ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಫ್ರಾನ್ಸ್‌ಗೆ ಭೇಟಿ (France Visit) ನೀಡುತ್ತಿರುವ ಹೊತ್ತಿನಲ್ಲೇ ಮಣಿಪುರ ಹಿಂಸಾಚಾರ (2023 Manipur violence) ಕುರಿತು ಫ್ರೆಂಚ್ ಸಿಟಿ ಸ್ಟ್ರಾಸ್‌ಬರ್ಗ್‌ನಲ್ಲಿ (French city of Strasbourg) ನಡೆಯುತ್ತಿರುವ ಐರೋಪ್ಯ ಒಕ್ಕೂಟ ಸಂಸತ್ತಿನ ಕಲಾಪದಲ್ಲಿ (European Parliament) ಚರ್ಚಿಸಲು ಪ್ರಸ್ತಾಪನೆ ಸಲ್ಲಿಸಲಾಗಿದೆ. ಆದರೆ, ಐರೋಪ್ಯ ಒಕ್ಕೂಟದ ಈ ನಿರ್ಧಾರಕ್ಕೆ ಭಾರತವು (India) ತನ್ನ ತೀವ್ರ ವಿರೋಧವನ್ನು ದಾಖಲಿಸಿದೆ. ಈ ಸಮಸ್ಯೆಯು ಭಾರತದ ಆಂತರಿಕ ವಿಷಯವಾಗಿದೆ ಎಂದು ಹೇಳಿದೆ.
ಜುಲೈ 10ರಿಂದ 13ರ ಅವಧಿಯಲ್ಲಿ ಸ್ಟ್ರಾಸ್‌ಬರ್ಗ್‌ನಲ್ಲಿ ನಡೆದ ಸಮಗ್ರ ಐರೋಪ್ಯ ಒಕ್ಕೂಟ ಸಂಸತ್ ಅಧಿವೇಶನದಲ್ಲಿ ಆರು ಸಂಸದೀಯ ಗುಂಪುಗಳು, ಎಡಪಂಥೀಯ, ಬಲ, ಮಧ್ಯ-ಬಲ, ಸಂಪ್ರದಾಯವಾದಿ ಮತ್ತು ಕ್ರಿಶ್ಚಿಯನ್ ಗುಂಪುಗಳು ಮಣಿಪುರದ ಪರಿಸ್ಥಿತಿಯ ಕುರಿತು ತುರ್ತು ಚರ್ಚೆಗಾಗಿ ಪ್ರಸ್ತಾವನೆಗಳನ್ನು ಸಲ್ಲಿಸಿವೆ.
ಈ ಪ್ರಸ್ತಾವನೆಯಲ್ಲಿ ಮಣಿಪುರ ಹಿಂಸಾಚಾರ ಕುರಿತು ಚರ್ಚಿಸಿ, ಯುರೋಪಿಯನ್ ಪಾರ್ಲಿಮೆಂಟ್ ನಿರ್ಣಯ ಕೈಗೊಳ್ಳುವ ಬಗ್ಗೆ ತಿಳಿಸಲಾಗಿದೆ. ಆದರೆ, ಭಾರತ ಸರ್ಕಾರವು ಈ ಬಗ್ಗೆ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದೆ. ಮಣಿಪುರ ಸಮಸ್ಯೆಯು ಭಾರತದ ಆಂತರಿಕ ವಿಷಯವಾಗಿದೆ. ಬೇರೆಯವರು ಈ ಬಗ್ಗೆ ಗಮನ ಹರಿಸಲು ಅಗತ್ಯವಿಲ್ಲ ಎಂದು ಹೇಳಿದೆ. ಈ ಕುರಿತು ಭಾರತೀಯ ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವತ್ರಾ ಅವರು ಸ್ಪಷ್ಟವಾಗಿ ಹೇಳಿದ್ದು, ಮಣಿಪುರ ವಿಷಯವನ್ನು ಸಂಪೂರ್ಣವಾಗಿ ಭಾರತದ ಆಂತರಿಕ ವಿಷಯವಾಗಿದೆ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: ಮಣಿಪುರ ಹಿಂಸಾಚಾರ; ನಿಯಂತ್ರಣಕ್ಕೆ ಸಹಾಯದ ಆಫರ್ ಕೊಟ್ಟ ಅಮೆರಿಕ
ಐರೋಪ್ಯ ಒಕ್ಕೂಟ ಸಂಸತ್ತಿನಲ್ಲಿ ಏನಾಗುತ್ತಿದೆ ಎಂಬ ಬಗ್ಗೆ ನಮಗೆ ಸಂಪೂರ್ಣ ಅರಿವಿದೆ. ನಾವು ಸಂಬಂಧಪಟ್ಟ ಐರೋಪ್ಯ ಒಕ್ಕೂಟದ ಸಂಸದರಿಗೆ ಈ ವಿಷಯ ತಿಳಿಸಿದ್ದೇವೆ. ಆದರೆ ಇದು ಸಂಪೂರ್ಣವಾಗಿಭಾರತದ ಆಂತರಿಕ ವಿಷಯವಾಗಿದೆ ಎಂದು ನಾವು ಅವರಿಗೆ ಸ್ಪಷ್ಟಪಡಿಸಿದ್ದೇವೆ ಎಂದು ವಿದೇಶಾಂಗ ಕಾರ್ಯದರ್ಶಿ ತಿಳಿಸಿದ್ದಾರೆ.