Site icon Vistara News

Aadhaar Card: ಆಧಾರ್ ಅಪ್‌ಡೇಟ್‌ಗಾಗಿ ನಿಮ್ಮ ಗುರುತು, ವಿಳಾಸದ ದಾಖಲೆಗಳನ್ನು ವಾಟ್ಸಾಪ್, ಇ ಮೇಲ್ ಮಾಡಬೇಡಿ!

Aadhaar card

ನವದೆಹಲಿ: ಜನರು ತಮ್ಮ ಆಧಾರ್ ಕಾರ್ಡ್ ನವೀಕರಿಸುವ (Aadhaar Card Update) ಉದ್ದೇಶಕ್ಕಾಗಿ ತಮ್ಮ ಗುರುತಿನ (Proof of Identity) ಅಥವಾ ವಿಳಾಸ ಪುರಾವೆ ದಾಖಲೆಗಳನ್ನು (Identity of Address) ಇಮೇಲ್ (E mail) ಅಥವಾ ವಾಟ್ಸಾಪ್ (WhatsApp) ಮೂಲಕ ಹಂಚಿಕೊಳ್ಳದಂತೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಎಚ್ಚರಿಕೆ ನೀಡಿದೆ. ಈ ರೀತಿ ತಮ್ಮ ದಾಖಲೆಗಳನ್ನು ಹಂಚಿಕೊಳ್ಳಲು ಯುಐಡಿಎಐ ಸಂಸ್ಥೆಯೂ ಎಂದಿಗೂ ಕೇಳುವುದಿಲ್ಲ. ಒಂದೊಮ್ಮೆ ರೀತಿಯ ವಿನಂತಿಗಳು ನಿಮಗೆ ಬಂದರೆ ಖಂಡಿತವಾಗಿಯೂ ಅವು ನಿಮ್ಮನ್ನು ಮೋಸ ಮಾಡುವ ಪ್ರಯತ್ನಗಳಾಗಿರುತ್ತವೆ. ಹಾಗಾಗಿ, ಯಾವುದೇ ಕಾರಣಕ್ಕೂ ನಿಮ್ಮ ಗುರುತಿನ ವಿಳಾಸ ಪುರಾವೆ ದಾಖಲೆಗಳನ್ನು ವಾಟ್ಸಾಪ್, ಇಮೇಲ್ ಮೂಲಕ ಹಂಚಿಕೊಳ್ಳಲು ಹೋಗಬೇಡಿ! ಒಂದೊಮ್ಮೆ ನೀವೇನಾದರೂ ನಿಮ್ಮ ಗುರುತು ಮತ್ತು ವಿಳಾಸದ ಪುರಾವೆಗಳ ಮಾಹಿತಿಯನ್ನು ಹಂಚಿಕೊಂಡರೆ ಅಪಾಯಕ್ಕೆ ಸಿಲುಕಿಕೊಳ್ಳುವ ಸಾಧ್ಯತೆಗಳಿರುತ್ತವೆ.

ಯುಐಡಿಎಐ ನಿಮ್ಮ ಆಧಾರ್ ಅನ್ನು ಇಮೇಲ್ ಅಥವಾ ವಾಟ್ಸಾಪ್ ಮೂಲಕ ನವೀಕರಿಸಲು ನಿಮ್ಮ ಗುರುತಿನ ಪುರವಾ ದಾಖಲೆ (POI) / ವಿಳಾಸ ಪುರಾವೆ (POA) ದಾಖಲೆಗಳನ್ನು ಹಂಚಿಕೊಳ್ಳಲು ಎಂದಿಗೂ ಕೇಳುವುದಿಲ್ಲ. #myAadhaarPortal ಮೂಲಕ ಆನ್‌ಲೈನ್‌ನಲ್ಲಿ (myAadhaarPortal) ನಿಮ್ಮ ಆಧಾರ್ ಅನ್ನು ನವೀಕರಿಸಿ ಅಥವಾ ನಿಮ್ಮ ಸಮೀಪದ ಆಧಾರ್ ಕೇಂದ್ರಗಳಿಗೆ ಭೇಟಿ ನೀಡಿ. ಇವುಗಳ ಹೊರತಾಗಿ ಬೇರೆ ಯಾವುದೇ ಮಾರ್ಗದಲ್ಲಿ ಆಧಾರ್ ಅಪ್‌ಡೇಟ್ ಮಾಡಲು ಸಾಧ್ಯವಿಲ್ಲ.

ಕಳೆದ ವರ್ಷದ ಆರಂಭದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿನ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು ಜನರು ತಮ್ಮ ಆಧಾರ್ ಕಾರ್ಡ್‌ಗಳ ಫೋಟೊಕಾಪಿಗಳನ್ನು ಯಾವುದೇ ಸಂಸ್ಥೆಗಳೊಂದಿಗೆ ಹಂಚಿಕೊಳ್ಳದಂತೆ ಸಲಹೆ ನೀಡಿತ್ತು. ಏಕೆಂದರೆ ಆಧಾರ್ ಕಾರ್ಡ್ ದುರ್ಬಳಕೆಯಾಗಬಹುದಾದ ಸೂಕ್ಷ್ಮ ವೈಯಕ್ತಿಕ ಮಾಹಿತಿಯನ್ನು ಒಳಗೊಂಡಿದೆ ಎಂದು ತಿಳಿಸಿತ್ತು. ಹಾಗಾಗಿ, ಯಾವುದೇ ಕಾರಣಕ್ಕೂ ಹಂಚಿಕೊಳ್ಳದಂತೆ ಜನರಿಗೆ ಎಚ್ಚರಿಕೆ ನೀಡಿತ್ತು.

