ನವ ದೆಹಲಿ: ಲಿಂಗ ಪರಿವರ್ತಿತ ಜನರಿಗೆ ಸಮಗ್ರ ಆಯುಷ್ಮಾನ್ ಭಾರತ್ (Ayushman Bharat) ಯೋಜನೆಯನ್ನು ವಿಸ್ತರಿಸಲಾಗಿದೆ.
ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಬುಧವಾರ ಈ ವಿಷಯ ತಿಳಿಸಿದರು. ಲಿಂಗಪರಿವರ್ತಿತ ಜನತೆಗೂ ( Transgender people) ಕಾನುನುಬದ್ಧ ಅನುಕೂಲಗಳನ್ನು ಪಡೆಯುವ ಎಲ್ಲ ಹಕ್ಕುಗಳೂ ಇವೆ. ಆಯುಷ್ಮಾನ್ ಭಾರತ್ ನ್ಯಾಶನಲ್ ಪೋರ್ಟಲ್ ಮೂಲಕ ಲಿಂಗಪರಿವರ್ತಿತರಿಗೆ ಟ್ರಾನ್ಸ್‌ಜೆಂಡರ್ ಸರ್ಟಿಫಿಕೇಟ್ ನೀಡಲಾಗುವುದು. ಆಯುಷ್ಮಾನ್ ಭಾರತ್ ರಿಜಿಸ್ಟ್ರಿಯಲ್ಲಿ ಲಿಂಗ ಪರಿವರ್ತಿತರಿಗೂ ಮಾನ್ಯತೆ ಇದೆ ಎಂದು ಅವರು ವಿವರಿಸಿದರು.
ಲಿಂಗಪರಿವರ್ತಿತರಿಗೆ ಆಯುಷ್ಮಾನ್ ಭಾರತ್ ಯೋಜನೆಯ ಅಡಿಯಲ್ಲಿ ಈಗಿನ AB PM-JAY ಪ್ಯಾಕೇಜ್ ಜತೆಗೆ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ( sex reassignment surgery) ಅನ್ನು ಕೂಡ ಸೇರಿಸಲಾಗುವುದು. ೫ ಲಕ್ಷ ರೂ. ತನಕ ಆರೋಗ್ಯ ವಿಮೆ ಸೌಲಭ್ಯ ದೊರೆಯಲಿದೆ.