Site icon Vistara News

Shortest Day: ಭಾರತದ ಪಾಲಿಗೆ ನಾಳೆ ಅತ್ಯಂತ ಕಿರಿಯ ದಿನ! ಏನು ಕಾರಣ?

December 22 will be shortest day in India

ಉಜ್ಜೈನ್, ಮಧ್ಯ ಪ್ರದೇಶ: ಭಾರತದ (India) ಪಾಲಿಗೆ ನಾಳೆ ಡಿಸೆಂಬರ್ 22 ವಿಶೇಷ ದಿನವಾಗಲಿದೆ. ಇದು ಅತ್ಯಂತ ಕಿರಿಯ ಅಥವಾ ಕಡಿಮೆ ಅವಧಿಯ ದಿನವಾಗಲಿದೆ ಎಂದು ಹೇಳಲಾಗುತ್ತಿದೆ(Shortest Day in India). ಪ್ರತಿ ಡಿ.22ರಂದು ಈ ಖಗೋಳ ವಿಸ್ಮಯ ಘಟಿಸುತ್ತದೆ ಮತ್ತು ಇದು ಉತ್ತಾರಾಯಣದ (Uttarayana) ಆರಂಭದ ಸೂಚಕವೂ ಆಗಿರುತ್ತದೆ.

ಭೂಮಿಯ ತಿರುಗುವಿಕೆಯನ್ನು ಪರಿಗಣಿಸಿ ಸೂರ್ಯನು ಡಿಸೆಂಬರ್ 22, 2023ರಂದು ಮಕರ ಸಂಕ್ರಾಂತಿ ವೃತ್ತಕ್ಕೆ ಲಂಬವಾಗಿರುತ್ತಾನೆ. ಈ ದಿನ ಸೂರ್ಯನ ತಿರುಗುವಿಕೆಯು 17 ವಿಕಲ ದಕ್ಷಿಣದಲ್ಲಿ 23 ಡಿಗ್ರಿ ಮತ್ತು 26 ಡಿಗ್ರಿಗಳ ನಡುವೆ ಇರುತ್ತದೆ. ಈ ಕಾರಣದಿಂದಾಗಿ ಭಾರತ ಸೇರಿದಂತೆ ಉತ್ತರ ಗೋಳಾರ್ಧದಲ್ಲಿ ನೆಲೆಗೊಂಡಿರುವ ದೇಶಗಳು ಕಡಿಮೆ ಹಗಲು ಮತ್ತು ದೀರ್ಘ ರಾತ್ರಿಯನ್ನು ಹೊಂದಿರುತ್ತವೆ.

ಸರ್ಕಾರಿ ಜಿವಾಜಿ ವೀಕ್ಷಣಾಲಯದ ಅಧೀಕ್ಷಕ ಡಾ ರಾಜೇಂದ್ರ ಗುಪ್ತ್ ಅವರ ಪ್ರಕಾರ, ಪ್ರತಿ ವರ್ಷ ಡಿಸೆಂಬರ್ 22 ರಂದು ಖಗೋಳ ವಿಸ್ಮಯ ಘಟನೆ ನಡೆಯಲಿದ್ದು, ಈ ಶುಕ್ರವಾರ ಕಡಿಮೆ ಅಥವಾ ಕಿರಿಯ ದಿನವಾಗಿರುತ್ತದೆ. ಮಧ್ಯ ಪ್ರದೇಶದ ಉಜ್ಜೈನ್‌ನಲ್ಲ ಸೂರ್ಯೋದವು ಬೆಳಗ್ಗೆ 7.05ಕ್ಕೆ ಆಗಲಿದ್ದು, ಸೂರ್ಯಾಸ್ತವು ಸಂಜೆ 5.46ಕ್ಕೆ ನಡೆಯಲಿದೆ. ಆಗ ದಿನದ ಒಟ್ಟು ಗಂಟೆಗಳು 10 ಗಂಟೆ 41 ನಿಮಿಷ ಇದ್ದರೆ, ರಾತ್ರಿಯ ಅವಧಿ 13 ಗಂಟೆ 19 ನಿಮಿಷ ಇರಲಿದೆ. ಈ ಸಮಯದಲ್ಲಿ ಸೂರ್ಯನು ಸಯಾನ್ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಈ ದಿನ ಸೂರ್ಯನು ಮಕರ ರಾಶಿಯಲ್ಲಿ 0 ಡಿಗ್ರಿಯಲ್ಲಿ ಇರುತ್ತಾನೆ.

