Site icon Vistara News

Elon Musk : ಮತ್ತೆ ವಿಶ್ವದ ಶ್ರೀಮಂತ ವ್ಯಕ್ತಿಯಾದ ಎಲಾನ್‌ ಮಸ್ಕ್‌ ಸಂಪತ್ತು ಎಷ್ಟು ಕೋಟಿ?

Elon Musk

ವಾಷಿಂಗ್ಟನ್:‌ ಬ್ಲೂಮ್‌ ಬರ್ಗ್‌ ವರದಿಯ ಪ್ರಕಾರ ಎಲಾನ್‌ ಮಸ್ಕ್‌ ಅವರು ವಿಶ್ವದ ಶ್ರೀಮಂತ ವ್ಯಕ್ತಿಯಾಗಿ ಮತ್ತೆ ಹೊರಹೊಮ್ಮಿದ್ದಾರೆ. (Elon Musk) ಫ್ರಾನ್ಸ್‌ ಮೂಲದ ಉದ್ಯಮಿ ಬರ್ನಾಲ್ಡ್‌ ಅರ್ನಾಲ್ಟ್‌ ಅವರನ್ನು ಹಿಂದಿಕ್ಕಿದ್ದಾರೆ. ಅರ್ನಾಲ್ಟ್‌ ಅವರ ಎಲ್‌ವಿಎಂಎಚ್‌ನ ಷೇರು ಮೌಲ್ಯದಲ್ಲಿ ಇತ್ತೀಚೆಗೆ 2.6% ಇಳಿಕೆಯಾಗಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಅರ್ನಾಲ್ಟ್‌ ಅವರು ಎಲಾನ್‌ ಮಸ್ಕ್‌ ಅವರನ್ನು ಹಿಂದಿಕ್ಕಿದ್ದರು.

ಟ್ವಿಟರ್‌ ಅನ್ನು ಖರೀದಿಸಿದ ಬಳಿಕ ಮಸ್ಕ್‌ ಹಲವು ವಿವಾದಗಳಿಗೆ ಗುರಿಯಾಗಿದ್ದರು. ಸಾವಿರಾರು ಟ್ವಿಟರ್‌ ಸಿಬ್ಬಂದಿ ಉದ್ಯೋಗ ಕಳೆದುಕೊಂಡಿದ್ದರು. ಟೆಸ್ಲಾದ ಷೇರು ಮೌಲ್ಯದ ಮೇಲೂ ನಕಾರಾತ್ಮಕ ಪ್ರಭಾವ ಬೀರಿತ್ತು. ಆರ್ಥಿಕ ಮಂದಗತಿಯ ಪರಿಣಾಮ ಫ್ಯಾಷನ್‌, ಐಷಾರಾಮಿ ವಸ್ತುಗಳ ಬಿಸಿನೆಸ್‌ ಕೂಡ ಮಂದಗತಿಯಲ್ಲಿದೆ. ಇದು ಬರ್ನಾಲ್ಟ್‌ ಅವರಿಗೆ ಹಿನ್ನಡೆ ತಂದಿದೆ ಎಂದು ಬ್ಲೂಮ್‌ ಬರ್ಗ್‌ ವರದಿ ತಿಳಿಸಿದೆ. ಎಲ್‌ವಿಎಂಎಚ್‌ಗೆ ಮುಖ್ಯವಾಗಿ ಚೀನಾ ಮಾರುಕಟ್ಟೆಯಾಗಿತ್ತು. ಕಳೆದ ಏಪ್ರಿಲ್‌ನಿಂದ ಎಲ್‌ವಿಎಂಎಚ್‌ ಷೇರು 10% ಕುಸಿದಿದೆ. ಒಂದೇ ದಿನದಲ್ಲಿ ಅರ್ನಾಲ್ಟ್‌ ಅವರ ನಿವ್ವಳ ಸಂಪತ್ತಿನಲ್ಲಿ 11 ಶತಕೋಟಿ ಡಾಲರ್‌ ಕುಸಿದಿತ್ತು.

