Site icon Vistara News

‘ಹಮಾಸ್’ ಉಗ್ರ ಸಂಘಟನೆ ಎಂದು ಭಾರತ ಘೋಷಿಸಿತಾ? ಸಚಿವೆ ಮೀನಾಕ್ಷಿ ಲೇಖಿ ಹೇಳೋದೇನು?

Did India declared hamas as terror organization? What Meenakshi Lekhi Said?

ನವದೆಹಲಿ: ಹಮಾಸ್ (Hamas) ಸಂಘಟನೆಯನ್ನು ಉಗ್ರ ಸಂಘಟನೆಯನ್ನು (Terror Organization) ಘೋಷಿಸುವ ಯಾವುದೇ ಪತ್ರಕ್ಕೆ ಸಹಿ ಹಾಕಿಲ್ಲ ಎಂದು ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ (Union Minister Meenakshi Lekhi) ಅವರು ಸ್ಪಷ್ಟಪಡಿಸಿದ್ದಾರೆ. ಹಮಾಸ್ ಸಂಘಟನೆಯನ್ನು ಉಗ್ರ ಸಂಘಟನೆ ಎಂದು ಘೋಷಿಸಲಾಗಿದೆಯೇ ಎಂಬ ಚುಕ್ಕೆ ಗುರುತಿನ ಪ್ರಶ್ನೆಗೆ ಅವರು ಲೋಕಸಭೆಯಲ್ಲಿ (Lok Sabha) ಉತ್ತರಿಸಿದ್ದಾರೆ.

ಲೇಖಿ ಅವರ ಟ್ವೀಟ್ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವರು ಸ್ಪಷ್ಟನೆ ನೀಡಿತ್ತು. ಇದರಲ್ಲಿ ತಾಂತ್ರಿಕ ದೋಷ ಇದೆ ಎಂದು ಹೇಳಿರುವ ಮೀನಾಕ್ಷಿ ಲೇಖಿ ಕೇಂದ್ರ ವಿದೇಶಾಂಗ ವ್ಯವಹಾರಗಳು ಮತ್ತು ಸಂಸ್ಕೃತಿ ರಾಜ್ಯ ಸಚಿವೆ ಮತ್ತು ನವದೆಹಲಿ ಕ್ಷೇತ್ರದ ಸಂಸದರಾಗಿದ್ದಾರೆ.

ನಿಮಗೆ ತಪ್ಪು ಮಾಹಿತಿ ನೀಡಲಾಗಿದೆ. ನಾನು ಈ ಪ್ರಶ್ನೆ ಮತ್ತು ಈ ಉತ್ತರದೊಂದಿಗೆ ಯಾವುದೇ ಪೇಪರ್‌ಗೆ ಸಹಿ ಮಾಡಿಲ್ಲಎಂದು ಲೇಖಿ ಅವರು ಎಕ್ಸ್‌ ವೇದಿಕೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಅನ್ನು ಅವರು ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಪ್ರಧಾನ ಮಂತ್ರಿ ಕಚೇರಿಯನ್ನು ಟ್ಯಾಗ್ ಮಾಡಿದ್ದಾರೆ.

ಏತನ್ಮಧ್ಯೆ, ಶಿವಸೇನಾ (ಯುಬಿಟಿ) ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು ಲೇಖಿ ಅವರ ಸ್ಪಷ್ಟೀಕರಣ ಕುರಿತು ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. “ಮೀನಾಕ್ಷಿ ಲೇಖಿ ಜೀ ಅವರು ತಮ್ಮ ಪ್ರತಿಕ್ರಿಯೆಯನ್ನು ನಿರಾಕರಿಸುತ್ತಿದ್ದಾರೆ ಮತ್ತು ಸಂಬಂಧ ಇಲ್ಲ ಎಂದು ಹೇಳುತ್ತಿದ್ದಾರೆ. ಪ್ರತಿಕ್ರಿಯೆಯಾಗಿ ಈ ಕರಡು ಯಾರು ರಚಿಸಿದವರು ಯಾರು ಎಂದು ತಿಳಿದಿಲ್ಲ ಎಂದು ಹೇಳುತ್ತಾರೆಂದು ಹೇಳಿದ್ದಾರೆ.

ಹಮಾಸ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸುವ ಯಾವುದೇ ಪ್ರಸ್ತಾಪವನ್ನು ಭಾರತ ಸರ್ಕಾರ ಹೊಂದಿದೆಯೇ ಮತ್ತು ಇಸ್ರೇಲ್ ಸರ್ಕಾರವು ಯಾವುದೇ ಬೇಡಿಕೆಯನ್ನು ಇಟ್ಟಿದೆಯೇ ಎಂಬ ಬಗ್ಗೆ ಪ್ರತಿಕ್ರಿಯೆಯನ್ನು ಕೋರಿ ಕಾಂಗ್ರೆಸ್ ಸಂಸದ ಕುಂಬಕುಡಿ ಸುಧಾಕರನ್ ಅವರು ಈ ಪ್ರಶ್ನೆಯನ್ನು ಕೇಳಿದ್ದರು. ಆದರೆ, ಈ ಪ್ರಶ್ನೆಗೆ ಮೀನಾಕ್ಷಿ ಲೇಖಿ ಅಂಥ ಯಾವುದೇ ಪತ್ರಕ್ಕೆ ಸಹಿ ಹಾಕಿಲ್ಲ ಎಂದು ಹೇಳಿದ್ದಾರೆ.

ಭಾರತದಲ್ಲಿನ ಇಸ್ರೇಲ್ ರಾಯಭಾರಿ ನೌರ್ ಗಿಲೋನ್ ಅವರು ಹಮಾಸ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸುವ ವಿಷಯವನ್ನು ಪ್ರಸ್ತಾಪಿಸಿದ್ದಾರೆ ಮತ್ತು ಕೇಂದ್ರ ಸರ್ಕಾರ ಈ ಘೋಷಣೆ ಮಾಡಬೇಕೆಂದು ವಿನಂತಿಸಿದ್ದಾರೆ. ಆದರೆ ಭಾರತ ಸರ್ಕಾರವು ಪ್ಯಾಲೆಸ್ತೀನ್ ಗುಂಪನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿಲ್ಲ.

ಈ ಸುದ್ದಿಯನ್ನೂ ಓದಿ: Israel Palestine War: ಅರ್ಧದಷ್ಟು ಹಮಾಸ್ ಕಮಾಂಡರ್‌ಗಳು ಫಿನಿಷ್! ಇಸ್ರೇಲ್ ಹೇಳಿಕೆ

Exit mobile version