Site icon Vistara News

EPF Interest Rate Hike: ನೌಕರರಿಗೆ ಸಿಹಿಸುದ್ದಿ: ಇಪಿಎಫ್‌ ಬಡ್ಡಿ ದರ ಶೇ.8.25ಕ್ಕೆ ಏರಿಕೆ

epfo

ಹೊಸದಿಲ್ಲಿ: ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್‌ಒ (EPFO) 2023-24ರ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇ.8.25ಕ್ಕೆ ಹೆಚ್ಚಿಸಿದೆ (EPF Interest Rate Hike). ಇದು ಮೂರು ವರ್ಷಗಳ ಗರಿಷ್ಠ ಮಟ್ಟವಾಗಿದೆ.

ಶನಿವಾರ ನಡೆದ ಇಪಿಎಫ್‌ಒನ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಗಳ (ಸಿಬಿಟಿ) ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. EPF ಮೇಲಿನ ಬಡ್ಡಿದರವನ್ನು 2021-22ರಲ್ಲಿದ್ದ 8.10%ರಿಂದ 2022-23ರ ಆರ್ಥಿಕ ವರ್ಷಕ್ಕೆ 8.15%ಗೆ ಇಪಿಎಫ್‌ಒ ಏರಿಸಿತ್ತು. ಮಾರ್ಚ್ 2023ರಲ್ಲಿ ಆ ಹೆಚ್ಚಳ ಮಾಡಿದ ನಂತರ ಈ ಕ್ರಮ ಬಂದಿದೆ. ​​

EPF ಮೇಲಿನ ಬಡ್ಡಿ ದರವನ್ನು 2020-21ರಲ್ಲಿದ್ದ 8.5%ರಿಂದ 2021-22ರ ಹಣಕಾಸು ವರ್ಷಕ್ಕೆ 8.1%ಕ್ಕೆ ಇಳಿಸಲಾಗಿತ್ತು. ಇದು EPFOದ ನಾಲ್ಕು ದಶಕಗಳ ಅತಿ ಕಡಿಮೆ ಬಡ್ಡಿದರವಾಗಿತ್ತು.

2023-24ರ 8.25% ಬಡ್ಡಿ ದರವು EPFO​​ನ ಆರು ಕೋಟಿಗೂ ಹೆಚ್ಚು ಸದಸ್ಯರ ಪಾಲಿಗೆ ಧನಾತ್ಮಕ ಬೆಳವಣಿಗೆಯಾಗಿದೆ. 2020-21ರ EPF ಮೇಲಿನ ಬಡ್ಡಿದರವನ್ನು ಮಾರ್ಚ್ 2021ರಲ್ಲಿ 8.5%ಗೆ ನಿಗದಿಪಡಿಸಲಾಗಿತ್ತು ಎಂಬುದು ಗಮನಿಸಬೇಕಾದ ಸಂಗತಿ.

CBTಯ ನಿರ್ಧಾರದ ನಂತರ, ಮುಂಬರುವ ಆರ್ಥಿಕ ವರ್ಷಕ್ಕೆ EPF ಠೇವಣಿಗಳ ಮೇಲಿನ ಬಡ್ಡಿ ದರವನ್ನು ಒಪ್ಪಿಗೆಗಾಗಿ ಹಣಕಾಸು ಸಚಿವಾಲಯಕ್ಕೆ ರವಾನಿಸಲಾಗುತ್ತದೆ.

ಹೊಸ ಸದಸ್ಯರು

hosಇಪಿಎಫ್ಒ ಜೂನ್ 2023ರಲ್ಲಿ ಒಟ್ಟು 17.89 ಲಕ್ಷ ಸದಸ್ಯರನ್ನು ನೋಂದಾಯಿಸಿಕೊಂಡಿದೆ ಎಂದು ಕಾರ್ಮಿಕ ಸಚಿವಾಲಯ ಹೇಳಿಕೆ ನೀಡಿದೆ. 3,491 ಸಂಸ್ಥೆಗಳು ತಮ್ಮ ಮೊದಲ ಇಸಿಆರ್ ಅನ್ನು ಜೂನ್​ ತಿಂಗಳಲ್ಲಿ ಕಳುಹಿಸುವ ಮೂಲಕ ತಮ್ಮ ಉದ್ಯೋಗಿಗಳಿಗೆ ಇಪಿಎಫ್ಒನ ಸಾಮಾಜಿಕ ಭದ್ರತೆಯನ್ನು ಕಲ್ಪಿಸಿವೆ ಎಂದು ಕಾರ್ಮಿಕ ಸಚಿವಾಲಯ ತಿಳಿಸಿದೆ.

