China loans Dozens of poor countries that have taken loans from China are now on the verge of collapseChina loans : ಚೀನಾ ಸಾಲ ಪಡೆದ ಡಜನ್‌ಗಟ್ಟಲೆ ಬಡ ದೇಶಗಳು ಈಗ ಪತನದ ಅಂಚಿನಲ್ಲಿ

ವಾಣಿಜ್ಯ

China loans : ಚೀನಾ ಸಾಲ ಪಡೆದ ಡಜನ್‌ಗಟ್ಟಲೆ ಬಡ ದೇಶಗಳು ಈಗ ಪತನದ ಅಂಚಿನಲ್ಲಿ

China loans ಚೀನಾ ಸಾಲ ಪಡೆದ ಡಜನ್‌ ಗಟ್ಟಲೆ ಬಡ ದೇಶಗಳು ಈಗ ಪತನದ ಅಂಚಿಗೆ ಸಿಲುಕಿವೆ. ತೆರಿಗೆ ಆದಾಯದಲ್ಲಿ ಬಹುಪಾಲನ್ನು ಸಾಲ ತೀರಿಸಲು ನೀಡುವಂತಾಗಿದೆ.

VISTARANEWS.COM


on

China
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೀಜಿಂಗ್:‌ ಚೀನಾದ ಸಾಲದ (China loans) ಬಲೆಗೆ ಸಿಲುಕಿರುವ ಡಜನ್‌ಗಟ್ಟಲೆ ಬಡ ರಾಷ್ಟ್ರಗಳು ಈಗ ಪತನದ ಅಂಚಿನಲ್ಲಿವೆ. ನೂರಾರು ಬಿಲಿಯನ್‌ ಡಾಲರ್‌ ಸಾಲವನ್ನು ತೀರಿಸಲಾಗದೆ ಒದ್ದಾಡುತ್ತಿವೆ. ಪಾಕಿಸ್ತಾನ, (pakistan) ಕೀನ್ಯಾ, ಜಾಂಬಿಯಾ, ಲಾವೋಸ್‌, ಮಂಗೋಲಿಯಾ ಅಂಥ (Economic instability) ದೇಶಗಳ ಪಟ್ಟಿಯಲ್ಲಿ ಇವೆ.

ಈ ದೇಶಗಳು ತಮ್ಮ ತೆರಿಗೆ ಆದಾಯಲ್ಲಿ ಹೆಚ್ಚು ಮೊತ್ತವನ್ನು ಚೀನಾ ಸಾಲ ತೀರಿಸಲು ನೀಡಬೇಕಾದ ದುಸ್ಥಿತಿ ಬಂದೊದಗಿದೆ. ಹೀಗಾಗಿ ಶಾಲೆ, ಆಸ್ಪತ್ರೆಗಳನ್ನು ನಡೆಸಲು, ರಸ್ತೆ ಇತ್ಯಾದಿ ಮೂಲಸೌಕರ್ಯಕ್ಕೆ ಅವುಗಳ ಬಳಿ ಹಣ ಇಲ್ಲವಾಗಿದೆ. ಅವುಗಳ ವಿದೇಶಿ ವಿನಿಮಯ ಸಂಗ್ರಹ ಬರಿದಾಗುತ್ತಿದೆ.

ಬಡ ದೇಶಗಳಿಗೆ ಸಾಲ ಕೊಡುವ ಚೀನಾ ತನ್ನ ಸಾಲದ ವಿವಿರಗಳನ್ನು, ಅಂದರೆ ಮೊತ್ತ, ಷರತ್ತುಗಳನ್ನು ಗೌಪ್ಯವಾಗಿಡುತ್ತದೆ. ಆದರೆ ಯಾವ ಕಾರಣಕ್ಕೂ ಸಾಲ ಮನ್ನಾ ಮಾಡುವುದಿಲ್ಲ. ಹೀಗಾಗಿ ಇತರ ಸಾಲದಾತರು ಅಂಥ ದೇಶಗಳಿಗೆ ಸಾಲ ನೀಡಲು ಹಿಂದೇಟು ಹಾಕುತ್ತವೆ.

ಇದನ್ನೂ ಓದಿ :China-Sri Lanka : ಶ್ರೀಲಂಕಾಕ್ಕೆ ಸಾಲ ಮರು ಪಾವತಿಸಲು 2 ವರ್ಷಗಳ ಮೊರಟೋರಿಯಂ ನೀಡಿದ ಚೀನಾ

ಶ್ರೀಲಂಕಾ ಮತ್ತು ಜಾಂಬಿಯಾ ಈಗಾಗಲೇ ಚೀನಿ ಸಾಲ ತೀರಿಸಲಾಗದೆ ದಿವಾಳಿಯಾಗಿವೆ. ಬಂದರು, ಗಣಿಗಾರಿಕೆ, ವಿದ್ಯುತ್‌ ಘಟಕಗಳ ನಿರ್ಮಾಣಕ್ಕೆ ಚೀನಾದಿಂದ ಪಡೆದ ಸಾಲವನ್ನು ಮರು ಪಾವತಿಸಲಾಗದೆ ಬಳಲಿವೆ. ಪಾಕಿಸ್ತಾನದಲ್ಲಿ ಲಕ್ಷಾಂತರ ಜವಳಿ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ವಿದ್ಯುತ್‌ ಇಲ್ಲದೆ ಕಾರ್ಖಾನೆಗಳು ಮುಚ್ಚಿವೆ.

ಶ್ರೀಲಂಕಾದಲ್ಲಿ ಕಾರ್ಖಾನೆಗಳು ಮುಚ್ಚಿ 5 ಲಕ್ಷಕ್ಕೂ ಹೆಚ್ಚು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಹಣದುಬ್ಬರ 50% ದಾಟಿದೆ. ದೇಶದ ಹಲವು ಭಾಗಗಳು ಕಡು ಬಡತನದ ದವಡೆಗೆ ಸಿಲುಕಿವೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಮನಿ-ಗೈಡ್

