Site icon Vistara News

Mizoram Election Results 2023 Live: ಮಿಜೋರಾಂನಲ್ಲಿ ಝೆಡ್‌ಪಿಎಂ ಪಕ್ಷಕ್ಕೆ ಬಹುಮತ; ಕಾಂಗ್ರೆಸ್‌ಗೆ ಒಂದೇ ಸ್ಥಾನ

vote counting

ನವದೆಹಲಿ: ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‌ಗಢ ಹಾಗೂ ರಾಜಸ್ಥಾನದಲ್ಲಿ ಚುನಾವಣೆ ಫಲಿತಾಂಶದ (Assembly Elections 2023) ಸ್ಪಷ್ಟ ಚಿತ್ರಣ ಸಿಕ್ಕಿದೆ. ಸೋಮವಾರ ಮಿಜೋರಾಂ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದೆ. ಮತ ಎಣಿಕೆ ಆರಂಭವಾಗಿದ್ದು, ಝೆಡ್‌ಪಿಎಂ ಪಕ್ಷವು ಮುನ್ನಡೆ ಸಾಧಿಸಿದೆ. ಮಿಜೋರಾಂ ವಿಧಾನಸಭೆ ಚುನಾವಣೆ ಫಲಿತಾಂಶದ ಕ್ಷಣಕ್ಷಣದ ಮಾಹಿತಿ ಇಲ್ಲಿದೆ.

Ramesh B

ಛತ್ತೀಸ್‌ಗಢದಲ್ಲಿ ಬಿಜೆಪಿ-ಕಾಂಗ್ರೆಸ್‌ ಪ್ರಬಲ ಪೈಪೋಟಿ

ಛತ್ತೀಸ್‌ಗಢದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ತೀವ್ರ ಸ್ಪರ್ಧೆ ಕಂಡು ಬಂದಿದೆ. ಇಲ್ಲಿ ಬಿಜೆಪಿ 48 ಮತ್ತು ಕಾಂಗ್ರೆಸ್‌ 39 ಸ್ಥಾನಗಳಲ್ಲಿ ಮುಂದಿವೆ.

Ramesh B

ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಮುನ್ನಡೆ

ಮಧ್ಯಪ್ರದೇಶದಲ್ಲಿ ಬಿಜೆಪಿ ತನ್ನ ಪ್ರಾಬಲ್ಯ ಮುಂದುವರಿಸಿದೆ. ಇಲ್ಲಿ ಬಿಜೆಪಿ 131 ಸ್ಥಾನಗಳಲ್ಲಿ ಮುಂದಿದ್ದು, ಕಾಂಗ್ರೆಸ್‌ 94 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಸದ್ಯದ ಟ್ರೆಂಡ್‌ ಪ್ರಕಾರ ಇತ್ತ ರಾಜಸ್ಥಾನದಲ್ಲೂ ಬಿಜೆಪಿ ಹಿಡಿತ ಸಾಧಿಸಿದೆ.

Ramesh B

ರಾಜಸ್ಥಾನದಲ್ಲಿ ಶತಕ ಭಾರಿಸಿದ ಬಿಜೆಪಿ

ರಾಜಸ್ಥಾನದಲ್ಲಿ ತಾವರೆ ಅರಳುವ ಸಾಧ್ಯತೆ ಸದ್ಯ ಕಂಡು ಬರುತ್ತಿದೆ. ಇಲ್ಲಿ ಆಡಳಿತರೂಢ ಕಾಂಗ್ರೆಸ್‌ ಅನ್ನು ಹಿಂದಕ್ಕೆ ತಳ್ಳಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಇಲ್ಲಿ ಬಿಜೆಪಿ 102 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್‌ 82 ಸ್ಥಾನದಲ್ಲಿ ಮುಂದಿದೆ.

Ramesh B

ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ ಮ್ಯಾಜಿಕ್‌

ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಮರಳುವ ಎಲ್ಲ ಸಾಧ್ಯತೆಗಳಿವೆ. ಸದ್ಯ ಇಲ್ಲಿ ಕೈ ಪಡೆ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್‌ 58 ಸ್ಥಾನಗಳಲ್ಲಿ ಮುಂದಿದ್ದರೆ ಬಿಜೆಪಿ 32 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

Ramesh B

ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ಮುನ್ನಡೆ

ತೆಲಂಗಾಣದಲ್ಲಿ ಮತ್ತೆ ಗದ್ದುಗೆ ಹಿಡಿಯಬೇಕು ಎನ್ನುವ ಬಿಆರ್‌ಎಸ್‌ ಆಸೆಯನ್ನು ನುಚ್ಚು ನೂರು ಮಾಡಿ ಕಾಂಗ್ರೆಸ್‌ ಮುನ್ನುಗ್ಗುತ್ತಿದೆ. ಇಲ್ಲಿ ಕೈ ಪಡೆ 64 ಮತ್ತು ಬಿಆರ್‌ಎಸ್‌ 41 ಸ್ಥಾನಗಳಲ್ಲಿ ಮುಂದಿದೆ. 7ರಲ್ಲಿ ಬಿಜೆಪಿ ಮುಂದಿದೆ.

Exit mobile version