ವಾಷಿಂಗ್ಟನ್: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ (UNSC) ಭಾರತಕ್ಕೆ ಕಾಯಂ ಸ್ಥಾನ ನೀಡಬೇಕು ಎಂದು ಭಾರತವು ಹಲವು ವರ್ಷಗಳಿಂದ ಮನವಿ ಮಾಡುತ್ತಲೇ ಇದೆ. ಭದ್ರತಾ ಮಂಡಳಿಯ ಕಾಯಂ ಸದಸ್ಯ ರಾಷ್ಟ್ರಗಳಾಗಿರುವ ಐದು ದೇಶಗಳಲ್ಲಿ ನಾಲ್ಕು ದೇಶಗಳು ಭಾರತದ (India) ಪರವಾಗಿಯೇ ಇವೆ. ಇಷ್ಟಾದರೂ ಭಾರತಕ್ಕೆ ಕಾಯಂ ಸದಸ್ಯತ್ವ ನೀಡುತ್ತಿಲ್ಲ. ಇದರ ಬೆನ್ನಲ್ಲೇ, “ಭಾರತಕ್ಕೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವ ನೀಡಬೇಕು” ಎಂದು ಟೆಸ್ಲಾ ಸಿಇಒ, ಎಕ್ಸ್ ಸಾಮಾಜಿಕ ಜಾಲತಾಣದ (Twitter) ಮುಖ್ಯಸ್ಥ ಎಲಾನ್ ಮಸ್ಕ್ (Elon Musk) ಆಗ್ರಹಿಸಿದ್ದಾರೆ.
“ವಿಶ್ವಸಂಸ್ಥೆಯು ಬದಲಾವಣೆ ತರಲು ಹಿಂಜರಿಯುತ್ತಿದೆ. ವಿಶ್ವಸಂಸ್ಥೆಯ ಕಾಯಂ ಸದಸ್ಯತ್ವ ಪಡೆದಿರುವ ಬಲಿಷ್ಠ ರಾಷ್ಟ್ರಗಳು ತಾವು ಹೊಂದಿರುವ ಹೆಚ್ಚಿನ ಅಧಿಕಾರವನ್ನು ಬಳಸಿಕೊಳ್ಳಲು ಬಯಸುತ್ತಿವೆ. ಇದೇ ಕಾರಣಕ್ಕಾಗಿ ಆಫ್ರಿಕಾ ಹಾಗೂ ಭಾರತಕ್ಕೆ ಇದುವರೆಗೆ ಭದ್ರತಾ ಮಂಡಳಿಯಲ್ಲಿ ಕಾಯಂ ಸ್ಥಾನ ಸಿಕ್ಕಿಲ್ಲ. ಹಾಗಾಗಿ, ವಿಶ್ವಸಂಸ್ಥೆಯು ನಿಯಮಗಳನ್ನು ಬದಲಿಸಬೇಕು. ಜಗತ್ತಿನಲ್ಲೇ ಭಾರತ ಜನಪ್ರಿಯ ದೇಶವಾದರೂ ಇದುವರೆಗೆ ಭದ್ರತಾ ಮಂಡಳಿಯಲ್ಲಿ ಕಾಯಂ ಸ್ಥಾನ ಸಿಗದಿರುವುದು ಅಸಂಬದ್ಧವಾಗಿದೆ. ಭಾರತ ಹಾಗೂ ಆಫ್ರಿಕಾಗೆ ಕಾಯಂ ಸದಸ್ಯತ್ವ ನೀಡಬೇಕು” ಎಂದು ಎಲಾನ್ ಮಸ್ಕ್ ಆಗ್ರಹಿಸಿದ್ದಾರೆ.
At some point, there needs to be a revision of the UN bodies.
— Elon Musk (@elonmusk) January 21, 2024
Problem is that those with excess power don’t want to give it up.
India not having a permanent seat on the Security Council, despite being the most populous country on Earth, is absurd.
Africa collectively should…
ಎಲಾನ್ ಮಸ್ಕ್ ಅವರ ಮಾತನ್ನೇ ವಿಶ್ವಸಂಶ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರ‍್ರೆಸ್ ಅವರು ಕೂಡ ಅನುಮೋದಿಸಿದ್ದಾರೆ. “ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವವನ್ನು ಬೇರೆ ದೇಶಗಳಿಗೆ ಏಕೆ ನೀಡುತ್ತಿಲ್ಲ? ಜಗತ್ತಿನ ಯಾವುದೇ ಸಂಸ್ಥೆಗಳು ಆಧುನಿಕ ಜಗತ್ತನ್ನು ಪ್ರತಿಬಿಂಬಿಸಬೇಕೇ ಹೊರತು, 80 ವರ್ಷದ ಹಿಂದಿನ ಜಗತ್ತನ್ನಲ್ಲ. ಇದೇ ವರ್ಷದ ಸೆಪ್ಟೆಂಬರ್‌ನಲ್ಲಿ ನಡೆಯುವ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಸುಧಾರಣೆಗಳನ್ನು ಜಾರಿಗೆ ತರುವ ಕುರಿತು ಪ್ರಮುಖ ತೀರ್ಮಾನ ತೆಗೆದುಕೊಳ್ಳಬೇಕಿದೆ” ಎಂದಿದ್ದಾರೆ.
ಇದನ್ನೂ ಓದಿ: Elon Musk : ಮತ್ತೆ ವಿಶ್ವದ ಶ್ರೀಮಂತ ವ್ಯಕ್ತಿಯಾದ ಎಲಾನ್ ಮಸ್ಕ್ ಸಂಪತ್ತು ಎಷ್ಟು ಕೋಟಿ?
ವಿಶ್ವಸಂಸ್ಥೆ ಭದ್ರತಾ ಮಂಡಳಿಯು 5 ಕಾಯಂ ಹಾಗೂ 10 ಕಾಯಂ ಅಲ್ಲದ ಅಥವಾ ತಾತ್ಕಾಲಿಕವಾಗಿ ಸದಸ್ಯತ್ವ ಪಡೆದಿರುವ ರಾಷ್ಟ್ರಗಳನ್ನು ಹೊಂದಿದೆ. ಕಳೆದ 16 ವರ್ಷದಿಂದಲೂ ಭಾರತವು ತಾತ್ಕಾಲಿಕ ಸದಸ್ಯತ್ವ ಪಡೆದಿದೆ. ಅಮೆರಿಕ, ಬ್ರಿಟನ್, ರಷ್ಯಾ, ಫ್ರಾನ್ಸ್ ಹಾಗೂ ಚೀನಾ ಕಾಯಂ ಸದಸ್ಯತ್ವ ಪಡೆದಿವೆ. ಭಾರತಕ್ಕೆ ಕಾಯಂ ಸ್ಥಾನ ನೀಡಲು ಚೀನಾ ಮಾತ್ರ ವಿರೋಧಿಸುತ್ತಿದ್ದು, ಎಲ್ಲ ದೇಶಗಳು ಬೆಂಬಲಿಸುತ್ತಿವೆ. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರೊಂದಿಗೆ ನಡೆದ ಸಭೆಯಲ್ಲಿ ರಷ್ಯಾ ವಿದೇಶಾಂಗ ವ್ಯವಹಾರಗಳ ಸಚಿವ ಸೆರ್ಗೆಯ್ ಲಾವ್ರೋವ್ ಅವರು ಕೂಡ ಭಾರತಕ್ಕೆ ಕಾಯಂ ಸದಸ್ಯತ್ವ ನೀಡಬೇಕು ಎಂದು ಆಗ್ರಹಿಸಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