Money Guide: ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವ ಯೋಜನೆಗಳಿವು

Money Guide: ಹೆಣ್ಣು ಈ ಸಮಾಜದ ಕಣ್ಣು ಎನ್ನುವ ಮಾತಿದೆ. ಹಿಂದಿನಿಂದಲೂ ಭಾರತದಲ್ಲಿ ಹೆಣ್ಣು ಮಕ್ಕಳಿಗೆ ಮಹತ್ವದ, ಪೂಜನೀಯ ಸ್ಥಾನ-ಮಾನ ನೀಡಲಾಗಿತ್ತು. ಆದರೆ ಕ್ರಮೇಣ ಲಿಂಗ ತಾರತಮ್ಯ ಹೆಚ್ಚಾಗಿ ಮಹಿಳೆಯರನ್ನು ಮೂಲೆಗುಂಪು ಮಾಡಲಾಯಿತು. ಇದೀಗ ಮತ್ತೆ ಪರಿಸ್ಥಿತಿ ಬದಲಾಗಿದೆ. ಹೆಣ್ಣು ಮಕ್ಕಳು ಎಲ್ಲ ಕ್ಷೇತ್ರಗಳಲ್ಲಿ ತಮ್ಮ ಸಾದನೆಯನ್ನು ತೋರುತ್ತಿದ್ದಾರೆ. ದೇಶದಲ್ಲಿ ಈಗಲೂ ಕಂಡು ಬರುವ ಲಿಂಗ ತಾರತಮ್ಯವನ್ನು ತೊಲಗಿಸಲು ಸರ್ಕಾರ ಜಾರಿಗೆ ತಂದ ಹಲವು ಯೋಜನೆಗಳ ಮಾಹಿತಿ ಇಲ್ಲಿದೆ.

VISTARANEWS.COM


on

Money Guide
Koo

ಬೆಂಗಳೂರು: ಹೆಣ್ಣು ಮಕ್ಕಳನ್ನು ಈ ದೇಶದ ಆಸ್ತಿ ಎಂದು ಪರಿಗಣಿಸಲಾಗುತ್ತದೆ. ಇಂದು ಹೆಣ್ಣು ಮಕ್ಕಳು ತಮ್ಮ ಇತಿಮಿತಿಯನ್ನು ಮೀರಿ ಎಲ್ಲ ರಂಗದಲ್ಲಿಯೂ ಸಾಧನೆ ತೋರುತ್ತಿದ್ದಾರೆ. ಆದರೂ ಲಿಂಗ ಅಸಮಾನತೆ ಎನ್ನುವುದು ಪೂರ್ಣವಾಗಿ ಸಾಧಿಸಲು ಸಾಧ್ಯವಾಗಿಲ್ಲ. ಗ್ರಾಮಾಂತರ ಪ್ರದೇಶದಲ್ಲಿ ಇಂದಿಗೂ ಹೆಣ್ಣು-ಗಂಡು ಎಂಬ ತಾರತಮ್ಯ ಚಾಲ್ತಿಯಲ್ಲಿದೆ. ಇದೇ ಕಾರಣಕ್ಕೆ ಸಾಕಷ್ಟು ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ಸರ್ಕಾರ ಈ ಪರಿಸ್ಥಿತಿಯನ್ನು ತೊಡೆದು ಹಾಕಲು, ಹೆಣ್ಣು ಮಕ್ಕಳನ್ನು ಸಬಲೀಕರಣಗೊಳಿಸಲು ಸಾಕಷ್ಟು ಯೋಜನೆ ಜಾರಿಗೊಳಿಸುತ್ತಿದೆ. ಇಂದಿನ ಮನಿಗೈಡ್‌ (Money Guide)ನಲ್ಲಿ ದೇಶದಲ್ಲಿ ವಿಶೇಷವಾಗಿ ಹೆಣ್ಣು ಮಕ್ಕಳಿಗಾಗಿ ಜಾರಿಯಲ್ಲಿರುವ ವಿವಿಧ ಯೋಜನೆಗಳ ಮಾಹಿತಿಯನ್ನು ವಿವರಿಸಲಾಗಿದೆ.

ಬೇಟಿ ಬಚಾವೋ, ಬೇಟಿ ಪಡಾವೋ (BBBP) ಯೋಜನೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2015ರಲ್ಲಿ ಪ್ರಾರಂಭಿಸಿದ ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆ ಲಿಂಗ ಆಧಾರಿತ ತಾರತಮ್ಯವನ್ನು ಪರಿಹರಿಸುವ ಮತ್ತು ಹೆಣ್ಣು ಮಕ್ಕಳ ಶಿಕ್ಷಣವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಇದು ಜಿಲ್ಲಾ ಮಟ್ಟದ ಉಪಕ್ರಮಗಳಿಗೆ ಆರ್ಥಿಕ ಸಹಾಯವನ್ನು ಒದಗಿಸುತ್ತದೆ. ಲಿಂಗ ಆಧಾರಿತ ಗರ್ಭಪಾತವನ್ನು ತಡೆಗಟ್ಟುವುದು, ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ಶಿಕ್ಷಣವನ್ನು ಬೆಂಬಲಿಸುವುದು ಮುಂತಾದ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತದೆ.

ಸಿಬಿಎಸ್ಇ ಉಡಾನ್ (CBSE Udaan) ಯೋಜನೆ

ಈ ಯೋಜನೆಯನ್ನು ಮುಖ್ಯವಾಗಿ 11 ಮತ್ತು 12ನೇ ತರಗತಿಯ ಹುಡುಗಿಯರನ್ನು ಗುರಿಯಾಗಿಸಿಕೊಂಡು ಜಾರಿಗೆ ತರಲಾಗಿದೆ. ಎಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜುಗಳಲ್ಲಿ ದಾಖಲಾತಿಯನ್ನು ಹೆಚ್ಚಿಸಲು ಉಚಿತ ಕಲಿಕಾ ಉಪಕರಣಗಳ ವಿತರಣೆ, ವರ್ಚುವಲ್ ತರಗತಿ ಆಯೋಜನೆ ಮತ್ತು ವೃತ್ತಿ ಮಾರ್ಗದರ್ಶನವನ್ನು ನೀಡುತ್ತದೆ. ಈ ಯೋಜನೆಯ ಪ್ರಯೋಜನ ಪಡೆಯಲು 10ನೇ ತರಗತಿಯಲ್ಲಿ ವಿಜ್ಞಾನ ಮತ್ತು ಗಣಿತದಲ್ಲಿ ಕನಿಷ್ಠ ಶೇ. 70 ಅಂಕ ಪಡೆಯುವುದು ಕಡ್ಡಾಯ.