ಸೂರ್ಯನ ಚಲನೆಯು ಉತ್ತರದ ಗೋಚರವಾಗುತ್ತ ಹೋಗುತ್ತದೆ. ಇದನ್ನೇ ಉತ್ತರಾಯಣದ ಆರಂಭ ಎಂದು ಕರೆಯಲಾಗುತ್ತದೆ. ಉತ್ತರದ ಕಡೆಗೆ ಸೂರ್ಯನ ಚಲನೆಯ ಪರಿಣಾಮ ದಿನವು ನಿಧಾನವಾಗಿ ದೀರ್ಘವಾಗಿರುತ್ತದೆ. ಹಾಗೆಯೇ, ರಾತ್ರಿಗಳು ಕಿರಿದಾಗುತ್ತವೆ. ಮಾರ್ಚ್ 21ರಂದು ಸೂರ್ಯನು ಸಮಭಾಜಕದಲ್ಲಿ ಇರುತ್ತಾನೆ. ಆಗ ಹಗಲು ರಾತ್ರಿ ಸಮಾನವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.

122 ವರ್ಷದಲ್ಲೇ ದಾಖಲೆಯಲ್ಲಿ ‘ಬಿಸಿ’ಯಾದ ಫೆಬ್ರವರಿ!

ಹವಾಮಾನ ಬದಲಾವಣೆಯ ಪರಿಣಾಮಗಳು ಗೋಚರವಾಗುತ್ತಿವೆ. 1901ರ ಬಳಿಕ ಅಂದರೆ, 122 ವರ್ಷದಲ್ಲೇ ಈ 2023ರ ಫೆಬ್ರವರಿ ಅತಿ ಹೆಚ್ಚು ಉಷ್ಣಾಂಶ ಕಂಡ ತಿಂಗಳವಾಗಿದೆ. ಭಾರತದ ಮಾಸಿಕ ಸರಾಸರಿ ಪ್ರಕಾರ ಫೆಬ್ರವರಿ ತಿಂಗಳಲ್ಲಿ 29.54 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಈ ಬೆಳವಣಿಗೆಯು ಹವಾಮಾನ ಬದಲಾವಣೆಯ ಬಿಕ್ಕಟ್ಟಿನ ಪರಿಣಾಮ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಕನಿಷ್ಠ ತಾಪಮಾನ ದಾಖಲಾದ ಬಗ್ಗೆಯೂ ಈ ಫೆಬ್ರವರಿ ದಾಖಲೆ ಬರೆದಿದೆ(Warmest February).

ಸರಾಸರಿ ಗರಿಷ್ಠ ಅಥವಾ ದಿನದ ತಾಪಮಾನವು ದೇಶಾದ್ಯಂತ ಸಾಮಾನ್ಯಕ್ಕಿಂತ 1.73 ಡಿಗ್ರಿ ಸೆಲ್ಸಿಯಸ್ ಮತ್ತು ಸರಾಸರಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 0.81 ಡಿಗ್ರಿ ಸೆಲ್ಸಿಯಸ್ ಆಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿತ್ತು.

ಉತ್ತರ ಭಾರತದಲ್ಲಿ ಫೆಬ್ರವರಿ ತಿಂಗಳನ್ನು ಸಾಮಾನ್ಯವಾಗಿ ಚಳಿಗಾಲದ ಮುಕ್ತಾಯದ ಅವಧಿ ಎಂದು ಭಾವಿಸಲಾಗುತ್ತದೆ. ಅಲ್ಲದೇ ಬೇಸಿಗೆ ಕಾಲದ ಆರಂಭ ಎನಿಸಿಕೊಳ್ಳುತ್ತದೆ. 2000ದಿಂದ ಈಚೆಗೆ ಈ ಫೆಬ್ರವರಿ ತಿಂಗಳಲ್ಲೇ ತಾಪಮಾನ ಹೆಚ್ಚುತ್ತಲೇ ಇದೆ.

Exit mobile version