ನವದೆಹಲಿ: ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‌ಗಢ ಹಾಗೂ ರಾಜಸ್ಥಾನದಲ್ಲಿ ಚುನಾವಣೆ ಫಲಿತಾಂಶದ (Assembly Elections 2023) ಸ್ಪಷ್ಟ ಚಿತ್ರಣ ಸಿಕ್ಕಿದೆ. ಸೋಮವಾರ ಮಿಜೋರಾಂ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದೆ. ಮತ ಎಣಿಕೆ ಆರಂಭವಾಗಿದ್ದು, ಝೆಡ್‌ಪಿಎಂ ಪಕ್ಷವು ಮುನ್ನಡೆ ಸಾಧಿಸಿದೆ. ಮಿಜೋರಾಂ ವಿಧಾನಸಭೆ ಚುನಾವಣೆ ಫಲಿತಾಂಶದ ಕ್ಷಣಕ್ಷಣದ ಮಾಹಿತಿ ಇಲ್ಲಿದೆ.
ಮಿಜೋರಾಂನಲ್ಲಿ ಝೆಡ್‌ಪಿಎಂಗೆ ಭಾರಿ ಮುನ್ನಡೆ
ಮಿಜೋರಾಂನಲ್ಲಿ ಮತ ಎಣಿಕೆ ಆರಂಭವಾಗಿದ್ದು, ಪ್ರತಿಪಕ್ಷವಾಗಿರುವ ಝೋರಾಂ ಪೀಪಲ್ಸ್ ಮೂವ್‌ಮೆಂಟ್‌ಗೆ ಭಾರಿ ಮುನ್ನಡೆ ದೊರೆತಿದೆ. ಒಟ್ಟು 40 ವಿಧಾನಸಭೆ ಕ್ಷೇತ್ರಗಳ ಪೈಕಿ 19 ಕ್ಷೇತ್ರಗಳಲ್ಲಿ ಝೆಡ್‌ಪಿಎಂ ಮುನ್ನಡೆ ಸಾಧಿಸಿದೆ. ಆಡಳಿತಾರೂಢ ಎಂಎನ್‌ಎಫ್ 12, ಕಾಂಗ್ರೆಸ್ 6 ಹಾಗೂ ಬಿಜೆಪಿ 2 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಮ್ಯಾಜಿಕ್ ನಂಬರ್ 21 ಆಗಿದೆ.
ಇಂದು ಮಿಜೋರಾಂ ಎಲೆಕ್ಷನ್ ರಿಸಲ್ಟ್ ಪ್ರಕಟವಾಗಲಿದೆ…
ಈಶಾನ್ಯ ರಾಜ್ಯ ಮಿಜೋರಾಂ ವಿಧಾನಸಭೆ ಚುನಾವಣೆಯ ಫಲಿತಾಂಶ (Mizoram Election Result) ಡಿಸೆಂಬರ್ 4, ಸೋಮವಾರ ಪ್ರಕಟವಾಗಲಿದೆ. 40 ಸದಸ್ಯ ಬಲದ ಮಿಜೋರಾಂ ವಿಧಾನಸಭೆಗೆ ನವೆಂಬರ್ 7ರಂದು ಮತದಾನ ನಡೆದಿತ್ತು. ವಾಸ್ತವದಲ್ಲಿ, ಛತ್ತೀಸ್‌ಗಢ, ತೆಲಂಗಾಣ, ರಾಜಸ್ಥಾನ ಮತ್ತು ಮಧ್ಯ ಪ್ರದೇಶಗಳ ರಾಜ್ಯಗಳ ಮತ ಎಣಿಕೆಯಂದೇ (Election Result 2023) ಮಿಜೋರಾಂ ಚುನಾವಣೆ ರಿಸಲ್ಟ್ ಕೂಡ ಪ್ರಕಟವಾಗಬೇಕಿತ್ತು. ಕ್ರೈಸ್ತರೇ ಹೆಚ್ಚಿರುವ ಮಿಜೋರಾಂನಲ್ಲಿ ಭಾನುವಾರ(ಡಿ.3) ಬದಲಿಗೆ ಸೋಮವಾರ ರಿಸಲ್ಟ್ ಪ್ರಕಟಿಸುವಂತೆ ವ್ಯಾಪಕ ಮನವಿಗಳು ಬಂದ ಹಿನ್ನೆಲೆಯಲ್ಲಿ, ಕೇಂದ್ರ ಚುನಾವಣಾ ಆಯೋಗವು (Election Commission) ಮತ ಎಣಿಕೆಯನ್ನು ಒಂದು ದಿನದ ಮಟ್ಟಿಗೆ ಮುಂದೂಡಿತ್ತು(Assembly Election 2023).
ತೆಲಂಗಾಣದಲ್ಲಿ ಸರ್ಕಾರ ರಚನೆಯ ಹಕ್ಕು ಮಂಡಿಸಿದ ಕಾಂಗ್ರೆಸ್
ನಿರೀಕ್ಷೆಯಂತೆ ತೆಲಂಗಾಣದಲ್ಲಿ ಭರ್ಜರಿಯ ಜಯ ಸಾಧಿಸಿರುವ (Telangana Result 2023) ಕಾಂಗ್ರೆಸ್ ಪಕ್ಷವು(Congress Party), ಸರ್ಕಾರ ರಚನೆಗೆ ಹಕ್ಕು ಮಂಡಿಸಿದೆ. ಕೆ ಚಂದ್ರಶೇಖರ ರಾವ್ (KCR) ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ರೇವಂತ್ ರೆಡ್ಡಿ ನೇತೃತ್ವದ ಕಾಂಗ್ರೆಸ್ ನಿಯೋಗ (Revanth Reddy-led Congress delegation) ಭಾನುವಾರ ರಾಜ್ಯಪಾಲ ತಮಿಳಿಸಾಯಿ ಸೌಂದರರಾಜನ್(Governor Tamilisai Soundararajan) ಅವರನ್ನು ಭೇಟಿ ಮಾಡಿ, ಸರ್ಕಾರ ರಚಿಸಲು ಹಕ್ಕು ಮಂಡಿಸಿತು. ಕೆಸಿಆರ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ ರಾಜ್ಯಪಾಲರು, ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗುವವರೆಗೆ ಅಧಿಕಾರದಲ್ಲಿ ಮುಂದುವರಿಯುವಂತೆ ಸೂಚಿಸಿದರು(Election Result 2023). ರೇವಂತ್ ರೆಡ್ಡಿ ನೇತೃತ್ವದ ನಿಯೋಗದಲ್ಲಿ ಕರ್ನಾಟಕದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೂ ಇದ್ದರು.
ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ವಿಧಾನಸಭೆ ಚುನಾವಣೆಯ ಹ್ಯಾಟ್ರಿಕ್ ಗೆಲುವು 2024ರ ಲೋಕಸಭೆ ಚುನಾವಣೆಯ ಹ್ಯಾಟ್ರಿಕ್ ಗೆಲುವಿನ ಮುನ್ಸೂಚನೆ: ಮೋದಿ ಬಣ್ಣನೆ
ಪ್ರತಿಪಕ್ಷಗಳ ಕೂಟವನ್ನು ಘಮಂಡಿಯಾ (ಅಹಂಕಾರ) ಕೂಟ ಎಂದು ಮತ್ತೊಮ್ಮೆ ಗೇಲಿ ಮಾಡಿದ ಪ್ರಧಾನಿ ನರೇಂದ್ರ ಮೋದಿ