ಬಾಲಿಕಾ ಸಮೃದ್ಧಿ (Balika Samriddhi) ಯೋಜನೆ

ಈ ವಿದ್ಯಾರ್ಥಿ ವೇತನವನ್ನು ಆರ್ಥಿಕವಾಗಿ ದುರ್ಬಲ ಕುಟುಂಬಗಳ ಹೆಣ್ಣು ಮಕ್ಕಳಿಗೆ ನೀಡಲಾಗುತ್ತದೆ. ಅವರ ಶಿಕ್ಷಣಕ್ಕೆ ನೆರವಾಗುವುದು ಈ ಯೋಜನೆ ಉದ್ದೇಶ. ಜನನದ ಸಮಯದಲ್ಲಿ ನಗದು ಹಸ್ತಾಂತರ ಮತ್ತು 18 ವರ್ಷದವರೆಗೆ ವಾರ್ಷಿಕ ವಿದ್ಯಾರ್ಥಿ ವೇತನವನ್ನು ಒದಗಿಸಲಾಗುತ್ತದೆ.

ಸುಕನ್ಯಾ ಸಮೃದ್ಧಿ (Sukanya Samriddhi) ಯೋಜನೆ

ಸುಕನ್ಯಾ ಸಮೃದ್ಧಿ ಯೋಜನೆ ಹೆಣ್ಣು ಮಕ್ಕಳ ಉನ್ನತ ಶಿಕ್ಷಣ ಮತ್ತು ಮದುವೆಯ ವೆಚ್ಚಗಳಿಗೆ ಧನ ಸಹಾಯ ಮಾಡಲು ನೆರವಾಗುತ್ತದೆ. ಸುಕನ್ಯಾ ಸಮೃದ್ಧಿ ಯೋಜನೆ (ಎಸ್‌ಎಸ್‌ವೈ) ಹೆಣ್ಣು ಮಗು ಮತ್ತು ಅವಳ ಆರ್ಥಿಕ ಅಗತ್ಯಗಳಿಗಾಗಿ ಸರ್ಕಾರದ ಬೆಂಬಲಿತ ಸಣ್ಣ ಡೆಪಾಸಿಟ್ ಯೋಜನೆಯಾಗಿದೆ. ‘ಬೇಟಿ ಬಚಾವೋ ಬೇಟಿ ಪಡಾವೋ’ ಅಭಿಯಾನದ ಭಾಗವಾಗಿ ಇದನ್ನು ಪ್ರಾರಂಭಿಸಲಾಗಿದೆ. ಈ ಯೋಜನೆಯು ಸೆಕ್ಷನ್ 80ಸಿ ಅಡಿಯಲ್ಲಿ ಆದಾಯ ತೆರಿಗೆ ಪ್ರಯೋಜನವನ್ನು ನೀಡುತ್ತದೆ. ಯೋಜನೆಯಿಂದ ಸಿಗುವ ಬಡ್ಡಿ ಅಥವಾ ಉಳಿತಾಯ ಹಣಕ್ಕೆ ತೆರಿಗೆ ಕಟ್ಟುವ ಆವಶ್ಯಕತೆ ಕೂಡ ಇರುವುದಿಲ್ಲ. ಹೆಣ್ಣು ಮಗುವಿನ ಜನನದ ನಂತರ ಆಕೆ 10 ವರ್ಷ ತುಂಬುವವರೆಗೆ ಯಾವುದೇ ಸಮಯದಲ್ಲಿ ಸುಕನ್ಯಾ ಸಮೃದ್ಧಿ ಖಾತೆಯನ್ನು ತೆರೆಯಬಹುದು, ಅಲ್ಲಿ ನೀವು ಕನಿಷ್ಠ 250 ರೂಪಾಯಿಗಳನ್ನು ಡೆಪಾಸಿಟ್ ಮಾಡಬೇಕಾಗುತ್ತದೆ. ನಂತರದ ವರ್ಷಗಳಲ್ಲಿ, ಕನಿಷ್ಠ 250 ರೂಪಾಯಿ ಮತ್ತು ಗರಿಷ್ಠ 1.5 ಲಕ್ಷ ರೂಪಾಯಿ. ಒಂದು ಆರ್ಥಿಕ ವರ್ಷದಲ್ಲಿ ಡೆಪಾಸಿಟ್ ಇಡಬೇಕು.

ಮಾಧ್ಯಮಿಕ ಶಿಕ್ಷಣದ ಬಾಲಕಿಯರಿಗೆ ರಾಷ್ಟ್ರೀಯ ಪ್ರೋತ್ಸಾಹಕ (National Scheme of Incentive for Girls of Secondary Education) ಯೋಜನೆ

ಶಿಕ್ಷಣ ವಂಚಿತ ಹುಡುಗಿಯರ ಮಾಧ್ಯಮಿಕ ಶಿಕ್ಷಣವನ್ನು ಮುಂದುವರಿಸಲು ಪ್ರೋತ್ಸಾಹಿಸುವ ಈ ಯೋಜನೆಯು 10ನೇ ತರಗತಿಯನ್ನು ಪೂರ್ಣಗೊಳಿಸಿದ ನಂತರ 3,000 ರೂ.ಗಳ ಸ್ಥಿರ ಠೇವಣಿಯನ್ನು ನೀಡುತ್ತದೆ. ಅರ್ಹ ಅಭ್ಯರ್ಥಿಗಳು ಅವಿವಾಹಿತರಾಗಿರಬೇಕು, 16 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು ಮತ್ತು ಸರ್ಕಾರಿ ಅನುದಾನಿತ ಸಂಸ್ಥೆಗಳಲ್ಲಿ ನೋಂದಾಯಿಸಿಕೊಳ್ಳಬೇಕು.

ಇದನ್ನೂ ಓದಿ: Money Guide: ಮನೆ ಪೂರ್ತಿಯಾಗುವ ಮುನ್ನವೇ ಸಾಲದ ಹಣ ಖರ್ಚಾಯ್ತೆ? ಚಿಂತೆ ಬೇಡ; ಟಾಪ್‌ ಅಪ್‌ ಲೋನ್‌ಗೆ ಅಪ್ಲೈ ಮಾಡಿ

ಇದಲ್ಲದೆ ವಿವಿಧ ರಾಜ್ಯಗಳಲ್ಲಿಯೂ ಹೆಣ್ಣು ಮಕ್ಕಳಿಗೆ ವಿಶೇಷ ಯೋಜನೆ ಜಾರಿಗೊಳಿಸಲಾಗಿದೆ. ಕರ್ನಾಟಕದ ಭಾಗ್ಯಶ್ರೀ ಯೋಜನೆ, ಮಧ್ಯಪ್ರದೇಶದ ಲಾಡ್ಲಿ ಲಕ್ಷ್ಮೀ ಯೋಜನೆ, ಮಹಾರಾಷ್ಟ್ರದ ಮಾಝಿ ಕನ್ಯಾ ಭಾಗ್ಯಶ್ರೀ ಯೋಜನೆ, ತಮಿಳುನಾಡಿನ ಮುಖ್ಯಮಂತ್ರಿಯ ಹೆಣ್ಣು ಮಕ್ಕಳ ರಕ್ಷಣೆ ಯೋಜನೆ ಇತ್ಯಾದಿ ಹೆಣ್ಣು ಮಕ್ಕಳ ಅಭಿವೃದ್ಧಿಗಾಗಿ ಕಾರ್ಯ ನಿರ್ವಹಿಸುತ್ತಿವೆ.