ಇದಕ್ಕೆ ತದ್ವಿರುದ್ಧವಾಗಿ ಎಲಾನ್‌ ಮಸ್ಕ್‌ ಅವರ ಸಂಪತ್ತಿನಲ್ಲಿ ಈ ವರ್ಷ 55.3 ಶತಕೋಟಿ ಡಾಲರ್‌ ಹೆಚ್ಚಳವಾಗಿದೆ. ಟೆಸ್ಲಾದ ಅಮೋಘ ಯಶಸ್ಸು ಇದಕ್ಕೆ ಕಾರಣ. ಟೆಸ್ಲಾದ ವಹಿವಾಟು ಎಲಾನ್‌ ಮಸ್ಕ್‌ ಅವರ 71% ಆದಾಯಕ್ಕೆ ಮೂಲವಾಗಿದೆ. ಬ್ಲೂಮ್‌ ಬರ್ಗ್‌ ಬಿಲಿಯನೇರ್‌ ಇಂಡೆಕ್ಸ್‌ (Bloomberg Billionaires Index) ಪ್ರಕಾರ ಎಲಾನ್‌ ಮಸ್ಕ್‌ ಅವರ ಒಟ್ಟು ಸಂಪತ್ತು ಈಗ ಅಂದಾಜು 192 ಶತಕೋಟಿ ಡಾಲರ್.‌ ರೂಪಾಯಿ ಲೆಕ್ಕದಲ್ಲಿ 15.74 ಲಕ್ಷ ಕೋಟಿ ರೂ.) ಹೀಗಿದ್ದರೂ ಫೋರ್ಬ್ಸ್‌ ಪಟ್ಟಿಯಲ್ಲಿ ಈಗಲೂ ಮಸ್ಕ್‌ ಎರಡನೇ ಸ್ಥಾನದಲ್ಲಿ ಹಾಗೂ ಅರ್ನಾಲ್ಟ್‌ ಮೊದಲನೆ ಸ್ಥಾನದಲ್ಲಿ ಇದ್ದಾರೆ.

ಇದನ್ನೂ ಓದಿ:Elon Musk : ಟ್ವಿಟರ್‌ ಬಳಕೆದಾರನ ಕ್ಷಮೆ ಕೋರಿದ ಎಲಾನ್‌ ಮಸ್ಕ್‌, ಕಾರಣವೇನು?

ಟ್ವಿಟರ್‌ ಸಿಇಒ ಎಲಾನ್‌ ಮಸ್ಕ್‌ ಅವರು ಬಳಕೆದಾರರೊಬ್ಬರ ಬಳಿ ಕ್ಷಮೆ ಯಾಚಿಸಿದ್ದಾರೆ. (Twitter CEO Elon Musk) ಏಕೆ ಎನ್ನುತ್ತೀರಾ, ಬಳಕೆದಾರರೊಬ್ಬರು ಟ್ವಿಟರ್‌ ಆ್ಯಪ್ (Twitter app) 9.52ಜಿಬಿ ಸ್ಪೇಸ್‌ ಅನ್ನು ಸ್ಮಾರ್ಟ್ ಫೋನ್‌ನಲ್ಲಿ ತೆಗೆದುಕೊಳ್ಳುತ್ತದೆ ಎಂದು ದೂರಿದ್ದರು.‌ ಬಳಕೆದಾರರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಮಸ್ಕ್‌, ಕ್ಷಮಿಸಿ ಈ ಆ್ಯಪ್ ಹೆಚ್ಚು ಸ್ಪೇಸ್‌ ಅನ್ನು ತೆಗೆದುಕೊಳ್ಳುತ್ತದೆ ಎಂದು ಟ್ವೀಟ್‌ ಮಾಡಿದ್ದರು.

