Election Results 2024: ಸುದೀರ್ಘ ಅವಧಿಗೆ ಪ್ರಧಾನಿ ಆಗ್ತಾರಾ ಮೋದಿ?; ನೆಹರೂ, ಇಂದಿರಾ ಸಾಲಿಗೆ ಸೇರೋದು ಪಕ್ಕಾನಾ? - Vistara News

ದೇಶ

Election Results 2024: ಸುದೀರ್ಘ ಅವಧಿಗೆ ಪ್ರಧಾನಿ ಆಗ್ತಾರಾ ಮೋದಿ?; ನೆಹರೂ, ಇಂದಿರಾ ಸಾಲಿಗೆ ಸೇರೋದು ಪಕ್ಕಾನಾ?

Election Results 2024: ಈಗಾಗಲೇ ಎರಡು ಬಾರಿ ಪ್ರಧಾನಿಯಾಗಿರುವ ಮೋದಿ 10 ವರ್ಷ 19 ದಿನ ಅಧಿಕಾರದಲ್ಲಿದ್ದಾರೆ.
10 ವರ್ಷ ಆಡಳಿತ ನಡೆಸಿದ ಪ್ರಧಾನಿಗಳ ಪಟ್ಟಿಯಲ್ಲಿ ಮೋದಿ ನಾಲ್ಕನೇಯವರಾಗಿದ್ದಾರೆ. ಮೂರನೇ ಬಾರಿಯೂ ತಮ್ಮ ಅಧಿಕಾರ ಅವಧಿಯನ್ನು ಪೂರ್ಣಗೊಳಿಸಿದಲ್ಲಿ ಈ ಸಾಧನೆ ಮಾಡಿದ ಮೊದಲ ಪ್ರಧಾನಿ ಎನ್ನುವ ದಾಖಲೆಗೆ ಮೋದಿ ಪಾತ್ರರಾಗಿದ್ದಾರೆ.

VISTARANEWS.COM


on

Narendra Modi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಲೋಕಸಮರದ ಜನಾದೇಶ(Election Results 2024) ಹೊರಬಿದ್ದಿದೆ. ಕೇಂದ್ರದಲ್ಲಿ ಬಿಜೆಪಿ(BJP) ನೇತೃತ್ವ ಎನ್‌ಡಿಎ ಸರ್ಕಾರ(NDA) ಮತ್ತೆ ಅಧಿಕಾರಕ್ಕೆ ಬರುವುದು ಖಚಿತವಾಗಿದೆ. ಇನ್ನು ಹ್ಯಾಟ್ರಿಕ್‌ ಗೆಲುವು ಸಾಧಿಸಿರುವ ಪ್ರಧಾನಿ ಮೋದಿ(PM Narendra Modi) ಮೂರನೇ ಬಾರಿ ಪ್ರಧಾನಿಯಾಗಿ ಗದ್ದುಗೆ ಏರುತ್ತಿದ್ದಾರೆ. ನರೇಂದ್ರ ಮೋದಿ ಪ್ರಧಾನಿಯಾಗಿ ಈ ಐದು ವರ್ಷ ಪೂರ್ಣಗೊಳಿಸಿದರೆ ಅವರು ಅತಿ ಸುದೀರ್ಘವಾಗಿ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆಗೆ ಇರುವ ಜವಾಹರಲಾಲ್‌ ನೆಹರೂ(Jawaharlal Nehru) ಮತ್ತು ಇಂದಿರಾಗಾಂಧಿ(Indira Gandhi) ಸಾಲಿಗೆ ಸೇರಲಿದ್ದಾರೆ.

ಈಗಾಗಲೇ ಎರಡು ಬಾರಿ ಪ್ರಧಾನಿಯಾಗಿರುವ ಮೋದಿ 10 ವರ್ಷ 19 ದಿನ ಅಧಿಕಾರದಲ್ಲಿದ್ದಾರೆ.
10 ವರ್ಷ ಆಡಳಿತ ನಡೆಸಿದ ಪ್ರಧಾನಿಗಳ ಪಟ್ಟಿಯಲ್ಲಿ ಮೋದಿ ನಾಲ್ಕನೇಯವರಾಗಿದ್ದಾರೆ. ಮೂರನೇ ಬಾರಿಯೂ ತಮ್ಮ ಅಧಿಕಾರ ಅವಧಿಯನ್ನು ಪೂರ್ಣಗೊಳಿಸಿದಲ್ಲಿ ಈ ಸಾಧನೆ ಮಾಡಿದ ಮೊದಲ ಪ್ರಧಾನಿ ಎನ್ನುವ ದಾಖಲೆಗೆ ಮೋದಿ ಪಾತ್ರರಾಗಿದ್ದಾರೆ.

ಜವಾಹರಲಾಲ್‌ ನೆಹರೂ

ಜವಾಹರಲಾಲ್ ನೆಹರು ಭಾರತದ ಮೊದಲ ಮತ್ತು ದೀರ್ಘಾವಧಿಯ ಪ್ರಧಾನ ಮಂತ್ರಿಯಾಗಿದ್ದರು. ದೀರ್ಘಾವಧಿಗೆ ಪ್ರಧಾನಿಯಾದವರ ಪಟ್ಟಿಯಲ್ಲಿ ನೆಹರು(16 ವರ್ಷ 286 ದಿನ) ಮೊದಲ ಸ್ಥಾನದಲ್ಲಿದ್ದಾರೆ. ಅವರು 1947 ರಿಂದ 1964ರಲ್ಲಿ ವಿಧಿವಶರಾಗುವವರೆಗೆ ಪ್ರಧಾನಿಯಾಗಿ ಮುಂದುವರೆದಿದ್ದರು. ಆಧುನಿಕ ಭಾರತವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ನೆಹರೂ ಅವರು ದೊಡ್ಡ ಕಾರ್ಖಾನೆಗಳು ಮತ್ತು ಅಣೆಕಟ್ಟುಗಳು ಸೇರಿದಂತೆ ಹಲವಾರು ಪ್ರಮುಖ ಯೋಜನೆಗಳನ್ನು ಪ್ರಾರಂಭಿಸಿದರು ಮತ್ತು ವೈಜ್ಞಾನಿಕ ಶಿಕ್ಷಣವನ್ನು ಉತ್ತೇಜಿಸಿದರು. ಅವರು ಶೀತಲ ಸಮರದ ಸಮಯದಲ್ಲಿ ಯುಎಸ್ ಮತ್ತು ಸೋವಿಯತ್ ಒಕ್ಕೂಟದಿಂದ ಸ್ವತಂತ್ರವಾಗಿ ದೇಶವನ್ನು ಉಳಿಸಿಕೊಂಡು ಅಲಿಪ್ತ ಭಾರತದ ವಿದೇಶಾಂಗ ನೀತಿಯನ್ನು ಸ್ಥಾಪಿಸಲು ಸಹಾಯ ಮಾಡಿದರು.

