ನವ ದೆಹಲಿ: ರಾಜಧಾನಿಯ ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯ ಮತ ಎಣಿಕೆ ಇಂದು ನಡೆಯಲಿದ್ದು, ಸಂಜೆ ಫಲಿತಾಂಶ ಪ್ರಕಟವಾಗಲಿದೆ.
ಒಟ್ಟು 250 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 1,349 ಮಂದಿ ಅಭ್ಯರ್ಥಿಗಳ ಹಣೆಬರಹ ಇಂದು ಹೊರಬೀಳಲಿದೆ. ಒಂದೊಂದು ಕ್ಷೇತ್ರದಲ್ಲಿ ಹೆಚ್ಚು ಕಡಿಮೆ 65 ಸಾವಿರ ಮತದಾರರಿದ್ದಾರೆ.
ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದ್ದು, ಮತ ಎಣಿಕೆಗೆ ಪೊಲೀಸರಿಂದ ಭಾರಿ ಭದ್ರತೆ ಕಲ್ಪಿಸಲಾಗಿದೆ. 42 ಮತ ಎಣಿಕೆ ಕೇಂದ್ರಗಳ ಬಳಿ 10 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. 20 ಅರೆಸೇನಾ ತುಕಡಿಗಳನ್ನು ಕೂಡ ಭದ್ರತೆಗೆ ನಿಯೋಜಿಸಲಾಗಿದೆ.
ಮತದಾನದ ಬಳಿಕ ನಡೆದ ಬಹುತೇಕ ಎಕ್ಸಿಟ್ ಪೋಲ್‌ಗಳಲ್ಲಿ ಆಪ್ ಪಕ್ಷಕ್ಕೆ ಭರ್ಜರಿ ಗೆಲುವು ದೊರೆಯುವ ಸೂಚನೆ ಕಂಡುಬಂದಿದೆ. 150ರಿಂದ 170 ಸ್ಥಾನಗಳ ತನಕ ಆಪ್ ಪಕ್ಷಕ್ಕೆ ಬಹುಮತ ದೊರೆಯಲಿದೆ ಎಂದು ಲೆಕ್ಕಿಸಲಾಗಿದೆ. ಹೀಗಾಗಿ ಆಪ್ ಗೆಲುವಿನ ಅಲೆಯಲ್ಲಿ ತೇಲುತ್ತಿದೆ. ಕಳೆದ 15 ವರ್ಷಗಳ ಕಾಲ ದೆಹಲಿ ಪಾಲಿಕೆ ಬಿಜೆಪಿ ಹಿಡಿತದಲ್ಲಿತ್ತು.
ಇದನ್ನೂ ಓದಿ | ಬೀದಿಪಾಲಾಗಲಿದ್ದಾರಾ ಬೀದಿ ವ್ಯಾಪಾರಿಗಳು! ವ್ಯಾಪಾರಕ್ಕೆ ಪಾಲಿಕೆಯಿಂದ ಬ್ರೇಕ್