ನವದೆಹಲಿ: ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‌ಗಢ ಹಾಗೂ ರಾಜಸ್ಥಾನದಲ್ಲಿ ಚುನಾವಣೆ ಫಲಿತಾಂಶದ (Assembly Elections 2023) ಸ್ಪಷ್ಟ ಚಿತ್ರಣ ಸಿಕ್ಕಿದೆ. ಸೋಮವಾರ ಮಿಜೋರಾಂ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದೆ. ಮತ ಎಣಿಕೆ ಆರಂಭವಾಗಿದ್ದು, ಝೆಡ್‌ಪಿಎಂ ಪಕ್ಷವು ಮುನ್ನಡೆ ಸಾಧಿಸಿದೆ. ಮಿಜೋರಾಂ ವಿಧಾನಸಭೆ ಚುನಾವಣೆ ಫಲಿತಾಂಶದ ಕ್ಷಣಕ್ಷಣದ ಮಾಹಿತಿ ಇಲ್ಲಿದೆ.
ಯಡಿಯೂರಪ್ಪ ಪ್ರತಿಕ್ರಿಯೆ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ದೇಶದಲ್ಲಿ ಬಿಜೆಪಿಗೆ ಸರಿಸಮ ಇಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ತೆಲಂಗಾಣದಲ್ಲಿ ಬಿಜೆಪಿ 10 ಕ್ಷೇತ್ರಗಳಲ್ಲಿ ಜಯ ಸಾಧಿಸಲಿದೆ. ಈ ಗೆಲುವಿಗೆ ಮೋದಿ, ಅಮಿತ್ ಶಾ ಮತ್ತು ನಡ್ಡಾ ಅವರೇ ಕಾರಣ ಎಂದು ಹೇಳಿದ್ದಾರೆ.
ತೆಲಂಗಾಣ ಗೆಲುವಿನ ಕುರಿತು ಕರ್ನಾಟಕ ಸಚಿವ ಸಂತಸ
#watch | Hyderabad, Telangana: Karnataka Minister and Congress leader Sharanprakash Rudrappa Patil says, "Congress is forming the govt and we are probably winning more than 70 seats. Congress is united and with the collective efforts, Congress has come back to power in… pic.twitter.com/qGmqvZi951
— ANI (@ANI) December 3, 2023
ರಾಜಸ್ಥಾನ: ಬಿಜೆಪಿ 115, ಕಾಂಗ್ರೆಸ್ 66, ಮಧ್ಯಪ್ರದೇಶ: ಬಿಜೆಪಿ 154, ಕಾಂಗ್ರೆಸ್ 73, ಛತ್ತೀಸ್‌ಗಢ: ಬಿಜೆಪಿ 50, ಕಾಂಗ್ರೆಸ್ 35, ತೆಲಂಗಾಣ: ಕಾಂಗ್ರೆಸ್ 72, ಬಿಆರ್‌ಎಸ್: 35 ಸ್ಥಾನಗಳಲ್ಲಿ ಮುನ್ನಡೆ
ಸದ್ಯದ ಟ್ರೆಂಡ್ ಪ್ರಕಾರ 3 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಬಹುತೇಕ ಖಚಿತ ಎನ್ನಲಾಗಿದೆ. ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಬಿಜೆಪಿ ಕ್ರಮವಾಗಿ 115, 154 ಮತ್ತು 50 ಸ್ಥಾನಗಳಲ್ಲಿ ಮುಂದಿದೆ. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್ ಕ್ರಮವಾಗಿ 66, 73, 35 ಮತ್ತು 72 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಮಧ್ಯಪ್ರದೇಶ ಚುನಾವಣೆ ಗೆಲುವಿಗೆ ಬಿಜೆಪಿ ನಾಯಕರ ಸಂಭ್ರಮ
#watch | Madhya Pradesh: Union Minister and BJP leader Ashwini Vaishnaw at party office in Bhopal, as the party leads in the Madhya Pradesh Assembly elections pic.twitter.com/WlN4xKufc3
— ANI (@ANI) December 3, 2023