Continue Reading

ದೇಶ

GST Collection: ಸಾರ್ವಕಾಲಿಕ ದಾಖಲೆ ನಿರ್ಮಿಸಿದ ಜಿಎಸ್‌ಟಿ ಸಂಗ್ರಹ; ಏಪ್ರಿಲ್‌ನ ಕಲೆಕ್ಷನ್‌ ಎಷ್ಟು?

GST Collection: ಏಪ್ರಿಲ್‌ನ ಜಿಎಸ್‌ಟಿ ಸಂಗ್ರಹ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ. 2024ರ ಏಪ್ರಿಲ್‌ನ ಒಟ್ಟು ಜಿಎಸ್‌ಟಿ ಸಂಗ್ರಹವು 2.10 ಲಕ್ಷ ಕೋಟಿ ರೂ.ಗೆ ತಲುಪಿದೆ. ಒಟ್ಟಾರೆಯಾಗಿ ಪರೋಕ್ಷ ತೆರಿಗೆ ಆದಾಯವು ಶೇ. 12.4ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ದೇಶೀಯ ವಹಿವಾಟು ಮತ್ತು ಆಮದುಗಳಲ್ಲಿನ ಹೆಚ್ಚಳ ಇದಕ್ಕೆ ಕಾರಣ ಎನ್ನಲಾಗಿದೆ. ಮಹಾರಾಷ್ಟ್ರವು 37,671 ಕೋಟಿ ರೂ. ಸಂಗ್ರಹಿಸುವ ಮೂಲಕ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಕರ್ನಾಟಕ ಇದೆ. ಇಲ್ಲಿ 15,978 ಕೋಟಿ ರೂ. ಸಂಗ್ರಹವಾಗಿದೆ. ಗುಜರಾತ್ 13,301 ಕೋಟಿ ರೂ., ಉತ್ತರ ಪ್ರದೇಶ 12,290 ಕೋಟಿ ರೂ. ಮತ್ತು ತಮಿಳುನಾಡು 12,210 ಕೋಟಿ ರೂ. ಮೂಲಕ ನಂತರದ ಸ್ಥಾನಗಳಲ್ಲಿದೆ.

VISTARANEWS.COM


on

GST Collection
Koo

ನವದೆಹಲಿ: ಏಪ್ರಿಲ್‌ನ ಜಿಎಸ್‌ಟಿ ಸಂಗ್ರಹ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ (GST Collection). ಬುಧವಾರ ಬಿಡುಗಡೆಯಾದ ಅಧಿಕೃತ ಅಂಕಿ-ಅಂಶಗಳ ಪ್ರಕಾರ, 2024ರ ಏಪ್ರಿಲ್‌ನ ಒಟ್ಟು ಜಿಎಸ್‌ಟಿ ಸಂಗ್ರಹವು 2.10 ಲಕ್ಷ ಕೋಟಿ ರೂ.ಗೆ ತಲುಪಿದೆ. ಒಟ್ಟಾರೆಯಾಗಿ ಪರೋಕ್ಷ ತೆರಿಗೆ ಆದಾಯವು ಶೇ. 12.4ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ದೇಶೀಯ ವಹಿವಾಟು ಮತ್ತು ಆಮದುಗಳಲ್ಲಿನ ಹೆಚ್ಚಳ ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ನಿವ್ವಳ ಜಿಎಸ್‌ಟಿ ಆದಾಯ (ಮರುಪಾವತಿಯ ನಂತರ) 1.92 ಲಕ್ಷ ಕೋಟಿ ರೂ.ಗಳಾಗಿದ್ದು, ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 17.1ರಷ್ಟು ಬೆಳವಣಿಗೆ ದಾಖಲಿಸಿದೆ.

ರಾಜ್ಯವಾರು ಸಂಗ್ರಹ

ಮಹಾರಾಷ್ಟ್ರವು 37,671 ಕೋಟಿ ರೂ. ಸಂಗ್ರಹಿಸುವ ಮೂಲಕ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಕರ್ನಾಟಕ ಇದೆ. ಇಲ್ಲಿ 15,978 ಕೋಟಿ ರೂ. ಸಂಗ್ರಹವಾಗಿದೆ. ಗುಜರಾತ್ 13,301 ಕೋಟಿ ರೂ., ಉತ್ತರ ಪ್ರದೇಶ 12,290 ಕೋಟಿ ರೂ. ಮತ್ತು ತಮಿಳುನಾಡು 12,210 ಕೋಟಿ ರೂ. ಮೂಲಕ ನಂತರದ ಸ್ಥಾನಗಳಲ್ಲಿದೆ.

“ಜಿಎಸ್‌ಟಿ (Goods and Services Tax) 2024ರ ಏಪ್ರಿಲ್‌ನಲ್ಲಿ ದಾಖಲೆಯ ಗರಿಷ್ಠ 2.10 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ. ಮರುಪಾವತಿಯನ್ನು ಲೆಕ್ಕ ಹಾಕಿದ ನಂತರ ನಿವ್ವಳ ಜಿಎಸ್‌ಟಿ ಆದಾಯವು 1.92 ಲಕ್ಷ ಕೋಟಿ ರೂ.ಗಳಷ್ಟಿದೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 17.1ರಷ್ಟು ಬೆಳವಣಿಗೆಯನ್ನು ದಾಖಲಿಸಿದೆʼʼ ಎಂದು ಹಣಕಾಸು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ವಿವಿಧ ತೆರಿಗೆಗಳ ಅಂಕಿ ಅಂಶ

  • ಕೇಂದ್ರ ಸರಕು ಮತ್ತು ಸೇವಾ ತೆರಿಗೆ (CGST): 43,846 ಕೋಟಿ ರೂ.
  • ರಾಜ್ಯ ಸರಕು ಮತ್ತು ಸೇವಾ ತೆರಿಗೆ (SGST): 53,538 ಕೋಟಿ ರೂ.
  • ಸಮಗ್ರ ಸರಕು ಮತ್ತು ಸೇವಾ ತೆರಿಗೆ (IGST): ಆಮದು ಸರಕುಗಳ ಮೇಲೆ ಸಂಗ್ರಹಿಸಿದ 37,826 ಕೋಟಿ ರೂ. ಸೇರಿದಂತೆ ಒಟ್ಟು 99,623 ಕೋಟಿ ರೂ.
  • ಸೆಸ್: ಆಮದು ಮಾಡಿದ ಸರಕುಗಳ ಮೇಲೆ ಸಂಗ್ರಹಿಸಿದ 1,008 ಕೋಟಿ ರೂ. ಸೇರಿದಂತೆ ಒಟ್ಟು 13,260 ಕೋಟಿ ರೂ.

