ನವದೆಹಲಿ: ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‌ಗಢ ಹಾಗೂ ರಾಜಸ್ಥಾನದಲ್ಲಿ ಚುನಾವಣೆ ಫಲಿತಾಂಶದ (Assembly Elections 2023) ಸ್ಪಷ್ಟ ಚಿತ್ರಣ ಸಿಕ್ಕಿದೆ. ಸೋಮವಾರ ಮಿಜೋರಾಂ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದೆ. ಮತ ಎಣಿಕೆ ಆರಂಭವಾಗಿದ್ದು, ಝೆಡ್‌ಪಿಎಂ ಪಕ್ಷವು ಮುನ್ನಡೆ ಸಾಧಿಸಿದೆ. ಮಿಜೋರಾಂ ವಿಧಾನಸಭೆ ಚುನಾವಣೆ ಫಲಿತಾಂಶದ ಕ್ಷಣಕ್ಷಣದ ಮಾಹಿತಿ ಇಲ್ಲಿದೆ.
ಚೌಹಾಣ್‌ಗೆ ಹೂ ಕೊಟ್ಟು ಅಭಿನಂದಿಸಿದ ಸಿಎಂಒ ಕಚೇರಿಯ ಮಹಿಳಾ ಸಿಬ್ಬಂದಿ
#watch | Madhya Pradesh | A staffer at CM House, Radha Bhai gets emotional as she gives a flower to CM Shivraj Singh Chouhan and congratulates him.
— ANI (@ANI) December 3, 2023
CM Chouna is leading in his constituency Budhni and the party is leading on 161 seats in the state. pic.twitter.com/HmyvylpUFh
3 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದ ಸನಿಹ; ಕಾಂಗ್ರೆಸ್ ಕಥೆ ಏನು?
ಛತ್ತೀಸ್‌ಗಢದಲ್ಲಿ ಬಿಜೆಪಿ 54 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇತ್ತ ರಾಜಸ್ಥಾನದಲ್ಲಿ 112 ಹಾಗೂ ಮಧ್ಯಪ್ರದೇಶದಲ್ಲಿ 160 ಸ್ಥಾನಗಳಲ್ಲಿ ಮುನ್ನಡೆ ಹೊಂದಿದೆ. ಇತ್ತ ಕಾಂಗ್ರೆಸ್ ರಾಜಸ್ಥಾನದಲ್ಲಿ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ ಇದೆ. ಇಲ್ಲಿ ಕೈ ಪಡೆ 67 ಸ್ಥಾನಗಳಲ್ಲಿ, ಮಧ್ಯಪ್ರದೇಶದಲ್ಲಿ 83, ಛತ್ತೀಸ್‌ಗಢದಲ್ಲಿ 39 ಸ್ಥಾನಗಳಲ್ಲಿ ಮುಂದಿದೆ. ತೆಲಂಗಾಣದಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ. ಇಲ್ಲಿ ಕೈ ಪಡೆ 66 ಸ್ಥಾನಗಳಲ್ಲಿ ಮುಂದಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಏನಂದ್ರು?
ಪಂಚರಾಜ್ಯ ಚುನಾವಣೆಯನ್ನು ಸೆಮಿಫೈನಲ್ ಎಂದು ಕರೆಯಲಾಗಿತ್ತು. ಈ ಸೆಮಿಫೈನಲ್‌ನಲ್ಲಿ ಬಿಜೆಪಿ ಸುನಾಮಿ ಎದ್ದಿದೆ. ದೇಶದ ಜನತೆ ನರೇಂದ್ರ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಬಯಸಿದ್ದಾರೆ ಎನ್ನುವುದಕ್ಕೆ ಇದು ಸಾಕ್ಷಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ರಾಜಸ್ಥಾನ ಗೆಲುವಿನ ಕುರಿತು ಬಿಜೆಪಿ ನಾಯಕ ಹೇಳಿದ್ದಿಷ್ಟು…
#watch | BJP Rajasthan co-incharge Nitin Patel on state election results
— ANI (@ANI) December 3, 2023
"To ensure the development of Rajasthan, and improvement in law and order, people have voted to remove the corrupt Congress government and gave full support to BJP. Now the double-engine government will… pic.twitter.com/AllaBrh5Qv