Site icon Vistara News

Election Results 2024: ಸುದೀರ್ಘ ಅವಧಿಗೆ ಪ್ರಧಾನಿ ಆಗ್ತಾರಾ ಮೋದಿ?; ನೆಹರೂ, ಇಂದಿರಾ ಸಾಲಿಗೆ ಸೇರೋದು ಪಕ್ಕಾನಾ?

Narendra Modi

Election Results 2024

ನವದೆಹಲಿ: ಲೋಕಸಮರದ ಜನಾದೇಶ(Election Results 2024) ಹೊರಬಿದ್ದಿದೆ. ಕೇಂದ್ರದಲ್ಲಿ ಬಿಜೆಪಿ(BJP) ನೇತೃತ್ವ ಎನ್‌ಡಿಎ ಸರ್ಕಾರ(NDA) ಮತ್ತೆ ಅಧಿಕಾರಕ್ಕೆ ಬರುವುದು ಖಚಿತವಾಗಿದೆ. ಇನ್ನು ಹ್ಯಾಟ್ರಿಕ್‌ ಗೆಲುವು ಸಾಧಿಸಿರುವ ಪ್ರಧಾನಿ ಮೋದಿ(PM Narendra Modi) ಮೂರನೇ ಬಾರಿ ಪ್ರಧಾನಿಯಾಗಿ ಗದ್ದುಗೆ ಏರುತ್ತಿದ್ದಾರೆ. ನರೇಂದ್ರ ಮೋದಿ ಪ್ರಧಾನಿಯಾಗಿ ಈ ಐದು ವರ್ಷ ಪೂರ್ಣಗೊಳಿಸಿದರೆ ಅವರು ಅತಿ ಸುದೀರ್ಘವಾಗಿ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆಗೆ ಇರುವ ಜವಾಹರಲಾಲ್‌ ನೆಹರೂ(Jawaharlal Nehru) ಮತ್ತು ಇಂದಿರಾಗಾಂಧಿ(Indira Gandhi) ಸಾಲಿಗೆ ಸೇರಲಿದ್ದಾರೆ.

ಈಗಾಗಲೇ ಎರಡು ಬಾರಿ ಪ್ರಧಾನಿಯಾಗಿರುವ ಮೋದಿ 10 ವರ್ಷ 19 ದಿನ ಅಧಿಕಾರದಲ್ಲಿದ್ದಾರೆ.
10 ವರ್ಷ ಆಡಳಿತ ನಡೆಸಿದ ಪ್ರಧಾನಿಗಳ ಪಟ್ಟಿಯಲ್ಲಿ ಮೋದಿ ನಾಲ್ಕನೇಯವರಾಗಿದ್ದಾರೆ. ಮೂರನೇ ಬಾರಿಯೂ ತಮ್ಮ ಅಧಿಕಾರ ಅವಧಿಯನ್ನು ಪೂರ್ಣಗೊಳಿಸಿದಲ್ಲಿ ಈ ಸಾಧನೆ ಮಾಡಿದ ಮೊದಲ ಪ್ರಧಾನಿ ಎನ್ನುವ ದಾಖಲೆಗೆ ಮೋದಿ ಪಾತ್ರರಾಗಿದ್ದಾರೆ.

