Site icon Vistara News

Fact Check | ಕೋವಿಡ್ ಒಮಿಕ್ರಾನ್ ಎಕ್ಸ್‌ಬಿಬಿ ವೇರಿಯಂಟ್ ಇದೆಯೇ? ಆರೋಗ್ಯ ಇಲಾಖೆ ಹೇಳಿದ್ದೇನು?

Covid @ China

ನವದೆಹಲಿ: ಚೀನಾದಲ್ಲಿ ಕೊರೊನಾ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿರುವ ಕೋವಿಡ್-19 ವೈರಸ್‌ನ ಒಮಿಕ್ರಾನ್ ಸಬ್-ವೇರಿಯಂಟ್ ಬಿಎಎಫ್.7 ನಾಲ್ಕು ಪ್ರಕರಣಗಳು ಭಾರತದಲ್ಲಿ ಪತ್ತೆಯಾಗಿವೆ. ಆದರೆ, ಈ ಬಗ್ಗೆ ಸಾಕಷ್ಟು ತಪ್ಪು ಮಾಹಿತಿಗಳು ರವಾನೆಯಾಗುತ್ತಿವೆ. ಅದೇ ರೀತಿ, ಕೋವಿಡ್ ಎಕ್ಸ್‌ಬಿಬಿ(Covid-19 omircron XBB) ಎಂಬ ಉಪತಳಿ ಕೇಸ್ ಭಾರತದಲ್ಲಿ ಪತ್ತೆಯಾಗಿದೆ ಎಂಬ ವಾಟ್ಸ್ಆ್ಯಪ್ ಸಂದೇಶ ಹರಿದಾಡುತ್ತಿದ್ದು, ಇದು ಸುಳ್ಳು ಸುದ್ದಿ ಎಂದು ಸ್ವತಃ ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ(Fact Check).

ಆರೋಗ್ಯ ಸಚಿವಾಲಯವು ಇತ್ತೀಚಿನ ಕೊರೊನಾ ವೈರಸ್‌ ವೇರಿಯಂಟ್ ವಿವರವಾದ ಮಾಹಿತಿಯನ್ನು ಹಂಚಿಕೊಂಡಿದ್ದು, ಕೋವಿಡ್ ಎಕ್ಸ್‌ಬಿಬಿ ವೇರಿಯಂಟ್ ಎಂಬುದು ಸುದ್ದು ಸುಳ್ಳು ಸುದ್ದಿಯಾಗಿದ್ದು, ದಾರಿ ತಪ್ಪಿಸುವ ಮಾಹಿತಿಯನ್ನು ಹರಿಯಬಿಡಲಾಗಿದೆ ಎಂದು ಹೇಳಿದೆ.

ಕೋವಿಡ್-ಒಮಿಕ್ರಾನ್ ಎಕ್ಸ್‌ಬಿಬಿ ವೇರಿಯಂಟ್ ಮಾರಣಾಂತಿಕವಾಗಿದ್ದು, ಈ ವೈರಸ್ ಪತ್ತೆ ಕೂಡ ಆಗವುದಿಲ್ಲ. ಹಾಗಾಗಿ, ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕೆಂದು ವಾಟ್ಸ್ಆ್ಯಪ್ ಸಂದೇಶವು ಹರಿದಾಡುತ್ತಿದೆ. ಈ ಕುರಿತು ಕೇಂದ್ರ ಆರೋಗ್ಯ ಸಚಿವಾಲಯವು ಸ್ಪಷ್ಟಣೆ ನೀಡಿ, ಇದೊಂದು ತಪ್ಪ ಮಾಹಿತಿಯಿಂದ ಕೂಡಿರುವ ಸಂದೇಶ ಎಂದು ಹೇಳಿದೆ.

ಇದನ್ನೂ ಓದಿ | coronavirus | ಕೋವಿಡ್-19 ಉಪತಳಿ ಮೇಲೆ ಕಣ್ಗಾವಲು: ಸಂಸತ್ತಿಗೆ ಮಾಹಿತಿ ನೀಡಿದ ಕೇಂದ್ರ ಆರೋಗ್ಯ ಸಚಿವ

Exit mobile version