Aadhaar Card: ಪಿಎಂ ಮೋದಿ, ಸಿಎಂ ಯೋಗಿ ಆಧಾರ್ ಕಾರ್ಡ್ ತಿದ್ದಿದ ಬಿಹಾರದ ಖತರ್ನಾಕ್ ವ್ಯಕ್ತಿ ಅರೆಸ್ಟ್!

ಪ್ರಧಾನಿ ನರೇಂದ್ರ ಮೋದಿ (PM Narendra Modi) ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ (Uttar Pradesh Chief Minister Yogi Adityanath) ಅವರ ಆಧಾರ್ ಕಾರ್ಡ್ (Aadhaar Card) ತಿದ್ದಿದ ಬಿಹಾರದ ಮುಜಾಫರ್‌ಪುರ್ ಜಿಲ್ಲೆಯ ವ್ಯಕ್ತಿಯೊಬ್ಬನನ್ನು ಗುಜರಾತ್ (Gujarat Police) ಹಾಗೂ ಬಿಹಾರ (Bihar Police) ಪೊಲೀಸರು ಜಂಟಿಯಾಗಿ ಗುರುವಾರ ಬಂಧಿಸಿದ್ದಾರೆ. ಪ್ರಧಾನಿ ಹಾಗೂ ಮುಖ್ಯಮಂತ್ರಿಯ ಆಧಾರ್ ಕಾರ್ಡನ್ನೇ ತಿದ್ದುವಾಗ ಸಾಮಾನ್ಯರ ಆಧಾರ್ ಕಾರ್ಡ್ ಮಾಹಿತಿಯ ಗತಿ ಏನು ಎಂಬ ಅಸಮಾಧಾನ ಸಾರ್ವಜನಿಕರು ಹೊರ ಹಾಕಿದ್ದರು. ಅಂತಿಮವಾಗಿ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಸುದ್ದಿಯನ್ನೂ ಓದಿ: PAN Card: ಆಧಾರ್ ಬಳಸಿಕೊಂಡು ಪ್ಯಾನ್‌ ಅಡ್ರೆಸ್ ಚೇಂಜ್ ಮಾಡಬಹುದು! ಈ ಸ್ಟೆಪ್ಸ್ ಫಾಲೋ ಮಾಡಿ…

ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿ ಅವರ ಆಧಾರ್ ಕಾರ್ಡ್ ತಿದ್ದಿದ ಅರ್ಪಣಾ ದುಬೆ ಅಲಿಯಾಸ್ ಮದನ್ ಕುಮಾರ್ ಎಂಬ ವ್ಯಕ್ತಿಯನ್ನು ಮುಜಾಫರ್‌ಪುರ್ ಜಿಲ್ಲೆಯ ಸಾದತ್‌ಪುರ್ ಪ್ರದೇಶದಲ್ಲಿ ಅರೆಸ್ಟ್ ಮಾಡಲಾಗಿದೆ ಎಂದು ಮುಜಾಫರ್‌ಪುರ್ ಜಿಲ್ಲಾ ಪೊಲೀಸ್ ಹಿರಿಯ ಅಧಿಕಾರಿ ರಾಕೇಶ್ ಕುಮಾರ್ ಅವರು ತಿಳಿಸಿದ್ದಾರೆ.

ಆರೋಪಿಯು ಮುಜಾಫರ್ ಪುರ್ ಜಿಲ್ಲೆಯ ಗರಿಬಾ ಗಾಂವ್ ಎಂಬ ಹಳ್ಳಿಯವನಾಗಿದ್ದಾನೆ. ಕಂಠಿ ಪೊಲೀಸ್ ಸ್ಟೇಷನ್ ವ್ಯಾಪ್ತಿಯ ಸಾದತ್‌ಪುರ ಪ್ರದೇಶದ ಕಾಲೇಜೊಂದರಲ್ಲಿ ಪದವಿ ಓದುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಗುಜರಾತ್‌ದಿಂದ ಆಗಮಿಸಿದ ಪೊಲೀಸ್ ತಂಡಕ್ಕೆ ಸ್ಥಳೀಯ ಪೊಲೀಸರು ನೆರವು ನೀಡಿದ್ದರು. ವೆಬ್‌ಸೈಟ್‌ನಲ್ಲಿ ಆಧಾರ್ ಕಾರ್ಡ್ ತಿದ್ದುವ ಪ್ರಯತ್ನಗಳು ನಡೆದಿರುವ ಬಗ್ಗೆ ಮಾಹಿತಿ ದೊರೆತಿತ್ತು. ಈ ಕುರಿತು ಐಪಿ ಅಡ್ರೆಸ್ ಪರಿಶೀಲಿಸಿದಾಗ ಆರೋಪಿಯ ಸಿಕ್ಕಿಬಿದ್ದಿದ್ದಾನೆ ಎಂದು ಬಿಹಾರ ಪೊಲೀಸರು ತಿಳಿಸಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version