Site icon Vistara News

Geetika Srivastava: ಪಾಕಿಸ್ತಾನದ ಭಾರತದ ಹೈಕಮಿಷನ್‌ಗೆ ಗೀತಿಕಾ ಶ್ರೀವಾಸ್ತವ ನೂತನ ಅಧಿಕಾರಿ

Geetika Srivastava

ನವದೆಹಲಿ: ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತದ ಹೈಕಮಿಷನ್‌ ಕಚೇರಿಗೆ ಗೀತಿಕಾ ಶ್ರೀವಾಸ್ತವ (Geetika Srivastava) ನೂತನ ಮುಖ್ಯಸ್ಥೆಯಾಗಿದ್ದಾರೆ. ಪಾಕಿಸ್ತಾನದ ರಾಯಭಾರ ಯೋಜನೆಗೆ ಮೊದಲ ಬಾರಿಗೆ ಮಹಿಳಾ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಪ್ರಸ್ತುತ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ (MEA) ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ಗೀತಿಕಾ. ಡಾ ಎಂ ಸುರೇಶ್ ಕುಮಾರ್ ಅವರ ಉತ್ತರಾಧಿಕಾರಿಯಾಗಲಿದ್ದಾರೆ. ಸುರೇಶ್ ಕುಮಾರ್ ಅವರು ನವದೆಹಲಿಗೆ ಮರಳುವ ಸಾಧ್ಯತೆ ಇದೆ ಎನ್ನಲಾಗಿದೆ.

ವಿದೇಶದಲ್ಲಿ ರಾಯಭಾರಿ ಅಥವಾ ಹೈಕಮಿಷನರ್ ಇಲ್ಲದೆ ಇರುವಾಗ ರಾಯಭಾರ ಯೋಜನೆಯ ತಾತ್ಕಾಲಿಕ ಹೊಣೆಗಾರಿಕೆಯನ್ನು ಈ ಹುದ್ದೆಗೆ ನೀಡಲಾಗುತ್ತದೆ. ಇಸ್ಲಾಮಾಬಾದ್ ಮತ್ತು ನವದೆಹಲಿಯಲ್ಲಿನ ಭಾರತ ಮತ್ತು ಪಾಕಿಸ್ತಾನಿ ಮಿಷನ್‌ಗಳು ಆಗಸ್ಟ್ 2019 ರಿಂದ ಹೈಕಮಿಷನರ್‌ಗಳಿಲ್ಲದೆ ಮತ್ತು ಆಯಾ ಚಾರ್ಜ್ ʻಡಿ’ಅಫೇರ್‌ಗಳ ನೇತೃತ್ವದಲ್ಲಿದೆ. ಅಜಯ್ ಬಿಸಾರಿಯಾ ಇಸ್ಲಾಮಾಬಾದ್‌ಗೆ ಕೊನೆಯ ಭಾರತೀಯ ಹೈ ಕಮಿಷನರ್ ಆಗಿದ್ದರು.

1947ರಿಂದ ಈವರೆಗೂ 22 ಮಂದಿ ಹೈ ಕಮಿಷನ್ ನೇತೃತ್ವ ವಹಿಸಿದ್ದು, ಅವರೆಲ್ಲರೂ ಪುರುಷ ಅಧಿಕಾರಿಗಳಾಗಿದ್ದಾರೆ. ಅಜಯ್ ಬಿಸೇರಿಯಾ ಅವರು ಇಸ್ಲಾಮಾಬಾದ್‌ನಲ್ಲಿನ ಭಾರತದ ಕೊನೆಯ ಹೈ ಕಮಿಷನರ್ ಆಗಿದ್ದಾರೆ.

ಇದನ್ನೂ ಓದಿ: Cauvery Dispute : 5 ಸಾವಿರ ಕ್ಯೂಸೆಕ್‌ ನೀರು ಬಿಡುಗಡೆ ಕಡ್ಡಾಯ; ಕಾವೇರಿ ಪ್ರಾಧಿಕಾರ ಆದೇಶ, ರಾಜ್ಯಕ್ಕೆ ಮತ್ತೆ ಹಿನ್ನಡೆ

ಗೀತಿಕಾ ಶ್ರೀವಾಸ್ತವ, 2005ರ ಬ್ಯಾಚ್‌ನ ಭಾರತೀಯ ವಿದೇಶಾಂಗ ಸೇವೆ (IFS) ಅಧಿಕಾರಿಯಾಗಿದ್ದರು. ಇಸ್ಲಾಮಾಬಾದ್‌ನ ಸಿಡಿಎ (Charge d’Affaires) ನೂತನ ಮುಖ್ಯಸ್ಥರಾಗಲಿದ್ದಾರೆ. ಎಂಇಎ ಜಂಟಿ ಕಾರ್ಯದರ್ಶಿಯಾಗಿರುವ ಅವರು, ಇಂಡೋ- ಪೆಸಿಫಿಕ್ ವಿಭಾಗವನ್ನು ನೋಡಿಕೊಳ್ಳುತ್ತಿದ್ದಾರೆ.

Exit mobile version