Site icon Vistara News

Vijay Mallya: ವಿಜಯ್‌ ಮಲ್ಯಗೆ ಸೆಬಿ ಶಾಕ್;‌ 3 ವರ್ಷ ಸೆಕ್ಯುರಿಟೀಸ್‌ ಟ್ರೇಡಿಂಗ್‌ನಿಂದ ನಿಷೇಧ

Vijay Mallya

Fresh blow to Vijay Mallya as SEBI bars fugitive liquor baron from securities trading for 3 years

ನವದೆಹಲಿ: ಭಾರತದ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ದೇಶಭ್ರಷ್ಟ ಆರ್ಥಿಕ ಅಪರಾಧಿ ವಿಜಯ್‌ ಮಲ್ಯ (Vijay Mallya) ಅವರಿಗೆ ಭಾರತದ ಷೇರು ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ ಸೆಬಿಯು (SEBI) ಶಾಕ್‌ ನೀಡಿದೆ. ಭಾರತದ ಸೆಕ್ಯುರಿಟೀಸ್‌ ಮಾರುಕಟ್ಟೆಯಿಂದ ವಿಜಯ್‌ ಮಲ್ಯ ಅವರನ್ನು ಸೆಬಿ ನಿರ್ಬಂಧಿಸಿದೆ. ಇದರಿಂದಾಗಿ ಭಾರತದ ಸೆಕ್ಯುರಿಟೀಸ್‌ ಮಾರುಕಟ್ಟೆಯಲ್ಲಿ ವಿಜಯ್‌ ಮಲ್ಯ ಯಾವುದೇ ವಹಿವಾಟು ಮಾಡದಂತೆ ತಡೆಹಿಡಿಯಲಾಗಿದೆ.

ಸೆಬಿಗೆ ನೋಂದಣಿ ಮಾಡಿದ ಕಂಪನಿಗಳು ವಿಜಯ್‌ ಮಲ್ಯ ಜತೆ ವಹಿವಾಟು ಮಾಡದಂತೆ ಸೂಚನೆ ನೀಡಲಾಗಿದೆ. ಅಷ್ಟೇ ಅಲ್ಲ, ಮುಂದಿನ ಮೂರು ವರ್ಷಗಳವರೆಗೆ ವಿಜಯ್‌ ಮಲ್ಯ ಅವರ ಎಲ್ಲ ಸೆಕ್ಯುರಿಟಿ ಹೋಲ್ಡಿಂಗ್‌ಗಳು, ಮ್ಯುಚುವಲ್‌ ಫಂಡ್‌ ಯುನಿಟ್‌ಗಳನ್ನು ತಡೆಹಿಡಿಯುವಂತೆಯೂ ಸೆಬಿ ಸೂಚನೆ ನೀಡಿದೆ. ವಿಜಯ್‌ ಮಲ್ಯ ಅವರು ಇದುವರೆಗೆ ಫಾರಿನ್‌ ಇನ್‌ಸ್ಟಿಟ್ಯೂಷನಲ್‌ ಇನ್ವೆಸ್ಟರ್‌ (FII) ವ್ಯವಸ್ಥೆ ಮೂಲಕ ಭಾರತದ ಸೆಕ್ಯುರಿಟೀಸ್‌ ಮಾರುಕಟ್ಟೆಯಲ್ಲಿ ಹಣ ಹೂಡಿಕೆ, ಸ್ಟಾಕ್‌ಗಳ ಮಾರಾಟ ಸೇರಿ ಹಲವು ಆರ್ಥಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು.

ಏನಿದು ಸೆಕ್ಯುರಿಟೀಸ್‌ ಮಾರುಕಟ್ಟೆ?