ಇಂದಿರಾ ಗಾಂಧಿ (1966ರಿಂದ1977, 1980ರಿಂದ1984)

ಜವಾಹರಲಾಲ್ ನೆಹರೂ ಅವರ ಪುತ್ರಿ ಇಂದಿರಾ ಗಾಂಧಿ ಒಟ್ಟು 15 ವರ್ಷ 350 ದಿನಗಳ ಕಾಲ ಪ್ರಧಾನಿಯಾಗಿದ್ದರು. ಇಂದಿರಾಗಾಂಧಿ(15 ವರ್ಷ 350 ದಿನ) ಎರಡನೇ ಸ್ಥಾನದಲ್ಲಿದ್ದಾರೆ. ಪ್ರಧಾನಿ ಮೋದಿ 10 ವರ್ಷ 19 ದಿನ ಆಡಳಿತ ನಡೆಸಿ ಮೂರನೇ ಸ್ಥಾನದಲ್ಲಿದ್ದಾರೆ. 1975ರಲ್ಲಿ ತುರ್ತುಪರಿಸ್ಥಿತಿಯ ಜಾರಿ, ಆಪರೇಷನ್‌ ಬ್ಲೂ ಸ್ಟಾರ್‌ ಕಾರ್ಯಾಚರಣೆ ಸೇರಿದಂತೆ ಹಲವು ದಿಟ್ಟ ಮತ್ತು ವಿವಾದಾತ್ಮಕ ನಿರ್ಧಾರಗಳಿಗೆ ಹೆಸರುವಾಸಿಯಾಗಿದ್ದರು. ತುರ್ತು ಪರಿಸ್ಥಿತಿ ಹೇರಿಕೆ ವಿರುದ್ಧ ದೇಶಾದ್ಯಂತ ಜನಾಕ್ರೋಶ ಭುಗಿಲೆದ್ದು ಇಂದಿರಾ ಗಾಂಧಿ 1977ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಇಂದಿರಾ ಗಾಂಧಿ ಅವರು ಹೀನಾಯ ಹಿನ್ನಡೆ ಕಂಡು ಅಧಿಕಾರ ತ್ಯಜಿಸಬೇಕಾಯಿತು. ಆದರೆ 1980ರಲ್ಲಿ ಅವರು ಮತ್ತೆ ಭರ್ಜರಿ ಬಹುಮತದಿಂದ ಅಧಿಕಾರಕ್ಕೆ ಮರಳಿದರು. ಆದರೆ 1984ರಲ್ಲಿ ಸಿಖ್‌ ಭಯೋತ್ಪಾದನೆಗೆ ಬಲಿಯಾದರು.

ಅಟಲ್ ಬಿಹಾರಿ ವಾಜಪೇಯಿ (1996, 1998-2004)

ನುರಿತ ವಾಗ್ಮಿ ಮತ್ತು ದೂರದೃಷ್ಟಿಯ ನಾಯಕ, ಅಟಲ್ ಬಿಹಾರಿ ವಾಜಪೇಯಿ ಅವರು ಮೂರು ಬಾರಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು. ಒಮ್ಮೆ 13 ದಿನ, ಮತ್ತೊಮ್ಮೆ 13 ತಿಂಗಳಷ್ಟೇ ಅವರು ಪ್ರಧಾನಿಯಾಗಿದ್ದರು. ಆದರೆ 1998ರಿಂದ 2004ರ ಅವರು ಪೂರ್ಣಾವಧಿ ಪ್ರಧಾನಿಯಾಗಿದ್ದರು. ಒಂದೆಡೆ ಪರಮಾಣು ಪರೀಕ್ಷೆಯ ದಿಟ್ಟತನ ಮತ್ತು ಇನ್ನೊಂದೆಡೆ ಪಾಕಿಸ್ತಾನದೊಂದಿಗೆ ಶಾಂತಿಯನ್ನು ಬೆಳೆಸುವ, ಸಂದರ್ಭ ಬಂದಾಗ ಅದಕ್ಕೆ ಬುದ್ಧಿ ಕಲಿಸುವ ಅವರ ಉಪಕ್ರಮಗಳಿಗಾಗಿ ವಾಜಪೇಯಿ ಸದಾ ನೆನಪಿನಲ್ಲಿರುತ್ತಾರೆ. ಹೆದ್ದಾರಿ ನಿರ್ಮಾಣದ ಕ್ರಾಂತಿ ನಡೆದಿದ್ದು ಅವರ ಕಾಲದಲ್ಲಿ.

ಮನಮೋಹನ್ ಸಿಂಗ್ (2004-2014)

ಖ್ಯಾತ ಅರ್ಥಶಾಸ್ತ್ರಜ್ಞರಾಗಿದ್ದ ಮನಮೋಹನ್ ಸಿಂಗ್ ಅವರು ಒಟ್ಟು 10 ವರ್ಷಗಳ ಕಾಲ ಪ್ರಧಾನಿಯಾಗಿ ಸತತ ಎರಡು ಬಾರಿ ಸೇವೆ ಸಲ್ಲಿಸಿದರು. ಅವರ ಅಧಿಕಾರಾವಧಿಯು ಗಮನಾರ್ಹ ಆರ್ಥಿಕ ಸುಧಾರಣೆಗಳು ಮತ್ತು ಉದಾರೀಕರಣದ ಉಪಕ್ರಮಗಳಿಂದ ಗುರುತಿಸಲ್ಪಟ್ಟಿದೆ. ಮನಮೋಹನ್ ಸಿಂಗ್ 10 ವರ್ಷ 4 ದಿನ ಆಡಳಿತ ನಡೆಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಮೂರನೇ ಬಾರಿಗೆ ಐದು ವರ್ಷ ಪೂರ್ಣಗೊಳಿಸಿದಲ್ಲಿ ಮೋದಿ ದಾಖಲೆ ಬರೆಯಲಿದ್ದಾರೆ.

