ನವದೆಹಲಿ: ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‌ಗಢ ಹಾಗೂ ರಾಜಸ್ಥಾನದಲ್ಲಿ ಚುನಾವಣೆ ಫಲಿತಾಂಶದ (Assembly Elections 2023) ಸ್ಪಷ್ಟ ಚಿತ್ರಣ ಸಿಕ್ಕಿದೆ. ಸೋಮವಾರ ಮಿಜೋರಾಂ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದೆ. ಮತ ಎಣಿಕೆ ಆರಂಭವಾಗಿದ್ದು, ಝೆಡ್‌ಪಿಎಂ ಪಕ್ಷವು ಮುನ್ನಡೆ ಸಾಧಿಸಿದೆ. ಮಿಜೋರಾಂ ವಿಧಾನಸಭೆ ಚುನಾವಣೆ ಫಲಿತಾಂಶದ ಕ್ಷಣಕ್ಷಣದ ಮಾಹಿತಿ ಇಲ್ಲಿದೆ.
ವಿಧಾನಸಭೆ ಚುನಾವಣೆ ಫಲಿತಾಂಶದ ಸಮಗ್ರ, ಕ್ಷಣಕ್ಷಣದ ಚಿತ್ರಣ ಪಡೆಯಲು ಈ ಲಿಂಕ್ ಫಾಲೋ ಮಾಡಿ:
https://vistaranews.com/tag/assembly-election-2023
3 ರಾಜ್ಯಗಳಲ್ಲಿ ಮುನ್ನಡೆ ಕಾಯ್ದುಕೊಂಡ ಬಿಜೆಪಿ
ಲೋಕಸಭೆ ಚುನಾವಣೆಯ ಮೇಲೆ ಪರಿಣಾಮ ಬೀರಬಲ್ಲ ಈ ಫಲಿತಾಂಶ ಬಿಜೆಪಿಗೆ ಉತ್ತೇಜನ ನೀಡಿದೆ. ಇಂದು ಮತ ಎಣಿಕೆಯಾಗುವ 4 ರಾಜ್ಯಗಳ ಪೈಕಿ 3ರಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಅಧಿಕಾರ ಹಿಡಿಯಲಿದೆ. ಇತ್ತ ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳಲಿದ್ದು, ತೆಲಂಗಾಣದಲ್ಲಿ ಅಧಿಕಾರಕ್ಕೆ ಬರಲಿದೆ.
ತೆಲಂಗಾಣದಲ್ಲಿ ಕಾಂಗ್ರೆಸ್ ವಿಜಯೋತ್ಸವ
ತೆಲಂಗಾಣದಲ್ಲಿ ಬಿಆರ್‌ಎಸ್‌ನಿಂದ ಅಧಿಕಾರ ಕಸಿಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಇಲ್ಲಿ ಕಾಂಗ್ರೆಸ್ 64 ಸ್ಥಾನಗಳಲ್ಲಿ ಮುಂದಿದೆ. ಬಿಆರ್‌ಎಸ್ 41 ಕಡೆಗಳಲ್ಲಿ ಮಾತ್ರ ಮುನ್ನಡೆ ಕಾಯ್ದುಕೊಂಡಿದೆ. ಭರ್ಜರಿ ವಿಜಯದತ್ತ ಕಾಂಗ್ರೆಸ್ ಸಾಗಿದ್ದು, ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದ್ದಾರೆ.
1 ಗಂಟೆ ವೇಳೆಗೆ ಪಕ್ಷಗಳ ಬಲಾಬಲ
ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶ ಬಹುತೇಕ ಸ್ಪಷ್ಟವಾಗಿದೆ. ಮಧ್ಯಾಹ್ನ 1 ಗಂಟೆಯವರೆಗೆಗಿನ ಚಿತ್ರಣ ಹೀಗಿದೆ:
ಮಧ್ಯಪ್ರದೇಶ
ಒಟ್ಟು: 230
ಬಹುಮತ: 116
ಬಿಜೆಪಿ ಮುನ್ನಡೆ : 164
ಕಾಂಗ್ರೆಸ್ ಮುನ್ನಡೆ: 60
ಇತರ ಮುನ್ನಡೆ: 06
ರಾಜಸ್ಥಾನ
ಒಟ್ಟು ಸ್ಥಾನ: 199
ಬಹುಮತ: 100
ಬಿಜೆಪಿ ಮುನ್ನಡೆ: 115
ಕಾಂಗ್ರೆಸ್ ಮುನ್ನಡೆ: 70
ಇತರ ಮುನ್ನಡೆ: 14
ಛತ್ತೀಸ್‌ಗಢ
ಒಟ್ಟು ಸ್ಥಾನಗಳು: 90
ಬಹುಮತ: 46
ಬಿಜೆಪಿ ಮುನ್ನಡೆ : 56
ಕಾಂಗ್ರೆಸ್ ಮುನ್ನಡೆ: 32
ಇತರ ಮುನ್ನಡೆ: 02
ತೆಲಂಗಾಣ
ಒಟ್ಟು ಸ್ಥಾನಗಳು: 119
ಬಹುಮತ: 60
ಕಾಂಗ್ರೆಸ್ ಮುನ್ನಡೆ: 68
ಬಿಆರ್‌ಎಸ್ ಮುನ್ನಡೆ: 38
ಬಿಜೆಪಿ ಮುನ್ನಡೆ: 09
ಎಂಐಎಂ ಮುನ್ನಡೆ: 04