಹಿಳೆಯನ್ನು ಎರಡನೇ ವಿವಾಹವಾಗಿದ್ದಾನೆ! ರಾಷ್ಟ್ರೀಯ ತನಿಖಾ ದಳ(ಎನ್ಐಎ) ನಡೆಸಿದ ವಿಚಾರಣೆ ವೇಳೆ, ದಾವೂದ್ ಸಹೋದರಿ, ದಿವಂಗತ ಹಸೀನಾ ಪಾರ್ಕರ್ ಅವರ ಪುತ್ರ ಅಲಿಶಾ ಇಬ್ರಾಹಿಂ ಪಾರ್ಕರ್ ಈ ಮಾಹಿತಿ ನೀಡಿದ್ದಾರೆ. ಕರಾಚಿಯ ರಕ್ಷಣಾ ಇಲಾಖೆಗೆ ಸಂಬಂಧಿಸಿದ ಪ್ರದೇಶದಲ್ಲಿ ದಾವೂದ್ ತನ್ನ ಮನೆಯನ್ನು ಬದಲಿಸಿದ್ದಾನೆ ಎಂಬ ಮಾಹಿತಿಯು ಗೊತ್ತಾಗಿದೆ.

ದಾವೂದ್‌ನ ಎರಡನೇ ಹೆಂಡತಿ ಪಾಕಿಸ್ತಾನದ ಪಠಾಣ್ ಸಮುದಾಯದವರಾಗಿದ್ದಾರೆ. ಆದರೆ, ಈಕೆ ಎಲ್ಲಿ ವಾಸಿಸುತ್ತಿದ್ದಾಳೆಂಬ ಮಾಹಿತಿಯನ್ನು ಅಲಿಶಾ ಪಾರ್ಕರ್ ನೀಡಿಲ್ಲ. ಇದೇ ವೇಳೆ, ದಾವೂದ್ ತನ್ನ ಮೊದಲನೆಯ ಹೆಂಡತಿ ಮೆಹಜಬೀನ್‌ಗೆ ಡೈವೋರ್ಸ್ ನೀಡಿಲ್ಲ. ಮುಂಬೈನಲ್ಲಿರುವ ತಮ್ಮ ಸಂಬಂಧಿಕರ ಜತೆ ದಾವೂದ್ ಸಂಪರ್ಕದಲ್ಲಿದ್ದಾನೆ ಎಂಬ ಮಾಹಿತಿಯನ್ನು ಅಲಿಶಾ, ವಿಚಾರಣೆ ವೇಳೆ ನೀಡಿದ್ದಾರೆ.

ದಾವೂದ್ ತನ್ನ ವಿಳಾಸವನ್ನು ಬದಲಿಸಿದ್ದಾನೆ ಎನ್ನಲಾಗಿದೆ. ತನ್ನ ವಾಸ್ತವ್ಯವನ್ನು ಈಗ ಆತ ರಕ್ಷಣಾ ಪ್ರದೇಶಕ್ಕೆ ಸ್ಥಳಾಂತರಿಸಿದ್ದಾನೆ. ಪಾಕಿಸ್ತಾನದ ರಕ್ಷಣಾ ಇಲಾಖೆಯ ನಿಯಂತ್ರಣದಲ್ಲಿರುವ ಪ್ರದೇಶದಲ್ಲಿ ದಾವೂದ್ ವಾಸಿಸುತ್ತಿದ್ದಾನೆಂಬುದು ವಿಚಾರಣೆ ವೇಳೆ ಗೊತ್ತಾಗಿದೆ.

ದಾವೂದ್ ಇಬ್ರಾಹಿಂ ದೇಶ ತೊರೆದು ಪಾಕಿಸ್ತಾನ ಸೇರಿಕೊಂಡ ಬಳಿಕ, ಮುಂಬೈನಲ್ಲಿ ಭೂಗತ ಚಟುವಟಿಕೆಗಳನ್ನು ಆತನ ಸಹೋದರಿ ಹಸೀನಾ ಪಾರ್ಕರ್ ನೋಡಿಕೊಳ್ಳುತ್ತಿದ್ದಳು. ಹಸೀನಾ ಅವರ ಪತಿಯನ್ನು, ಅರುಣ್ ಗವಳಿ ಗ್ಯಾಂಗ್ 1991ರಲ್ಲಿ ಕೊಲೆ ಮಾಡಿತ್ತು. ಬಳಿಕ, ಇದೇ ವಿಷಯಕ್ಕೆ ಕುಖ್ಯಾತ ಜೆಜೆ ಹಾಸ್ಪಿಟಲ್ ಶೂಟೌಟ್ ನಡೆದಿತ್ತು. ಹಸೀನಾ ಅವರು 2014ರಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಹಸೀನಾ ಪಾರ್ಕರ್ ಕತೆಯನ್ನೇ ಬಾಲಿವುಡ್‌ನಲ್ಲಿ ಸಿನಿಮಾ ತೆರೆಗೆ ಬಂದಿದೆ. ಶ್ರದ್ಧಾ ಕಪೂರ್ ಹಸೀನಾ ಪಾತ್ರವನ್ನು ನಿಭಾಯಿಸಿದ್ದಾರೆ.

ಇದನ್ನೂ ಓದಿ | ಭೂಗತ ಪಾತಕಿ ದಾವೂದ್ ಇಬ್ರಾಹಿಂ ತಲೆಗೆ 25 ಲಕ್ಷ ರೂ ಬಹುಮಾನ ಘೋಷಿಸಿದ ರಾಷ್ಟ್ರೀಯ ತನಿಖಾ ದಳ

Exit mobile version