ಇದನ್ನೂ ಓದಿ:Election Results 2024: ರಾಮ ಮಂದಿರ ಭದ್ರ, ಯುಪಿ ಅಭದ್ರ: ಉತ್ತರ ಪ್ರದೇಶದಲ್ಲಿ ಬಿಜೆಪಿ 64ರಿಂದ 36ಕ್ಕೆ ಕುಸಿಯಲು ಕಾರಣ ಇಲ್ಲಿದೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ದೇಶ

Religion Conversion: 30 ಮುಸಲ್ಮಾನರು ಹಿಂದೂ ಧರ್ಮಕ್ಕೆ ಮತಾಂತರ

Religion Conversion: ಖಜರಾನ ಗಣೇಶ ದೇವಸ್ಥಾನದಲ್ಲಿ ನಡೆದ ವೈದಿಕ ಸ್ತೋತ್ರ ಪಠಣ ಸೇರಿದಂತೆ ಹಿಂದೂ ಧಾರ್ಮಿಕ ವಿಧಿಗಳಲ್ಲಿ ಈ ವ್ಯಕ್ತಿಗಳು ಪಾಲ್ಗೊಂಡಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಜನರು ಮಧ್ಯಪ್ರದೇಶದ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ 2021 ರ ಅಡಿಯಲ್ಲಿ ಜಿಲ್ಲಾಡಳಿತಕ್ಕೆ ಅಫಿಡವಿಟ್ ಸಲ್ಲಿಸಿದ್ದಾರೆ, ಅವರು ಸ್ವಯಂಪ್ರೇರಣೆಯಿಂದ ತಮ್ಮ ಧರ್ಮವನ್ನು ಬದಲಾಯಿಸುತ್ತಿದ್ದಾರೆ ಎಂದು ಪಾವ್ರಿ ಹೇಳಿದರು.

VISTARANEWS.COM


on

Religion Conversion
Koo

ಇಂಧೋರ್‌: ಬರೋಬ್ಬರಿ 30 ಮುಸಲ್ಮಾನರು ಹಿಂದೂ ಧರ್ಮಕ್ಕೆ ಮತಾಂತರ(Religion conversion)ಗೊಂಡಿರುವ ಘಟನೆ ಮಧ್ಯ ಪ್ರದೇಶ(Madhya Pradesh)ದ ಇಂಧೋರ್‌ನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರಿಗೆ ಯಾವುದೇ ದೂರು ದಾಖಲಾಗಿಲ್ಲ. ಸ್ಥಳೀಯ ಸಂಘಟನೆ ಸಝಾ ಸಂಸ್ಕೃತಿ ಮಂಚ್‌ ಅಧ್ಯಕ್ಷ ಸ್ಯಾಮ್‌ ಪಾವ್ರಿ ಈ ಬಗ್ಗೆ ಮಾಹಿತಿ ನೀಡಿದ್ದು, ಮಧ್ಯಪ್ರದೇಶ ಧಾರ್ಮಿಕ ಸ್ವಾತಂತ್ರ್ಯ ಕಾಯಿದೆ 2021ಯಡಿಯಲ್ಲಿ 14 ಮಹಿಳೆಯರು ಸೇರಿದಂತೆ 30 ಜನರು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.

ಇಲ್ಲಿನ ಖಜರಾನ ಗಣೇಶ ದೇವಸ್ಥಾನದಲ್ಲಿ ನಡೆದ ವೈದಿಕ ಸ್ತೋತ್ರ ಪಠಣ ಸೇರಿದಂತೆ ಹಿಂದೂ ಧಾರ್ಮಿಕ ವಿಧಿಗಳಲ್ಲಿ ಈ ವ್ಯಕ್ತಿಗಳು ಪಾಲ್ಗೊಂಡಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಜನರು ಮಧ್ಯಪ್ರದೇಶದ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ 2021 ರ ಅಡಿಯಲ್ಲಿ ಜಿಲ್ಲಾಡಳಿತಕ್ಕೆ ಅಫಿಡವಿಟ್ ಸಲ್ಲಿಸಿದ್ದಾರೆ, ಅವರು ಸ್ವಯಂಪ್ರೇರಣೆಯಿಂದ ತಮ್ಮ ಧರ್ಮವನ್ನು ಬದಲಾಯಿಸುತ್ತಿದ್ದಾರೆ ಎಂದು ಪಾವ್ರಿ ಹೇಳಿದರು.

ಖಜರಾನ ಗಣೇಶ ದೇವಸ್ಥಾನದಲ್ಲಿ 30 ಮಂದಿ ಸ್ವಯಂ ಪ್ರೇರಿತವಾಗಿ ಧರ್ಮ ಬದಲಾವಣೆಗೆ ತೊಡಗಿರುವ ಬಗ್ಗೆ ನಮಗೆ ಮಾಹಿತಿ ಬಂದಿದ್ದು, ಯಾವುದೇ ಒತ್ತಡ, ಪ್ರಭಾವ, ದುರಾಸೆಗೆ ಒಳಗಾಗಿ ಧರ್ಮ ಬದಲಾಯಿಸಿರುವ ಬಗ್ಗೆ ಇದುವರೆಗೆ ಯಾವುದೇ ದೂರು ಬಂದಿಲ್ಲ, ದೂರು ಬಂದರೆ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಉಪ ಪೊಲೀಸ್ ಆಯುಕ್ತ ಅಭಿನಯ್ ವಿಶ್ವಕರ್ಮ ಪಿಟಿಐಗೆ ತಿಳಿಸಿದ್ದಾರೆ.

ಒತ್ತಾಯಪೂರ್ವಕವಾಗಿ ಅಥವಾ ವಂಚನೆ ಅಥವಾ ದುರಾಸೆಯ ಮೂಲಕ ಧಾರ್ಮಿಕ ಮತಾಂತರಗಳನ್ನು ನಿಷೇಧಿಸಲು ಮಧ್ಯಪ್ರದೇಶದ ಧರ್ಮ ಸ್ವಾತಂತ್ರ್ಯ ಕಾಯಿದೆ 2021 ಅನ್ನು ಜಾರಿಗೊಳಿಸಲಾಗಿದೆ ಮತ್ತು ಉಲ್ಲಂಘಿಸುವವರು 10 ವರ್ಷಗಳವರೆಗೆ ಜೈಲು ಮತ್ತು Rs1 ಲಕ್ಷ ದಂಡವನ್ನು ಎದುರಿಸಬೇಕಾಗುತ್ತದೆ.

ಕಳೆದ ವರ್ಷ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ 250 ಹಿಂದುಗಳನ್ನು ಮಾತೃ ಧರ್ಮಕ್ಕೆ ವಾಪಸ್​ ಕರೆತರಲಾಗಿದ್ದು (Ghar Wapsi), ಅಖಿಲ ಭಾರತೀಯ ಘರ್​ ವಾಪ್ಸಿ ಸಮಿತಿಯ ನೇತೃತ್ವದಲ್ಲಿ ಕಾರ್ಯಕ್ರಮ ನಡೆದಿತ್ತು. ಕಳೆದ ವರ್ಷ ಫೆಬ್ರವರಿ 21ರಂದು ಇಲ್ಲಿನ ಚಿಕ್ನಿಪಲಿ ಎಂಬಲ್ಲಿ ಕಾರ್ಯಕ್ರಮ ಆಯೋಜಿಸಿ, ಗಂಗಾಜಲದಲ್ಲಿ ಪಾದ ತೊಳೆಯುವ ಮೂಲಕ ಮಾತೃ ಧರ್ಮಕ್ಕೆ ವಾಪಸ್​ ಕರೆತರಲಾಗಿದೆ. ಧರ್ಮ ಜಾಗರಣ್​ ಸಮನ್ವಯ ವಿಭಾಗ ಹಾಗೂ ಆರ್ಯ ಸಾಮ್​ ಸಂಸ್ಥೆಯೂ ಈ ಕಾರ್ಯಕ್ರಮದ ನೇತೃತ್ವ ವಹಿಸಿತ್ತು.