ವಾಟ್ಸ್‌ ಆ್ಯಪ್ ಮತ್ತು ಇತರ ಆ್ಯಪ್‌ ಅನುಕ್ರಮವಾಗಿ 1.31 ಜಿಬಿ ಮತ್ತು 2.01 ಜಿಬಿ ಸ್ಪೇಸ್‌ ಅನ್ನು ತೆಗೆದುಕೊಳ್ಳುತ್ತದೆ. ಈ ಟ್ವೀಟ್‌ 7.5 ಕೋಟಿ ವ್ಯೂಸ್‌ ಮತ್ತು 6.70 ಲಕ್ಷ ಲೈಕ್ಸ್‌ಗಳನ್ನು ಪಡೆದಿದೆ. ಈ ಸಮಸ್ಯೆಯನ್ನು ಬಗೆಹರಿಸಲು ಏನಾದರೂ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಮಸ್ಕ್‌ ಅವರನ್ನು ಒತ್ತಾಯಿಸಿದ್ದಾರೆ.

ಟ್ವಿಟರ್‌ ಸಿಇಒ ಆಗಿ ಎಲಾನ್‌ ಮಸ್ಕ್‌ ಅವರು ಕಾರ್ಯನಿರ್ವಹಿಸಿದಂದಿನಿಂದ ಭಾರತ, ಟರ್ಕಿ ಸೇರಿದಂತೆ ನಾನಾ ದೇಶಗಳ ಸರ್ಕಾರಗಳಿಂದ ಕಂಟೆಂಟ್‌ಗಳನ್ನು ನಿರ್ಬಂಧಿಸಲು ಬಂದಿದ್ದ 83% ಮನವಿಗಳನ್ನು ಟ್ವಿಟರ್‌ ಪುರಸ್ಕರಿಸಿದೆ.

ಟ್ವಿಟರ್‌ (Twitter) ಅನ್ನು ಖರೀದಿಸಿದ ಮೇಲೆ ಎಲಾನ್‌ ಮಸ್ಕ್‌ (Elon Musk) ಅವರು ಅದರಲ್ಲಿ ಹಲವಾರು ಬದಲಾವಣೆಯನ್ನು ಜಾರಿಗೊಳಿಸಿದ್ದಾರೆ. ಮಾತ್ರವಲ್ಲದೆ ಇನ್ನು ಮುಂದೆ ಪ್ರತಿ ತಿಂಗಳು ತಮ್ಮ ವೈಯಕ್ತಿಕ ಟ್ವಿಟರ್‌ ಖಾತೆಯಿಂದ 80 ಲಕ್ಷ ರೂ. ಆದಾಯ ಗಳಿಸಲಿದ್ದಾರೆ. ಇದು ಹೇಗೆ ಎನ್ನುತ್ತೀರಾ?! ಇಲ್ಲಿದೆ ಇಂಟರೆಸ್ಟಿಂಗ್‌ ಮಾಹಿತಿ. ಬ್ಲೂ ಟಿಕ್‌ (blue tick service) ಗುರುತು ಪಡೆಯಬೇಕಿದ್ದರೆ ಮಾಸಿಕ 4 ಡಾಲರ್‌ ಚಂದಾದಾರಿಕೆಯ ಪ್ಲಾನ್‌ ಖರೀದಿಸಬೇಕಾಗುತ್ತದೆ.

