Site icon Vistara News

G 20 Meeting: ಚೀನಾ ಮತ್ತೆ ಉದ್ಧಟತನ; ಕಾಶ್ಮೀರ ವಿವಾದಿತ ಪ್ರದೇಶ ಎಂದು ಹೇಳಿಕೆ, ಜಿ-20 ಸಭೆ ಬಹಿಷ್ಕಾರ

G20 meeting: China calls Jammu and Kashmir disputed territory, boycotts meeting

G20 meeting: China calls Jammu and Kashmir disputed territory, boycotts meeting

ಬೀಜಿಂಗ್‌: ಗಡಿಯಲ್ಲಿ ಹೆಚ್ಚುವರಿ ಸೈನಿಕರನ್ನು ನಿಯೋಜಿಸಿ ಉದ್ಧಟತನ ಮಾಡುತ್ತಿರುವ, ಸೈನಿಕರನ್ನು ಬಿಟ್ಟು ಗಡಿಯಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿರುವ, ಸಾಲು ಸಾಲು ಸಭೆಗಳ ಹೊರತಾಗಿಯೂ ಉಪಟಳ ಮುಂದುವರಿಸಿರುವ ಚೀನಾ ಈಗ ಮತ್ತೊಂದು ಅಪದ್ಧ ನುಡಿದಿದೆ. “ಜಮ್ಮು-ಕಾಶ್ಮೀರ ವಿವಾದಿತ ಪ್ರದೇಶ” ಎಂದು ಕರೆದಿರುವ ಚೀನಾ, ಕಣಿವೆಯಲ್ಲಿ ನಡೆಯಲಿರುವ ಜಿ-20 ಸಭೆಯನ್ನು (G 20 Meeting) ಬಹಿಷ್ಕರಿಸಿದೆ.

ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಮೇ 22ರಿಂದ ಮೇ 24ರವರೆಗೆ ಜಿ-20 ಸಭೆ ನಡೆಯಲಿದ್ದು, ಸುಮಾರು 19 ದೇಶಗಳು ಭಾಗವಹಿಸಲಿವೆ. ಆದರೆ, ಸಭೆಗೂ ಮುನ್ನವೇ ಚೀನಾ ತಗಾದೆ ತೆಗೆದಿದೆ. ವಿವಾದಿತ ಪ್ರದೇಶದಲ್ಲಿ ಜಿ-20 ಸಭೆ ಆಯೋಜಿಸಲಾಗಿದೆ ಎಂದು ಉದ್ಧಟತನದ ಹೇಳಿಕೆ ನೀಡುವ ಜತೆಗೆ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದೆ.

ಜಿ-20 ಸಭೆಗೆ ಶ್ರೀನಗರ ಹೇಗೆ ಸಿದ್ಧವಾಗುತ್ತಿದೆ ನೋಡಿ

ಜಮ್ಮು-ಕಾಶ್ಮೀರ ಹಾಗೂ ಲಡಾಕ್‌ ಕುರಿತು ಈಗಾಗಲೇ ಕೇಂದ್ರ ಸರ್ಕಾರ ಸ್ಪಷ್ಟ ನಿಲುವು ತೋರಿದೆ. ಆಗಾಗ, ಕಾಶ್ಮೀರ ಕುರಿತು ಉದ್ಧಟತನದ ಹೇಳಿಕೆ ನೀಡುವ ಚೀನಾ ಹಾಗೂ ಪಾಕಿಸ್ತಾನಕ್ಕೆ ತಿರುಗೇಟು ನೀಡಿದೆ. “ಜಮ್ಮು-ಕಾಶ್ಮೀರ ಹಾಗೂ ಲಡಾಕ್‌ ಭಾರತದ ಅವಿಭಾಜ್ಯ ಅಂಗಗಳಾಗಿವೆ. ಹಾಗಾಗಿ, ಎರಡೂ ಕೇಂದ್ರಾಡಳಿತ ಪ್ರದೇಶಗಳ ಕುರಿತು ಬೇರೆ ಯಾರಿಗೂ ಮಾತನಾಡುವ ಹಕ್ಕಿಲ್ಲ” ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: China loans : ಚೀನಾ ಸಾಲ ಪಡೆದ ಡಜನ್‌ಗಟ್ಟಲೆ ಬಡ ದೇಶಗಳು ಈಗ ಪತನದ ಅಂಚಿನಲ್ಲಿ

ಹೀಗಿದ್ದರೂ ಆಗಾಗ, ಚೀನಾ ಹಾಗೂ ಪಾಕಿಸ್ತಾನ ಜಮ್ಮು-ಕಾಶ್ಮೀರ ವಿಷಯದಲ್ಲಿ ಮೂಗು ತೂರಿಸುತ್ತಿರುತ್ತವೆ. ಅದರಲ್ಲೂ, ಈ ಭಾರಿ ಭಾರತದ ಅಧ್ಯಕ್ಷತೆಯಲ್ಲಿ ಜಿ-20 ಸಭೆ ನಡೆಯುತ್ತಿದೆ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸಲಾಗಿದೆ ಎಂಬ ಸಂದೇಶವನ್ನು ಜಗತ್ತಿಗೇ ಸಾರಲು ಜಿ-20 ಸಭೆಯನ್ನು ಕಾಶ್ಮೀರದಲ್ಲಿ ಆಯೋಜಿಸಲಾಗಿದೆ. ಇದು ಈಗ ಚೀನಾ ಹಾಗೂ ಪಾಕಿಸ್ತಾನಕ್ಕೆ ಅರಗಿಸಿಕೊಳ್ಳಲು ಆಗದೆ ಉದ್ಧಟತನದ ಹೇಳಿಕೆ ನೀಡುತ್ತಿವೆ.

Exit mobile version