Site icon Vistara News

Gold Demand Trends: 2022ರಲ್ಲಿ ಚಿನ್ನದ ಬೇಡಿಕೆ ದಶಕದಲ್ಲೇ ಅತ್ಯಧಿಕ

Demand for Gold too high in 2022 and it is highest in decade

ಬೆಂಗಳೂರು: ವರ್ಲ್ಡ್ ಗೋಲ್ಡ್ ಕೌನ್ಸಿಲ್ (World Gold Council) ಇತ್ತೀಚೆಗೆ ಬಿಡುಗಡೆ ಮಾಡಿದ ಗೋಲ್ಡ್ ಡಿಮ್ಯಾಂಡ್ (Gold Demand Trends) ಟ್ರೆಂಡ್ಸ್ ವರದಿ ಪ್ರಕಾರ 2022ರಲ್ಲಿ ವರ್ಷದಿಂದ ವರ್ಷಕ್ಕೆ ಚಿನ್ನದ ಬೇಡಿಕೆಯಲ್ಲಿ ಶೇ.18ರಷ್ಟು ಹೆಚ್ಚಳವಾಗಿದೆ. ಇದರ ಪರಿಣಾಮ 4,741 ಟನ್‌ಗೆ ತಲುಪಿದ್ದು, 2011 ರ ನಂತರ ಅತ್ಯಧಿಕ ಬೇಡಿಕೆ ಬಂದಿರುವುದು ಇದೇ ಮೊದಲು. ದಾಖಲೆಯ ನಾಲ್ಕನೇ ತ್ರೈಮಾಸಿಕದಿಂದ ಹೆಚ್ಚಿದ ಚಿನ್ನದ ಬೇಡಿಕೆಯು ಸೆಂಟ್ರಲ್ ಬ್ಯಾಂಕ್ –ಖರೀದಿ ಮತ್ತು ನಿರಂತರವಾದ ಬಲವಾದ ಚಿಲ್ಲರೆ ಹೂಡಿಕೆಯಲ್ಲಿ ಹೆಚ್ಚಳ ಕಂಡುಬಂದಿದೆ.

2022 ರಲ್ಲಿ ವಾರ್ಷಿಕ ಸೆಂಟ್ರಲ್ ಬ್ಯಾಂಕ್ ಬೇಡಿಕೆ 1,136 ಟನ್‌ಗೆ ದ್ವಿಗುಣವಾಗಿದ್ದು, ಈ ಹಿಂದಿನ ವರ್ಷದಲ್ಲಿ ಇದರ ಪ್ರಮಾಣ 450 ಟನ್ ಇತ್ತು ಮತ್ತು ಇದು 55 ವರ್ಷಗಳಲ್ಲಿ ದಾಖಲೆಯ ಏರಿಕೆಯಾಗಿದೆ. 2022 ರ 4 ನೇ ತ್ರೈಮಾಸಿಕವೊಂದರಲ್ಲಿಯೇ 417 ಟನ್‌ ತಲುಪಿದ್ದು, 2022 ರ ದ್ವಿತೀಯಾರ್ಧದಲ್ಲಿ 800 ಟನ್‌ಗೂ ಅಧಿಕ ಖರೀದಿಯಾಗಿದೆ.

2022 ರಲ್ಲಿನ ಹೂಡಿಕೆ ಬೇಡಿಕೆ (OTC ಹೊರತುಪಡಿಸಿ) ಅದರ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.10 ರಷ್ಟು ಹೆಚ್ಚಳ ಕಂಡಿದೆ. ಈ ಹೆಚ್ಚಳಕ್ಕೆ ಎರಡು ಪ್ರಮುಖ ಅಂಶಗಳಿವೆ:- ಇಟಿಎಫ್ ಹೊರಹರಿವಿನಲ್ಲಿ ಗಮನಾರ್ಹವಾದ ಇಳಿಕೆಯಾಗಿರುವುದು ಮತ್ತು ಚಿನ್ನದ ಗಟ್ಟಿ ಹಾಗೂ ನಾಣ್ಯಕ್ಕೆ ಬೇಡಿಕೆ ಹೆಚ್ಚಳವಾಗಿರುವುದು.

