ನವದೆಹಲಿ: ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‌ಗಢ ಹಾಗೂ ರಾಜಸ್ಥಾನದಲ್ಲಿ ಚುನಾವಣೆ ಫಲಿತಾಂಶದ (Assembly Elections 2023) ಸ್ಪಷ್ಟ ಚಿತ್ರಣ ಸಿಕ್ಕಿದೆ. ಸೋಮವಾರ ಮಿಜೋರಾಂ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದೆ. ಮತ ಎಣಿಕೆ ಆರಂಭವಾಗಿದ್ದು, ಝೆಡ್‌ಪಿಎಂ ಪಕ್ಷವು ಮುನ್ನಡೆ ಸಾಧಿಸಿದೆ. ಮಿಜೋರಾಂ ವಿಧಾನಸಭೆ ಚುನಾವಣೆ ಫಲಿತಾಂಶದ ಕ್ಷಣಕ್ಷಣದ ಮಾಹಿತಿ ಇಲ್ಲಿದೆ.
ತೆಲಂಗಾಣದಲ್ಲಿ ಕಾಂಗ್ರೆಸ್ ಮ್ಯಾಜಿಕ್
ತೆಲಂಗಾಣದಲ್ಲಿ ಕಾಂಗ್ರೆಸ್ 61 ಕ್ಷೇತ್ರಗಳಲ್ಲಿ ಮುಂದಿದೆ. ಕೈ ಪಡೆಗೆ ತೀವ್ರ ಸ್ಪರ್ಧೆ ಒಡ್ಡಿರುವ ಬಿಆರ್‌ಎಸ್ 36 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇಲ್ಲಿ ಬಿಜೆಪಿ 5 ಕ್ಷೇತ್ರಗಳಲ್ಲಿ ಮುಂದಿದೆ.
ರಾಜಸ್ಥಾನದಲ್ಲಿ ಬಿಜೆಪಿ ಮುನ್ನಡೆ
ಭಾರೀ ಕುತೂಹಲ ಮೂಡಿಸಿದ್ದ ರಾಜಸ್ಥಾನದಲ್ಲಿ ಸದ್ಯ ಬಿಜೆಪಿ ಮುನ್ನಡೆ ಸಾಧಿಸಿದೆ. ಬಿಜೆಪಿ 98 ಮತ್ತು ಕಾಂಗ್ರೆಸ್ 95 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ.
ಸಿಎಂ ಭೂಪೇಶ್ ಬಘೇಲ್‌ಗೆ ಹಿನ್ನಡೆ
ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರಿಗೆ ಪಟಾನ್ ಕ್ಷೇತ್ರದಲ್ಲಿ ಹಿನ್ನಡೆಯುಂಟಾಗಿದೆ.
11 ಗಂಟೆ ಬಳಿಕವೇ ಸ್ಪಷ್ಟ ಚಿತ್ರಣ ಎಂದ ಕಮಲ್‌ನಾಥ್
#watch | Counting of votes | Bhopal: State Congress president Kamal Nath says, "I have not seen any trends, I don't need to look at any trends till 11 am. I am very confident, I trust the voters of Madhya Pradesh…" pic.twitter.com/Z0RU6XyGfW
— ANI (@ANI) December 3, 2023