ಜವಾಹರಲಾಲ್‌ ನೆಹರೂ

ಜವಾಹರಲಾಲ್ ನೆಹರು ಭಾರತದ ಮೊದಲ ಮತ್ತು ದೀರ್ಘಾವಧಿಯ ಪ್ರಧಾನ ಮಂತ್ರಿಯಾಗಿದ್ದರು. ದೀರ್ಘಾವಧಿಗೆ ಪ್ರಧಾನಿಯಾದವರ ಪಟ್ಟಿಯಲ್ಲಿ ನೆಹರು(16 ವರ್ಷ 286 ದಿನ) ಮೊದಲ ಸ್ಥಾನದಲ್ಲಿದ್ದಾರೆ. ಅವರು 1947 ರಿಂದ 1964ರಲ್ಲಿ ವಿಧಿವಶರಾಗುವವರೆಗೆ ಪ್ರಧಾನಿಯಾಗಿ ಮುಂದುವರೆದಿದ್ದರು. ಆಧುನಿಕ ಭಾರತವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ನೆಹರೂ ಅವರು ದೊಡ್ಡ ಕಾರ್ಖಾನೆಗಳು ಮತ್ತು ಅಣೆಕಟ್ಟುಗಳು ಸೇರಿದಂತೆ ಹಲವಾರು ಪ್ರಮುಖ ಯೋಜನೆಗಳನ್ನು ಪ್ರಾರಂಭಿಸಿದರು ಮತ್ತು ವೈಜ್ಞಾನಿಕ ಶಿಕ್ಷಣವನ್ನು ಉತ್ತೇಜಿಸಿದರು. ಅವರು ಶೀತಲ ಸಮರದ ಸಮಯದಲ್ಲಿ ಯುಎಸ್ ಮತ್ತು ಸೋವಿಯತ್ ಒಕ್ಕೂಟದಿಂದ ಸ್ವತಂತ್ರವಾಗಿ ದೇಶವನ್ನು ಉಳಿಸಿಕೊಂಡು ಅಲಿಪ್ತ ಭಾರತದ ವಿದೇಶಾಂಗ ನೀತಿಯನ್ನು ಸ್ಥಾಪಿಸಲು ಸಹಾಯ ಮಾಡಿದರು.

ಇಂದಿರಾ ಗಾಂಧಿ (1966ರಿಂದ1977, 1980ರಿಂದ1984)

ಜವಾಹರಲಾಲ್ ನೆಹರೂ ಅವರ ಪುತ್ರಿ ಇಂದಿರಾ ಗಾಂಧಿ ಒಟ್ಟು 15 ವರ್ಷ 350 ದಿನಗಳ ಕಾಲ ಪ್ರಧಾನಿಯಾಗಿದ್ದರು. ಇಂದಿರಾಗಾಂಧಿ(15 ವರ್ಷ 350 ದಿನ) ಎರಡನೇ ಸ್ಥಾನದಲ್ಲಿದ್ದಾರೆ. ಪ್ರಧಾನಿ ಮೋದಿ 10 ವರ್ಷ 19 ದಿನ ಆಡಳಿತ ನಡೆಸಿ ಮೂರನೇ ಸ್ಥಾನದಲ್ಲಿದ್ದಾರೆ. 1975ರಲ್ಲಿ ತುರ್ತುಪರಿಸ್ಥಿತಿಯ ಜಾರಿ, ಆಪರೇಷನ್‌ ಬ್ಲೂ ಸ್ಟಾರ್‌ ಕಾರ್ಯಾಚರಣೆ ಸೇರಿದಂತೆ ಹಲವು ದಿಟ್ಟ ಮತ್ತು ವಿವಾದಾತ್ಮಕ ನಿರ್ಧಾರಗಳಿಗೆ ಹೆಸರುವಾಸಿಯಾಗಿದ್ದರು. ತುರ್ತು ಪರಿಸ್ಥಿತಿ ಹೇರಿಕೆ ವಿರುದ್ಧ ದೇಶಾದ್ಯಂತ ಜನಾಕ್ರೋಶ ಭುಗಿಲೆದ್ದು ಇಂದಿರಾ ಗಾಂಧಿ 1977ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಇಂದಿರಾ ಗಾಂಧಿ ಅವರು ಹೀನಾಯ ಹಿನ್ನಡೆ ಕಂಡು ಅಧಿಕಾರ ತ್ಯಜಿಸಬೇಕಾಯಿತು. ಆದರೆ 1980ರಲ್ಲಿ ಅವರು ಮತ್ತೆ ಭರ್ಜರಿ ಬಹುಮತದಿಂದ ಅಧಿಕಾರಕ್ಕೆ ಮರಳಿದರು. ಆದರೆ 1984ರಲ್ಲಿ ಸಿಖ್‌ ಭಯೋತ್ಪಾದನೆಗೆ ಬಲಿಯಾದರು.