ಅಖಿಲ ಭಾರತೀಯ ಘರ್​ ವಾಪ್ಸಿ ಸಮಿತಿಯ ಪ್ರಬಲ್​ ಪ್ರತಾಪ್​ ಸಿಂಗ್​ ಜುದೇವ್​ ಅವರು ಕಾರ್ಯಕ್ರಮದ ಬಳಿಕ ಮಾತನಾಡಿ, ಕಾಂಗ್ರೆಸ್​ ಆಡಳಿತವಿರುವ ಛತ್ತೀಸ್​ಗಢದಲ್ಲಿ ಮತಾಂತರಕ್ಕೆ ಸರಕಾರದ ಆಶ್ರಯ ದೊರೆಯುತ್ತಿದೆ. ಈ ಮೂಲಕ ಹಿಂದು ಧರ್ಮವನ್ನು ದುರ್ಬಲಗೊಳಿಸುವ ತಂತ್ರ ಮಾಡಲಾಗುತ್ತಿದೆ. ಹಿಂದುಗಳು ಅದಕ್ಕೆ ಆಸ್ಪದ ಕೊಡಬಾರದು ಎಂಬುದಾಗಿ ಕರೆಕೊಟ್ಟರು.

ಜುದೇವ್​ ಹಾಗೂ ಅವರ ತಂಡ ಸುಮಾರು 20 ಸಾವಿರ ಮಂದಿಯನ್ನು ಹಿಂದು ಧರ್ಮಕ್ಕೆ ವಾಪಸ್​ ತರುವ ಕೆಲಸ ಮಾಡಿದ್ದಾರೆ. ಕಳೆದ ವರ್ಷ ಅಕ್ಟೋಬರ್​ನಲ್ಲಿ ಅವರು ಒಡಿಶಾದ ಸುಂದರ್​ಗಢ್​ ಜಿಲ್ಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 171 ಕುಟುಂಬಗಳ 500ಕ್ಕೂ ಅಧಿಕ ಮಂದಿಯನ್ನು ಹಿಂದು ಧರ್ಮಕ್ಕೆ ವಾಪಸ್​ ಕರೆತಂದಿದ್ದರು. ಚತ್ತೀಸ್​ಗಢದಲ್ಲಿ 2021ರಲ್ಲಿ ನಡೆದ ಕಾರ್ಯಕ್ರಮದಲ್ಲಿ 1200 ಮಂದಿಯನ್ನು ಕ್ರೈಸ್ತ ಧರ್ಮದಿಂದ ಘರ್​ ವಾಪ್ಸಿ ಮಾಡಿದ್ದರು.

ಇದನ್ನೂ ಓದಿ: Indian Armed Forces: ಸಹಪಾಠಿಗಳು ಈ ಭಾರತೀಯ ಸೇನೆ ಮತ್ತು ನೌಕಾಪಡೆ ಮುಖ್ಯಸ್ಥರು; ಇದು ದೇಶದ ಇತಿಹಾಸದಲ್ಲೇ ಮೊದಲು!

Continue Reading

ಉದ್ಯೋಗ

Job Alert: 10ನೇ ತರಗತಿ ಪಾಸಾದವರಿಗೆ ಸುವರ್ಣಾವಕಾಶ; ಕೋಸ್ಟ್‌ ಗಾರ್ಡ್‌ನಲ್ಲಿದೆ ಉದ್ಯೋಗಾವಕಾಶ

Job Alert: ಭಾರತೀಯ ಕೋಸ್ಟ್‌ ಗಾರ್ಡ್‌ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಸುಮಾರು 320 ಹುದ್ದೆಗಳು ಖಾಲಿ ಇದ್ದು, 10 ಮತ್ತು 12ನೇ ತರಗತಿ ತೇರ್ಗಡೆಯಾದವರು ಅರ್ಜಿ ಸಲ್ಲಿಸಬಹುದು. ಉದ್ಯೋಗದ ಸ್ಥಳ: ಭಾರತಾದ್ಯಂತ. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ ಕೊನೆಯ ದಿನ ಜುಲೈ 3. ನಾವಿಕ್‌ (ಜನರಲ್‌ ಡ್ಯೂಟಿ) – 260 ಮತ್ತು ಯಾಂತ್ರಿಕ್‌ – 60 ಹುದ್ದೆಗಳಿವೆ. ನಾವಿಕ್‌ (ಜನರಲ್‌ ಡ್ಯೂಟಿ) ಹುದ್ದೆಗೆ ಅರ್ಜಿ ಸಲ್ಲಿಸುವವರು ವಿಜ್ಞಾನ ವಿಭಾಗದಲ್ಲಿ 12ನೇ ತರಗತಿ ತೇರ್ಗಡೆಯಾಗಿರಬೇಕು. 10, 12ನೇ ತರಗತಿ, ಡಿಪ್ಲೋಮಾ ಪಾಸಾದವರು ಯಾಂತ್ರಿಕ್‌ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರು.

VISTARANEWS.COM


on

Job alert
Koo

ಬೆಂಗಳೂರು: ಸರ್ಕಾರಿ ಉದ್ಯೋಗ ಹೊಂದಬೇಕು ಎನ್ನುವುದು ಬಹುತೇಕರ ಕನಸು. ಅಂತಹವರ ಕನಸು ನನಸಾಗಿಸುವ ಸುವರ್ಣಾವಕಾಶವೊಂದು ಒದಗಿ ಬಂದಿದೆ. ಭಾರತೀಯ ಕೋಸ್ಟ್‌ ಗಾರ್ಡ್‌ (Indian Coast Guard) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (Indian Coast Guard Recruitment 2024). ಸುಮಾರು 320 ಹುದ್ದೆಗಳು ಖಾಲಿ ಇದ್ದು, 10 ಮತ್ತು 12ನೇ ತರಗತಿ ತೇರ್ಗಡೆಯಾದವರು ಅರ್ಜಿ ಸಲ್ಲಿಸಬಹುದು. ಉದ್ಯೋಗದ ಸ್ಥಳ: ಭಾರತಾದ್ಯಂತ. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ ಕೊನೆಯ ದಿನ ಜುಲೈ 3 (Job Alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ನಾವಿಕ್‌ (ಜನರಲ್‌ ಡ್ಯೂಟಿ) – 260 ಮತ್ತು ಯಾಂತ್ರಿಕ್‌ – 60 ಹುದ್ದೆಗಳಿವೆ. ನಾವಿಕ್‌ (ಜನರಲ್‌ ಡ್ಯೂಟಿ) ಹುದ್ದೆಗೆ ಅರ್ಜಿ ಸಲ್ಲಿಸುವವರು ವಿಜ್ಞಾನ ವಿಭಾಗದಲ್ಲಿ 12ನೇ ತರಗತಿ ತೇರ್ಗಡೆಯಾಗಿರಬೇಕು. 10, 12ನೇ ತರಗತಿ, ಡಿಪ್ಲೋಮಾ ಪಾಸಾದವರು ಯಾಂತ್ರಿಕ್‌ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರು. ಗಮನಿಸಿ ಪುರುಷ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು.

