Site icon Vistara News

Viral Video: 100 ಕಿ.ಮೀ ವೇಗದಲ್ಲಿ ಚಲಿಸಿದ ಚಾಲಕ ರಹಿತ ಗೂಡ್ಸ್ ಟ್ರೈನ್! ತಪ್ಪಿದ ಭಾರೀ ಅನಾಹುತ

driverless goods train runs at a speed of 100km, Video Viral

ಪಠಾಣಕೋಟ್: ಚಾಲಕನಿಲ್ಲದ ಗೂಡ್ಸ್ ರೈಲೊಂದು (Driverless Train) ಗಂಟೆಗೆ 100 ಕಿ.ಮೀ ಸ್ಪೀಡ್‌ನಲ್ಲಿ ಸುಮಾರು 70 ಕಿಲೋ ಮೀಟರ್ ಸಂಚರಿಸಿದ ಘಟನೆಯೊಂದು ಪಂಜಾಬ್‌ನಲ್ಲಿ (Punjab State) ನಡೆದಿದೆ. ಅದೃಷ್ಟವಶಾತ್, ಈ ಗೂಡ್ಸ್ ರೈನಿಂದಾಗಿ (Goods Rail) ಯಾವುದೇ ಅವಘಡಗಳು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಚಾಲಕ ರಹಿತ ಗೂಡ್ಸ್ ರೈಲಿನ ಸಂಚಾರದ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (video Viral) ಆಗಿದೆ.

ಪಠಾಣಕೋಟ್‌ ರೈಲ್ವೆ ಸ್ಟೇಷನ್‌ನಲ್ಲಿ ಚಾಲಕ ರೈಲಿನಿಂದ ಇಳಿಯುವ ಮೂದಲ ಬ್ರೇಕ್ ಎಳೆಯುವುದನ್ನು ಮರೆತಿದ್ದಾನೆ. ಹಾಗಾಗಿ, ಅದು ನಿಧಾನವಾಗಿ ಇಳಿಜಾರು ಮಾರ್ಗದಲ್ಲಿ ಚಲಿಸಲಾರಂಭಿಸಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಕಲ್ಲುಗಳಿಂದ ತುಂಬಿದ್ದ ಈ ಗೂಡ್ಸ್ ರೈಲನ್ನು ಉಚ್ಚಿ ಬಸ್ಸಿಯಲ್ಲಿ ನಿಲ್ಲಿಸುವ ಮೊದಲು ಗಂಟೆಗೆ ಸುಮಾರು 100 ಕಿ.ಮೀ. ವೇಗದಲ್ಲಿ ಐದು ನಿಲ್ದಾಣಗಳನ್ನು ದಾಟಿಕೊಂಡು ಬಂದಿತ್ತು. ಇಷ್ಟೊಂದು ವೇಗವಾಗಿ ಚಲಿಸುತ್ತಿದ್ದ ರೈಲನ್ನು ನಿಲ್ಲಿಸುವುದು ಸುಲಭದ ಮಾತಾಗಿರಲಿಲ್ಲ. ಅಂತಿಮವಾಗಿ ರೈಲು ಹಳಿಗಳ ಮೇಲೆ ಮರದ ದಿಮ್ಮಿಗಳನ್ನು ಅಡ್ಡಲಾಗಿ ಇಟ್ಟು, ರೈಲನ್ನು ನಿಲ್ಲಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ‘ಚಾಲಕ ರಹಿತ ರೈಲು’ ಅವಘಡಿಂದಾಗಿ ಯಾವುದೇ ಸಾವು ನೋವು ಸಂಭವಿಸಿಲ್ಲ. 53 ಬೋಗಿಗಳನ್ನು ಹೊಂದಿದ್ದ ಈ ಗೂಡ್ಸ್ ರೈಲು, ಪಂಜಾಬ್‌ನಿಂದ ಜಮ್ಮುಗೆ ಹೊರಟಿತ್ತು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಚಾಲಕ ರಹಿತ ಗೂಡ್ಸ್ ರೈಲು ಓಡತ್ತಿರುವ ದೃಶ್ಯಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿವೆ. ಈ ವಿಡಿಯೋದಲ್ಲಿ ವೇಗದ ರೈಲು ನಿಲ್ದಾಣದಿಂದ ಪಾಸ್ ಆಗುತ್ತಿರುವುದನ್ನು ಕಾಣಬಹುದು.

ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಪ್ಪಿಸಲು ಯಾವುದೇ ಸಂಭಾವ್ಯ ಸುರಕ್ಷತಾ ಲೋಪಗಳನ್ನು ಗುರುತಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಅವರು ಹೇಳಿದ್ದಾರೆ.

ಈ ಸುದ್ದಯನ್ನೂ ಓದಿ: Viral Video: ಪ್ರಾಣ ಒತ್ತೆ ಇಟ್ಟು ಮರಿ ಆನೆಯನ್ನು ರಕ್ಷಿಸಿದ ಅರಣ್ಯಾಧಿಕಾರಿಗಳು; ಕೊನೆಗೆ ತಾಯಿ ಆನೆ ಮಾಡಿದ್ದೇನು? ವಿಡಿಯೊ ನೋಡಿ

Exit mobile version