ಚಿನ್ನದ ಗಟ್ಟಿ ಮತ್ತು ನಾಣ್ಯಗಳು ವಿಶ್ವದಾದ್ಯಂತ ಹಲವಾರು ದೇಶಗಳಲ್ಲಿ ಹೂಡಿಕೆದಾರರ ಪರವಾಗಿದ್ದವು. ಇದು ಚೀನಾದಲ್ಲಿನ ಆರ್ಥಿಕ ದೌರ್ಬಲ್ಯವನ್ನು ಸರಿದೂಗಿಸಲು ನೆರವಾಗಿದೆ. 2022 ರ ಒಟ್ಟು ಯೂರೋಪಿಯನ್ ಚಿನ್ನದ ಗಟ್ಟಿ(ಬಾರ್) ಮತ್ತು ನಾಣ್ಯಗಳ ಹೂಡಿಕೆಯ 300 ಟನ್ ಯ ಗಡಿ ದಾಟಿದೆ. ಇದು ನಿರಂತರವಾಗಿ ದೃಢವಾದ ಜರ್ಮನ್ ಬೇಡಿಕೆಯಿಂದ ನೆರವಾಗಿದೆ. ಮಧ್ಯಪ್ರಾಚ್ಯದಲ್ಲಿಯೂ ಸಹ ಗಮನಾರ್ಹವಾದ ಬೆಳವಣಿಗೆ ಕಂಡುಬಂದಿದೆ. ಇಲ್ಲಿ ವಾರ್ಷಿಕ ಬೇಡಿಕೆಯು ವರ್ಷದಿಂದ ವರ್ಷಕ್ಕೆ ಶೇ.42 ರಷ್ಟು ಹೆಚ್ಚಳವಾಗಿದೆ.

ಇನ್ನು 2022 ರಲ್ಲಿ ಆಭರಣ ಬೇಡಿಕೆಯಲ್ಲಿ ಸ್ವಲ್ಪಮಟ್ಟಿನ ಇಳಿಕೆ ಕಂಡುಬಂದಿದೆ. ಈ ವಿಭಾಗದಲ್ಲಿ ಶೇ.3 ರಷ್ಟು ಇಳಿಕೆ ಉಂಟಾಗಿದ್ದು, ಒಟ್ಟಾರೆ 2,086 ಟನ್‌ಗೆ ಬಂದು ನಿಂತಿತ್ತು. ಇದಕ್ಕೆ ಪ್ರಮುಖ ಕಾರಣ ಚೀನಾದ ವಾರ್ಷಿಕ ಆಭರಣ ಬೇಡಿಕೆಯಲ್ಲಿ ಇಳಿಕೆಯಾಗಿರುವುದು. ವರ್ಷದ ಬಹುತೇಕ ಸಮಯದವರೆಗೆ ಚೀನಾದಲ್ಲಿ ಕೋವಿಡ್-19 ಲಾಕ್ಡೌನ್ ನಿಂದಾಗಿ ಗ್ರಾಹಕ ಚಟುವಟಿಕೆಗಳು ಶೇ.15 ರಷ್ಟು ಇಳಿಕೆಯಾಗಿತ್ತು. ಅದೇ ರೀತಿ 4 ನೇ ತ್ರೈಮಾಸಿಕದಲ್ಲಿ ಚಿನ್ನದ ದರ ಹೆಚ್ಚಳವಾಗಿದ್ದರಿಂದ ಆಭರಣ ಬೇಡಿಕೆಯಲ್ಲಿ ವಾರ್ಷಿಕ ಇಳಿಕೆ ಕಂಡುಬಂದಿದೆ.

2022 ರಲ್ಲಿನ ಒಟ್ಟು ವಾರ್ಷಿಕ ಪೂರೈಕೆ ಶೇ.2 ರಷ್ಟು ಹೆಚ್ಚಳವಾಗಿದ್ದು, 4,755 ಟನ್‌ನಷ್ಟು ಪೂರೈಕೆಯಾಗಿದೆ. ಇನ್ನು ಮೈನ್ ಉತ್ಪಾದನೆಯಲ್ಲಿ ಏರಿಕೆ ಉಂಟಾಗಿದ್ದು, ನಾಲ್ಕು ವರ್ಷಗಳ ಹೆಚ್ಚಳಕ್ಕೆ ಕಾರಣವಾಗಿದೆ. ಇದರ ಪರಿಣಾಮ 3,612 ಟನ್‌ಗೆ ತಲುಪಿದೆ.