“ಭಾರತೀಯ ಆರ್ಥಿಕತೆಯು ವೇಗದ ಹಾದಿಯಲ್ಲಿದೆ ಮತ್ತು ವ್ಯವಹಾರಗಳು ವೇಗವಾಗಿ ಸಂಘಟಿತವಾಗುತ್ತಿವೆ” ಎಂದು ಟ್ಯಾಕ್ಸ್ ಕನೆಕ್ಟ್ ಅಡ್ವೈಸರಿ ಸರ್ವೀಸಸ್ ಎಲ್‌ಎಲ್‌ಪಿಯ ಪಾಲುದಾರ ವಿವೇಕ್ ಜಲನ್ ಹೇಳಿದ್ದಾರೆ. ಜಿಎಸ್‌ಟಿ ಸಂಗ್ರಹದ ಬಗ್ಗೆ ಮಾತನಾಡಿದ ಅವರು, ʼʼ2017ರ ಜುಲೈಯಲ್ಲಿ ಈ ನಿಯಮ ಜಾರಿಗೆ ಬಂದಾಗಿನಿಂದ 2024ರ ಏಪ್ರಿಲ್‌ವರೆಗೆ ಜಿಎಸ್‌ಟಿ ಸಂಗ್ರಹವು ಸರಾಸರಿ ಮಾಸಿಕ ಆದಾಯವನ್ನು ಸುಮಾರು 0.9 ಲಕ್ಷ ಕೋಟಿ ರೂ.ಗೆ ಹೆಚ್ಚಿಸಿದೆʼʼ ಎಂದು ತಿಳಿಸಿದ್ದಾರೆ. ʼʼ2017ರ ಜುಲೈ ಮತ್ತು 2024ರ ಏಪ್ರಿಲ್ ನಡುವೆ ಜಿಎಸ್‌ಟಿ ಆದಾಯವು ವರ್ಷಕ್ಕೆ ಸರಾಸರಿ ಶೇ. 13ರಷ್ಟು ಬೆಳವಣಿಗೆಯನ್ನು ದಾಖಲಿಸಿದೆʼʼ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: GST Collection : ಜನವರಿಯಲ್ಲಿ ಜಿಎಸ್ಟಿ ಸಂಗ್ರಹ 1.72 ಲಕ್ಷ ಕೋಟಿ ರೂ. ಇದುವರೆಗಿನ ಗರಿಷ್ಠ ಸಾಧನೆ

ಹಳೆಯ ಆದಾಯ ತೆರಿಗೆ ಕಾಯ್ದೆಯನ್ನು ಬದಲಿಸಿ ನೇರ ತೆರಿಗೆ ಸಂಹಿತೆಯನ್ನು ಜಾರಿಗೆ ತರುವುದರ ಜತೆಗೆ ಆಲ್ಕೋಹಾಲ್, ಪೆಟ್ರೋಲ್, ಡೀಸೆಲ್ ಮತ್ತು ರಿಯಲ್ ಎಸ್ಟೇಟ್ ಅನ್ನು ಜಿಎಸ್‌ಟಿ ಅಡಿಯಲ್ಲಿ ತರಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

Continue Reading

ದೇಶ

LPG Price Cut: ತಿಂಗಳ ಆರಂಭದಲ್ಲೇ ಗುಡ್‌ನ್ಯೂಸ್‌; ಎಲ್‌ಪಿಜಿ ಬೆಲೆ 19 ರೂ. ಇಳಿಕೆ

LPG Price Cut: ಮೇ 1ರಿಂದ ಜಾರಿಗೆ ಬರುವಂತೆ ತೈಲ ಮಾರುಕಟ್ಟೆ ಕಂಪನಿಗಳು (OMCs) ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ ಬೆಲೆಯನ್ನು 19 ರೂ. ಕಡಿಮೆ ಮಾಡಿವೆ. ಇದರೊಂದಿಗೆ 19 ಕೆಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ ಬೆಲೆ ಬೆಂಗಳೂರಿನಲ್ಲಿ 19 ರೂ. ಕಡಿತಗೊಂಡು 1825.50 ರೂ.ಗೆ ತಲುಪಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ಪ್ರತಿ ತಿಂಗಳ 1ನೇ ತಾರೀಕಿನಂದು ಅಡುಗೆ ಅನಿಲ ಬೆಲೆಗಳನ್ನು ಪರಿಷ್ಕರಿಸುತ್ತವೆ. ಈ ರೀತಿಯ ಏರಿಳಿತಗಳು ಸಾಮಾನ್ಯವಾಗಿ ಇಂಧನ ವೆಚ್ಚಗಳು ಮತ್ತು ಮಾರುಕಟ್ಟೆ ಡೈನಾಮಿಕ್ಸ್ ಬದಲಾವಣೆಗಳಿಂದ ಪ್ರಭಾವಿತವಾಗಿರುತ್ತದೆ.

VISTARANEWS.COM


on

LPG Price Cut
Koo

ನವದೆಹಲಿ: ಮೇ 1ರಿಂದ ಜಾರಿಗೆ ಬರುವಂತೆ ತೈಲ ಮಾರುಕಟ್ಟೆ ಕಂಪನಿಗಳು (OMCs) ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ ಬೆಲೆಯನ್ನು 19 ರೂ. ಕಡಿಮೆ ಮಾಡಿವೆ (LPG Price Cut). ಇದರೊಂದಿಗೆ 19 ಕೆಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ ಬೆಲೆ ಬೆಂಗಳೂರಿನಲ್ಲಿ 19 ರೂ. ಕಡಿತಗೊಂಡು 1,825.50 ರೂ.ಗೆ ತಲುಪಿದೆ.

