Site icon Vistara News

Economy of India: 20 ವರ್ಷಗಳಲ್ಲಿ ಭಾರತದ ಆರ್ಥಿಕ ಅಸಮಾನತೆ ಏರಿಕೆ; ಎಷ್ಟಾಗಿದೆ ನೋಡಿ

notes

ಹೊಸದಿಲ್ಲಿ: ಭಾರತದಲ್ಲಿ ಆರ್ಥಿಕ ಅಸಮಾನತೆಯು (economic disparity) 2000ರಲ್ಲಿ ಶೇಕಡಾ 74.6 ಇತ್ತು. 2022ರಲ್ಲಿ ಶೇಕಡಾ 82.5ಕ್ಕೆ ಏರಿದೆ ಎಂದು ಯೂನಿಯನ್ ಬ್ಯಾಂಕ್ ಆಫ್ ಸ್ವಿಟ್ಜರ್ಲೆಂಡ್ (UBS) ನಡೆಸಿದ 2023ರ ಜಾಗತಿಕ ಶ್ರೀಮಂತಿಕೆ ವರದಿ (ಗ್ಲೋಬಲ್ ವೆಲ್ತ್ ರಿಪೋರ್ಟ್- global wealth report)‌ ತಿಳಿಸಿದೆ.

ಈ ವರದಿ ಭಾರತದ ಆರ್ಥಿಕತೆಯ (Economy of India) ಸ್ಥಿತಿಗತಿಯನ್ನೂ ಬಿಚ್ಚಿಟ್ಟಿದೆ. ಇದರ ಪ್ರಕಾರ ಭಾರತದಲ್ಲಿ ಪ್ರೌಢವಯಸ್ಕರ ತಲಾ ಸರಾಸರಿ ಆಸ್ತಿ ಸುಮಾರು 14 ಲಕ್ಷ ರೂ. ಆದರೆ ಈ ಅಂಕಿ ಅಂಶ ಜಾಗತಿಕ ಸರಾಸರಿಗಿಂತ ಐದು ಪಟ್ಟು ಕಡಿಮೆ. ಜಾಗತಿಕ ಸರಾಸರಿ ಎಷ್ಟಿದೆ ಅಂದರೆ $84,718 ಅಥವಾ ಸುಮಾರು 70 ಲಕ್ಷ ರೂ.

ಸಮೀಕ್ಷೆಯ ಮತ್ತೊಂದು ಗಮನಾರ್ಹ ಅಂಶ ಅಂದರೆ 2000ರಿಂದ ಭಾರತದಲ್ಲಿ ತಲಾ ಸರಾಸರಿ ಸಂಪತ್ತು ವಾರ್ಷಿಕ 8.7 ಪ್ರತಿಶತದಷ್ಟು ಬೆಳೆದಿದೆ! ಇನ್ನೊಂದು ಆಶ್ಚರ್ಯಕರ ಅಂಶ ಅಂದರೆ ಈ ದರವು ಜಾಗತಿಕ ಸರಾಸರಿ ದರಕ್ಕಿಂತ ಎರಡು ಪಟ್ಟು ಹೆಚ್ಚು. ಭಾರತೀಯರಲ್ಲಿ ಆಸ್ತಿ ಕ್ರೋಢೀಕರಣ ಪ್ರತಿ ವರ್ಷ ಶೇಕಡಾ 8.7ರಷ್ಟು ಏರುತ್ತಿದೆ. ಆದರೆ ಜಾಗತಿಕ ಸರಾಸರಿ ಶೇಕಡಾ 4.6ರಷ್ಟಿದೆ. 2022ರ ವೇಳೆಗೆ ಭಾರತದಲ್ಲಿ ಒಟ್ಟು 8.49 ಲಕ್ಷ ಬಿಲಿಯನೇರ್‌ಗಳು ಅಸ್ತಿತ್ವದಲ್ಲಿದ್ದರು. ಇದರಲ್ಲಿ USD 100 ಮಿಲಿಯನ್‌ಗಿಂತಲೂ ಹೆಚ್ಚಿನ ಆಸ್ತಿ ಹೊಂದಿರುವ 5,480 ವ್ಯಕ್ತಿಗಳು ಸೇರಿದ್ದಾರೆ.

ಪಾಕಿಸ್ತಾನ ಮತ್ತು ನೇಪಾಳ ಆರ್ಥಿಕ ಪರಿಸ್ಥಿತಿ ಭಾರತದ ಮುಂದೆ ಮಂಕಾಗಿದೆ. ಇಲ್ಲಿನ ವಯಸ್ಕರ ತಲಾ ಸರಾಸರಿ ಸಂಪತ್ತು ಸುಮಾರು ರೂ. 4 ಲಕ್ಷ. ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶಗಳು ಕ್ರಮವಾಗಿ 6 ​​ಲಕ್ಷ ಮತ್ತು 8 ಲಕ್ಷ ರೂಪಾಯಿಗಳ ಅಂಕಿಅಂಶ ಪ್ರದರ್ಶಿಸಿವೆ. ಆರ್ಥಿಕ ಕ್ಷೇತ್ರದಲ್ಲಿ, 2022ರಲ್ಲಿ ಭಾರತದ GDP (India GDP) 6.8ರಷ್ಟು ಏರಿಕೆಯಾಗಿದೆ. ಚೀನಾ 3 ಶೇಕಡಾ ಬೆಳವಣಿಗೆಯ ದರದೊಂದಿಗೆ ಹಿಂದುಳಿದಿದೆ.

ಈ ಅಂಕಿಅಂಶದ ಹಿಂದಿನ ಚಾಲನಾ ಶಕ್ತಿಯು COVID-19 ಸಾಂಕ್ರಾಮಿಕ ರೋಗದ ಲಾಕ್‌ಡೌನ್‌ ನಂತರದ ಚೇತರಿಕೆ. ಇತ್ತೀಚಿನ ಲೆಕ್ಕ ಪ್ರಕಾರ 2027ರ ವೇಳೆಗೆ ಭಾರತ ಮತ್ತು ಚೀನಾ ಎರಡೂ ತಮ್ಮ ಬಿಲಿಯನೇರ್‌ಗಳ ಸಂಖ್ಯೆಯನ್ನು ದ್ವಿಗುಣಗೊಳಿಸಲು ಸಿದ್ಧವಾಗಿವೆ. ಚೀನಾ 1.31 ಕೋಟಿ ಬಿಲಿಯನೇರ್‌ಗಳನ್ನು ಹೊಂದಲಿದೆ. ಭಾರತ 14.36 ಲಕ್ಷ ಬಿಲಿಯನೇರ್‌ಗಳನ್ನು ಹೊಂದಲಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: Economy of India : ಅಮೆರಿಕವನ್ನೂ ಹಿಂದಿಕ್ಕಿ 2ನೇ ಶ್ರೀಮಂತ ದೇಶವಾಗಲಿದೆ ಭಾರತ: ಗೋಲ್ಡ್‌ಮನ್‌ ಸ್ಯಾಕ್ಸ್‌ ಭವಿಷ್ಯ

Exit mobile version