ಸೆಕ್ಯುರಿಟೀಸ್‌ ಮಾರುಕಟ್ಟೆಯು ವ್ಯಕ್ತಿಗಳು ಅಥವಾ ಕಂಪನಿಗಳು ಷೇರುಗಳು, ಬಾಂಡ್‌ಗಳು ಮತ್ತು ಉತ್ಪನ್ನಗಳಂತಹ ಸೆಕ್ಯುರಿಟೀಸ್‌ಅನ್ನು ಖರೀದಿಸುವ ಮತ್ತು ಮಾರಾಟ ಮಾಡುವ ಹಣಕಾಸು ಮಾರುಕಟ್ಟೆಯಾಗಿದೆ. ಸ್ಟಾಕ್‌ಗಳು, ಬಾಂಡ್‌ಗಳು, ಮ್ಯೂಚುವಲ್‌ ಫಂಡ್‌ಗಳು, ಎಕ್ಸ್‌ಚೇಂಜ್‌-ಟ್ರೇಡೆಡ್‌ ಫಂಡ್‌ಗಳ ಖರೀದಿ ಹಾಗೂ ಮಾರಾಟ ಮಾಡುವ ಮಾರುಕಟ್ಟೆಯಾಗಿದೆ.

ಭಾರತದ ಬ್ಯಾಂಕ್‌ಗಳಿಗೆ ಸುಮಾರು 9 ಸಾವಿರ ಕೋಟಿ ರೂ. ವಂಚನೆ ಪ್ರಕರಣದಲ್ಲಿ ವಿಜಯ್‌ ಮಲ್ಯ ಲಂಡನ್‌ಗೆ ಹಾರಿದ್ದಾರೆ. ಇವರನ್ನು 2019ರಲ್ಲಿ ದೇಶ ಭ್ರಷ್ಟ ಆರ್ಥಿಕ ಅರಪಾಧಿ ಎಂದು ಘೋಷಿಸಲಾಗಿದೆ. 2016ರ ಮಾರ್ಚ್‌ನಲ್ಲಿ ವಿಜಯ್‌ ಮಲ್ಯ ಭಾರತದಿಂದ ಪರಾರಿಯಾಗಿದ್ದು, ಈಗ ಬ್ರಿಟನ್‌ನಲ್ಲಿ ನೆಲೆಸಿದ್ದಾರೆ. ಇತ್ತೀಚೆಗೆ, ವಿಜಯ್‌ ಮಲ್ಯ ಪುತ್ರ ಸಿದ್ಧಾರ್ಥ್‌ ಮಲ್ಯ ಅವರ ಮದುವೆಯು ಅದ್ಧೂರಿಯಾಗಿ ನೆರವೇರಿತ್ತು. ವಿಜಯ್‌ ಮಲ್ಯ ಅವರನ್ನು ಭಾರತಕ್ಕೆ ಕರೆತರಲು ಕೇಂದ್ರ ಸರ್ಕಾರ ಪ್ರಯತ್ನ ಮಾಡುತ್ತಿದ್ದು, ಪ್ರಕರಣವು ಕೋರ್ಟ್‌ನಲ್ಲಿದೆ.

ವಿಜಯ್‌ ಮಲ್ಯ ಈಗಲೂ ಕಿಂಗ್‌ಫಿಶರ್‌ ಬಿಯರ್‌ ಉತ್ಪಾದನೆ ಮಾಡುವ ಯುನೈಟ್‌ ಬ್ರೆವರೀಸ್‌ನಲ್ಲಿ ಶೇ.8.1ರಷ್ಟು ಷೇರುಗಳನ್ನು ಹೊಂದಿದ್ದಾರೆ. ಅಷ್ಟೇ ಅಲ್ಲ, ಸ್ಮಿರ್ನಾಫ್‌ ವೋಡ್ಕಾ ತಯಾರಿಯಾ ಸಂಸ್ಥೆಯಾದ ಯುನೈಟೆಡ್‌ ಸ್ಪರಿಟ್ಸ್‌ನಲ್ಲಿ 0.01ರಷ್ಟು ಷೇರುಗಳನ್ನು ಹೊಂದಿದ್ದಾರೆ.

ಇದನ್ನೂ ಓದಿ: RCB: ಆರ್​ಸಿಬಿಯ ನಂಟು ಬಿಡದ ವಿಜಯ್​ ಮಲ್ಯ; ಟ್ವೀಟ್​ ಮೂಲಕ ಅಭಿನಂದನೆ

Exit mobile version