ಎಲಾನ್ ಮಸ್ಕ್‌ ಅವರು ಟ್ವಿಟರ್‌ನಲ್ಲಿ Monetization ಸ್ಕೀಮ್‌ ಅನ್ನೂ ಅಳವಡಿಸಿದ್ದಾರೆ. ಟ್ವಿಟರ್‌ ಕ್ರಿಯೇಟರ್‌ ಸಬ್‌ಸ್ಕ್ರಿಪ್ಷನ್‌ ಪ್ರೋಗ್ರಾಮ್‌ (Twitter Creator Subscription) ಈ ಫೀಚರ್‌ ಮೂಲಕ ಎಲಾನ್‌ ಮಸ್ಕ್‌ ಅವರು ತಿಂಗಳಿಗೆ 80 ಲಕ್ಷ ರೂ. ಆದಾಯ ಗಳಿಸಲು ಹಾದಿ ಸುಗಮವಾಗಿದೆ. ಈ ಫೀಚರ್‌ ಉಚಿತವಲ್ಲ, ಇದರ ಚಂದಾದಾರಿಕೆಗೆ ಪ್ರತಿ ತಿಂಗಳು 4 ಡಾಲರ್‌ ಅಥವಾ 330 ರೂ.ಗಳನ್ನು ಕೊಡಬೇಕಾಗುತ್ತದೆ. ಇಲ್ಲಿ ತಮ್ಮ ವಿಶೇಷ ಕಂಟೆಂಟ್‌ಗಳನ್ನು (exclusive content) ಮಸ್ಕ್‌ ಪೋಸ್ಟ್‌ ಮಾಡಲಿದ್ದಾರೆ.

ಟ್ವಿಟರ್‌ ಸಿಇಒ ಎಲಾನ್‌ ಮಸ್ಕ್‌ ಅವರು 24,700 ಸೂಪರ್ ಫಾಲೋವರ್‌ಗಳನ್ನು ಹೊಂದಿದ್ದಾರೆ.‌ ಲೆಕ್ಕಾಚಾರದ ಪ್ರಕಾರ 24.7 ಸಾವಿರ ಚಂದಾದಾರರನ್ನು ಹೊಂದಿರುವ (subscibers) ಎಲಾನ್‌ ಮಸ್ಕ್‌ ಅವರು ಮಾಸಿಕ 68,42,000 ರೂ. ಸಂಪಾದಿಸಲಿದ್ದಾರೆ.

ಚೀನಾದ ಟೆನ್ಸೆಂಟ್‌ ಹೋಲ್ಡಿಂಗ್ಸ್‌ನ ವಿಚಾಟ್‌ (WeChat) ಸೂಪರ್‌ ಆ್ಯಪ್‌ನಲ್ಲಿ ಎಲ್ಲ ಬಗೆಯ ಟಿಕೆಟ್‌ ಬುಕಿಂಗ್‌, ಬಿಲ್‌ ಪಾವತಿ, ಪೇಮೆಂಟ್‌ಗಳನ್ನು ಮಾಡಬಹುದು. ಟ್ವಿಟರ್‌ ಕೂಡ ಅಂಥ ಸೂಪರ್‌ ಆ್ಯಪ್‌ ಆಗಿ ಪರಿವರ್ತನೆಯಾಗುವ ನಿರೀಕ್ಷೆ ಇದೆ ಎಂದು ವರದಿಯಾಗಿದೆ. ಮೊಕದ್ದಮೆಯೊಂದರಲ್ಲಿ ಕ್ಯಾಲಿಫೋರ್ನಿಯಾದ ಕೋರ್ಟ್‌ಗೆ ಸಲ್ಲಿಸಿರುವ ದಾಖಲೆಗಳ ಪ್ರಕಾರ, X ಕಾರ್ಪ್‌ ಜತೆ ವಿಲೀನವಾದ ಬಳಿಕ ಟ್ವಿಟರ್‌ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಲಿದೆ. ಹೀಗಿದ್ದರೂ, ವಿಲೀನದ ಸ್ವರೂಪ ಇನ್ನೂ ಸ್ಪಷ್ಟತೆ ಪಡೆದಿಲ್ಲ. ಎಲಾನ್‌ ಮಸ್ಕ್‌ ಅವರು ಕಳೆದ ವರ್ಷ 44 ಶತಕೋಟಿ ಡಾಲರ್‌ಗಳ ಮೆಗಾ ಡೀಲ್‌ನಲ್ಲಿ ಟ್ವಿಟರ್‌ ಅನ್ನು ಖರೀದಿಸಿದ್ದರು. (ಅಂದಾಜು 3.36 ಲಕ್ಷ ಕೋಟಿ ರೂ.)

Exit mobile version