Site icon Vistara News

Mizoram Election Results 2023 Live: ಮಿಜೋರಾಂನಲ್ಲಿ ಝೆಡ್‌ಪಿಎಂ ಪಕ್ಷಕ್ಕೆ ಬಹುಮತ; ಕಾಂಗ್ರೆಸ್‌ಗೆ ಒಂದೇ ಸ್ಥಾನ

vote counting

ನವದೆಹಲಿ: ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‌ಗಢ ಹಾಗೂ ರಾಜಸ್ಥಾನದಲ್ಲಿ ಚುನಾವಣೆ ಫಲಿತಾಂಶದ (Assembly Elections 2023) ಸ್ಪಷ್ಟ ಚಿತ್ರಣ ಸಿಕ್ಕಿದೆ. ಸೋಮವಾರ ಮಿಜೋರಾಂ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದೆ. ಮತ ಎಣಿಕೆ ಆರಂಭವಾಗಿದ್ದು, ಝೆಡ್‌ಪಿಎಂ ಪಕ್ಷವು ಮುನ್ನಡೆ ಸಾಧಿಸಿದೆ. ಮಿಜೋರಾಂ ವಿಧಾನಸಭೆ ಚುನಾವಣೆ ಫಲಿತಾಂಶದ ಕ್ಷಣಕ್ಷಣದ ಮಾಹಿತಿ ಇಲ್ಲಿದೆ.

Ramesh B

ವಿವಿಧ ರಾಜ್ಯಗಳಲ್ಲಿನ ಪಕ್ಷಗಳ ಬಲಾಬಲ

ರಾಜಸ್ಥಾನ

ಬಿಜೆಪಿ: 116

ಕಾಂಗ್ರೆಸ್‌: 68

ಮಧ್ಯಪ್ರದೇಶ

ಬಿಜೆಪಿ: 165

ಕಾಂಗ್ರೆಸ್‌: 63

ಛತ್ತೀಸ್‌ಗಢ

ಬಿಜೆಪಿ: 53

ಕಾಂಗ್ರೆಸ್‌: 35

ತೆಲಂಗಾಣ

ಕಾಂಗ್ರೆಸ್‌: 64

ಬಿಆರ್‌ಎಸ್‌: 40

Ramesh B

ಮುಗಿಲು ಮುಟ್ಟಿದ ಬಿಜೆಪಿ ಸಂಭ್ರಮ

4 ರಾಜ್ಯಗಳ ಪೈಕಿ 3ರಲ್ಲಿ ಬಿಜೆಪಿ ಭರ್ಜರಿ ಜಯದತ್ತ ಮುನ್ನುಗಿದ್ದು, ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ. ದೇಶದ ವಿವಿಧ ಭಾಗಗಳಲ್ಲಿ ಸಡಗರ ಕಂಡು ಬಂದಿದೆ. ಬಿಜೆಪಿ ಕಚೇರಿಗಳ ಮುಂದೆ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

Ramesh B

ಛತ್ತೀಸ್‌ಗಢದಲ್ಲಿ ತಲೆ ಕೆಳಗಾದ ಸಮೀಕ್ಷೆ

ಛತ್ತೀಸ್‌ಗಢದಲ್ಲಿ ಚುನಾವಣೋತ್ತರ ಸಮೀಕ್ಷೆಗಳು ತಲೆಕೆಳಗಾಗಿವೆ. ಸಮೀಕ್ಷೆಗಳು ಕಾಂಗ್ರೆಸ್‌ ಗೆಲವನ್ನು ಊಹಿಸಿದ್ದವು. ಅದರಂತೆ ಆರಂಭದಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿತ್ತು. ಇದೀಗ ಫಲಿತಾಂಶ ತಲೆ ಕೆಳಗಾಗುವ ಸೂಚನೆ ಲಭಿಸಿದ್ದು ಕಮಲ ಪಡೆ 56 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ಬಹುಮತ ಪಡೆಯುವತ್ತ ಮುನ್ನುಗ್ಗಿದೆ.

Ramesh B

ಸಂಜೆ ಅಶೋಕ್‌ ಗೆಹ್ಲೋಟ್‌ ರಾಜೀನಾಮೆ

ರಾಜಸ್ಥಾನದಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿದ್ದು, ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಇಂದು ಸಂಜೆ 5 ಗಂಟೆ ಸುಮಾರಿಗೆ ರಾಜೀನಾಮೆ ನೀಡಲಿದ್ದಾರೆ.

Ramesh B

ಭರ್ಜರಿ ಗೆಲುವು ಸಾಧಿಸಿದ ವಸುಂಧರಾ ರಾಜೆ

ರಾಜಸ್ಥಾನದ ಮಾಜಿ ಮುಖ್ಯಮಂತ್ರಿ, ಬಿಜೆಪಿಯ ವಸುಂಧರಾ ರಾಜೆ ಝಲ್ರಾಪಟಾನ್‌ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯ ವಿರುದ್ಧ ಭರ್ಜರಿ ಜಯ ಸಾಧಿಸಿದ್ದಾರೆ.

Exit mobile version