ವೇತನದಾರರ ಅಂಕಿ ಅಂಶದ ಮಾಸಿಕ ಹೋಲಿಕೆಯು 2023ರ ಮೇ ತಿಂಗಳಿಗೆ ಹೋಲಿಸಿದರೆ ಸುಮಾರು 9.71 ಪ್ರತಿಶತದಷ್ಟು ಹೆಚ್ಚಳ ಕಂಡು ಬಂದಿದೆ. ಅದೇ ರೀತಿ ಒಟ್ಟಾರೆ ಸೇರ್ಪಡೆಯೂ ಆಗಸ್ಟ್ 2022 ರಿಂದ ಕಳೆದ 11 ತಿಂಗಳಲ್ಲಿ ಅತಿ ಹೆಚ್ಚು ಸಂಖ್ಯೆಯ ದಾಖಲೆಯನ್ನು ಸೃಷ್ಟಿಸಿದೆ.

ಜೂನ್ 2023 ರಲ್ಲಿ ಸುಮಾರು 10.14 ಲಕ್ಷ ಹೊಸ (ಮೊದಲ ಬಾರಿಗೆ) ಸದಸ್ಯರು ನೋಂದಾಯಿಸಿಕೊಂಡಿದ್ದಾರೆ ಎಂದು ಡೇಟಾ ಸೂಚಿಸುತ್ತದೆ. ಇದು ಆಗಸ್ಟ್ 2022ರ ನಂತರದ ಗರಿಷ್ಠ ಪ್ರಮಾಣವಾಗಿದೆ. ಹೊಸದಾಗಿ ಸೇರ್ಪಡೆಗೊಂಡ ಸದಸ್ಯರಲ್ಲಿ, 18-25 ವರ್ಷ ವಯಸ್ಸಿನವರು. ಈ ವಯಸ್ಸಿನ ಹೊಸ ಸದಸ್ಯರ ಶೇಕಡಾ 57.87 ರಷ್ಟಿದೆ. ಇದು ಯುವಕರ ದಾಖಲಾತಿಯಲ್ಲಿ ಹೆಚ್ಚುತ್ತಿರುವುದನ್ನು ಖಚಿತಪಡಿಸಿದೆ. ಅವರೆಲ್ಲರೂ ಮೊದಲ ಬಾರಿಗೆ ಉದ್ಯೋ ಪಡೆದವರಾಗಿದ್ದು. ದೇಶದ ಸಂಘಟಿತ ವಲಯಕ್ಕೆ ಸೇರುತ್ತಾರೆ ಎಂದು ಸಚಿವಾಲಯ ಹೇಳಿದೆ.

ವೇತನದಾರರ ಅಂಕಿಅಂಶಗಳ ಪ್ರಕಾರ, ಸರಿಸುಮಾರು 12.65 ಲಕ್ಷ ಸದಸ್ಯರು ನಿರ್ಗಮಿಸಿದ್ದಾರೆ. ಆದರೆ ಅವರು ಮರಳಿ ನೋಂದಣಿ ಮಾಡಿಕೊಂಡಿದ್ದಾರೆ. ಈ ಸದಸ್ಯರು ತಮ್ಮ ಉದ್ಯೋಗವನ್ನು ಬದಲಾಯಿಸಿದ್ದರು ಮತ್ತು ಇಪಿಎಫ್ಒ ಅಡಿಯಲ್ಲಿ ಬರುವ ಸಂಸ್ಥೆಗಳಿಗೆ ಮತ್ತೆ ಸೇರಿಕೊಂಡಿದ್ದಾರೆ. ಅವರೆಲ್ಲರೂ ತಮ್ಮ ಡೆಪಾಸಿಟ್​​ಗಳನ್ನು ವರ್ಗಾಯಿಸಿಕೊಂಡಿದ್ದಾರೆ. ಇದರಿಂದಾಗಿ ಅವರ ಸಾಮಾಜಿಕ ಭದ್ರತಾ ರಕ್ಷಣೆ ವಿಸ್ತರಣೆಗೊಂಡಿದೆ ಎಂಬುದಾಗಿ ಇಲಾಖೆ ಹೇಳಿದೆ.

ಇದನ್ನೂ ಓದಿ: ಆರ್‌ಬಿಐ ಬಳಿಕ ಇಪಿಎಫ್‌ಒನಿಂದಲೂ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್ ಮೇಲೆ ನಿರ್ಬಂಧ!

Exit mobile version