ವಯೋಮಿತಿ

Indian Coast Guard Recruitment 2024 ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 22 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ರಿಯಾಯಿತಿ ಇದೆ.

ಆಯ್ಕೆ ವಿಧಾನ, ಮಾಸಿಕ ವೇತನ ಮತ್ತು ಅರ್ಜಿ ಶುಲ್ಕ

ಕಂಪ್ಯೂಟರ್‌ ಆಧಾರಿತ ಪರೀಕ್ಷೆ, ಅಸ್ಸೆಸ್‌ಮೆಂಟ್‌ ಮತ್ತು ಅಡಾಟ್ಬೆಲಿಟಿ ಟೆಸ್ಟ್‌ (Assessment and Adaptability Test), ದೈಹಿಕ ಸಾಮರ್ಥ್ಯ ಪರೀಕ್ಷೆ, ಡಾಕ್ಯುಮೆಂಟ್‌ ಪರಿಶೀಲನೆ, ವೈದ್ಯಕೀಯ ಪರೀಕ್ಷೆಗಳ ಮೂಲಕ ಅಭ್ಯರ್ಥಿಗಳ ನೇಮಕ ನಡೆಯಲಿದೆ. ಆಯ್ಕೆಯಾದವರಿಗೆ 21,700 ರೂ. – 29,200 ರೂ. ಮಾಸಿಕ ವೇತನ ದೊರೆಯಲಿದೆ. ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ. ಇನ್ನು ಉಳಿದ ಎಲ್ಲ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 300 ರೂ. ಆನ್‌ಲೈನ್‌ ಮೂಲಕ ಪಾವತಿಸಬೇಕು.

Indian Coast Guard Recruitment 2024 ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ. (https://cgept.cdac.in/icgreg/candidate/login)
  • ನಿಮ್ಮ ಇ-ಮೇಲ್‌ ವಿಳಾಸ ನಮೂದಿಸಿ ಹೆಸರು ನೋಂದಾಯಿಸಿ.
  • ಈಗ ಲಾಗಿನ್‌ ಆಗಿ ನಿಮ್ಮ ಹೆಸರು, ಸಂಪೂರ್ಣ ಮಾಹಿತಿ ನೀಡಿ ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ.
  • ಅಗತ್ಯ ದಾಖಲೆ, ಫೋಟೊ, ಅರಿಯಾದ ಅಳತೆಯಲ್ಲಿ ಅಪ್‌ಲೋಡ್‌ ಮಾಡಿ.
  • ಅರ್ಜಿ ಶುಲ್ಕ ಪಾವತಿಸಿ (ಅಗತ್ಯವಿದ್ದರು ಮಾತ್ರ).
  • ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್‌ ಕ್ಲಿಕ್‌ ಮಾಡಿ.
  • ಅಪ್ಲಿಕೇಷನ್‌ ನಂಬರ್‌ ಅಥವಾ ರಿಕ್ವೆಸ್ಟ್‌ ನಂಬರ್‌ ನೋಟ್‌ ಮಾಡಿಟ್ಟುಕೊಳ್ಳಿ.

ಇದನ್ನೂ ಓದಿ: Job Alert: 10ನೇ ತರಗತಿ ಪಾಸಾದವರಿಗೆ ಗುಡ್‌ನ್ಯೂಸ್‌; SSCಯಿಂದ ಬರೋಬ್ಬರಿ 8,326 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

Continue Reading

ಕ್ರೀಡೆ

T20 World Cup 2024: ಎರಡನೇ ವಿಶ್ವಕಪ್‌ಗೆ ತಾಳ್ಮೆಯಿಂದ ಕಾದಂತೆ ಟ್ರಾಫಿಕ್‌ ಸಿಗ್ನಲ್‌ನಲ್ಲೂ ಕಾಯಿರಿ; ದೆಹಲಿ ಪೊಲೀಸರ ಕ್ರಿಯೇಟಿವ್​ ವಿಷ್‌

T20 World Cup 2024:ಎರಡನೇ ಬಾರಿ ಟಿ20 ವಿಶ್ವಕಪ್‌ ಗೆದ್ದುಕೊಂಡ ಟೀಮ್‌ ಇಂಡಿಯಾಕ್ಕೆ ಅಭಿನಂದನಾ ಪ್ರವಾಹವೇ ಹರಿದು ಬರುತ್ತಿದೆ. ವಿವಿದ ಕ್ಷೇತ್ರಗಳ ಗಣ್ಯರು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಇದೇ ವೇಳೆ ದೆಹಲಿ, ಉತ್ತರ ಪ್ರದೇಸ ಮತ್ತು ಮುಂಬೈ ಪೊಲೀಸರು ವಿಶಿಷ್ಟವಾಗಿ ಅಭಿನಂದನೆ ಸಲ್ಲಿಸಿ ಗಮನ ಸೆಳೆದಿದ್ದಾರೆ.

VISTARANEWS.COM


on

T20 World Cup 2024
Koo

ನವದೆಹಲಿ: ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್​ನಲ್ಲಿ ಶನಿವಾರ ನಡೆದ ಟಿ20 ವಿಶ್ವಕಪ್​ 2024 (T20 World Cup 2024ಫೈನಲ್​ನಲ್ಲಿ ಟೀಮ್ ಇಂಡಿಯಾ (Team India) ದಕ್ಷಿಣ ಆಫ್ರಿಕಾವನ್ನು ಸೋಲಿಸುವ ಮೂಲಕ ಸುಮಾರು 17 ವರ್ಷಗಳ ಬಳಿಕ ಕಪ್‌ ತನ್ನದಾಗಿಸಿಕೊಂಡಿದೆ. ಈ ಸಾಧನೆ ಮಾಡಿದ ರೋಹಿತ್‌ ಶರ್ಮಾ (Rohit Sharma) ಬಳಗಕ್ಕೆ ಅಭಿನಂದನೆಗಳ ಪ್ರವಾಹವೇ ಹರಿದು ಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಈ ಮಧ್ಯೆ ವಿವಿಧ ಪೊಲೀಸ್‌ ಘಟಕಗಳು ಕ್ರಿಯೇಟಿವ್ ಆಗಿ ಅಭಿನಂದನೆ ಸಲ್ಲಿಸುವ ಮೂಲಕ ಗಮನ ಸೆಳೆದಿವೆ. ಟೀಮ್‌ ಇಂಡಿಯಾಕ್ಕೆ ವಿಷ್‌ ಮಾಡುವ ಜತೆಗೆ ಟ್ರಾಫಿಕ್‌ ಜಾಗೃತಿಯನ್ನೂ ಮೂಡಿಸುತ್ತಿವೆ.

