ನವದೆಹಲಿ: ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‌ಗಢ ಹಾಗೂ ರಾಜಸ್ಥಾನದಲ್ಲಿ ಚುನಾವಣೆ ಫಲಿತಾಂಶದ (Assembly Elections 2023) ಸ್ಪಷ್ಟ ಚಿತ್ರಣ ಸಿಕ್ಕಿದೆ. ಸೋಮವಾರ ಮಿಜೋರಾಂ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದೆ. ಮತ ಎಣಿಕೆ ಆರಂಭವಾಗಿದ್ದು, ಝೆಡ್‌ಪಿಎಂ ಪಕ್ಷವು ಮುನ್ನಡೆ ಸಾಧಿಸಿದೆ. ಮಿಜೋರಾಂ ವಿಧಾನಸಭೆ ಚುನಾವಣೆ ಫಲಿತಾಂಶದ ಕ್ಷಣಕ್ಷಣದ ಮಾಹಿತಿ ಇಲ್ಲಿದೆ.
ತೆಲಂಗಾಣದಲ್ಲಿ ಸೋನಿಯಾ ಗಾಂಧಿ ಭಾವಚಿತ್ರಕ್ಕೆ ಕ್ಷೀರಾಭಿಷೇಕ
#watch | #telanganaelection2023 | Congress workers pour milk on a poster featuring Congress Parliamentary Party Chairperson Sonia Gandhi, party MP Rahul Gandhi and state party chief Revanth Reddy as the party continues its lead in the state.
— ANI (@ANI) December 3, 2023
As per the official EC trends, the… pic.twitter.com/IWi4QEz4EQ
ರಾಜಸ್ಥಾನದಲ್ಲಿ ಅರಳಿದ ಕಮಲ
ರಾಜಸ್ಥಾನದಲ್ಲಿ ಅಧಿಕಾರ ಹಿಡಿಯುವತ್ತ ಬಿಜೆಪಿ ದಾಪುಗಾಲು ಹಾಕುತ್ತಿದೆ. ಇಲ್ಲಿ ಕಮಲ ಪಾಳಯ 108 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ ಆಡಳಿತರೂಡ ಕಾಂಗ್ರೆಸ್ 71 ಸ್ಥಾನಗಳಲ್ಲಿ ಮುಂದಿದೆ.
ಛತ್ತೀಸ್ ಗಢದಲ್ಲಿ ಕಾಂಗ್ರೆಸ್ ಗಡಗಡ; ಬಿಜೆಪಿ ಭಾರಿ ಮುಂದಕ್ಕೆ
ಛತ್ತೀಸ್ ಗಢದಲ್ಲಿ ಆರಂಭದಲ್ಲಿ ಕಾಂಗ್ರೆಸ್ ಮುನ್ನಡೆಯಲ್ಲಿದ್ದರೆ ಈಗ ಬಿಜೆಪಿ ಭಾರಿ ಮುನ್ನಡೆಯನ್ನು ಕಂಡುಕೊಂಡಿದೆ. 90 ಸ್ಥಾನಗಳ ಪೈಕಿ ಬಿಜೆಪಿ 52 ಮತ್ತು ಕಾಂಗ್ರೆಸ್ 37 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ 68 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.
ಈಗಿನ ಟ್ರೆಂಡ್ ಗಮನಿಸಿದರೆ ಭೂಪೇಶ್ ಬಘೇಲ್ ಅವರ ಸರ್ಕಾರ ದೊಡ್ಡ ಮಟ್ಟದ ಆಡಳಿತ ವಿರೋಧಿ ಅಲೆ ಎದುರಿಸಿದೆ.
ರಾಜಸ್ಥಾನದಲ್ಲಿ ಬಿಜೆಪಿ ಕಾರ್ಯಕರ್ತೆಯರ ಸಂಭ್ರಮಾಚರಣೆ
#watch | #rajasthanelections2023 | BJP workers dance and celebrate at the party office in Jaipur as the party continues its lead in the state.
— ANI (@ANI) December 3, 2023
As per official EC trends, BJP – 115 and Congress – 67 here. pic.twitter.com/sRyvMRIk6k