ಅಟಲ್ ಬಿಹಾರಿ ವಾಜಪೇಯಿ (1996, 1998-2004)

ನುರಿತ ವಾಗ್ಮಿ ಮತ್ತು ದೂರದೃಷ್ಟಿಯ ನಾಯಕ, ಅಟಲ್ ಬಿಹಾರಿ ವಾಜಪೇಯಿ ಅವರು ಮೂರು ಬಾರಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು. ಒಮ್ಮೆ 13 ದಿನ, ಮತ್ತೊಮ್ಮೆ 13 ತಿಂಗಳಷ್ಟೇ ಅವರು ಪ್ರಧಾನಿಯಾಗಿದ್ದರು. ಆದರೆ 1998ರಿಂದ 2004ರ ಅವರು ಪೂರ್ಣಾವಧಿ ಪ್ರಧಾನಿಯಾಗಿದ್ದರು. ಒಂದೆಡೆ ಪರಮಾಣು ಪರೀಕ್ಷೆಯ ದಿಟ್ಟತನ ಮತ್ತು ಇನ್ನೊಂದೆಡೆ ಪಾಕಿಸ್ತಾನದೊಂದಿಗೆ ಶಾಂತಿಯನ್ನು ಬೆಳೆಸುವ, ಸಂದರ್ಭ ಬಂದಾಗ ಅದಕ್ಕೆ ಬುದ್ಧಿ ಕಲಿಸುವ ಅವರ ಉಪಕ್ರಮಗಳಿಗಾಗಿ ವಾಜಪೇಯಿ ಸದಾ ನೆನಪಿನಲ್ಲಿರುತ್ತಾರೆ. ಹೆದ್ದಾರಿ ನಿರ್ಮಾಣದ ಕ್ರಾಂತಿ ನಡೆದಿದ್ದು ಅವರ ಕಾಲದಲ್ಲಿ.

ಮನಮೋಹನ್ ಸಿಂಗ್ (2004-2014)

ಖ್ಯಾತ ಅರ್ಥಶಾಸ್ತ್ರಜ್ಞರಾಗಿದ್ದ ಮನಮೋಹನ್ ಸಿಂಗ್ ಅವರು ಒಟ್ಟು 10 ವರ್ಷಗಳ ಕಾಲ ಪ್ರಧಾನಿಯಾಗಿ ಸತತ ಎರಡು ಬಾರಿ ಸೇವೆ ಸಲ್ಲಿಸಿದರು. ಅವರ ಅಧಿಕಾರಾವಧಿಯು ಗಮನಾರ್ಹ ಆರ್ಥಿಕ ಸುಧಾರಣೆಗಳು ಮತ್ತು ಉದಾರೀಕರಣದ ಉಪಕ್ರಮಗಳಿಂದ ಗುರುತಿಸಲ್ಪಟ್ಟಿದೆ. ಮನಮೋಹನ್ ಸಿಂಗ್ 10 ವರ್ಷ 4 ದಿನ ಆಡಳಿತ ನಡೆಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಮೂರನೇ ಬಾರಿಗೆ ಐದು ವರ್ಷ ಪೂರ್ಣಗೊಳಿಸಿದಲ್ಲಿ ಮೋದಿ ದಾಖಲೆ ಬರೆಯಲಿದ್ದಾರೆ.

ಇದನ್ನೂ ಓದಿ:Election Results 2024: ರಾಮ ಮಂದಿರ ಭದ್ರ, ಯುಪಿ ಅಭದ್ರ: ಉತ್ತರ ಪ್ರದೇಶದಲ್ಲಿ ಬಿಜೆಪಿ 64ರಿಂದ 36ಕ್ಕೆ ಕುಸಿಯಲು ಕಾರಣ ಇಲ್ಲಿದೆ

Exit mobile version