ʼʼಟೀಮ್‌ ಇಂಡಿಯಾ ಎರಡನೇ ಬಾರಿ ಟಿ20 ವಿಶ್ವಕಪ್‌ ಚಾಂಪಿಯನ್‌ ಆಗುವುದನ್ನು ನೋಡಲು ಸುಮಾರು 16 ವರ್ಷ 9 ತಿಂಗಳು ಮತ್ತು 5 ದಿನ (52,70,40,000 ಸೆಕೆಂಡ್‌) ಕಾದಿದ್ದೇವೆ. ಇದೇ ರೀತಿ ಟ್ರಾಫಿಕ್‌ ಸಿಗ್ನಲ್‌ನಲ್ಲಿಯೂ ಸ್ವಲ್ಪ ಹೊತ್ತು ತಾಳ್ಮೆಯಿಂದ ಕಾಯಿರಿ. ಉತ್ತಮ ಕ್ಷಣಕ್ಕಾಗಿ ಕಾಯುವುದರಲ್ಲಿ ಯಾವುದೇ ತಪ್ಪಿಲ್ಲ. ಏನಂತೀರಾ? ಟೀಮ್‌ ಇಂಡಿಯಾಕ್ಕೆ ಹೃತೂರ್ವಕ ಅಭಿನಂದನೆಗಳುʼʼ ಎಂದು ದೆಹಲಿ ಪೊಲೀಸ್‌ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ.

ಇನ್ನು ಉತ್ತರ ಪ್ರದೇಶ ಪೊಲೀಸರೂ ತಾವೇನು ಕಮ್ಮಿ ಇಲ್ಲ ಎನ್ನುವಂತೆ ಮಜವಾದ ಪೋಸ್ಟ್‌ ಶೇರ್‌ ಮಾಡಿದ್ದಾರೆ. ಭಾರತೀಯ ಬೌಲರ್‌ಗಳ ಪ್ರದರ್ಶನವನ್ನು ಕ್ರಿಮಿನಲ್ ಕೃತ್ಯಕ್ಕೆ ಹೋಲಿಸುವ ತಮ್ಮ ಹಾಸ್ಯ ಪ್ರಜ್ಞೆಯನ್ನು ಮೆರೆದಿದ್ದಾರೆ. ʼʼಬ್ರೇಕಿಂಗ್‌ ನ್ಯೂಸ್‌: ದಕ್ಷಿಣ ಆಫ್ರಿಕನ್ನರ ಹೃದಯ ಚೂರು ಮಾಡಿದ ಭಾರತೀಯ ಬೌಲರ್‌ಗಳು ತಪ್ಪಿತಸ್ಥರು ಎಂದು ಸಾಬೀತಾಗಿದೆ. ಇದಕ್ಕಿರುವ ಶಿಕ್ಷೆ: ಕೋಟ್ಯಂತರ ಅಭಿಮಾನಿಗಳಿಂದ ಜೀವಮಾನದ ಪ್ರೀತಿʼʼ ಎಂದು ಬರೆದುಕೊಂಡಿದ್ದಾರೆ.

ಮುಂಬೈ ಟ್ರಾಫಿಕ್‌ ಪೊಲೀಸರು ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಕ್ರಿಯಾತ್ಮಕತೆಯನ್ನು ಪ್ರದರ್ಶಿಸಿದ್ದಾರೆ. ʼʼIND 29 June 2024ʼʼ ನಂಬರ್‌ ಪ್ಲೇಟ್‌ ಹೊಂದಿರುವ ಕಾರನ್ನು ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಚಲಾಯಿಸುತ್ತಿರುವಂತೆ ಫೋಟೊ ಎಡಿಟ್‌ ಮಾಡಿ ಹಂಚಿಕೊಂಡಿದ್ದಾರೆ. ʼʼನಂಬರ್‌ ಪ್ಲೇಟ್‌ನ ಕನಸು ನನಸಾಗಿದೆʼʼ ಎಂದು ಕ್ಯಾಪ್ಶನ್‌ ನೀಡಿದ್ದಾರೆ. ಒಟ್ಟಿನಲ್ಲಿ ಟೀಮ್‌ ಇಂಡಿಯಾಕ್ಕೆ ವಿಧ ವಿಧ ಮೀಮ್ಸ್‌, ವಿಡಿಯೊ ಮೂಲಕ ಅಭಿನಂದನೆ ಸಲ್ಲಿಸಲಾಗುತ್ತಿದೆ.

ಭಾರತ ಕಪ್‌ ಜಯಶಾಲಿಯಾಗುತ್ತಿದ್ದಂತೆ ಭಾರತದ ಎಲ್ಲೆಡೆ ಸಡಗರ ಮನೆ ಮಾಡಿತು. ಪಟಾಕಿ ಸಿಡಿಸಿ, ಸಿಹಿ ಹಂಚಿ ಅಭಿಮಾನಿಗಳು ಭಾರತದ ಗೆಲುವನ್ನು ಕೊಂಡಾಡಿದರು. ಬೆಂಗಳೂರು, ಪಾಟ್ನಾ, ಪುಣೆ, ಮುಂಬೈ, ಹೈದರಾಬಾದ್‌, ಜಮ್ಮು ಮತ್ತು ಕಾಶ್ಮೀರ ಮುಂತಾದೆಡೆ ಮಧ್ಯರಾತ್ರಿಯನ್ನೂ ಲೆಕ್ಕಿಸದೆ ಅಭಿಮಾನಿಗಳು ಬೀದಿಗಿಳಿದು ಕುಣಿದು ಕುಪ್ಪಳಿಸಿದರು. ಕೆಲವೆಡೆ ರಸ್ತೆ ತೆರವುಗೊಳಿಸಲು ಪೊಲೀಸರು ಮಧ್ಯೆ ಪ್ರವೇಶಿಸಬೇಕಾಯಿತು.

ಭಾರತ ಮಾತ್ರವಲ್ಲ ವಿದೇಶದಲ್ಲಿಯೂ ಸಂಭ್ರಮಾಚರಣೆ ಕಂಡು ಬಂತು. ಅಮೆರಿಕ, ಇಂಗ್ಲೆಂಡ್‌ ಮುಂತಾದೆಡೆಗಳ ಭಾರತೀಯರು ಒಟ್ಟು ಸೇರಿ ಟೀಮ್‌ ಇಂಡಿಯಾ ಗೆಲುವಿಗೆ ಹರ್ಷಾಚರಣೆ ನಡೆಸಿದರು.