ಇನ್ನು ದೆಹಲಿಯಲ್ಲಿ ಪರಿಷ್ಕೃತ ದರ 1,745.50 ರೂ. ಆಗಿದೆ. ಹಿಂದೆ 1,764.50 ರೂ. ಆಗಿತ್ತು. ಮುಂಬೈಯಲ್ಲಿಯೂ 19 ರೂ. ಇಳಿಕೆಯಾಗಿದ್ದು ಹೊಸ ಬೆಲೆಯನ್ನು 1,698.50 ರೂ.ಗೆ ನಿಗದಿಪಡಿಸಲಾಗಿದೆ. ಚೆನ್ನೈನಲ್ಲಿ 1,911 ರೂ., ಕೋಲ್ಕತ್ತಾದಲ್ಲಿ 20 ರೂ.ಗಳ ಕಡಿತದ ನಂತರ 1,859 ರೂ. ಇದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ಪ್ರತಿ ತಿಂಗಳ 1ನೇ ತಾರೀಕಿನಂದು ಅಡುಗೆ ಅನಿಲ ಬೆಲೆಗಳನ್ನು ಪರಿಷ್ಕರಿಸುತ್ತವೆ. ಈ ರೀತಿಯ ಏರಿಳಿತಗಳು ಸಾಮಾನ್ಯವಾಗಿ ಇಂಧನ ವೆಚ್ಚಗಳು ಮತ್ತು ಮಾರುಕಟ್ಟೆ ಡೈನಾಮಿಕ್ಸ್ ಬದಲಾವಣೆಗಳಿಂದ ಪ್ರಭಾವಿತವಾಗಿರುತ್ತದೆ.

ಜಾಗತಿಕ ತೈಲ ಬೆಲೆಗಳು ಇತ್ತೀಚೆಗೆ ಕುಸಿದ ಹಿನ್ನೆಲೆಯಲ್ಲಿ ದರ ಇಳಿಕೆಯಾಗಿದೆ. ಅಮೆರಿಕದಲ್ಲಿ ಕಚ್ಚಾ ದಾಸ್ತಾನುಗಳ ಏರಿಕೆ ಮತ್ತು ಅಸ್ಥಿರ ಮಧ್ಯಪ್ರಾಚ್ಯ ಪ್ರದೇಶದಲ್ಲಿ ಸಂಭಾವ್ಯ ಕದನ ವಿರಾಮ ಒಪ್ಪಂದದ ಸುತ್ತ ಹೆಚ್ಚುತ್ತಿರುವ ಆಶಾವಾದದ ಕಾರಣದಿಂದ ಜಾಗತಿಕ ತೈಲ ಬೆಲೆಗಳು ಕುಸಿಯುತ್ತಿವೆ ಎಂದು ಮೂಲಗಳು ತಿಳಿಸಿವೆ.

ವಾಣಿಜ್ಯ ಎಲ್‌ಪಿಜಿ ಬೆಲೆಗಳ ಕಡಿತವು ಈ ಸಿಲಿಂಡರ್‌ಗಳನ್ನೇ ಅವಲಂಬಿಸಿರುವ ವ್ಯವಹಾರಗಳ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ. ಜಾಗತಿಕ ತೈಲ ಮಾರುಕಟ್ಟೆಯ ಪ್ರವೃತ್ತಿಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುವುದಾಗಿ ಮತ್ತು ದೇಶಾದ್ಯಂತದ ಗ್ರಾಹಕರಿಗೆ ನ್ಯಾಯಯುತ ಬೆಲೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಹೊಂದಾಣಿಕೆಗಳನ್ನು ಮಾಡುವುದಾಗಿ ಒಎಂಸಿಗಳು ಭರವಸೆ ನೀಡಿವೆ.

ಗೃಹಬಳಕೆಯ ಸಿಲಿಂಡರ್‌ ಬೆಲೆ ಯಥಾಸ್ಥಿತಿ

ಈ ಮಧ್ಯೆ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಯಾವುದೇ ಇಳಿಕೆ ಅಥವಾ ಏರಿಕೆ ಆಗಿಲ್ಲ. ಬೆಂಗಳೂರಿನಲ್ಲಿ ಗೃಹಬಳಕೆಯ ಸಿಲಿಂಡರ್‌ ಬೆಲೆ 805.50 ರೂ. ಇದೆ.

ಇದನ್ನೂ ಓದಿ: LPG Aadhaar Link: ಎಲ್‌ಪಿಜಿ ಕನೆಕ್ಷನ್‌ಗೆ ಆಧಾರ್ ಲಿಂಕ್ ಮಾಡಿಸುವುದು ಹೇಗೆ? ಇಲ್ಲಿದೆ ಸುಲಭ ವಿಧಾನ

ತೈಲ ಮಾರುಕಟ್ಟೆ ಕಂಪನಿಗಳು ಹಿಂದಿನ ಘೋಷಣೆಯನ್ನು ಮಾರ್ಚ್ 1ರಂದು ಮಾಡಿದ್ದು, ವಾಣಿಜ್ಯ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ಸಿಲಿಂಡರ್‌ಗಳ ದರಗಳನ್ನು ಹೆಚ್ಚಿಸಿದ್ದವು. ಆ ಸಮಯದಲ್ಲಿ, OMCಗಳು ವಾಣಿಜ್ಯ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ (LPG) ಗ್ಯಾಸ್ ಸಿಲಿಂಡರ್ ಬೆಲೆಗಳಲ್ಲಿ 19 ಕೆಜಿ ವಾಣಿಜ್ಯ LPG ಗ್ಯಾಸ್ ಸಿಲಿಂಡರ್‌ಗಳ ಬೆಲೆಗಳನ್ನು ₹25ರಷ್ಟು ಹೆಚ್ಚಿಸಿದ್ದವು.

Continue Reading

ದೇಶ

Godrej Group: ಶತಮಾನದ ಇತಿಹಾಸ ಹೊಂದಿರುವ ಗೋದ್ರೇಜ್‌ ಗ್ರೂಪ್‌ ಇಬ್ಭಾಗ; ಎರಡು ಕುಟುಂಬಗಳಲ್ಲಿ ಆಡಳಿತ ವಿಭಜನೆ

Godrej Group:ಸುಮಾರು 127ವರ್ಷ ಇತಿಹಾಸ ಹೊಂದಿರುವ ಗೋದ್ರೇಜ್‌ ಗ್ರೂಪ್‌ ನ ಸಂಸ್ಥಾಪನಾ ಕುಟುಂಬ ತನ್ನ ವ್ಯವಹಾರವನ್ನು ಎರಡು ಶಾಖೆಗಳ ನಡುವೆ ವಿಭಜಿಸುವ ಒಪ್ಪಂದವನ್ನು ಅಂತಿಮಗೊಳಿಸಿದೆ.