ಈ ಬಗ್ಗೆ ಮಾತನಾಡಿದ ವರ್ಲ್ಡ್ ಗೋಲ್ಡ್ ಕೌನ್ಸಿಲ್ ನ ಸೀನಿಯರ್ ಮಾರ್ಕೆಟ್ಸ್ ಅನಾಲಿಸ್ಟ್ ಲೂಯಿಸ್ ಸ್ಟ್ರೀಟ್ ಅವರು, “ಕಳೆದ ಒಂದು ದಶಕದಲ್ಲೇ ಅತ್ಯಧಿಕ ಎನಿಸುವಂತಹ ರೀತಿಯಲ್ಲಿ ಕಳೆದ ವರ್ಷ ವಾರ್ಷಿಕ ಚಿನ್ನದ ಬೇಡಿಕೆ ಹೆಚ್ಚಳವಾಗಿತ್ತು. ಇದು ಸುರಕ್ಷಿತ ಸ್ವತ್ತಿಗಾಗಿ ಸೆಂಟ್ರಲ್ ಬ್ಯಾಂಕ್ ಬೇಡಿಕೆಯಿಂದ ಭಾಗಶಃ ಚಾಲಿತವಾಗಿತ್ತು. ಹೆಚ್ಚುತ್ತಿರುವ ಬಡ್ಡಿ ದರಗಳು ಕೆಲವು ಇಟಿಎಫ್ ಹೊರಹರಿವುಗಳನ್ನು ಪ್ರೋತ್ಸಾಹಿಸಿದ ಪರಿಣಾಮ ಚಿನ್ನದ ವೈವಿಧ್ಯಮಯ ಬೇಡಿಕೆಯನ್ನು ಹೊಂದಿರುವವರು ಸಮತೋಲನ ರೀತಿಯ ಕಾರ್ಯವನ್ನು ನಿರ್ವಹಿಸಿದ್ದಾರೆ. ಆದರೆ, ಚಿನ್ನದ ಬಾರ್ ಮತ್ತು ನಾಣ್ಯ ಹೂಡಿಕೆಯ ಮೇಲೆ ಹಣದುಬ್ಬರ ಪ್ರಮಾಣ ಹೆಚ್ಚಳ ಕಂಡಿತು. ಅಂತಿಮವಾಗಿ, ಒಟ್ಟಾರೆ ಹೂಡಿಕೆ ಬೇಡಿಕೆಯು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.10 ರಷ್ಟು ಹೆಚ್ಚಾಗಿದೆ’’ ಎಂದರು.

ಇದನ್ನೂ ಓದಿ: Twitter accounts | ಟ್ವಿಟರ್‌ ಖಾತೆಗಳಿಗೆ ಗೋಲ್ಡ್‌, ಗ್ರೇ, ಬ್ಲೂ ಟಿಕ್‌ ಮಾರ್ಕ್‌ ಗುರುತು ಲಭ್ಯ, ಏನಿದರ ಅರ್ಥ ?

“ಇನ್ನು 2023 ರ ವಿಚಾರದಲ್ಲಿ, ಆರ್ಥಿಕ ಮುನ್ಸೂಚನೆಗಳು ಸವಾಲಿನ ವಾತಾವರಣ ಮತ್ತು ಜಾಗತಿಕ ಆರ್ಥಿಕ ಹಿಂಜರಿತವನ್ನು ಸೂಚಿಸುತ್ತಿವೆ. ಇದು ಚಿನ್ನದ ಹೂಡಿಕೆ ಪ್ರವೃತ್ತಿಗಳಲ್ಲಿನ ಪಾತ್ರವನ್ನು ಹಿಂದಿರುಗಿಸಲು ಕಾರಣವಾಗಬಹುದು. ಹಣದುಬ್ಬರ ಕಡಿಮೆಯಾದರೆ, ಇದು ಚಿನ್ನದ ಬಾರ್ ಮತ್ತು ನಾಣ್ಯ ಹೂಡಿಕೆಗೆ ಹೆಡ್ ವಿಂಡ್ ಆಗಿರಬಹುದು. ವ್ಯತಿರಿಕ್ತವಾಗಿ ಯುಎಸ್ ಡಾಲರ್ ನ ನಿರಂತರ ದುರ್ಬಲಗೊಳ್ಳುವಿಕೆ ಮತ್ತು ಬಡ್ಡಿ ದರದ ಏರಿಕೆಗಳ ಮಧ್ಯಮ ವೇಗವು ಚಿನ್ನದ ಬೆಂಬಲಿತ ಇಟಿಎಫ್ ಬೇಡಿಕೆಗೆ ಗುಣಾತ್ಮಕವಾದ ಪರಿಣಾಮಗಳನ್ನು ಉಂಟು ಮಾಡುವ ನಿರೀಕ್ಷೆ ಇದೆ’’ ಎಂದು ಅವರು ಹೇಳಿದರು.

Exit mobile version