ಇದನ್ನೂ ಓದಿ: T20 World Cup 2024: ಸಂಭ್ರಮಾಚರಣೆ ವೇಳೆ ದುರಂತ: ಧ್ವಜ ಹಾರಿಸಲು ಹೋಗಿ ಬಿದ್ದ ಅಭಿಮಾನಿ; ವೈರಲ್‌ ವಿಡಿಯೊ ಇಲ್ಲಿದೆ

Continue Reading

ದೇಶ

Mann Ki Baat: ʼಸಂವಿಧಾನದ ಬಗ್ಗೆ ಅಚಲ ನಂಬಿಕೆ ಇರಿಸಿದ್ದಕ್ಕೆ ಧನ್ಯವಾದʼ-ಮೋದಿ ಮನ್‌ ಕೀ ಬಾತ್‌ ಹೈಲೈಟ್ಸ್‌ ಹೀಗಿದೆ ನೋಡಿ

Mann Ki Baat: ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಕೇರಳದ ಪಾಲಕಾಡ್‌ನಲ್ಲಿ ಆದಿವಾಸಿ ಮಹಿಳೆಯರು ತಯಾರಿಸುವ ಛತ್ರಿಗಳ ಬಗ್ಗೆಯೂ ಮಾತನಾಡಿದರು. ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತೀಯ ಆಟಗಾರರನ್ನು ಹುರಿದುಂಬಿಸಬೇಕು ಎಂದು ಭಾರತೀಯ ಆಟಗಾರರಿರಗೆ ಪ್ರಧಾನಿಗಳು ಶುಭಾಶಯಗಳನ್ನು ತಿಳಿಸಿದರು. ಇದೇ ವೇಳೆ ಲೋಕಸಭಾ ಚುನಾವಣೆಯನ್ನು ಶಾಂತಯುತವಾಗಿ ನಡೆಸಿಕೊಟ್ಟ ಎಲ್ಲಾ ಭಾರತೀಯರಿಗೂ ಧನ್ಯವಾದಗಳನ್ನು ತಿಳಿಸಿದರು.

VISTARANEWS.COM


on

Mann Ki Baat
Koo

ಹೊಸದಿಲ್ಲಿ: ಮೂರನೇ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊಲದ ಬಾರಿಗೆ ಪ್ರಧಾನಿ ನರೇಂದ್ರ ಮೋದಿ(PM Narendra Modi)ಯವರ ಮನ್‌ ಕೀ ಬಾತ್‌(Mann Ki Baat) ಕಾರ್ಯಕ್ರಮ ಇಂದು ಪ್ರಸಾರವಾಗಿದೆ. ಕಾರ್ಯಕ್ರಮದಲ್ಲಿ ಹಲವು ವಿಚಾರಗಳನ್ನು ಪ್ರಧಾನಿ ಮೋದಿ ಹಂಚಿಕೊಂಡಿದ್ದಾರೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಬೆಂಬಲ ನೀಡಿದ ದೇಶದ ಎಲ್ಲಾ ಜನರಿಗೆ ಕೃತಜ್ಞತೆ ಸಲ್ಲಿಸಿದರು.

ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಕೇರಳದ ಪಾಲಕಾಡ್‌ನಲ್ಲಿ ಆದಿವಾಸಿ ಮಹಿಳೆಯರು ತಯಾರಿಸುವ ಛತ್ರಿಗಳ ಬಗ್ಗೆಯೂ ಮಾತನಾಡಿದರು. ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತೀಯ ಆಟಗಾರರನ್ನು ಹುರಿದುಂಬಿಸಬೇಕು ಎಂದು ಭಾರತೀಯ ಆಟಗಾರರಿರಗೆ ಪ್ರಧಾನಿಗಳು ಶುಭಾಶಯಗಳನ್ನು ತಿಳಿಸಿದರು. ಇದೇ ವೇಳೆ ಲೋಕಸಭಾ ಚುನಾವಣೆಯನ್ನು ಶಾಂತಯುತವಾಗಿ ನಡೆಸಿಕೊಟ್ಟ ಎಲ್ಲಾ ಭಾರತೀಯರಿಗೂ ಧನ್ಯವಾದಗಳನ್ನು ತಿಳಿಸಿದರು. 65 ಕೋಟಿ ಜನರು ಮತ ಚಲಾಯಿಸಿದ ಜಗತ್ತಿನ ಯಾವುದೇ ದೇಶದಲ್ಲಿ ಇಷ್ಟು ದೊಡ್ಡ ಚುನಾವಣೆ ನಡೆದಿಲ್ಲ. ನಾನು ಚುನಾವಣಾ ಆಯೋಗ ಮತ್ತು ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದ ಪ್ರತಿಯೊಬ್ಬರನ್ನು ಅಭಿನಂದಿಸುತ್ತೇನೆ ಎಂದರು.

ಮೋದಿ ಮನ್‌ ಕೀ ಬಾತ್‌ ಹೈಲೈಟ್ಸ್‌

  1. ವಿಶ್ಯಾದ್ಯಂತ 10ನೇ ಯೋಗ ದಿನಾಚರಣೆ ಯಶಸ್ವಿಯಾಗಿ ನಡೆದಿರುವ ಬಗ್ಗೆ ಹೆಮ್ಮೆ ಇದೆ. ಅನೇಕರು ಬಹಳ ಉತ್ಸುಕತೆಯಿಂದ ಭಾಗಿಯಾಗಿದ್ದೀರಿ.
  2. ಸ್ನೇಹಿತರೇ, ಭಾರತದ ಹಲವಾರು ಉತ್ಪನ್ನಗಳಿಗೆ ಪ್ರಪಂಚದಾದ್ಯಂತ ಹೆಚ್ಚಿನ ಬೇಡಿಕೆ ಇದೆ. ಅಂತಹ ಒಂದು ಉತ್ಪನ್ನಗಳಲ್ಲಿ ಆಂಧ್ರಪ್ರದೇಶದ ಅರಕು ಕಾಫಿ.
  3. ಈ ವರ್ಷದ ವಿಶ್ವ ಪರಿಸರ ದಿನದಂದು ‘ಏಕ್ ಪೆಡ್ ಮಾ ಕೆ ನಾಮ್’ ಎಂಬ ವಿಶೇಷ ಅಭಿಯಾನವನ್ನು ಪ್ರಾರಂಭಿಸಲಾಗಿದೆ.

ಇದನ್ನೂ ಓದಿ: Indian Armed Forces: ಸಹಪಾಠಿಗಳು ಈ ಭಾರತೀಯ ಸೇನೆ ಮತ್ತು ನೌಕಾಪಡೆ ಮುಖ್ಯಸ್ಥರು; ಇದು ದೇಶದ ಇತಿಹಾಸದಲ್ಲೇ ಮೊದಲು!