VISTARANEWS.COM


on

Godrej Group
Koo

ನವದೆಹಲಿ: ಸುಮಾರು 127ವರ್ಷ ಇತಿಹಾಸ ಹೊಂದಿರುವ ಗೋದ್ರೇಜ್‌ ಗ್ರೂಪ್‌(Godrej Group)ನ ಸಂಸ್ಥಾಪನಾ ಕುಟುಂಬ ತನ್ನ ವ್ಯವಹಾರವನ್ನು ಎರಡು ಶಾಖೆಗಳ ನಡುವೆ ವಿಭಜಿಸುವ ಒಪ್ಪಂದವನ್ನು ಅಂತಿಮಗೊಳಿಸಿದೆ. ಒಂದು ಕಡೆ ಆದಿ ಗೋದ್ರೇಜ್‌(Adi Godrej) ಮತ್ತು ಅವರ ಸಹೋದರ ನಾದಿರ್‌ ಗೋದ್ರೇಜ್‌(Nadir godrej) ಮತ್ತೊಂದು ಕಡೆ ಅವರ ಸೋದರ ಸಂಬಂಧಿ ಜಮ್ಶೆಡ್‌(Jamshyd Godrej) ಮತ್ತು ಸ್ಮಿತಾ ಗೋದ್ರೇಜ್‌( Smita Godrej) ಅವರಿಗೆ ಈ ಗೋದ್ರೇಜ್‌ ಸಮೂಹವನ್ನು ವಿಭಜಿಸಿ ಅಧಿಕಾರ ವಹಿಸಲಾಗಿದೆ. ಆದಿ ಮತ್ತು ನಾದಿರ್‌, ಐದು ಕಂಪನಿಗಳನ್ನೊಳಗೊಂಡಂತೆ ಗೋದ್ರೇಜ್‌ ಇಂಡಸ್ಟ್ರೀಸ್‌ ಅನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಇನ್ನು ಜಮ್ಶೆಡ್‌ ಮತ್ತು ಸ್ಮಿತಾ, ಗೋದ್ರೇಜ್‌ & ಬಾಯ್ಸ್‌ ಹಾಗೂ ಅದರ ಸಹಸಂಸ್ಥೆಗಳು, ಮುಂಬೈನಲ್ಲಿರುವ ಪ್ರಮುಖ ಆಸ್ತಿಗಳನ್ನು ಪಡೆದಿದ್ದಾರೆ.

ಇನ್ನು ಈ ಬಗ್ಗೆ ಸ್ವತಃ ಗೋದ್ರೇಜ್‌ ಗ್ರೂಪ್‌ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಸಂಸ್ಥಾಪನಾ ಕುಟುಂಬವು ಆದಿ ಗೋದ್ರೇಜ್‌(82), ನಾದಿರ್‌ (73) ಹಾಗೂ ಜಮ್ಶೆಡ್‌ ಗೋದ್ರೇಜ್‌(75), ಮತ್ತು ಸ್ಮಿತಾ ಗೋದ್ರೇಜ್‌(74) ಅವರಿಗೆ ಆಸ್ತಿ, ವ್ಯವಹಾರ, ಶೇರುಗಳನ್ನು ಹಂಚಿದೆ ಎಂದು ತಿಳಿಸಿದೆ.

ಗೋದ್ರೇಜ್ & ಬಾಯ್ಸ್ ಮತ್ತು ಅದರ ಅಂಗಸಂಸ್ಥೆಗಳನ್ನು ಗೋದ್ರೇಜ್ ಎಂಟರ್‌ಪ್ರೈಸಸ್ ಗ್ರೂಪ್ ಒಳಗೊಂಡಿದ್ದು, ವೈಮಾನಿಕ ಮತ್ತು ವಾಯುಯಾನ ರಕ್ಷಣೆ, ಪೀಠೋಪಕರಣಗಳು ಮತ್ತು ಐಟಿ ಸಾಫ್ಟ್‌ವೇರ್‌ ಹೀಗೆ ಹಲವು ಉದ್ಯಮಗಳಾದ್ಯಂತ ಅಸ್ತಿತ್ವವನ್ನು ಹೊಂದಿದೆ. ಇನ್ನು ಮುಂದೆ ಜಮ್ಶೆಡ್‌ ಗೋದ್ರೇಜ್ ಅವರು ಈ ಸಂಸ್ಥೆಯ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಅವರ ಸಹೋದರಿ ಸ್ಮಿತಾ ಅವರ ಪುತ್ರಿ ನೈರಿಕಾ ಹೋಲ್ಕರ್ (42) ಕಾರ್ಯಕಾರಿ ನಿರ್ದೇಶಕಿಯಾಗಲಿದ್ದಾರೆ. ಈ ಕುಟುಂಬವು ಮುಂಬೈನಲ್ಲಿ 3,400 ಎಕರೆ ಭೂಮಿಯ ಒಡೆತನ ಪಡೆದಿದೆ.

ಇನ್ನು ಆದಿ ಮತ್ತು ನಾದಿರ್‌ ಗೋದ್ರೇಜ್‌ ಅವರು ಗೋದ್ರೇಜ್‌ ಇಂಡಸ್ಟ್ರೀಸ್‌ ಗ್ರೂಪ್‌ನ ಒಡೆತನ ಪಡೆದಿದ್ದು, ಇದು ಗೋದ್ರೇಜ್ ಇಂಡಸ್ಟ್ರೀಸ್, ಗೋದ್ರೇಜ್ ಗ್ರಾಹಕ ಉತ್ಪನ್ನಗಳು, ಗೋದ್ರೇಜ್ ಪ್ರಾಪರ್ಟೀಸ್, ಗೋದ್ರೇಜ್ ಅಗ್ರೋವೆಟ್ ಮತ್ತು ಅಸ್ಟೆಕ್ ಲೈಫ್ ಸೈನ್ಸಸ್ ಕಂಪನಿಗಳನ್ನು ಒಳಗೊಂಡಿದೆ. ನಾದಿರ್ ಗೋದ್ರೇಜ್ ಅವರನ್ನು ಕಂಪನಿಯ ಮುಖ್ಯಸ್ಥರನ್ನಾಗಿ ನೇಮಿಸಲಾಗಿದ್ದು, ಆದಿ ಗೋದ್ರೇಜ್‌ ಮೇಲ್ವಿಚಾರಣೆ ಮಾಡಲಿದ್ದಾರೆ. ಆದಿ ಅವರ ಪುತ್ರ ಪಿರೋಜ್‌ ಶಾ ಗೋದ್ರೇಜ್(42), ಜಿಐಜಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಲಿದ್ದಾರೆ ಮತ್ತು ಆಗಸ್ಟ್ 2026 ರಲ್ಲಿ ನಾದಿರ್ ಅವರ ನಂತರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಹೇಳಿಕೆ ತಿಳಿಸಿದೆ.

ಇನ್ನು ಈ ಅಧಿಕಾರ ವಿಭಜನೆ ಯಾವುದೇ ವೈಮನಸ್ಸು, ಜಗಳದಿಂದ ನಡೆದಿಲ್ಲ. ಬಹಳ ಗೌರವಯುತವಾಗಿ, ನಡೆದಿದೆ. ಕುಟುಂಬದ ಸೌಹಾರ್ದನೆ ಮುಂದೆಯೂ ಹೀಗೆ ಮುಂದುವರೆಯಬೇಕೆಂಬ ಉದ್ದೇಶದಿಂದ ಮತ್ತು ಶತಮಾನದ ಇತಿಹಾಸವಿರುವ ಸಂಸ್ಥೆಯ ಉನ್ನತಿಗಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇನ್ನೂ ಎರಡೂ ಸಮೂಹಗಳು ಗೋದ್ರೇಜ್‌ ಎಂಬ ಬ್ರ್ಯಾಂಡ್‌ ಅನ್ನು ಈಗಿರುವಂತೆಯೇ ಬಳಸಿಕೊಳ್ಳಲಿದೆ.

ಇದನ್ನೂ ಓದಿ:Assault Case: ನನ್ನ ಪ್ರೇಯಸಿಗೆ ಮೆಸೇಜ್ ಮಾಡ್ತೀಯಾ ಎಂದು ಬೆರಳು ಕಟ್!

1897 ರಲ್ಲಿ ಅರ್ದೇಶಿರ್ ಗೋದ್ರೇಜ್ ಮತ್ತು ಪಿರೋಜ್‌ ಶಾ ಗೋದ್ರೇಜ್ ಈ ಸಂಸ್ಥೆಯನ್ನು ಸ್ಥಾಪಿಸಿದ್ದರು. ನಿಧಾನವಾಗಿ ಉದ್ಯಮ ಕ್ಷೇತ್ರದಲ್ಲಿ ತನ್ನ ಛಾಪನ್ನು ಮೂಡಿಸಲು ಶುರು ಮಾಡಿದ್ದ ಗೋದ್ರೇಜ್‌ ಸಂಸ್ಥೆ, ರಿಯಲ್ ಎಸ್ಟೇಟ್, ಗ್ರಾಹಕ ಉತ್ಪನ್ನಗಳು, ಕೈಗಾರಿಕಾ ಎಂಜಿನಿಯರಿಂಗ್, ಉಪಕರಣಗಳು, ಪೀಠೋಪಕರಣಗಳು, ಭದ್ರತೆ ಮತ್ತು ಕೃಷಿ ಉತ್ಪನ್ನಗಳು ಸೇರಿದಂತೆ ಕ್ಷೇತ್ರಗಳಲ್ಲೂ ಯಶಸ್ವಿಯಾಗಿತ್ತು.

Continue Reading
Advertisement
pm Narendra Modi
ಪ್ರಮುಖ ಸುದ್ದಿ14 mins ago

PM Narendra Modi: ಉಗ್ರರನ್ನು ಅವರ ತಾಯ್ನೆಲದಲ್ಲೇ ಕೊಲ್ಲುತ್ತೇವೆ: ಗುಡುಗಿದ ಪಿಎಂ ನರೇಂದ್ರ ಮೋದಿ

karnataka Weather Forecast
ಮಳೆ1 hour ago

Karnataka Weather : ಇಂದು ಮೂರು ಹೊತ್ತು ಒಂದೊಂದು ವಾತಾವರಣ

Vastu Tips
ಲೈಫ್‌ಸ್ಟೈಲ್1 hour ago

Vastu Tips: ಮನೆ ಹೊರಗಿನ ಉದ್ಯಾನದಲ್ಲಿ ವಾಸ್ತು ಪಾಲಿಸಿ; ಮನೆಯೊಳಗಿನ ನೆಮ್ಮದಿ ವೃದ್ಧಿಸಿ

SMART Missile
ಸಂಪಾದಕೀಯ2 hours ago

ವಿಸ್ತಾರ ಸಂಪಾದಕೀಯ: ಕ್ಷಿಪಣಿ ಬಲದಿಂದ ನಮ್ಮ ನೌಕಾಪಡೆ ‘ಸ್ಮಾರ್ಟ್‌’ ಜತೆಗೆ ಇನ್ನಷ್ಟು ಬಲಿಷ್ಠ

Aloe Vera face mask
ಆರೋಗ್ಯ2 hours ago

Aloe Vera Benefits: ಬೇಸಿಗೆಯಲ್ಲಿ ಚರ್ಮವನ್ನು ತಂಪಾಗಿಸಲು ಲೋಳೆಸರದ ಮಾಸ್ಕ್‌ ಬಳಸಿ

Dina Bhavishya
ಭವಿಷ್ಯ3 hours ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

Benefits of Tender Coconut
ಆರೋಗ್ಯ3 hours ago

Benefits of Tender Coconut: ಎಳನೀರು ಹೀರುವುದರಿಂದ ದೇಹಕ್ಕೆ ಏನೇನು ಲಾಭ ಗೊತ್ತೇ?

Bhajanotsava
ಬೆಂಗಳೂರು6 hours ago

Bhajanotsava: ಓಂಕಾರ ಆಶ್ರಮದಲ್ಲಿ ನಿರಂತರ ಭಜನೋತ್ಸವ ಸಂಪನ್ನ

Shata Chandika Yaga
ಚಿಕ್ಕಬಳ್ಳಾಪುರ7 hours ago

ಚಿಕ್ಕಬಳ್ಳಾಪುರದ ವಾಯುದೇವ, ರಾಮಕೃಷ್ಣ ದೇವರ ಸನ್ನಿಧಾನದಲ್ಲಿ ಶತ ಚಂಡಿಕಾ ಯಾಗ ಸಂಪನ್ನ

Prajwal Revanna Case
ಕರ್ನಾಟಕ7 hours ago

Prajwal Revanna Case: ಸಂಸದ ಪ್ರಜ್ವಲ್ ರೇವಣ್ಣ ಗೆಸ್ಟ್ ಹೌಸ್‌ನಲ್ಲಿಲ್ಲ ಸಿಸಿ ಕ್ಯಾಮೆರಾ?; ಹಲವು ಅನುಮಾನ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ3 hours ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ2 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20243 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20243 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20244 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20244 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20244 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20244 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest4 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

ಟ್ರೆಂಡಿಂಗ್‌