ಮನ್ ಕಿ ಬಾತ್ ಕಾರ್ಯಕ್ರಮ ಅಕ್ಟೋಬರ್ 3, 2014 ರಂದು ಪ್ರಾರಂಭವಾದಾಯಿತು. ಪ್ರಧಾನಿ ಪ್ರತಿ ತಿಂಗಳು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುತ್ತಾ, ಭಾರತದ ಅಭಿವೃದ್ಧಿ ಪಯಣದಲ್ಲಿ ಭಾಗವಹಿಸಲು ಲಕ್ಷಾಂತರ ಜನರನ್ನು ಪ್ರೇರೇಪಿಸುತ್ತಿದ್ದಾರೆ. ಪ್ರತಿ ತಿಂಗಳು ವಿವಿಧ ಕ್ಷೇತ್ರದ ಸಾಧನೆಗಳು, ಕಹಿಘಟನೆ, ಸಂತೋಷ ಮತ್ತು ಹೆಮ್ಮೆಯ ಕ್ಷಣಗಳನ್ನು ಮತ್ತು ನವ ಭಾರತಕ್ಕಾಗಿ ಸಲಹೆಗಳನ್ನು ಮೋದಿ ಈ ಕಾರ್ಯಕ್ರಮದ ಮೂಲಕ ಹಂಚಿಕೊಳ್ಳುತ್ತಿದ್ದಾರೆ.

22 ಭಾರತೀಯ ಭಾಷೆಗಳು ಮತ್ತು 29 ಉಪಭಾಷೆಗಳು ಸೇರಿದಂತೆ, ‘ಮನ್ ಕಿ ಬಾತ್’ ಅನ್ನು ಫ್ರೆಂಚ್, ಚೈನೀಸ್, ಇಂಡೋನೇಷಿಯನ್, ಟಿಬೆಟಿಯನ್, ಬರ್ಮೀಸ್, ಬಲೂಚಿ, ಅರೇಬಿಕ್, ಪಶ್ತು, ಪರ್ಷಿಯನ್, ಡಾರಿ ಮತ್ತು ಸ್ವಾಹಿಲಿ ಸೇರಿದಂತೆ 11 ವಿದೇಶಿ ಭಾಷೆಗಳಲ್ಲಿ ಪ್ರಸಾರ ಮಾಡಲಾಗುತ್ತದೆ. ಮನ್ ಕಿ ಬಾತ್ ಅನ್ನು ಆಲ್ ಇಂಡಿಯಾ ರೇಡಿಯೊದ 500 ಕ್ಕೂ ಹೆಚ್ಚು ಪ್ರಸಾರ ಕೇಂದ್ರಗಳು ಪ್ರಸಾರ ಮಾಡುತ್ತವೆ.

Continue Reading
Advertisement
Actor Darshan case Jaggesh reaction about this
ಕ್ರೈಂ16 seconds ago

Actor Darshan:  ದರ್ಶನ್‌‌‌‌‌‌ ವಿರುದ್ಧ ಪರೋಕ್ಷವಾಗಿ ಕೌಂಟರ್‌ ಕೊಟ್ಟ ನಟ ಜಗ್ಗೇಶ್!

Religion Conversion
ದೇಶ8 mins ago

Religion Conversion: 30 ಮುಸಲ್ಮಾನರು ಹಿಂದೂ ಧರ್ಮಕ್ಕೆ ಮತಾಂತರ

Job alert
ಉದ್ಯೋಗ10 mins ago

Job Alert: 10ನೇ ತರಗತಿ ಪಾಸಾದವರಿಗೆ ಸುವರ್ಣಾವಕಾಶ; ಕೋಸ್ಟ್‌ ಗಾರ್ಡ್‌ನಲ್ಲಿದೆ ಉದ್ಯೋಗಾವಕಾಶ

Hamsa Moily Veerappa Moily's daughter passed away
ರಾಜಕೀಯ16 mins ago

Hamsa Moily: ವೀರಪ್ಪ ಮೊಯ್ಲಿ ಪುತ್ರಿ ಹಂಸ ಮೊಯ್ಲಿ ವಿಧಿವಶ

ಕ್ರೀಡೆ17 mins ago

Team India: ವಿಶ್ವಕಪ್​ ಗೆದ್ದು ಟೀಮ್​ ಇಂಡಿಯಾ ನಿರ್ಮಿಸಿದ ದಾಖಲೆಗಳ ಪಟ್ಟಿ ಹೀಗಿದೆ

Leopard attack bike rider and cab driver
ಬೆಂಗಳೂರು25 mins ago

Leopard attack : ರಸ್ತೆ ಮೇಲೆ ಸತ್ತಂತೆ ಬಿದ್ದಿದ್ದ ಚಿರತೆ; ಮುಟ್ಟಲು ಹೋದ ಬೈಕ್‌ ಸವಾರ, ಕ್ಯಾಬ್‌ ಚಾಲಕನ ಮೇಲೆ ದಾಳಿ

Suryakumar Yadav
ಪ್ರಮುಖ ಸುದ್ದಿ29 mins ago

Suryakumar Yadav : ವಿಶ್ವ ಕಪ್​ ಟ್ರೋಫಿಯನ್ನು ಬೆಡ್​ ಮಧ್ಯದಲ್ಲಿಟ್ಟು ನಿದ್ದೆ ಮಾಡಿದ ಸೂರ್ಯಕುಮಾರ್ ದಂಪತಿ!

Money Guide
ಮನಿ-ಗೈಡ್32 mins ago

Money Guide: ಕಡಿಮೆ ಸಂಬಳ ಇದ್ದರೂ ಚಿಂತೆ ಬೇಡ; ಉಳಿತಾಯಕ್ಕಾಗಿ ಈ ಟಿಪ್ಸ್‌ ಫಾಲೋ ಮಾಡಿ

Road Accident
ಬೆಳಗಾವಿ36 mins ago

Road Accident : ಬೈಕ್‌ಗೆ ಟಾಟಾ ಏಸ್‌ ಡಿಕ್ಕಿ; ಮಗನ ಕಣ್ಣೆದುರೇ ತಾಯಿ ಸಾವು

Pradeep Eshwar
ಕರ್ನಾಟಕ44 mins ago

Pradeep Eshwar: ವಿಪಕ್ಷ ನಾಯಕರು ಸಿದ್ದರಾಮಯ್ಯ ಬಳಿ ಕೋಚಿಂಗ್‌ ಪಡೆಯಲಿ: ಅಶೋಕ್‌ಗೆ ಪ್ರದೀಪ್‌ ಈಶ್ವರ್‌ ಸಲಹೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಬೆಂಗಳೂರು4 hours ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ24 hours ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ1 day ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ2 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ3 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು3 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ3 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ6 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

ಟ್ರೆಂಡಿಂಗ್‌